ಮಕ್ಕಳಿದ್ರೂ 17ರ ಯುವತಿ ಜತೆ ಲವ್, ಮದ್ವೆಗೆ ಒಪ್ಪದಿದ್ದಕ್ಕೆ ಏನ್ಮಾಡಿದ ಗೊತ್ತಾ?
ಚಂದಾಪುರದ ರೈಲ್ವೆ ಸೇತುವೆಯ ಬಳಿ ಟ್ರಾಲಿ ಬ್ಯಾಗ್‌ನಲ್ಲಿ 17 ವರ್ಷದ ಯುವತಿ ಶವ ಪತ್ತೆ ಪ್ರಕರಣದ ತನಿಖೆ ತೀವ್ರಗೊಳಿಸರುವ ಪೊಲೀಸರು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಿಹಾರ ಮೂಲದ ಆರೋಪಿಗಳಾದ ಅಶಿಕ್ ಕುಮಾರ್ (22) ಮುಖೇಶ್ ರಾಜಬನ್ಶಿ (35), ಇಂದುದೇವಿ (32) ರಾಜರಾಮ್ ಕುಮಾರ್ (18) ಪಿಂಟು ಕುಮಾರ್ (18), ಕಾಲು ಕುಮಾರ್(17) ರಾಜು ಕುಮಾರ್(17) ಬಂಧಿತರು.
ಬೆಂಗಳೂರು, (ಜೂನ್ 09): ಚಂದಾಪುರದ ರೈಲ್ವೆ ಸೇತುವೆಯ ಬಳಿ ಟ್ರಾಲಿ ಬ್ಯಾಗ್‌ನಲ್ಲಿ 17 ವರ್ಷದ ಯುವತಿ ಶವ ಪತ್ತೆ ಪ್ರಕರಣದ ತನಿಖೆ ತೀವ್ರಗೊಳಿಸರುವ ಪೊಲೀಸರು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಿಹಾರ ಮೂಲದ ಆರೋಪಿಗಳಾದ ಅಶಿಕ್ ಕುಮಾರ್ (22) ಮುಖೇಶ್ ರಾಜಬನ್ಶಿ (35), ಇಂದುದೇವಿ (32) ರಾಜರಾಮ್ ಕುಮಾರ್ (18) ಪಿಂಟು ಕುಮಾರ್ (18), ಕಾಲು ಕುಮಾರ್(17) ರಾಜು ಕುಮಾರ್(17) ಬಂಧಿತರು. ಪ್ರಕರಣದ ಎ1 ಅಶಿಕ್ ಕುಮಾರ್ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಬಳಿಕ ಕೊಲೆ ಮಾಡಿದ್ದಾನೆ. ನಂತರ ಎಲ್ಲರೂ ಸೇರಿಕೊಂಡು ಬಾಲಕಿಯ ಶವವನ್ನು ಸೂಟಕೇಸ್ನಲ್ಲಿ ಹಾಕಿ ರೈಲ್ವೆ ಹಳಿ ಪಕ್ಕದಲ್ಲಿ ಎಸೆದು ಹೋಗಿದ್ದಾರೆ ಎಂಬುವುದನ್ನು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ.
ವಿವಾಹವಾಗುತ್ತೇನೆ ಎಂದು 17 ವರ್ಷದ ಬಾಲಕಿಯನ್ನು ಆರೋಪಿ ಅಶಿಕ್ ಕುಮಾರ್ ಬೆಂಗಳೂರಿಗೆ ಕರೆ ತಂದಿದ್ದಾನೆ. ಆದರೆ, ಈಗಾಗಲೇ ಮದುವೆ ಆಗಿ ಮಕ್ಕಳಿರುವ ವಿಚಾರ ರೀನಾ ಕುಮಾರಿ ಅವರಿಗೆ ವಿಚಾರ ಗೊತ್ತಾಗಿದೆ. ಇದೇ ವಿಚಾರವಾಗಿ ಇಬ್ಬರ ಮಧ್ಯೆ ಗಲಾಟೆಯಾಗಿದೆ. ಈ ವೇಳೆ ಆರೋಪಿ ಅಶಿಕ್ ಕುಮಾರ್, ಬಾಲಕಿ ರೀನಾ ಕುಮಾರಿ ಅವರ ಕತ್ತು ಹಿಸುಕಿ ಕೊಲೆ ಮಾಡಿ ಸೂಟ್ಕೇಸ್ನಲ್ಲಿ ಮೃತದೇಹವನ್ನು ಹಾಕಿದ್ದಾನೆ. ನಂತರ, ಎಲ್ಲರೂ ಸೇರಿಕೊಂಡು ರೈಲ್ವೆ ಹಳಿ ಬಳಿ ಮೃತದೇಹ ಬಿಸಾಡಿ ಪರಾರಿಯಾಗಿದ್ದರು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ ಬಾಬಾ ತಿಳಿಸಿದ್ದಾರೆ.