ಜಯಮಂಗಲಿ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ಇಬ್ಬರು ಯುವಕರನ್ನು ಗ್ರಾಮಸ್ಥರು ರಕ್ಷಿಸಿದ ಸಾಹಸ ರೋಚಕ

ಶನಿವಾರ ರಕ್ಷಿಸಲ್ಪಟ್ಟ ಯುವಕರು ನದಿಗೆ ಹೋದಾಗ ಅದು ಶಾಂತವಾಗಿ ಹರಿಯುತ್ತಿತ್ತಂತೆ. ಆದರೆ ಸ್ವಲ್ಪ ಸಮಯದಲ್ಲೇ ನದಿಯಲ್ಲಿ ನೀರು ಉಕ್ಕಿಬಿಟ್ಟಿದೆ ಮತ್ತು ಅವರು ಕೊಚ್ಚಿಕೊಂಡು ಹೋಗಿದ್ದಾರೆ

ಇದು ನಿಜಕ್ಕೂ ದೊಡ್ಡ ಸಾಹಸವೇ. ಉಕ್ಕಿ ಹರಿವ ನೀರಲ್ಲಿ ಕೊಚ್ಚಿಕೊಂಡು ಹೋಗುವಾಗ ರಭಸದಿಂದ ಹರಿವ ನೀರಿನ ಮಧ್ಯೆ ಸಿಕ್ಕು ಮರವನ್ನು ಹಿಡಿದುಕೊಂಡು ಸಹಾಯಕ್ಕಾಗಿ ಕೂಗಿದ ಇಬ್ಬರು ಯುವಕರನ್ನು ದಡದಲ್ಲಿದ್ದ ಊರಿನ ಜನ ಸಮಯ ಪ್ರಜ್ಞೆಯಿಂದ ಸುರಕ್ಷಿತವಾಗಿ ತಮ್ಮತ್ತ ಎಳೆದುಕೊಂಡು ಅವರಿಗೆ ಮರುಜನ್ಮ ನೀಡಿದ್ದಾರೆ. ಈ ಸಾಹಸಮಯ ಮತ್ತು ರೋಚಕ ದೃಶ್ಯಾವಳಿಯನ್ನು ಮೊಬೈಲ್ ನಲ್ಲಿ ಚಿತ್ರೀಕರಿಸಿರುವುದರಿಂದ ಹೆಚ್ಚು ಸ್ಪಷ್ಟವಾಗಿಲ್ಲ.

ಈ ಘಟನೆ ನಡೆದಿರೋದು ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಶಾನಗಾನಗಳ್ಳಿಯಲ್ಲಿ. ಜಯಮಂಗಲಿ ನದಿಯು ಈ ಊರಿನ ಮೂಲಕ ಹರಿದು ಹೋಗುತ್ತದೆ. ಶನಿವಾರ ರಕ್ಷಿಸಲ್ಪಟ್ಟ ಯುವಕರು ನದಿಗೆ ಹೋದಾಗ ಅದು ಶಾಂತವಾಗಿ ಹರಿಯುತ್ತಿತ್ತಂತೆ. ಆದರೆ ಸ್ವಲ್ಪ ಸಮಯದಲ್ಲೇ ನದಿಯಲ್ಲಿ ನೀರು ಉಕ್ಕಿಬಿಟ್ಟಿದೆ ಮತ್ತು ಅವರು ಕೊಚ್ಚಿಕೊಂಡು ಹೋಗಿದ್ದಾರೆ. ಅಲ್ಪ ದೂರದಲ್ಲಿ ಸಿಕ್ಕ ಮರವನ್ನು ಹಿಡಿದು ಸಹಾಯ ಯಾಚಿಸಿದ್ದಾರೆ.

ದಡದಲ್ಲಿದ್ದ ಜನ ಕೂಡಲೇ ಹಗ್ಗಗಳನ್ನು ಜೊತೆಗೂಡಿಸಿ ಅವರನ್ನು ಸುರಕ್ಷಿತವಾಗಿ ತೀರಕ್ಕೆ ಎಳೆದುಕೊಂಡಿದ್ದಾರೆ ಮತ್ತು ಅವರಿಗೆ ಪುನರ್ಜನ್ಮ ನೀಡಿದ್ದಾರೆ. ತೀರಕ್ಕೆ ಬಂದಾಗ ಅವರ ಮುಖದಲ್ಲಿ ನಿಶ್ಚಿತ ಸಾವನ್ನು ಜಯಿಸಿದ ಭಾವವಿತ್ತು.

ಇದನ್ನೂ ಓದಿ:  ಮೈಸೂರಿನಲ್ಲಿ ಮಳೆ ಅವಾಂತರಕ್ಕೆ ರೊಚ್ಚಿಗೆದ್ದ ಜನರು; ಅವ್ಯವಸ್ಥೆಯ ಬಗ್ಗೆ ವಿಡಿಯೋ ಮಾಡಿ ತೀವ್ರ ಆಕ್ರೋಶ

Click on your DTH Provider to Add TV9 Kannada