AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೂಟ್​​ಕೇಸ್​ನಲ್ಲಿ ಬಾಲಕಿ ಶವ ಕೇಸ್: ಲೈಂಗಿಕ ಕ್ರಿಯೆಗೆ ಸಹಕರಿಸಿಲ್ಲವೆಂದು ಹತ್ಯೆ, ಆರೋಪಿಗಳ ಬಂಧನ

ಆನೇಕಲ್ ತಾಲ್ಲೂಕಿನಲ್ಲಿ ಸೂಟ್‌ಕೇಸ್‌ನಲ್ಲಿ ಪತ್ತೆಯಾದ ಬಾಲಕಿಯ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. ಬಿಹಾರ ಮೂಲದ ಏಳು ಜನ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳು ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿ, ಶವವನ್ನು ಸೂಟ್‌ಕೇಸ್‌ನಲ್ಲಿ ಹಾಕಿ ಎಸೆದಿದ್ದರು. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಸೂಟ್​​ಕೇಸ್​ನಲ್ಲಿ ಬಾಲಕಿ ಶವ ಕೇಸ್: ಲೈಂಗಿಕ ಕ್ರಿಯೆಗೆ ಸಹಕರಿಸಿಲ್ಲವೆಂದು ಹತ್ಯೆ, ಆರೋಪಿಗಳ ಬಂಧನ
ಸೂರ್ಯನಗರ ಪೊಲೀಸ್​ ಠಾಣೆ, ಆರೋಪಿ ಅಶಿಕ್ ಕುಮಾರ್
ರಾಮು, ಆನೇಕಲ್​
| Updated By: ವಿವೇಕ ಬಿರಾದಾರ|

Updated on:Jun 08, 2025 | 3:29 PM

Share

ಆನೇಕಲ್, ಜೂನ್​ 08: ಬೆಂಗಳೂರು (Bengaluru) ನಗರ ಜಿಲ್ಲೆಯ ಆನೇಕಲ್ (Anekal) ತಾಲೂಕಿನ ಹಳೇ ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿ ಸೂಟ್​ಕೇಸ್​ನಲ್ಲಿ ಪತ್ತೆಯಾಗಿದ್ದ ಅಪರಿಚಿತ ಬಾಲಕಿಯ ಶವ ಪ್ರಕರಣವನ್ನು ಸೂರ್ಯನಗರ ಠಾಣಾ ಪೊಲೀಸರು ಭೇದಿಸಿದ್ದಾರೆ. ಆರೋಪಿಗಳು ಬಾಲಕಿಯ ಮೇಲೆ ಅತ್ಯಾಚಾರ ಎಸಗಿ, ಬಳಿಕ ಕೊಲೆ ಮಾಡಿ ಶವವನ್ನು ಸೂಟಕೇಸ್​ನಲ್ಲಿ ಹಾಕಿ ರೈಲ್ವೆ ಹಳಿ ಪಕ್ಕದಲ್ಲಿ ಎಸದು ಹೋಗಿದ್ದಾರೆ ಎಂಬುವುದನ್ನು ಪೊಲೀಸ್​ ತನಿಖೆಯಲ್ಲಿ ಬಹಿರಂಗವಾಗಿದೆ.

ಪ್ರಕರಣದಲ್ಲಿ ಭಾಗಿಯಾಗಿರುವ ಬಿಹಾರ ಮೂಲದ ಅಶಿಕ್ ಕುಮಾರ್ (22) ಮುಖೇಶ್ ರಾಜಬನ್ಶಿ (35), ಇಂದುದೇವಿ (32) ರಾಜರಾಮ್ ಕುಮಾರ್ (18) ಪಿಂಟು ಕುಮಾರ್ (18), ಕಾಲು ಕುಮಾರ್(17) ರಾಜು ಕುಮಾರ್(17) ಬಂಧಿತರು. ಆರೋಪಿಗಳು ಮೇ 20ರಂದು ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆ.

ಎ1 ಆಶೀಕ್ ಕುಮಾರ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಕಾಚನಾಯಕನಹಳ್ಳಿಯಲ್ಲಿ ವಾಸವಾಗಿದ್ದನು. ಆಶೀಕ್ ಕುಮಾರ್ ಮೇ 13ರಂದು ಬೆಂಗಳೂರಿನಿಂದ ಬಿಹಾರಕ್ಕೆ ತೆರಳಿದ್ದನು. ಎರಡೇ ದಿನದಲ್ಲಿ ಪಕ್ಕದ ಗ್ರಾಮದ ಬಾಲಕಿಯನ್ನು ಬಲೆಗೆ ಕೆಡವಿಕೊಂಡಿದ್ದನು. ಮೇ 15ರಂದು ಆಶೀಕ್ ಕುಮಾರ್ ಬಾಲಕಿಯನ್ನು ಕರೆದುಕೊಂಡು ಬಿಹಾರದಿಂದ ಬೆಂಗಳೂರಿಗೆ ಹೊರಟಿದ್ದಾನೆ. ಮೇ 18ರಂದು ಇಬ್ಬರೂ ಬೆಂಗಳೂರಿಗೆ ತಲುಪಿದ್ದಾರೆ.

ಇದನ್ನೂ ಓದಿ
Image
ನೂಕು ನುಗ್ಗಲಿನಲ್ಲಿ ಬಸ್ ಹತ್ತುವ ಮುನ್ನ ಹುಷಾರ್... ಓದಲೇ ಬೇಕಾದ ಸುದ್ದಿ!
Image
ಇಬ್ಬರ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಪತ್ನಿ ಇಡೀ ಕುಟುಂಬಕ್ಕೆ ವಿಷ ಹಾಕಿದ್ಲು
Image
55ರ ಮಹಿಳೆ ಜತೆ ಅಕ್ರಮ ಸಂಬಂಧ, ಆಕೆಯ ಪತಿಯನ್ನೇ ಕೊಲೆ ಮಾಡಿದ 33 ರ ಯುವಕ
Image
ಸೆಮಿನಾರ್​ ತಪ್ಪಿಸಲು ಕಾಲೇಜು ಸ್ಫೋಟಿಸುವುದಾಗಿ ಕರೆ ಮಾಡಿದ ವಿದ್ಯಾರ್ಥಿನಿ

ಅಂದು ಬಾಲಕಿ ಜೊತೆ ಆಶೀಕ್ ಕುಮಾರ್ ಬೆಂಗಳೂರು ನಗರ ಸುತ್ತಾಡಿದ್ದಾನೆ. ಆರೋಪಿ ಆಶೀಕ್ ಕುಮಾರ್ ಅದೇ ದಿನ ರಾತ್ರಿ ಸಂಬಂಧಿ ಮುಖೇಶ್ ಮನೆಗೆ ಬಾಲಕಿಯನ್ನು ಕರೆದುಕೊಂಡು ಹೋಗಿದ್ದಾನೆ. ಮರುದಿನ ಬಾಲಕಿ ಲೈಂಗಿಕ ಕ್ರಿಯೆಗೆ ಸಹಕರಿಸದ ಹಿನ್ನೆಲೆಯಲ್ಲಿ ಆಕೆಯ ಜೊತೆಗೆ ಜಗಳವಾಡಿದ್ದಾನೆ. ನಂತರ, ಆಶೀಕ್ ಕುಮಾರ್ ಬಿಯರ್ ಬಾಟಲ್​ನಿಂದ ಯುವತಿಯ ಖಾಸಗಿ ಅಂಗಕ್ಕೆ ಹಲ್ಲೆ ಮಾಡಿದ್ದಾನೆ. ಬಳಿಕ ರಾಡ್​ನಿಂದಲೂ ಬಾಲಕಿ ಮೇಲೆ ಹಲ್ಲೆ ಮಾಡಿದ್ದಾನೆ. ಹಲ್ಲೆ ಬಳಿಕ ಆಶೀಕ್ ಕುಮಾರ್ ಬಾಲಕಿಗೆ ಉಸಿರುಗಟ್ಟಿಸಿ ಕೊಂಲೆ ಮಾಡಿದ್ದಾನೆ.

ಬಾಲಕಿಯನ್ನು ಕೊಲೆ ಮಾಡಿದ ಬಳಿಕ ಆರೋಪಿ ಆಶೀಕ್ ಕುಮಾರ್ ಸಂಬಂಧಿಗಳಿಗೆ ವಿಚಾರ ತಿಳಿಸಿದ್ದಾನೆ. ನಂತರ, ಆರೋಪಿಗಳು ಬಾಲಕಿಯ ಶವವನ್ನು ಸೂಟ್​ಕೇಸ್​ನಲ್ಲಿ ಹಾಕಿದ್ದಾರೆ. ಎಲ್ಲರೂ ಸೇರಿಕೊಂಡು ಕ್ಯಾಬ್​ನಲ್ಲಿ ಬಾಲಕಿಯ ಶವ ತೆಗೆದುಕೊಂಡು ಹಳೇ ಚಂದಾಪುರ ರೈಲ್ವೆ ಬ್ರಿಡ್ಜ್ ಬಳಿ ಬಂದಿದ್ದಾರೆ. ರೈಲು ಹಳಿಯಿಂದ ಕೆಳಕ್ಕೆ ಸೂಟ್​ಕೇಸ್ ಎಸೆದು ಪರಾರಿಯಾಗಿದ್ದಾರೆ. ಚಲಿಸುವ ರೈಲಿನಿಂದ ಎಸೆದಿರುವಂತೆ ಬಿಂಬಿಸಲು ಆರೋಪಿಗಳು ಯತ್ನಿಸಿದ್ದಾರೆ. ಬಳಿಕ ಏಳೂ ಮಂದಿ ಆರೋಪಿಗಳು ಬಿಹಾರಕ್ಕೆ ಪರಾರಿಯಾಗಿದ್ದಾರೆ.

ಇದನ್ನೂ ಓದಿ: ಪ್ರಿಯಕರನ ಜೊತೆ ಏಕಾಂತದಲ್ಲಿದ್ದಾಗ ಸಿಕ್ಕಿಬಿದ್ದ ಪತ್ನಿಯ ತಲೆಕಡಿದು ರುಂಡ ಸಮೇತ ಠಾಣೆಗೆ ಬಂದ ಪತಿ

ಸೂಟ್​ಕೇಸ್​ನಲ್ಲಿ ಬಾಲಕಿ ಶವ ಸಿಕ್ಕ ಪ್ರಕರಣವನ್ನು ಸೂರ್ಯನಗರ ಠಾಣೆ ಪೊಲೀಸರು ಪೋಕ್ಸೋ ಅಡಿ ಕೇಸ್​ ದಾಖಲಿಸಿಕೊಂಡು ತನಿಖೆ ನಡೆಸಿದರು. ಆರೋಪಿಗಳ ಚಲನವಲನ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು. ಆರೋಪಿಗಳು ಸೂಟ್​ಕೇಸ್​​ನಲ್ಲಿ ಶವ ಸಾಗಿಸುವ ದೃಶ್ಯಗಳು ಕೂಡ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಸಿಸಿಟಿವಿ ದೃಶ್ಯ ಆಧರಿಸಿ, ಆರೋಪಿಗಳ ಜಾಡು ಹಿಡಿದು ಹೊರಟ ಪೊಲೀಸರು, ಬಿಹಾರದಲ್ಲಿ ಏಳೂ ಮಂದಿ ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಸೂರ್ಯನಗರ ಠಾಣೆಯ ಪೊಲೀಸರಿಂದ ತನಿಖೆ ಮುಂದುವರೆದಿದೆ.

ಬಿಹಾರದಲ್ಲಿ ಕಿಡ್ನಾಪ್ ಕೇಸ್ ದಾಖಲು

ಮೃತ ಬಾಲಕಿಯ ತಂದೆ ಬಿಹಾರದಲ್ಲಿ ಕಿಡ್ನಾಪ್ ಕೇಸ್ ದಾಖಲಿಸಿದ್ದಾರೆ. ಬಾಲಕಿಯ ದೂರು ಆಧರಿಸಿ ಅಶೀಕ್ ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಬಿಹಾರ ಪೊಲೀಸರು ಸೂರ್ಯನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು. ಆಗ, ಸೂರ್ಯನಗರ ಠಾಣೆ ಪೊಲೀಸರು ನಡೆದ ಘಟನೆಯನ್ನು ತಿಳಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:24 pm, Sun, 8 June 25

ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ನನ್ನ ಸೊಸೆ ಸ್ಟಾರ್, ಆಕೆಗೆ ಕೆಟ್ಟ ಹೆಸರು ಬರಬಾರದು: ಯಶ್ ತಾಯಿ ಪುಷ್ಪ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಮೋದಿಮಯವಾದ ನಮೀಬಿಯಾ ಸಂಸತ್; ಸಂಸದರಿಂದ ಎದ್ದು ನಿಂತು ಚಪ್ಪಾಳೆ
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
ಶಿವಮೊಗ್ಗದಲ್ಲಿ ಅಮಾನವೀಯ ಘಟನೆ:ದೆವ್ವ ಬಿಡಿಸ್ತೀನಂತ ಮಹಿಳೆಯನ್ನೇ ಬಲಿಪಡೆದಳು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
‘ನಿದ್ರಾದೇವಿ ನೆಕ್ಸ್ಟ್ ಡೋರ್’ ವೇದಿಕೆ ಮೇಲೆ ಭಾಷೆ ಬಗ್ಗೆ ಗಣೇಶ ಮಾತು
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಸಿಎಂ ಮತ್ತು ಡಿಸಿಎಂ ಜೊತೆ ಸಚಿವ ಮತ್ತ ಶಾಸಕರ ಪಟಾಲಂ ಕೂಡ ಇದೆ!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಹಿಂದೆ ತಾವು ಹೇಳಿದ್ದನ್ನು ನೆನೆಪಿಸಿದಾಗ ಶ್ರೀರಾಮುಲು ನಿರುತ್ತರಾದರು!
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ಆನೆಗುಡ್ಡೆ ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಹುಟ್ಟುಹಬ್ಬ ಆಚರಣೆ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ನಮ್ಮನ್ನು ಅಸಡ್ಡೆ ಮಾಡಲಾಯಿತು, ಆಗಿಂದಲೇ ಹೋರಾಟ ಶುರುವಾಯಿತು: ನಿಶಾ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ರಸ್ತೆ ಪೂರ್ಣಗೊಳ್ಳುವ ಮೊದಲೇ ಸುಂಕ ವಸೂಲಾತಿ; ಟೋಲ್ ಪ್ಲಾಜಾ ಧ್ವಂಸ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ
ನ್ಯಾಯ ಕೊಡಿಸುವ ಭರವಸೆ ಸುರ್ಜೇವಾಲಾ ನೀಡಿದ್ದಾರೆ: ಮಾಳವಿಕ