ಮಳೆ ಸೃಷ್ಟಿಸುತ್ತಿರುವ ಅವಾಂತರಗಳು; ಶಿರಾ ಸಮೀಪ ರಸ್ತೆ ಮೇಲೆ ಹರಿಯುತ್ತಿದ್ದ ನೀರಲ್ಲಿ ಸಿಕ್ಕಿ ಹಾಕಿಕೊಂಡಿತು ಸರ್ಕಾರೀ ಬಸ್
ಬಸ್ಸು ಶಿರಾ ಮತ್ತು ಚಿಕ್ಕನಾಯಕನಹಳ್ಳಿ ನಡುವೆ ಸಂಚರಿಸುವ ಶಟಲ್ ಬಸ್. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಬಸ್ಸಿನಲ್ಲಿದ್ದ ಪ್ರಯಾಣಿಕರಲ್ಲಿ ಯಾರಿಗೂ ತೊಂದರೆ ಆಗಿಲ್ಲ
ತುಮಕೂರು ಜಿಲ್ಲೆಯಾದ್ಯಂತ ಬಿಟ್ಟೂ ಬಿಡದೆ ಮಳೆ ಸುರಿಯುತ್ತಿದೆ. ಹೊಲ ಗದ್ದೆಗಳು ಜಲಾವೃತಗೊಂಡಿವೆ. ರಸ್ತೆಗಳ ಮೇಲೆ ಕೆಲವು ಕಡೆ ಮೊಣಕಾಲು ಮಟ್ಟ ನೀರು ಹರಿಯುತ್ತಿದ್ದರೆ, ಇನ್ನೂ ಕೆಲ ಕಡೆ ಸೊಂಟದ ಮಟ್ಟದವರೆಗೆ ಹರಿಯುತ್ತಿದೆ. ಓಕೆ, ತುಮಕೂರಿನಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಆಗಿರುವ ಮತ್ತೊಂದು ಅವಾಂತರವನ್ನು ಯಾರೋ ಒಬ್ಬರು ತಮ್ಮ ವಿಡಿಯೋನಲ್ಲಿ ರೆಕಾರ್ಡ್ ಮಾಡಿ ನಮಗೆ ಕಳಿಸಿದ್ದಾರೆ, ನೀವದನ್ನು ಇಲ್ಲಿ ನೋಡಬಹುದು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಒಡೆತನಕ್ಕೆ ಸೇರಿದ ಬಸ್ಸೊಂದು ನೀರಿನಲ್ಲಿ ಸಿಕ್ಕಿ ಹಾಕಿಕೊಂಡಿರುವ ದೃಶ್ಯ ನಿಮಗೆ ಕಾಣುತ್ತಿದೆ. ವಾಹನ ಸಿಕ್ಕಿ ಹಾಕಿಕೊಂಡಿರೋದು ತುಮಕೂರು ಜಿಲ್ಲೆ ಶಿರಾ ತಾಲ್ಲೂಕಿನಲ್ಲಿರುವ ಮತ್ತು ಬುಕಾಪಟ್ಟಣಕ್ಕೆ ಹತ್ತಿರದಲ್ಲಿರುವ ಹೊಸಳ್ಳಿ ಹೆಸರಿನ ಗ್ರಾಮದ ಬಳಿ.
ಸದರಿ ಬಸ್ಸು ಶಿರಾ ಮತ್ತು ಚಿಕ್ಕನಾಯಕನಹಳ್ಳಿ ನಡುವೆ ಸಂಚರಿಸುವ ಶಟಲ್ ಬಸ್. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಬಸ್ಸಿನಲ್ಲಿದ್ದ ಪ್ರಯಾಣಿಕರಲ್ಲಿ ಯಾರಿಗೂ ತೊಂದರೆ ಆಗಿಲ್ಲ. ಎಲ್ಲರನ್ನೂ ಸುರಕ್ಷಿತವಾಗಿ ಕೆಳಗಿಳಿಸಲಾಗಿದೆ. ಬಸ್ ಖಾಲಿಯಾಗಿದೆ, ಚಾಲಕ ಮತ್ತು ನಿರ್ವಾಹಕರೂ ಕಾಣುತ್ತಿಲ್ಲ.
ಹಾಗೇಯೇ, ಬಸ್ಸಿನ ಸುತ್ತ ನಿಂತಿರುವ ಜನ ಜೋರಾಗಿ ಕೂಗಾಡುತ್ತಾ ಗಲಾಟೆ ಮಾಡುತ್ತಿದ್ದಾರೆಯೇ ಹೊರತು ಅದನ್ನು ತಳ್ಳಿ ರಸ್ತೆಗೆ ತರುವ ಪ್ರಯತ್ನ ಮಾಡುತ್ತಿಲ್ಲ. ನೀರು ಅಷ್ಟು ಆಳವಾಗೇನೂ ಇಲ್ಲ. ರಸ್ತೆಯಲ್ಲಿ ಓಡಾಡುತ್ತಿರುವ ಬೇರೆ ವಾಹನಗಳನ್ನು ಓಡಿಸುತ್ತಿರುವವರ ನೆರವು ಕೇಳಿ ಬಸ್ ಅನ್ನು ರಸ್ತೆಗೆ ಎಳೆಯಬಹುದಾಗಿತ್ತು ಅನಿಸುತ್ತೆ.