AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪತ್ನಿಗೆ ಆಗಾಗ ಮನೆ ಬಿಟ್ಟು ಹೋಗುವ ಚಟ: ಕೊರಗಿ ಕೊರಗಿ ಕೊನೆಗೆ ಪ್ರಾಣಬಿಟ್ಟ ಪತಿ

ಪತ್ನಿ ನಡೆಯಿಂದ ಬೇಸತ್ತು ಪತಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಹೇಳದೇ ಕೇಳದೆ ಪತ್ನಿ ಪದೇ ಪದೇ ಮನೆ ಬಿಟ್ಟು ಹೋಗುತ್ತಿದ್ದಕ್ಕೆ ಮನನೊಂದು ಸಾವಿನ ಹಾದಿ ತುಳಿದಿದ್ದಾನೆ ಎಂದು ತಿಳಿದುಬಂದಿದೆ. ತಟ್ಟೆಯಲ್ಲಿ ಕೊಟ್ಟಿದ್ದ ಅನ್ನ ಹಾಗೆ ಬಿಟ್ಟು ಗೋವರ್ದನ್ ನೇಣಿಗೆ ಶರಣಾಗಿದ್ದಾನೆ. ಬೆಂಗಳೂರಿನ ಕೆ.ಪಿ.ಅಗ್ರಹಾರದ 12ನೇ ಮುಖ್ಯರಸ್ತೆಯ ಮನೆಯಲ್ಲಿ ಸಾವಿಗೆ ಶರಣಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಪತ್ನಿಗೆ ಆಗಾಗ ಮನೆ ಬಿಟ್ಟು ಹೋಗುವ ಚಟ: ಕೊರಗಿ ಕೊರಗಿ ಕೊನೆಗೆ ಪ್ರಾಣಬಿಟ್ಟ ಪತಿ
Govardhan
ರಾಚಪ್ಪಾಜಿ ನಾಯ್ಕ್
| Updated By: ರಮೇಶ್ ಬಿ. ಜವಳಗೇರಾ|

Updated on:Jun 09, 2025 | 10:45 PM

Share

ಬೆಂಗಳೂರು, (ಜೂನ್ 09): ಪತ್ನಿ ನಡೆಯಿಂದ ಬೇಸತ್ತು ಪತಿ ನೇಣಿಗೆ ಶರಣಾಗಿರುವ ಘಟನೆ ಬೆಂಗಳೂರಿನ ಕೆ.ಪಿ.ಅಗ್ರಹಾರದ 12ನೇ ಮುಖ್ಯರಸ್ತೆಯ ಮನೆಯಲ್ಲಿ ನಡೆದಿದೆ. ಗೋವರ್ಧನ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಪತ್ನಿ ಏನು ಹೇಳದೇ ಕೇಳದ ಪದೇ ಪದೇ ಮನೆ ಬಿಟ್ಟು ಹೋಗುತ್ತಿದ್ದರಿಂದ ಬೇಸತ್ತು ಗೋವರ್ಧನ್ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. 7 ವರ್ಷಗಳ ಹಿಂದೆ ವಿವಾಹವಾಗಿದ್ದ ಗೋವರ್ಧನ್ ಮತ್ತು ಪ್ರಿಯಾ ದಂಪತಿಗೆ ಎರಡು ಮಕ್ಕಳಿವೆ. ಆದರೂ ಪ್ರಿಯಾ ಆಗಾಗ ಮನೆ ಬಿಟ್ಟು ಹೋಗುತ್ತಿದ್ದಳು ಎನ್ನುವ ಆರೋಪ ಕೇಳಿಬಂದಿದೆ. ಕಳೆದ ಒಂದು ತಿಂಗಳ ಹಿಂದೆ ಕೂಡ ಮನೆ ಬಿಟ್ಟು ಹೋಗಿದ್ದಳು. ಇದರಿಂದ ಖಿನ್ನತೆಗೊಳಗಾಗಿ ಗೋವರ್ಧನ್ ಮನೆಯಲ್ಲಿ ಫ್ಯಾನ್​ ಗೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಗೋವರ್ಧನ್ ಕುಟುಂಬ ಮೂರಂತಸ್ತಿನ ಕಟ್ಟಡದಲ್ಲಿ ವಾಸವಿದೆ. ಗೋವರ್ಧನ್ ತಾಯಿ ಕೆಳ ಮಹಡಿಯಲ್ಲಿ ವಾಸವಿದ್ದರೆ, ಮೇಲ್ಮಹಡಿಯಲ್ಲಿ ಗೋವರ್ದನ್ ಮತ್ತು ಪತ್ನಿ ಪ್ರಿಯಾ ವಾಸವಾಗಿದ್ದರು. ಪತ್ನಿ ಬಿಟ್ಟು ಹೋದ ಮೇಲೆ ಗೋವರ್ದನ್ ಒಬ್ಬನೇ ವಾಸವಿದ್ದ. ನಿನ್ನೆ (ಜೂನ್ 08) ರಾತ್ರಿ‌ ತಾಯಿಯೇ ಊಟ ನೀಡಿ ಬಂದಿದ್ದಳು. ಆದ್ರೆ, ಅಮ್ಮ ಕೊಟ್ಟ ಊಟ ಕೂಡ ಮಾಡದೆ ಹಾಗೆ ಬಿಟ್ಟು ಗೋವರ್ದನ್ ನೇಣಿಗೆ ಶರಣಾಗಿದ್ದಾನೆ.

ಇದನ್ನೂ ಓದಿ: ಜಾತ್ರೇಲಿ ಸಿಕ್ಕ ವಿವಾಹಿತ ಪ್ರೇಯಸಿಯನ್ನು ಓಯೋ ರೂಮಿಗೆ ಕರೆದೊಯ್ದು ಹತ್ಯೆ:ಹರಿಣಿ-ಯಶಸ್‌ ಮಧ್ಯೆ ಅಸಲಿಗೆ ಆಗಿದ್ದೇನು?

ಇಂದು (ಜೂನ್ 09) ಸಂಜೆಯಾದರೂ ಮನೆಯಿಂದ ಗೋವರ್ಧನ್ ಹೊರಬಂದಿರಲಿಲ್ಲ. ಇದರಿಂದ ಸಂಜೆ ಮನೆಗೆ ಹೋಗಿ ನೋಡಿದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ. ಸದ್ಯ ಗೋವರ್ಧನ್ ಮೃತದೇಹ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಸಾವಿಗೆ ಪತ್ನಿ ಪ್ರಿಯಾ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಇದನ್ನೂ ಓದಿ
Image
ಮಕ್ಕಳಿದ್ರೂ 17ರ ಯುವತಿ ಜತೆ ಲವ್, ಮದ್ವೆಗೆ ಒಪ್ಪದಿದ್ದಕ್ಕೆ ಮಾಡಿದ್ದೇನು?
Image
ಅವನಿಗೆ 25, ಅವಳಿಗೆ 36..OYO ರೂಂಗೆ ಕರೆದೊಯ್ದು ಹತ್ಯೆ: ಅಸಲಿ ಕಾರಣವೇನು?
Image
ಹಾಸನ: ಆರು ವರ್ಷದ ಕರುಳ ಬಳ್ಳಿಯನ್ನೇ ನೀರಿನಲ್ಲಿ ಮುಳುಗಿಸಿ ಕೊಂದ ತಾಯಿ
Image
ಬಾಲಕಿ ಶವ ಕೇಸ್: ಲೈಂಗಿಕ ಕ್ರಿಯೆಗೆ ಸಹಕರಿಸಿಲ್ಲವೆಂದು ಹತ್ಯೆ

ಗೋವರ್ಧನ್ ಮತ್ತು ಪ್ರಿಯಾ 7 ವರ್ಷಗಳ ಹಿಂದೆ ವಿವಾಹವಾಗಿದ್ದು, ಇಬ್ಬರೂ ಮಕ್ಕಳು ಸಹ ಇದ್ದಾರೆ. ಆದರೆ, ಪ್ರಿಯಾ ಗಂಡನಿಗೆ ಏನು ಹೇಳದೇ ಕೇಳದೇ ಪದೇ ಪದೇ ಮನೆ ಬಿಟ್ಟು ಹೋಗುತ್ತಿದ್ದಳು. ಕಳೆದ ಒಂದು ತಿಂಗಳ ಹಿಂದೆ ಸಹ ಮನೆ ಬಿಟ್ಟು ಹೋಗಿದ್ದಳು. ಪತ್ನಿಯ ಈ ನಡೆತೆಯಿಂದ ಬೇಸತ್ತು ಗೋವರ್ಧನ್ ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಸದ್ಯ ಪೊಲೀಸರ ತನಿಖೆಯಿಂದ ಸತ್ಯಾಸತ್ಯತೆ ತಿಳಿದುಬರಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:44 pm, Mon, 9 June 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ