AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Stampede: ನನ್ನ ಮಗನ ಸಾವಿಗೆ ಸರ್ಕಾರವೇ ಹೊಣೆ, ಪೊಲೀಸರದ್ದೇನೂ ತಪ್ಪಿಲ್ಲ: ಡಿಟಿ ಲಕ್ಷ್ಮಣ, ಭೂಮಿಕ್ ತಂದೆ

Bengaluru Stampede: ನನ್ನ ಮಗನ ಸಾವಿಗೆ ಸರ್ಕಾರವೇ ಹೊಣೆ, ಪೊಲೀಸರದ್ದೇನೂ ತಪ್ಪಿಲ್ಲ: ಡಿಟಿ ಲಕ್ಷ್ಮಣ, ಭೂಮಿಕ್ ತಂದೆ

ಅರುಣ್​ ಕುಮಾರ್​ ಬೆಳ್ಳಿ
|

Updated on: Jun 07, 2025 | 2:22 PM

Share

ಮಡಿದ 11 ಜನರ ತಂದೆತಾಯಿಗಳು ನನ್ನಂತೆಯೇ ರೋದಿಸುತ್ತಿದ್ದಾರೆ, ಸರ್ಕಾರ ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಪೊಲೀಸ್ ಅಧಿಕಾರಿಗಳನ್ನು ಬಲಿಪಶು ಮಾಡಿದೆ, ಪೊಲೀಸರದ್ದೇನೂ ತಪ್ಪಿಲ್ಲ, ನಮ್ಮ ಮಕ್ಕಳು ಸಾವಿನೊಂದಿಗೆ ಹೋರಾಡುತ್ತಿದ್ದಾಗ ಅವರನ್ನು ಆಸ್ಪತ್ರೆಗೆ ಸೇರಿಸಿ ಬದುಕಿಸುವ ಪ್ರಯತ್ನ ಮಾಡಿದ್ದು ಪೊಲೀಸರು ಎಂದು ಭೂಮಿಕ್ ತಂದೆ ಲಕ್ಷ್ಮಣ ಹೇಳಿದರು.

ಹಾಸನ, ಜೂನ್ 7: ಬುಧವಾರ ಬೆಂಗಳೂರಲ್ಲಿ ನಡೆದ ಕಾಲ್ತುಳಿತ ಘಟನೆಯಲ್ಲಿ ಆಕಾಲ ಮೃತ್ಯುವಿಗೀಡಾದ ಜಿಲ್ಲೆಯ ಬೇಲೂರು ತಾಲೂಕಿನ ಕುಪ್ಪಗೋಡು ಗ್ರಾಮದ ಭೂಮಿಕ್ ತಂದೆ ಡಿಟಿ ಲಕ್ಷ್ಮಣ (DT Lakshman, Bhumik’ s father ) ಅವರ ರೋದನೆ ಮುಗಿಯಲಾರದು. ಹಾಸನದ ನಮ್ಮ ವರದಿಗಾರ ದುಃಖತಪ್ತ ಲಕ್ಷ್ಮಣ ಅವರೊಂದಿಗೆ ಮಾತಾಡಿದ್ದಾರೆ. ಅಳುತ್ತಲೇ, ಏನು ಮಾತಾಡಲಿ? ಮಾತಾಡಲು ಏನು ಉಳಿದಿದೆ ಅಂತ ಹೇಳುವ ಅವರು, ಒಂದು ಕಾರ್ಯಕ್ರಮವನ್ನು ವ್ಯವಸ್ಥೆ ಮಾಡಲಾಗದ ಸರ್ಕಾರಕ್ಕೆ ಸತ್ಕಾರಕೂಟ ಬೇಕಿತ್ತಾ? ಎಂದರು. ಆಟಗಾರರೊಂದಿಗೆ ತಮ್ಮ ಮಕ್ಕಳು ಮೊಮ್ಮಕ್ಕಳ ಫೋಟೋ ತೆಗೆಸಿಕೊಳ್ಳುವುದಕ್ಕೋಸ್ಕರ ಮಂತ್ರಿಗಳು ನಮ್ಮ ಮಕ್ಕಳನ್ನು ಬಲಿಕೊಟ್ಟರು, ಅವರ ಸಾವಿಗೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಜಿ ಪರಮೇಶ್ವರ್ ಮೊದಲಾದವರು ಹೊಣೆಯೇ ಹೊರತು ಖಂಡಿತವಾಗಿಯೂ ಪೊಲೀಸರಲ್ಲ ಎಂದು ಲಕ್ಷ್ಮಣ ಹೇಳಿದರು.

ಇದನ್ನೂ ಓದಿ:  Bengaluru Stampede; ಸ್ಟೇಡಿಯಂ ಬಳಿ ಕಾಲ್ತುಳಿತದ ಘಟನೆ ಮಾಧ್ಯಮದ ಮೂಲಕ ಗೊತ್ತಾಗಿದ್ದು: ಡಿಕೆ ಶಿವಕುಮಾರ್

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ