ನನ್ನ ಪತ್ನಿ ನಡತೆಗೆಟ್ಟವಳು, ಅವಳೇ ಮಗುವನ್ನು ಕೊಂದಿದ್ದು: ರಘು, ಮಗು ಕೊಂದ ಅರೋಪಿ ಶ್ವೇತಾ ಪತಿ
ಶ್ವೇತಾ ಮತ್ತು ರಘು ವಿವಾಹ 2018ರಲ್ಲಿ ನಡೆದಿದ್ದು. ಮೊದಲೆರಡು ವರ್ಷಗಳ ಕಾಲ ದಂಪತಿ ಅನ್ಯೋನ್ಯವಾಗಿದ್ದರು, ಅದರೆ ನಂತರದ ವರ್ಷಗಳಲ್ಲಿ ಅವರ ನಡುವೆ ವಿರಸ ಶುರುವಾಗಿದೆ. ನೆಲಮಂಗಲದಲ್ಲಿ ವಾಸವಾಗಿರುವ ಮತ್ತು ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುವ ರಘು ಹೇಳುವ ಪ್ರಕಾರ ಅವರ ತಾಯಿಯ ಮೇಲೆ ಶ್ವೇತಾ ದೈಹಿಕ ಹಲ್ಲೆ ನಡೆಸಿ ಹಿಂಸಿಸುತ್ತಿದ್ದಳು, ಮತ್ತು ಆಗಾಗ್ಗೆ ಮನೆ ಬಿಟ್ಟು ಹೋಗುತ್ತಿದ್ದಳು.
ಹಾಸನ, ಜೂನ್ 9: ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಜಿನ್ನೇನಹಳ್ಳಿಕೊಪ್ಪಲು ಹೆಸರಿನ ಗ್ರಾಮದಲ್ಲಿ ನಿನ್ನೆ 6-ವರ್ಷದ ಮಗು ಸಾನ್ವಿಯನ್ನು 36-ವರ್ಷದ ತಾಯಿ ಶ್ವೇತಾಳೇ (Shwetha) ನೀರಿನ ತೊಟ್ಟಿಯಲ್ಲಿ ಮುಳುಗಿಸಿ ಸಾಯಿಸಿದ್ದಾಳೆ ಎಂದು ಆಕೆಯ ಪತಿ ರಘು ಬಲವಾಗಿ ಅರೋಪಿಸುತ್ತಿದ್ದಾರೆ. ಮಾಧ್ಯಮಗಳ ಜೊತೆ ದುಃಖವನ್ನು ತಡೆಯಲಾಗದೆ ಅಳುತ್ತಾ ಮಾತಾಡಿದ ರಘು, ತನ್ನ ಹೆಂಡತಿಗೆ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುತ್ತಿದ್ದ ಕಂಪನಿಯಲ್ಲಿ ಯಾವನದ್ದೋ ಜೊತೆ ಅಕ್ರಮ ಸಂಬಂಧ ಇತ್ತು, ಪ್ರಾಯಶಃ ಅದೇ ಕಾರಣಕ್ಕೆ ಅವಳು ಮಗುವನ್ನು ಸಾಯಿಸಿದ್ದಾಳೆ ಎಂದು ಹೇಳುವ ರಘು ತನ್ನ ಪತ್ನಿಯನ್ನು ಶೀಲಗೆಟ್ಟವಳು ಎಂದು ಆರೋಪಿಸುತ್ತಾರೆ.
ಇದನ್ನೂ ಓದಿ: Dharwad Mother: ಕಾಮದಾಹಕ್ಕೆ ಅಡ್ಡಿಯಾಗಿದ್ದ ಸ್ವಂತ ವಿಕಲಾಂಗ ಮಗಳ ಕತ್ತು ಕತ್ತರಿಸಿ ಸಾಯಿಸಿದ ಮಹಿಳೆ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ