K rail ಕೇರಳ ಸರ್ಕಾರದ ಸಿಲ್ವರ್‌ಲೈನ್ ಯೋಜನೆ ವಿರುದ್ಧ ಹೆಚ್ಚಿದ ಪ್ರತಿಭಟನೆ; ಗ್ರಾಮಗಳಲ್ಲಿಯೂ ವಿರೋಧದ ಕೂಗು

SilverLine ಕೇರಳ ರೈಲ್ ಡೆವಲಪ್‌ಮೆಂಟ್ ಕಾರ್ಪೊರೇಶನ್ ಲಿಮಿಟೆಡ್ (ಅಥವಾ ಕೆ-ರೈಲ್) ಕೈಗೊಂಡಿರುವ ಯೋಜನೆಯು, ರಾಜ್ಯದ ರಾಜಧಾನಿ ತಿರುವನಂತಪುರಂನಿಂದ ಕಾಸರಗೋಡು ನಡುವೆ ರೈಲುಗಳು ಗಂಟೆಗೆ 200 ಕಿಮೀ ವೇಗದಲ್ಲಿ ಸಂಚರಿಸುವ ಕಾರಿಡಾರ್ ಅನ್ನು ಒದಗಿಸಲಿವೆ.

K rail ಕೇರಳ ಸರ್ಕಾರದ ಸಿಲ್ವರ್‌ಲೈನ್ ಯೋಜನೆ ವಿರುದ್ಧ ಹೆಚ್ಚಿದ ಪ್ರತಿಭಟನೆ; ಗ್ರಾಮಗಳಲ್ಲಿಯೂ ವಿರೋಧದ ಕೂಗು
ಕೆ ರೈಲ್ ಯೋಜನೆ ಬಗ್ಗೆ ಪಿಣರಾಯಿ ವಿಜಯನ್ ಸಭೆ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jan 30, 2022 | 12:06 PM

ಕೊಚ್ಚಿ: ಕೇರಳದ (Kerala) ಆಲಪ್ಪುಳ ಜಿಲ್ಲೆಯ ನೂರನಾಡ್ ಹಳ್ಳಿಯಲ್ಲಿ ಕಳೆಗಳಿಂದ ಕೂಡಿರುವ ರಸ್ತೆಯ ಪಕ್ಕದಲ್ಲಿ ಬೃಹತ್ ಮೂಲಸೌಕರ್ಯ ಯೋಜನೆಯ ಏಕೈಕ ಭೌತಿಕ ಗುರುತು ಎಂದರೆ  ಕಲ್ಲಿನ ಬ್ಲಾಕ್ . 2019ರಲ್ಲಿ ಒಂದು ರಾತ್ರಿ ಕೆಲವು ಜನರು ಬಂದು ಇಲ್ಲಿ ಆಯತಾಕಾರದ ಕಲ್ಲಿನ ಬ್ಲಾಕ್ ನೆಟ್ಟಿದ್ದರು ಎಂದು ಇಲ್ಲಿನ ಗ್ರಾಮದವರು ಹೇಳುತ್ತಾರೆ.  “ಬ್ಲಾಕ್ ಯಾವುದಕ್ಕಾಗಿ ಎಂದು ನಾವು ಅವರನ್ನು ಕೇಳಿದಾಗ, ಇದು ರಸ್ತೆಯ ಅಗಲೀಕರಣವನ್ನು ಗುರುತಿಸಲು ಎಂದು ಅವರು ಹೇಳಿದರು. ಅವರು ಕೆಲವು ಮಣ್ಣಿನ ಮಾದರಿಗಳನ್ನು ಪರೀಕ್ಷೆಗೆ ತೆಗೆದುಕೊಂಡರು, ”ಎಂದು ರಸ್ತೆಯ ಪಕ್ಕದಲ್ಲಿರುವ ಅವರ ಮನೆ ಮಂಜುಷಾ ಹೇಳುತ್ತಾರೆ. “ಕೆ-ರೈಲ್ ಯೋಜನೆಯ (K Rail Project) ಸಮೀಕ್ಷೆಗಾಗಿ ಇದನ್ನು ಸ್ಥಾಪಿಸಲಾಗಿದೆ ಎಂದು ನಮಗೆ ಬಹಳ ನಂತರ ತಿಳಿದುಬಂದಿದೆ. ಎಲ್ಲರಿಗೂ ಅನುಕೂಲವಾಗುವ ಪ್ರಾಮಾಣಿಕ ಯೋಜನೆ ಇದಾಗಿದ್ದರೆ ಸುಳ್ಳು ಯಾಕೆ ಹೇಳಬೇಕು? ಯಾಕೆ ಇಷ್ಟು ರಹಸ್ಯವಾಗಿ ಇರಿಸುತ್ತೀರಿ? ಎಂದು ಕೇಳುತ್ತಾರೆ. ಎರಡು ವರ್ಷಗಳ ನಂತರ, ಕೇರಳದಾದ್ಯಂತ ಸೆಮಿ -ಹೈ-ಸ್ಪೀಡ್ ರೈಲ್ವೇ ಕಾರಿಡಾರ್ ನಿರ್ಮಿಸುವ ಪಿಣರಾಯಿ ವಿಜಯನ್ (Pinarayi Vijayan) ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಸಿಲ್ವರ್‌ಲೈನ್’ ವಿರುದ್ಧ ಈಗ ಪ್ರತಿಭಟನೆ ಕೂಗುಗಳು ಕೇಳಿ ಬರುತ್ತಲೇ ಇವೆ.  ಕೇರಳ ರೈಲ್ ಡೆವಲಪ್‌ಮೆಂಟ್ ಕಾರ್ಪೊರೇಶನ್ ಲಿಮಿಟೆಡ್ (ಅಥವಾ ಕೆ-ರೈಲ್) ಕೈಗೊಂಡಿರುವ ಯೋಜನೆಯು, ರಾಜ್ಯದ ರಾಜಧಾನಿ ತಿರುವನಂತಪುರಂನಿಂದ ಕಾಸರಗೋಡು ನಡುವೆ ರೈಲುಗಳು ಗಂಟೆಗೆ 200 ಕಿಮೀ ವೇಗದಲ್ಲಿ ಸಂಚರಿಸುವ ಕಾರಿಡಾರ್ ಅನ್ನು ಒದಗಿಸಲಿವೆ. 530-ಕಿಮೀ ದೂರವನ್ನು ಕ್ರಮಿಸಲು 12 ಗಂಟೆಗಳು ಬೇಕು. ಅಂಥದರಲ್ಲಿ ಕೆ ರೈಲ್ ನಾಲ್ಕು ಗಂಟೆಗಳಲ್ಲಿ ಈ ದೂರವನ್ನು ಕ್ರಮಿಸಲಿದೆ. ಇದು ಕೇರಳದ ರಸ್ತೆಗಳ ದಟ್ಟಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಸುಸ್ಥಿರ ಪ್ರಯಾಣದ ಆಯ್ಕೆಯನ್ನು ಒದಗಿಸುತ್ತದೆ ಮತ್ತು ದಾರಿಯುದ್ದಕ್ಕೂ, ಮೂಲ-ಪ್ರಗತಿಯನ್ನು ಸಕ್ರಿಯಗೊಳಿಸುವ ಪರಿಸರ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುತ್ತದೆ ಎಂದು ಸರ್ಕಾರ ಹೇಳುತ್ತದೆ.

ಆದರೆ 63,940 ಕೋಟಿ ರೂ.ಗಳ ಯೋಜನೆಯು ನಷ್ಟದ ಯೋಜನೆ ಎಂದು ಹೇಳಲಾಗುತ್ತದೆ. ಯಾಕೆಂ ದರೆ ಸಾಲದ ಸುಳಿಯಲ್ಲಿ ಸಿಲುಕಿರುವ ರಾಜ್ಯವು ಯೋಜನೆಯನ್ನು ಹೇಗೆ ನಿಭಾಯಿಸುತ್ತದೆ. ಹವಾಮಾನ ಬದಲಾವಣೆಯನ್ನು ನಿಭಾಯಿಸುವ ರಾಜ್ಯದ ಮೇಲೆ ಪರಿಸರೀಯ ವೆಚ್ಚ ಎಷ್ಟು? ರೈಲು ಸೇವೆಯನ್ನು ನಿರ್ಮಿಸುವ ವೆಚ್ಚವನ್ನು ನೀಡಿದರೆ ಅದು ಕೈಗೆಟುಕುವಂತಿದೆಯೇ? ಮತ್ತು ಸ್ಥಳಾಂತರಗೊಂಡವರಿಗೆ ಪುನರ್ವಸತಿ ಕಲ್ಪಿಸುವ ಯೋಜನೆಗಳೇನು? ಎಂದು ಕೆ ರೈಲ್ ಯೋಜನೆ ವಿರೋಧಿಸುವವು ಕೇಳುತ್ತಿದ್ದಾರೆ, ಸಮಾಲೋಚನೆಯ ಕೊರತೆಯು ದೊಡ್ಡ ಕಾಳಜಿಯಾಗಿದೆ ಎಂದು ದಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

2020 ರಲ್ಲಿ ಉತ್ರಾಡಂ (ಓಣಂ ಹಬ್ಬದ ಮುನ್ನಾದಿನದಂದು), ಕೆ-ರೈಲ್ ಮಾರ್ಗದ ಜೋಡಣೆಯ ಭಾಗವಾಗಿ ಪ್ರಕಟಿಸಲಾದ ಭೂ ಸಮೀಕ್ಷೆಗಳನ್ನು ಕಂಡುಹಿಡಿಯಲು ದಿ ಇಂಡಿಯನ್ ಎಕ್ಸ್ ಪ್ರೆಸ್ ಸ್ಥಳೀಯ ಪತ್ರಿಕೆಗಳನ್ನು ನೋಡಿದಾಗ ಅಲ್ಲಿ ಲಭಿಸಿದ ಮಾಹಿತಿಗಳೆಂದರೆ, ನಮ್ಮ ಮನೆಗಳು ನೆಲಸಮವಾಗುತ್ತವೆ ಎಂದು ನಾವು ಕಂಡುಕೊಂಡಿದ್ದೇವೆ ಎಂದು ಬಪೇಂಟಿಂಗ್ ಕೆಲಸ ಮಾಡುವ ಸುಬೀಶ್ ಹೇಳುತ್ತಾರೆ. ಇವರ ಎರಡು ವರ್ಷಗಳ ಹಳೆಯ ಮನೆ ಉದ್ದೇಶಿತ ಮಾರ್ಗದಲ್ಲಿದೆ. ಅವರು ಸ್ಥಳೀಯ ಗ್ರಾಮ ಅಧಿಕಾರಿಗೆ ಕರೆ ಮಾಡಿದರೂ ಅವರು ಸುಳಿವು ನೀಡಲಿಲ್ಲ.

ತನ್ನ ಮನೆಯನ್ನು ಕೆಡವಲಾಗುತ್ತದೆ ಎಂದು ತಿಳಿದ ನಂತರ, ಮಂಜುಷಾ ಅವರು ನಾನು ಆತ್ಮಹತ್ಯೆ ಮಾಡಿಯೇನೂ ಆದರೆ ಬದುಕು ಬೀದಿಪಾಲಾಗುವುದನ್ನು ನೋಡಲಾರೆ ಎಂದು ತಮ್ಮ ಮಕ್ಕಳಿಗೆ ಹೇಳಿದ್ದಾರೆ. ಆಕೆಯಂತೆಯೇ ಅನೇಕರು ರಾಜ್ಯಾದ್ಯಂತ ಪ್ರತಿಭಟನೆಗಳನ್ನು ಮುನ್ನಡೆಸುತ್ತಿರುವ ‘ಸಂಸ್ಥಾನ ಕೆ-ರೈಲ್ ಸಿಲ್ವರ್‌ಲೈನ್ ವಿರುದ್ಧ ಜನಕೀಯ ಸಮಿತಿ’ಯ ಅಲಪ್ಪುಳ ಜಿಲ್ಲಾ ಅಧ್ಯಕ್ಷ ಸಂತೋಷ್ ಪರವಾಗಿದ್ದಾರೆ. ಕಳೆದ ವರ್ಷ ಡಿಸೆಂಬರ್ 1 ರಂದು ಸಮೀಕ್ಷೆಗೆ ಬಂದಿದ್ದ ಅಧಿಕಾರಿಗಳ ವಿರುದ್ಧ ಸಮಿತಿ ನಡೆಸಿದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಸಂತೋಷ್ ಸೇರಿದಂತೆ ಕನಿಷ್ಠ 20 ಸಮಿತಿ ಸದಸ್ಯರನ್ನು ಕೋವೊಡ್ -19 ಪ್ರೋಟೋಕಾಲ್‌ಗಳನ್ನು ಉಲ್ಲಂಘಿಸಿದ ಮತ್ತು ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಥಳಿಸಲಾಯಿತು, ಬಂಧಿಸಲಾಯಿತು ಮತ್ತು ಪ್ರಕರಣ ದಾಖಲಿಸಲಾಯಿತು.

ದೇಶದ ಮೂರನೇ ಅತಿ ಹೆಚ್ಚು ಜನನಿಬಿಡ ರಾಜ್ಯವಾದ ಕೇರಳದಲ್ಲಿ (2011 ರ ಜನಗಣತಿಯ ಪ್ರಕಾರ), ಭೂಸ್ವಾಧೀನವು ಮೂಲಭೂತ ಯೋಜನೆಗಳಲ್ಲಿನ ದೊಡ್ಡ ಸಮಸ್ಯೆಗಳಲ್ಲಿ ಒಂದಾಗಿದೆ. ಇಲ್ಲಿನ ಕುಟುಂಬಗಳು ಭೂಮಿಯೊಂದಿಗೆ, ಕುಟುಂಬಗಳು ಮನೆಗಳನ್ನು ನಿರ್ಮಿಸಲು ದೊಡ್ಡ ಸಾಲವನ್ನು ನಡೆಸುತ್ತವೆ. ಕಳೆದ ವರ್ಷ, ದೇಶೀಯ ಏಜೆನ್ಸಿ ಇಂಡಿಯಾ ರೇಟಿಂಗ್ಸ್, ಅಖಿಲ ಭಾರತ ಸಾಲ ಮತ್ತು ಹೂಡಿಕೆ ಸಮೀಕ್ಷೆಯನ್ನು ಉಲ್ಲೇಖಿಸಿ, ಶೇ 47.8 ರಷ್ಟು ಕೇರಳವು ನಗರ ಕುಟುಂಬಗಳಲ್ಲಿ ಅತಿ ಹೆಚ್ಚು ಸಾಲವನ್ನು ಹೊಂದಿದೆ ಎಂದು ಹೇಳಿದೆ.

ತನ್ನ ವಯಸ್ಸಾದ ಪೋಷಕರು, ಪತಿ ಮತ್ತು ಇಬ್ಬರು ಮಕ್ಕಳೊಂದಿಗೆ ತನ್ನ ಮನೆಯನ್ನು ಹಂಚಿಕೊಳ್ಳುವ ಮಂಜುಷಾ, ಸಾಯುವವರೆಗೂ ತನ್ನ ಸಾಲವನ್ನು ತೀರಿಸುವ ನಿರೀಕ್ಷೆಯಿಲ್ಲ ಎಂದು ಹೇಳುತ್ತಾರೆ. ಇದು ಹಣದ ಬಗ್ಗೆ ಅಲ್ಲ ಎಂದು ನೂರನಾಡಿನ ಹಿರಿಯ-ಪ್ರತಿಭಟನಾಕಾರರಲ್ಲಿ ಒಬ್ಬರಾದ ಇಂದಿರಾ ಬಾಯಿ ಹೇಳುತ್ತಾರೆ. ಅವರು ಕೋಟಿ ಕೊಟ್ಟರೂ ನಮಗೆ ಬೇಡ ಅಂತಾರೆ ಇಂದಿರಾ.

ಕೊಚ್ಚಿ ಮೂಲದ ಚಿಂತಕರ ಚಾವಡಿ ಸೆಂಟರ್ ಫಾರ್ ಪಬ್ಲಿಕ್ ಪಾಲಿಸಿ ರಿಸರ್ಚ್ (CPPR) ನ ಸಂಸ್ಥಾಪಕ ಮುಖ್ಯ ಕಾರ್ಯನಿರ್ವಾಹಕ ಡಿ ಧನುರಾಜ್ ಅವರು ಸರ್ಕಾರವು ಸಾರ್ವಜನಿಕರಿಗೆ ಕನಸು ಮಾರಾಟ ಮಾಡುತ್ತಿದ್ದಾರೆ. ಈ ದಿನಗಳಲ್ಲಿ ಸಾರ್ವಜನಿಕರು ಹೆಚ್ಚು ತಿಳುವಳಿಕೆ ಹೊಂದಿದ್ದಾರೆ ಮತ್ತು ಪ್ರಶ್ನೆಗಳನ್ನು ಕೇಳುತ್ತಾರೆ” ಎಂದು ಹೇಳುತ್ತಾರೆ.

ಸಿಪಿಪಿಐಆರ್​​ಗಾಗಿನ ಲೇಖನವೊಂದರಲ್ಲಿ, ಧನುರಾಜ್ ಮತ್ತು ಹಿರಿಯ ಸಹಾಯಕ ನಿಸ್ಸಿ ಸೊಲೊಮನ್ ಅವರು ಕೇರಳದ ‘ಹೆಚ್ಚು ನಗರೀಕರಣಗೊಂಡ ಪರಿಸರ ವ್ಯವಸ್ಥೆ’ಯಲ್ಲಿ ಶೇ 70 GDP ಸೇವಾ ವಲಯದಿಂದ ಬರುತ್ತದೆ, ನಗರ ಮತ್ತು ಗ್ರಾಮೀಣ ವ್ಯವಸ್ಥೆಗಳು ಎಂದಿಗಿಂತಲೂ ಹತ್ತಿರದಲ್ಲಿದೆ ಎಂದು ವಾದಿಸಿದ್ದಾರೆ. ಈ ಅಂಶಗಳು “ನಿಯಮಿತ ಆಧಾರದ ಮೇಲೆ ಸಾಮೂಹಿಕ ಪ್ರಯಾಣದ ಅಗತ್ಯವನ್ನು ಕಡಿಮೆ ಮಾಡಿದೆ” ಎಂದಿದ್ದಾರೆ.

ಇದಕ್ಕ ವಿರೋಧ ವ್ಯಕ್ತಪಡಿಸಿದ ಕೇರಳದ ಮಾಜಿ ಹಣಕಾಸು ಸಚಿವ ಮತ್ತು ಹಿರಿಯ ಸಿಪಿಎಂ ನಾಯಕ ಟಿ ಎಂ ಥಾಮಸ್ ಐಸಾಕ್, ಹೆಚ್ಚಿನ ಆದಾಯದ ಕೇರಳವು ವಾಹನಗಳಲ್ಲಿ ವೇಗವಾಗಿ ಬೆಳವಣಿಗೆಯನ್ನು ಕಾಣುತ್ತಿದೆ ಎಂದು ಗಮನಸೆಳೆದಿದ್ದಾರೆ. “ನಾವು ಯಾವುದೇ ರಸ್ತೆಗಳನ್ನು ಹೊಂದಿದ್ದರೂ, ಆರು ಲೇನ್‌ಗಳಿಗೆ ವಿಸ್ತರಿಸಿದರೂ, ಮುಂದಿನ ಐದು ವರ್ಷಗಳಲ್ಲಿ ದಟ್ಟಣೆ ಇರುತ್ತದೆ. ನಮಗೆ ಕ್ಷಿಪ್ರ ಸಾರಿಗೆ ವ್ಯವಸ್ಥೆ ಬೇಕು ಅದಕ್ಕೆ ಸಿಲ್ವರ್‌ಲೈನ್ ಉತ್ತರವಾಗಿದೆ ಎಂದಿದ್ದಾರೆ.

ಸಿಪಿಎಂ ರಾಜ್ಯಸಭಾ ಸಂಸದ ಎಳಮರಮ್ ಕರೀಂ ಅವರು, ಆರ್ಥಿಕ ಅಸಾಮರ್ಥ್ಯದ ವಾದವು ತಪ್ಪಾಗಿದೆ. “ಅಂತಹ ಯೋಜನೆಯ ವೆಚ್ಚವು ರಾಜ್ಯ ಬಜೆಟ್‌ನಿಂದ ಬರುವುದಿಲ್ಲ. ವಿದೇಶಿ ಫಂಡಿಂಗ್ ಏಜೆನ್ಸಿಗಳು ಕಡಿಮೆ ಬಡ್ಡಿಗೆ ದೀರ್ಘಾವಧಿಯ ಸಾಲಗಳನ್ನು ನೀಡಲು ಸಿದ್ಧವಾಗಿವೆ. ಭೂಸ್ವಾಧೀನಕ್ಕೆ ಹೋದಂತೆ, ಅದರಲ್ಲಿ ಒಂದು ಪಾಲು ರೈಲ್ವೆ ಒಡೆತನದ ಭೂಮಿಯಾಗಿದೆ. ಇದು ಕೇರಳ ಸರ್ಕಾರ ಮತ್ತು ಭಾರತೀಯ ರೈಲ್ವೆಯ ಜಂಟಿ ಉದ್ಯಮವಾಗಿದೆ. ಜೊತೆಗೆ, ಪ್ರಾರಂಭದಲ್ಲಿ ಎಲ್ಲಾ ಹಣದ ಅಗತ್ಯವಿರುವುದಿಲ್ಲ. ಮೇಲಾಗಿ, ಕಾರ್ಯಾಚರಣೆಗಳು ಪ್ರಾರಂಭವಾದಾಗ, ಆದಾಯವನ್ನು ಐದು ವರ್ಷಗಳ ನಂತರ ಸಾಲವನ್ನು ಪಾವತಿಸಲು ಬಳಸಬಹುದು ಎಂದು ವಿವರವಾದ ಯೋಜನಾ ವರದಿ ಹೇಳುತ್ತದೆ.

ಪರಿಸರವಾದಿಗಳಲ್ಲಿನ “ಮೂಲಭೂತವಾದಿಗಳು” ಎಲ್ಲಾ ಅಭಿವೃದ್ಧಿ ಯೋಜನೆಗಳನ್ನು ವಿರೋಧಿಸುತ್ತಿದ್ದಾರೆ ಎಂದು ಕರೀಂ ಆರೋಪಿಸಿದರು. “ಇಲ್ಲಿ, ರೈಲು ಮಾರ್ಗವು ಜೌಗು ಪ್ರದೇಶಗಳು ಮತ್ತು ಭತ್ತದ ಗದ್ದೆಗಳ ಮೂಲಕ ಹೋದರೆ, ನಾವು ಎತ್ತರದ ವಿಸ್ತರಣೆಯನ್ನು ಹೊಂದಿದ್ದೇವೆ. ಪ್ರತಿ 500 ಮೀಟರ್‌ಗಳಿಗೆ, ಅಂಡರ್‌ಪಾಸ್‌ಗಳು ಅಥವಾ ಓವರ್‌ಹೆಡ್ ರಸ್ತೆಗಳು ಇರುತ್ತವೆ.ಯಾವುದೇ ಪರಿಸರ ಹಾನಿಯಾಗುವುದಿಲ್ಲ, ”ಎಂದು ಅವರು ಹೇಳಿದರು.

ಪರಿಸರದ ಅಪಾಯಗಳ ಮೇಲಿನ ಪ್ರತಿಭಟನೆಗಳು ಈ ಹಿಂದೆ ಕೇರಳದಲ್ಲಿ ಹಲವಾರು ದೊಡ್ಡ ಯೋಜನೆಗಳನ್ನು ನೆಲಸಮಗೊಳಿಸಿದವು. ವಿಳಿಂಜಂ ಬಂದರು ಮತ್ತು ಎಲ್‌ಪಿಜಿ ಪ್ರಸರಣಕ್ಕಾಗಿ ಗೇಲ್ ಪೈಪ್‌ಲೈನ್‌ನಂತಹವುಗಳು ಪ್ರತಿಭಟನೆಗಳನ್ನು ಮೀರಿ ಸರ್ಕಾರಗಳಿಂದ ತಳ್ಳಲ್ಪಟ್ಟರೆ, ಇತರವುಗಳಾದ ಪ್ಲಾಚಿಮಡದಲ್ಲಿನ ಕೋಕಾ-ಕೋಲಾ ಬಾಟ್ಲಿಂಗ್ ಪ್ಲಾಂಟ್, ಆರನ್ಮುಳಾದಲ್ಲಿ ವಿಮಾನ ನಿಲ್ದಾಣ ಮತ್ತು ಸೈಲೆಂಟ್ ವ್ಯಾಲಿ ಅರಣ್ಯದೊಳಗೆ ಆಳವಾದ ಅಣೆಕಟ್ಟು ಯೋಜನೆಗಳು ಜನರ ಪ್ರತಿಭಟನೆಗಳಿಂದಾಗಿ ಸರ್ಕಾರ ಕೈ ಬಿಟ್ಟಿತ್ತು.

ಅಭಿವೃದ್ಧಿಯ ಅರ್ಥಶಾಸ್ತ್ರಜ್ಞ ಕೆ ಪಿ ಕಣ್ಣನ್, ಸರ್ಕಾರವು ಪರ್ಯಾಯ ಸಾರಿಗೆ ಮಾದರಿಗಳನ್ನು ಹುಡುಕಬಹುದಿತ್ತು ಎಂದು ಹೇಳುತ್ತಾರೆ. “ನಾವು ಈಗಾಗಲೇ ನಾಲ್ಕು ವಿಮಾನ ನಿಲ್ದಾಣಗಳನ್ನು (ರಾಜ್ಯದೊಳಗೆ) ಮತ್ತು ಎರಡು ಗಡಿಯಲ್ಲಿ (ಮಂಗಳೂರು ಮತ್ತು ಕೊಯಮತ್ತೂರು) ಹೊಂದಿದ್ದೇವೆ. ಕನ್ಯಾಕುಮಾರಿಯಿಂದ ಮಂಗಳೂರು ಮತ್ತು ಅದರಾಚೆಗೂ ರೈಲು ವ್ಯವಸ್ಥೆ ಇದೆ. ಒಳನಾಡು ನೀರಿನ ವ್ಯವಸ್ಥೆ ಇದೆ ಸರ್ಕಾರಕ್ಕೆ ಆ ಬಗ್ಗೆ ಆಸಕ್ತಿ ಇಲ್ಲ. ದೊಡ್ಡ ಸರಕು ಸಾಗಣೆಗೆ ಕರಾವಳಿ ಹಡಗು ಸಾಗಣೆ ಸಾಧ್ಯತೆ ಇದೆ,” ಎಂದು ಹೇಳಿದರು. ಸಿಲ್ವರ್‌ಲೈನ್‌ಗಾಗಿ ಜಪಾನ್‌ನ ಸ್ಟ್ಯಾಂಡರ್ಡ್ ಗೇಜ್ ತಂತ್ರಜ್ಞಾನವು ಅದನ್ನು “ಸ್ವಯಂಚಾಲಿತ ರೈಲ್ವೇ ವ್ಯವಸ್ಥೆ” ಮಾಡಲು ಕೊನೆಗೊಳ್ಳಬಹುದು ಎಂದು ಕಣ್ಣನ್ ಭಯಪಡುತ್ತಾರೆ. “ಇದು ನಮ್ಮ ಮುಖ್ಯವಾಹಿನಿಯ ರೈಲ್ವೆ ಜಾಲದೊಂದಿಗೆ ಯಾವುದೇ ಸಂಪರ್ಕವನ್ನು ಹೊಂದಿರುವುದಿಲ್ಲ. ಅಂತಾರೆ ಕಣ್ಣನ್.

ಮೆಟ್ರೊಮ್ಯಾನ್ ಇ ಶ್ರೀಧರನ್ ಅವರು ಈಯೋಜನೆಯನ್ನು “ಕೆಟ್ಟ ಕಲ್ಪನೆ” ಮತ್ತು “ತಾಂತ್ರಿಕ ಪರಿಪೂರ್ಣತೆಯ ಕೊರತೆ” ಎಂದು ಕರೆದಿದ್ದಾರೆ. ಕಳೆದ ವರ್ಷ ಕೇರಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶ್ರೀಧರನ್ ಇತ್ತೀಚೆಗೆ ಕಾರಿಡಾರ್ ಸ್ಟ್ಯಾಂಡರ್ಡ್ ಗೇಜ್ ತಂತ್ರಜ್ಞಾನದ ಬದಲಿಗೆ ಬ್ರಾಡ್ ಗೇಜ್ ಬಳಸಬೇಕು ಎಂದು ಹೇಳಿದ್ದರು. ಸಿಎಂ “ಸತ್ಯಗಳನ್ನು ಮರೆಮಾಚುತ್ತಿದ್ದಾರೆ” ಮತ್ತು “ವೆಚ್ಚವನ್ನು ಕಡಿಮೆ ಅಂದಾಜು ಮಾಡುತ್ತಿದ್ದಾರೆ” ಎಂದು ಅವರು ಆರೋಪಿಸಿದರು.

ಆದಾಗ್ಯೂ, ವಿಜಯನ್ ಅವರು ಮರುಚಿಂತನೆಯತ್ತ ಒಲವು ತೋರುತ್ತಿಲ್ಲ ಮತ್ತು ವಾಸ್ತವವಾಗಿ ರೈಲು ಯೋಜನೆಯ ಪ್ರಯೋಜನಗಳನ್ನು ವಿವರಿಸುವ ‘ವಿಷದೀಕರಣ’ (ವಿವರಣಾತ್ಮಕ) ಸಭೆಗಳನ್ನು ನಡೆಸಿದ್ದಾರೆ. “ಅಭಿವೃದ್ಧಿ ಯೋಜನೆಗಳಲ್ಲಿ, ಕೆಲವು ವಿರೋಧವಿರುತ್ತದೆ. ಮುಖ್ಯ ವಿಷಯವೆಂದರೆ ರಾಜ್ಯದ ಹಿತಾಸಕ್ತಿಗಳನ್ನು ರಕ್ಷಿಸಬೇಕು, ”ಎಂದು ಅವರು ಸಭೆಯಲ್ಲಿ ಹೇಳಿದರು.

ಈ ಸಭೆಗಳಲ್ಲಿ ಸಾಮಾನ್ಯ ನಾಗರಿಕರು ಭಾಗವಹಿಸುತ್ತಿಲ್ಲ ಆದರೆ ಎಡಪಕ್ಷಗಳೊಂದಿಗೆ ಸೇರಿಕೊಂಡಿರುವ ಪ್ರಭಾವಿ ಸ್ಥಾನದಲ್ಲಿರುವವರು ಭಾಗವಹಿಸುತ್ತಿದ್ದಾರೆ ಎಂದು ವಿಮರ್ಶಕರು ಹೇಳುತ್ತಾರೆ. ಸಿಎಂ ಸಭೆಗಳಲ್ಲಿ ಪ್ರಶ್ನೆಗಳನ್ನು ತೆಗೆದುಕೊಳ್ಳುವುದಿಲ್ಲ ಮತ್ತು ನಿರ್ದಿಷ್ಟ ವಿಷಯಗಳಿಗಿಂತ ಸಾಮಾನ್ಯ ಅಂಶಗಳ ಬಗ್ಗೆ ಮಾತನಾಡುತ್ತಾರೆ ಎಂದು ಅವರು ಹೇಳಿದ್ದಾರೆ.

“ಸಚಿವರೇ ತಮಗೆ (ಈ ಯೋಜನೆ) ಬೇಡ ಎಂದು ಹೇಳುತ್ತಿದ್ದಾರೆ. ಆದರೆ ಸಿಎಂಗೆ ಮನವರಿಕೆ ಮಾಡುವುದು ಹೇಗೆ? ಅವರಿಗೆ ಧೈರ್ಯವಿಲ್ಲ ಎಂದು ಸಮಾಲೋಚನೆಯಲ್ಲಿರುವ ಮೂಲವೊಂದು ಹೇಳಿದೆ. ನೂರನಾಡಿನಂತೆ ತಳಮಟ್ಟದಲ್ಲಿ ಸಿಪಿಎಂ ಕಾರ್ಯಕರ್ತರು ಮತ್ತು ಮುಖಂಡರು ಯೋಜನೆಯ ಬಗ್ಗೆ ಮಾತನಾಡಲು ನಿರಾಕರಿಸುತ್ತಾರೆ. ಅವರು ಯೋಜನೆಯನ್ನು ತಳ್ಳಿಹಾಕುವುದಿಲ್ಲ ಅಥವಾ ವಿರೋಧಿಸುವುದಿಲ್ಲ ಎಂದು ಮೂಲವೊಂದು ಹೇಳಿದೆ.

ಇದನ್ನೂ ಓದಿ: ಪೆಗಾಸಸ್​ ಸ್ಪೈವೇರ್​​ನ್ನು ಮೋದಿ ಸರ್ಕಾರ 2017ರಲ್ಲಿ ಇಸ್ರೇಲ್​​ನಿಂದ ಖರೀದಿಸಿದ್ದಾಗಿ ವರದಿ; ದೇಶದ್ರೋಹವೆಂದ ರಾಹುಲ್ ಗಾಂಧಿ

Published On - 11:55 am, Sun, 30 January 22

ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ