‘ನನ್ನ ಹುಟ್ಟುಹಬ್ಬಕ್ಕೆ ಅಪ್ಪು ಸೈಕಲ್​ ಗಿಫ್ಟ್​ ಮಾಡಿದ್ದ’; ವಿಶೇಷ ನೆನಪು ಮೆಲುಕು ಹಾಕಿದ ಶಿವಣ್ಣ

ಪುನೀತ್​ ರಾಜ್​ಕುಮಾರ್​ ಸ್ಮರಣಾರ್ಥ ಬೆಂಗಳೂರಿನಲ್ಲಿ ಇಂದು (ನ.21) ಸೈಕಲ್​ ಜಾಥಾ ನಡೆಸಲಾಗಿದೆ. ಅದಕ್ಕೆ ಶಿವರಾಜ್​ಕುಮಾರ್​ ಚಾಲನೆ ನೀಡಿದರು.

TV9kannada Web Team

| Edited By: Madan Kumar

Nov 21, 2021 | 9:58 AM

ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರ ನಿಧನದಿಂದ ಎಲ್ಲರಿಗೂ ನೋವಾಗಿದೆ. ಆದರೆ ಆ ನೋವಿನ ನಡುವೆಯೂ ಜೀವನ ಮುಂದುವರಿಯಬೇಕಾದ ಅನಿವಾರ್ಯತೆ ಇದೆ. ನೋವು ನುಂಗಿಕೊಂಡು ಜೀವನ ಸಾಗಿಸಬೇಕು ಎಂದು ಶಿವರಾಜ್​ಕುಮಾರ್ (Shivarajkumar)​ ಅವರು ಈಗಾಗಲೇ ಹೇಳಿದ್ದಾರೆ. ಆ ಮಾತಿನಂತೆಯೇ ಅವರು ನಡೆದುಕೊಳ್ಳುತ್ತಿದ್ದಾರೆ. ಅಪ್ಪು ಹೆಸರನ್ನು ಅಮರವಾಗಿಸಲು ಅಭಿಮಾನಿಗಳು (Puneeth Rajkumar Fans) ಹಲವು ಕೆಲಸಗಳನ್ನು ಮಾಡುತ್ತಿದ್ದಾರೆ. ಪುನೀತ್​ ರಾಜ್​ಕುಮಾರ್​ ಸ್ಮರಣಾರ್ಥ ಬೆಂಗಳೂರಿನಲ್ಲಿ ಇಂದು (ನ.21) ಸೈಕಲ್​ ಜಾಥಾ ಹಮ್ಮಿಕೊಳ್ಳಲಾಗಿದೆ. ಅದಕ್ಕೆ ಶಿವಣ್ಣ ಚಾಲನೆ ನೀಡಿದರು. ‘ಪುನೀತ್​ಗೂ ಸೈಕಲ್​ ಎಂದರೆ ತುಂಬ ಇಷ್ಟ. ಆ ವಿಚಾರದಲ್ಲಿ ಅವನು ನನಗೆ ಸ್ಫೂರ್ತಿ ಆಗಿದ್ದ. ನನ್ನ ಹುಟ್ಟುಹಬ್ಬಕ್ಕೆ ಒಮ್ಮೆ ಸೈಕಲ್​ ಗಿಫ್ಟ್​ ಮಾಡಿದ್ದ’ ಎಂದು ವಿಶೇಷ ನೆನಪನ್ನು ಮೆಲುಕು ಹಾಕಿ ಅವರು ಭಾವುಕರಾದರು.

ಇದನ್ನೂ ಓದಿ:

ಫಲಪುಷ್ಪ ಪ್ರದರ್ಶನದಲ್ಲಿ ಅರಳಲಿದೆ ಡಾ. ರಾಜ್​-ಪುನೀತ್​ ಜೀವನ ಚರಿತ್ರೆ; ಇಲ್ಲಿದೆ ಅಭಿಮಾನಿಗಳಿಗೆ ಸಿಹಿ ಸುದ್ದಿ

‘ಅಪ್ಪು ಸರ್​ ಜತೆ ನಾನು ವರ್ಕೌಟ್​ ಮಾಡ್ತಿದ್ದೆ’; ಪುನೀತ್​ ಜತೆಗಿನ ನೆನಪು ಹಂಚಿಕೊಂಡ ಮನುರಂಜನ್​

Follow us on

Click on your DTH Provider to Add TV9 Kannada