ನೂಕು ನುಗ್ಗಲಿನಲ್ಲಿ ಬಸ್ ಹತ್ತುವ ಮುನ್ನ ಹುಷಾರ್… ಓದಲೇ ಬೇಕಾದ ಸುದ್ದಿ..
ಕರ್ನಾಟಕದಲ್ಲಿ ಶಕ್ತಿಯೋಜನೆ ಜಾರಿಯಾದ ಬಳಿಕ ಸಾರಿಗೆ ಬಸ್ ಗಳಲ್ಲಿ ಕಾಲಿಡೋಕೆ ಆಗದ ಸ್ಥಿತಿ ಇದೆ. ಹೆಚ್ಚಿನ ಮಹಿಳಾ ಪ್ರಯಾಣಿಕರ ಓಡಾಡ ಹೆಚ್ಚಳವಾಗಿದೆ. ಹೀಗಾಗಿ ಸಾರಿಗೆ ಲಾ ಬಸ್ ಗಳು ತುಂಬಿ ತುಳುಕುತ್ತವೆ. ತುಂಬಿ ತುಳುಕೋ ಬಸ್ ಗಳೇ ಕೆಲವರಿಗೆ ಕಳ್ಳತನದ ಸ್ಪಾಟ್ ಆಗಿ ಬದಲಾಗಿದೆ. ಹೀಗಾಗಿ ನೂಕು ನುಗ್ಗಲಿನಲ್ಲಿ ಬಸ್ ಹತ್ತುವ ಮುನ್ನ ಮಹಿಳೆಯರು ಹುಷಾರ್ ಆಗಿರಬೇಕು. ಅಷ್ಟಕ್ಕೂ ಆಗಿದ್ದೇನು ಅಂತೀರಾ? ಇಲ್ಲಿದೆ ನೋಡಿ ಒಂದು ವರದಿ.

ಹಾಸನ, (ಜೂನ್ 08): ಬಸ್ ರಷ್ ಇದೆ ಎಂದು ನೂಕು ನುಗ್ಗಲಿನಲ್ಲಿ ಬಸ್ ಹತ್ತೋ ಮಹಿಳೆಯರನ್ನೇ (Women) ಟಾರ್ಗೆಟ್ ಮಾಡಿ ಚಿನ್ನಾಭರಣ ದೋಚುತ್ತಿದ್ದ ಕತರ್ನಾಕ್ ತಂಡವನ್ನು ಹಾಸನ (Hassan) ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದುರಂತ ಅಂದ್ರೆ ಬಸ್ ನಲ್ಲಿ ಕಳ್ಳತನ ಮಾಡುವ ಇಡೀ ಗ್ಯಾಂಗ್ ನಲ್ಲಿ ಮಹಿಳೆಯರೇ ಇದ್ದಾರೆ. ಆಂಧ್ರದ ಚಿತ್ತೂರು ಜಿಲ್ಲೆ ಕುಪ್ಪಂನ ಗ್ರಾಮದ ಶಶಿ(35), ಮಾಧವಿ(40), ಅಕಿಲ(30), ವಿದ್ಯಾ(29) ಬಂಧಿತರು. ಇನ್ನು ಆರೋಪಿಗಳ ಬಳಿ ಇದ್ದ 6.38 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ. ಹೊಳೆನರಸೀಪುರ ಠಾಣೆ ಪೊಲೀಸರು ನಡೆಸಿದ ಕಾರ್ಯಚರಣೆ ವೇಲೆ ಈ ಗ್ಯಾಂಗ್ ಸಿಕ್ಕಿಬಿದ್ದಿದೆ.
ಹಾಸನ ಜಿಲ್ಲೆ ಹೊಳೆನರಸೀಪುರ ಪಟ್ಟಣದ ಸಾರಿಗೆ ಬಸ್ ನಿಲ್ದಾಣದಲ್ಳಿ ಮಹಿಳೆಯೊಬ್ಬರ ಸರ ಕಳ್ಳತನವಾಗಿದೆ. ಈ ಬಗ್ಗೆ ಕೇಸ್ ದಾಖಲಿಸಿಕೊಂಡ ಹೊಳೆನರಸೀಪುರ ನಗರ ಠಾಣೆ ಪೋಲೀಸರು ತನಿಖೆಗಿಳಿದಾಗ ಭಯಾನಕ ಸತ್ಯ ಬಯಲಾಗಿದೆ. ಪ್ರಯಾಣಿಕರ ಸೋಗಿನಲ್ಲಿ ಬಸ್ ಹತ್ತಲು ಬರೋದು, ಗಡಿಬಿಡಿಯಲ್ಲಿ ಬಸ್ ಹತ್ತೋ ವೇಳೆ ಜನರ ಗಮನ ಬಸ್ ಹತ್ತೋಕಡೆ ಇದ್ದಾಗ ಚಿನ್ನದ ಸರ, ಮಾಂಗಲ್ಯ ಸರ, ನೆಕ್ಲೇಸ್ ಎಗರಿಸಿ ಎಸ್ಕೇಪ್ ಆಗೋದು ಇವರ ಕಾಯಕ. ಚಿನ್ನಾಭರಣ ಕಳ್ಳತನವನ್ಮೇ ಫ್ಯಾಶನ್ ಆಗಿಸಿಕೊಂಡ ಆಂಧ್ರಪ್ರದೇಶ ಮೂಲದ ಕುಪ್ಪಂನ ನಾಲ್ವರು ಕತರ್ನಾಕ್ ಲೇಡೀಸ್ ಅಂದರ್ ಆಗಿದ್ದಾರೆ.
ಇದನ್ನೂ ಓದಿ: ಇಬ್ಬರ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಪತ್ನಿ ಇಡೀ ಕುಟುಂಬಕ್ಕೆ ವಿಷ ಹಾಕಿದ್ಲು! ಮುಂದಾಗಿದ್ದೇನು?
ಕಳ್ಳಿಯರಿಗಾಗಿ ಬಲೆ ಬೀಸಿದ ಇನ್ಸ್ಪೆಕ್ಟರ್ ಪ್ರದೀಪ್ ಪಿಎಸ್ ಐ ಅಭಿಜಿತ್ ನೇತೃತ್ವದ ಟೀಂ ಕಾರ್ಯಾಚರಣೆ ನಡೆಸಿ ಕತರ್ನಾಕ್ ಚೋರಿಯರಾದ ಆಂಧ್ರಪ್ರದೇಶ ಮೂಲದ ಚಿತ್ತೂರು ಜಿಲ್ಲೆ, ಕುಪ್ಪಂ ಗ್ರಾಮದ ಶಶಿ (35), ಮಾಧವಿ (40), ಅಕಿಲ (30) ಮತ್ತು ವಿದ್ಯಾ (29) ರನ್ನ ಬಂಧಿಸಿದ್ದಾರೆ. ಬಂಧಿತರಿಂದ 6.38 ಲಕ್ಷ ರೂ ಮೌಲ್ಯದ ಚಿನ್ನಾಭರಣಗಳಲ್ಲಿ 35 ಗ್ರಾಂ ತೂಕದ ಚಿನ್ನದ ಸರ, 22 ಗ್ರಾಂ ತೂಕದ ನೆಕ್ಲೆಸ್, 5 ಗ್ರಾಂ ತೂಕದ ಬೆಳ್ಳಿ ಗಣಪತಿ ಡಾಲರ್ ಹಾಗೂ 29 ಗ್ರಾಂ ತೂಕದ ಚಿನ್ನದ ಸರ ವಶಕ್ಕೆ ಪಡೆಯಲಾಗಿದೆ.
ಒಂದೇ ಗ್ರಾಮದವರಾಗಿರೊ ಈ ಕತರ್ನಾಕ್ ಮಹಿಳೆಯರು ಬೇರೆ ಬೇರೆ ಉದ್ಯೋಗ ಮಾಡ್ತಾರೆ. ಶಶಿ ಎಂಬಾಕೆ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದರೆ, ಉಳಿದ ಮೂವರು ಬೇರೆ ಕಡೆ ಕೂಲಿ ಕೆಲಸ ಮಾಡಿಕೊಂಡಿದ್ದರು. ಆದ್ರೆ ಬೇರೆ ಬೇರೆ ಊರುಗಳಿಗೆ ಆಗಾಗ ಹೋಗಿ ಹೀಗೆ ಕಳ್ಳತನ ಮಾಡಿ ಎಸ್ಕೇಪ್ ಆಗಿ ಬಿಡ್ತಾರೆ, ಶಶಿ ಹಾಗೂ ವಿದ್ಯಾ ವಿರುದ್ಧ ಬೆಂಗಳೂರಿನಲ್ಲಿ ವಿವಿಧ ಪೊಲೀಸ್ ಠಾಣೆಗಳಲ್ಲಿ ಇದೇ ರೀತಿಯ ಕೇಸ್ ಕೂಡ ದಾಖಲಾಗಿದೆ. ಗಡಿಬಿಡಿಯಲ್ಲಿ ಬಸ್ ಹತ್ತೊ ಮಹಿಳೆಯರು ತಮ್ಮ ಅಮೂಲ್ಯ ವಸ್ತುಗಳ ಬಗ್ಗೆ ಎಚ್ಚರ ವಹಿಸಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.