ನನ್ನ ಕಣ್ಣೆದುರೇ ಗಂಡನನ್ನು ಕೊಂದರು; ರಾಜಾ ರಘುವಂಶಿ ಪತ್ನಿ ಸೋನಮ್ ಹೇಳಿದ್ದೇನು?
ಹನಿಮೂನ್ಗೆಂದು ಹೋಗಿದ್ದ ಮೇಘಾಲಯದ ಗಂಡ-ಹೆಂಡತಿ ನಾಪತ್ತೆಯಾಗಿದ್ದರು. ಅವರಲ್ಲಿ ಗಂಡ ರಘುವಂಶಿ ಹೆಣ ಪತ್ತೆಯಾಗಿತ್ತು. ಪತ್ನಿ ಸೋನಮ್ ನಾಪತ್ತೆಯಾಗಿದ್ದರು. ಮೇಘಾಲಯದ ಡಿಜಿಪಿ ಸೋನಮ್ ತನ್ನ ಗಂಡನ ಕೊಲೆ ಪಿತೂರಿಯಲ್ಲಿ ಭಾಗಿಯಾಗಿದ್ದಾಳೆ ಎಂದು ಹೇಳಿದ್ದಾರೆ. ಆದರೆ, ಉತ್ತರ ಪ್ರದೇಶದ ಗಾಜಿಪುರದಲ್ಲಿ ಡಾಬಾ ಮಾಲೀಕರಿಗೆ ಆಕೆ ಬೇರೆಯದೇ ಕತೆ ಹೇಳಿದ್ದಾಳೆ.

ನವದೆಹಲಿ, ಜೂನ್ 9: ಮೇಘಾಲಯದಲ್ಲಿ ಕೊಲೆಯಾದ ರಾಜಾ ರಘುವಂಶಿ (Raja Raghuvanshi) ಸಾವಿನ ಬಗ್ಗೆ ದಿನದಿಂದ ದಿನಕ್ಕೆ ಹೊಸ ತಿರುವುಗಳು ಉಂಟಾಗುತ್ತಿವೆ. ನಾಪತ್ತೆಯಾಗಿದ್ದ ಅವರ ಪತ್ನಿ ಸೋನಮ್ (Sonam Raghuvanshi) ತಾನೇ ತನ್ನ ಪ್ರೇಮಿಯ ಜೊತೆ ಸೇರಿ ಗಂಡನ ಕೊಲೆ ಮಾಡಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಆದರೆ, ಈ ಘಟನೆಗಳ ಬಗ್ಗೆ ಸೋನಮ್ ಸಂಪೂರ್ಣವಾಗಿ ವಿಭಿನ್ನ ಆವೃತ್ತಿಯನ್ನು ಮುಂದಿಟ್ಟಿದ್ದಾರೆ. ನನ್ನ ಗಂಡನ ಹತ್ಯೆಯನ್ನು ನಾನು ಕಣ್ಣಾರೆ ಕಂಡೆ. ನಂತರ ನನ್ನನ್ನು ಅಪಹರಿಸಿ ಶಿಲ್ಲಾಂಗ್‌ನಿಂದ ಗಾಜಿಪುರಕ್ಕೆ ಕರೆತರಲಾಯಿತು ಎಂದು ಹೇಳಿಕೊಂಡಿದ್ದಾರೆ.
ಇಂದೋರ್ ನಿವಾಸಿ ಸೋನಮ್ ರಘುವಂಶಿ, ತನ್ನ ಪತಿ ರಾಜಾ ಅವರ ಶವ ಮೇಘಾಲಯದ ಶಿಲ್ಲಾಂಗ್‌ನ ಕಮರಿಯಿಂದ ಪತ್ತೆಯಾದ ನಂತರ ನಾಪತ್ತೆಯಾಗಿದ್ದರು. ಪೊಲೀಸರು ಆಕೆ ಕೂಡ ಈ ಕೊಲೆ ಪಿತೂರಿಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ರಾಜ್ ಎಂಬ ವ್ಯಕ್ತಿಯೊಂದಿಗಿನ ಆಕೆಯ ಅಕ್ರಮ ಸಂಬಂಧವನ್ನು ಉಲ್ಲೇಖಿಸಿದ ಪೊಲೀಸರು ಹೇಳಿದ್ದೇ ಬೇರೆ. ಆದರೆ, ಸೋನಮ್ ಬೇರೆ ಕತೆಯನ್ನೇ ಹೇಳಿದ್ದಾರೆ.
ಘಾಜಿಪುರದ ಕಾಶಿ ಡಾಬಾದ ಮಾಲೀಕ ಸಾಹಿಲ್ ಯಾದವ್ ಅವರ ಪ್ರಕಾರ, ಸೋನಮ್ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಅಳುತ್ತಾ ಡಾಬಾಕ್ಕೆ ಬಂದಳು. ಅವಳು ಆತನ ಬಳಿ ಸಹಾಯವನ್ನು ಕೇಳಿದಳು. ಫೋನ್ ಮಾಡಲು ಅವನ ಫೋನ್ ಅನ್ನು ಕೇಳಿದಳು. ಅವನು ತನ್ನ ಮೊಬೈಲ್ ಅನ್ನು ನೀಡಿದಾಗ, ಅವಳು ತನ್ನ ಸಹೋದರನಿಗೆ ಫೋನ್ ಮಾಡಿ ಪೊಲೀಸರು ಮುಂದೆ ಶರಣಾದಳು ಎನ್ನಲಾಗಿದೆ.
ಇದನ್ನೂ ಓದಿ: ಹನಿಮೂನ್ಗೆ ಹೋದವ ಹೆಣವಾದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್, ಕೊಲೆ ಹಿಂದೆ ಪತ್ನಿ ಕೈವಾಡ, ಮೂವರ ಬಂಧನ
“ಅವರು ನನ್ನ ಕಣ್ಣೆದುರೇ ನನ್ನ ಗಂಡನನ್ನು ಕೊಂದರು” ಎಂದು ಸೋನಮ್ ಅವನಿಗೆ ಹೇಳಿದ್ದನ್ನು ಯಾದವ್ ನೆನಪಿಸಿಕೊಂಡಿದ್ದಾರೆ. ಮೇ ತಿಂಗಳಲ್ಲಿ ನಡೆದ ತಮ್ಮ ಮದುವೆಯ ನಂತರ ತಾನು ಮತ್ತು ರಾಜಾ ಮೇಘಾಲಯಕ್ಕೆ ಪ್ರಯಾಣಿಸಿದ್ದೆವು, ಅಲ್ಲಿ ಅವರ ಮೇಲೆ ದರೋಡೆಕೋರರು ದಾಳಿ ನಡೆಸಿದರು ಎಂದು ಆಕೆ ಹೇಳಿದ್ದಾಳೆ. ಅವರು ನನ್ನ ಆಭರಣಗಳನ್ನು ಕದ್ದರು. ನಾನು ನೋಡುತ್ತಿರುವಾಗಲೇ ನನ್ನ ಪತಿಯನ್ನು ಕ್ರೂರವಾಗಿ ಕೊಲೆ ಮಾಡಿದರು. ಈ ದಾಳಿಯ ಸಮಯದಲ್ಲಿ ನಾನು ಮೂರ್ಛೆ ಹೋದೆ. ನಂತರ ಆ ದಾಳಿಕೋರರು ನನ್ನನ್ನು ಅಪಹರಿಸಿದರು ಎಂದು ಅವರು ಆರೋಪಿಸಿದ್ದಾರೆ.
ಸೋನಮ್ ಅವರ ಹೇಳಿಕೆಯ ಪ್ರಕಾರ, ಆಕೆಯನ್ನು ಘಾಜಿಪುರಕ್ಕೆ ಸಾಗಿಸುವ ಮೊದಲು ಹಲವಾರು ದಿನಗಳ ಕಾಲ ಕೋಣೆಯಲ್ಲಿ ಬಂಧಿಸಿ ಅಲ್ಲಿಯೇ ಬಿಡಲಾಗಿತ್ತು. ಆಕೆ ಆಕೆ ಆ ಡಾಬಾವನ್ನು ಹೇಗೆ ತಲುಪಿದಳು ಎಂದು ಆಕೆ ವಿವರಿಸಲಿಲ್ಲ. ಆಕೆ ತನ್ನ ಸಹೋದರನಿಗೆ ಡಾಬಾ ಮಾಲೀಕನ ಮೊಬೈಲಿನಿಂದ ಫೋನ್ ಮಾಡಿದ್ದಾಳೆ. ನಂತರ ಆಕೆ ಎಲ್ಲಿದ್ದಾಳೆಂದು ಹೇಳಲು ಮಾಲೀಕ ಸಾಹಿಲ್ಗೆ ಫೋನ್ ನೀಡಿದ್ದಾಳೆ. ತಕ್ಷಣ ಹೊರಟ ಆಕೆಯ ಸಹೋದರ ಬರುವಷ್ಟರಲ್ಲಿ ಪೊಲೀಸರು ಬೆಳಗಿನ ಜಾವ 3 ಗಂಟೆ ಸುಮಾರಿಗೆ ಡಾಬಾ ತಲುಪಿ ಸೋನಮ್‌ಳನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಪತಿಯನ್ನು ಕೊಲ್ಲುವುದಕ್ಕಾಗಿಯೇ ಹನಿಮೂನ್ ಟ್ರಿಪ್ ಪ್ಲ್ಯಾನ್ ಮಾಡಿದ್ದ ಸೋನಮ್
ಸೋನಮ್ ತನ್ನನ್ನು ಬಲಿಪಶು ಮತ್ತು ಕ್ರೂರ ಕೊಲೆಗೆ ಪ್ರತ್ಯಕ್ಷದರ್ಶಿ ಎಂದು ಚಿತ್ರಿಸಿಕೊಂಡರೆ, ಮೇಘಾಲಯ ಪೊಲೀಸರು ಬೇರೆಯದೇ ಆರೋಪ ಮಾಡುತ್ತಿದ್ದಾರೆ. ಡಿಜಿಪಿ ಪ್ರಕಾರ, ಸೋನಮ್ ರಾಜ್ ಎಂಬ ವ್ಯಕ್ತಿಯೊಂದಿಗೆ ವಿವಾಹೇತರ ಸಂಬಂಧವನ್ನು ಹೊಂದಿದ್ದಳು. ಅವರು ಒಟ್ಟಾಗಿ ರಾಜಾ ರಘುವಂಶಿಯನ್ನು ಕೊಲ್ಲಲು ಸಂಚು ರೂಪಿಸಿದ್ದರು ಎಂದು ಆರೋಪಿಸಲಾಗಿದೆ. ಕೊಲೆಯನ್ನು ಕಾರ್ಯಗತಗೊಳಿಸಲು ಅವರು ಸುಪಾರಿ ಕಿಲ್ಲರ್ನನ್ನು ನೇಮಿಸಿಕೊಂಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ