ಮೈಸೂರಿನಲ್ಲಿ ಮಳೆ ಅವಾಂತರಕ್ಕೆ ರೊಚ್ಚಿಗೆದ್ದ ಜನರು; ಅವ್ಯವಸ್ಥೆಯ ಬಗ್ಗೆ ವಿಡಿಯೋ ಮಾಡಿ ತೀವ್ರ ಆಕ್ರೋಶ

TV9 Digital Desk

| Edited By: preethi shettigar

Updated on: Nov 20, 2021 | 8:34 AM

ನಿಮಗೆ ಹಾವಾದ್ರು ಕಚ್ಚಾಬಾರ್ದಾ? ಚೇಳಾದ್ರು ಕಡಿಯಬಾರ್ದಾ? ಎಂದು ಆಕ್ರೋಶ ಹೊರಹಾಕಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಿಡಿಶಾಪ ಹಾಕಿದ ವೀಡಿಯೋ ವೈರಲ್ ಆಗಿದೆ.

ಮೈಸೂರು: ಜಿಲ್ಲೆಯಲ್ಲಿ ಮಳೆ ಅವಾಂತರ ಹಿನ್ನೆಲೆ ಕೋಪಗೊಂಡ ಜನರು, ಅವ್ಯವಸ್ಥೆಯ ಕುರಿತು ವಿಡಿಯೋ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪುನಿತ್ ರಾಜ್ ಕುಮಾರ್ ಅವರನ್ನು ಕರೆದುಕೊಳ್ಳುವ ಬದಲು, ಪಾಲಿಕೆ ಅಧಿಕಾರಿಗಳು, ಎಂಎಲ್​ಎ, ಎಪಿಗಳು, ಪಾಲಿಕೆ ಸದಸ್ಯರನ್ನು ಕರೆದುಕೊಳ್ಳೋ ಭಗವಂತ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ನಿಮಗೆ ಹಾವಾದ್ರು ಕಚ್ಚಾಬಾರ್ದಾ? ಚೇಳಾದ್ರು ಕಡಿಯಬಾರ್ದಾ? ಎಂದು ಆಕ್ರೋಶ ಹೊರಹಾಕಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಿಡಿಶಾಪ ಹಾಕಿದ ವೀಡಿಯೋ ವೈರಲ್ ಆಗಿದೆ.

ಮೈಸೂರಿನ ನೂತನ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದ ರಸ್ತೆಯಲ್ಲಿ ಹೊಳೆಯಂತೆ ಹರಿಯುತ್ತಿರುವ ಮಳೆ‌ ನೀರು ಕಂಡು, ನೂರಾರು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ರಸ್ತೆಯ ಅವ್ಯವಸ್ಥೆಗೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀರಿನ ಬಿಲ್ ಕಟ್ಟಿಲ್ಲ, ಕರೆಂಟ್ ಬಿಲ್ ಕಟ್ಟಿಲ್ಲ, ಹೆಲ್ಮೆಟ್ ಹಾಕಿಲ್ಲ ಎಂದು ದಂಡ ಹಾಕುವ ಸರ್ಕಾರ ಈಗ ಮಣ್ಣು ತಿನ್ನುತ್ತಿದೆಯಾ? ಎಂದು ವಿಡಿಯೋ ಮೂಲಕ ಸಾರ್ವಜನಿಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ:
Karnataka Dams Water Level: ರಾಜ್ಯಾದ್ಯಂತ ಮಳೆ ಅವಾಂತರ; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

ತಿರುಪತಿಯಲ್ಲಿ ಮಳೆ ಸೃಷ್ಟಿಸಿರುವ ತಲ್ಲಣ ನಟಿ ಕನ್ನಡ ತಾರಾಗೆ ತಿಮ್ಮಪ್ಪನ ದರ್ಶನ ಭಾಗ್ಯ ಲಭಿಸಿದಂತೆ ಮಾಡಿತು

Follow us on

Click on your DTH Provider to Add TV9 Kannada