Video: ಊಟ ಕೊಡುವುದು ತಡವಾಗಿದ್ದಕ್ಕೆ ರೆಸ್ಟೋರೆಂಟ್ ಧ್ವಂಸಗೊಳಿಸಿದ ದುಷ್ಕರ್ಮಿಗಳು
ಊಟ ಕೊಡುವುದು ತಡವಾಗಿದ್ದಕ್ಕೆ ದುಷ್ಕರ್ಮಿಗಳು ರೆಸ್ಟೋರೆಂಟ್ ಧ್ವಂಸಗೊಳಿಸಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ನಡೆದಿದೆ. ಶನಿವಾರ ತಡರಾತ್ರಿ ಗಾಜಿಯಾಬಾದ್ನ ರೆಸ್ಟೋರೆಂಟ್ವೊಂದರಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳ ಗುಂಪೊಂದು ನುಗ್ಗಿ ಎಲ್ಲವನ್ನೂ ಧ್ವಂಸಗೊಳಿಸಿದೆ. ಅಪ್ನಿ ರಸೋಯ್ ಎಂಬ ರೆಸ್ಟೋರೆಂಟ್‌ನಲ್ಲಿ ರಾತ್ರಿ 11.30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ರೆಸ್ಟೋರೆಂಟ್ ಮಾಲೀಕ ಅಕ್ಷಿತ್ ತ್ಯಾಗಿ ಸಲ್ಲಿಸಿದ ಎಫ್‌ಐಆರ್ ಪ್ರಕಾರ, ಆಹಾರ ಪೂರೈಕೆಯಲ್ಲಿನ ವಿಳಂಬದಿಂದಾಗಿ ಗಲಾಟೆ ಪ್ರಾರಂಭವಾಯಿತು. ಬಳಿಕ 6-7 ಮಂದಿ ಬೈಕ್ನಲ್ಲಿ ಬಂದು ದಾಳಿ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
ಗಾಜಿಯಾಬಾದ್, ಜೂನ್ 09: ಊಟ ಕೊಡುವುದು ತಡವಾಗಿದ್ದಕ್ಕೆ ದುಷ್ಕರ್ಮಿಗಳು ರೆಸ್ಟೋರೆಂಟ್ ಧ್ವಂಸಗೊಳಿಸಿರುವ ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ನಡೆದಿದೆ. ಶನಿವಾರ ತಡರಾತ್ರಿ ಗಾಜಿಯಾಬಾದ್ನ ರೆಸ್ಟೋರೆಂಟ್ವೊಂದರಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಗಳ ಗುಂಪೊಂದು ನುಗ್ಗಿ ಎಲ್ಲವನ್ನೂ ಧ್ವಂಸಗೊಳಿಸಿದೆ.
ಅಪ್ನಿ ರಸೋಯ್ ಎಂಬ ರೆಸ್ಟೋರೆಂಟ್‌ನಲ್ಲಿ ರಾತ್ರಿ 11.30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ರೆಸ್ಟೋರೆಂಟ್ ಮಾಲೀಕ ಅಕ್ಷಿತ್ ತ್ಯಾಗಿ ಸಲ್ಲಿಸಿದ ಎಫ್‌ಐಆರ್ ಪ್ರಕಾರ, ಆಹಾರ ಪೂರೈಕೆಯಲ್ಲಿನ ವಿಳಂಬದಿಂದಾಗಿ ಗಲಾಟೆ ಪ್ರಾರಂಭವಾಯಿತು. ಬಳಿಕ 6-7 ಮಂದಿ ಬೈಕ್ನಲ್ಲಿ ಬಂದು ದಾಳಿ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ. ಬಿಲ್ಲಿಂಗ್ ಕೌಂಟರ್‌ನಿಂದ 1,760 ರೂ.ಗಳನ್ನು ಸಹ ತೆಗೆದುಕೊಂಡಿದ್ದಾರೆ. ಘಟನೆಯ ಸಮಯದಲ್ಲಿ, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹಲವಾರು ಕುಟುಂಬಗಳು ರೆಸ್ಟೋರೆಂಟ್‌ನಲ್ಲಿ ಊಟ ಮಾಡುತ್ತಿದ್ದರು. ಹಠಾತ್ ಹಿಂಸಾಚಾರದಿಂದ ಭಯಭೀತರಾಗಿದ್ದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ