AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shubhanshu Shukla: 4 ದಶಕಗಳ ಬಳಿಕ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಲಿರುವ ಮೊದಲ ಭಾರತೀಯ ಶುಭಾಂಶು ಶುಕ್ಲ; ಸಂಪೂರ್ಣ ಮಾಹಿತಿ

Shubhanshu Shukla's Historic Space Mission: ಭಾರತೀಯ ವಾಯುಪಡೆ ಪೈಲಟ್ ಶುಭಾಂಶು ಶುಕ್ಲಾ ಅವರು ಜೂನ್ 9 ರಂದು ಅಮೆರಿಕದಿಂದ ಅಕ್ಷಿಯಮ್ ಮಿಷನ್ 4 ಮೂಲಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಲಿದ್ದಾರೆ. ಈ ಮಿಷನ್ ಭಾರತದ ಗಗನಯಾನ ಯೋಜನೆಗೆ ಅಮೂಲ್ಯ ಅನುಭವವನ್ನು ಒದಗಿಸಲಿದೆ. ಶುಭಾಂಶು ಅವರ ಪ್ರಯಾಣವು ಕಮರ್ಷಿಯಲ್ ಸ್ಪೇಸ್‌ಫ್ಲೈಟ್‌ನಲ್ಲಿ ಪ್ರಯಾಣಿಸುವ ಮೊದಲ ಭಾರತೀಯ ಎಂಬ ಹೆಗ್ಗುರುತನ್ನು ಸೃಷ್ಟಿಸುತ್ತದೆ.

Shubhanshu Shukla: 4 ದಶಕಗಳ ಬಳಿಕ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಲಿರುವ ಮೊದಲ ಭಾರತೀಯ ಶುಭಾಂಶು ಶುಕ್ಲ; ಸಂಪೂರ್ಣ ಮಾಹಿತಿ
ಶುಭಾಂಶು ಶುಕ್ಲ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Jun 09, 2025 | 2:47 PM

Share

ನವದೆಹಲಿ, ಜೂನ್ 9: ಭಾರತದ ಶುಭಾಂಶು ಶುಕ್ಲಾ (Shubhanshu Shukla) ಅವರು ಹೊಸ ಸಾಹಸ ಪ್ರಯಾಣಕ್ಕೆ ಸಜ್ಜಾಗಿದ್ದಾರೆ. ನಾಳೆ ಮಂಗಳವಾರ (2025 ಜೂನ್ 10) ಅವರು ಆ್ಯಕ್ಸಿಯಮ್ ಮಿಷನ್ 4 (Axiom Mission-4) ಮೂಲಕ ಗಗನಕ್ಕೆ ಹಾರಲಿದ್ದಾರೆ. ಅಮೆರಿಕದ ಫ್ಲೋರಿಡಾದಲ್ಲಿರುವ ಕೆನೆಡಿ ಸ್ಪೇಸ್ ಸೆಂಟರ್​ನಿಂದ ಸ್ಪೇಸ್​​ಎಕ್ಸ್ ಡ್ರಾಗನ್ ನೌಕೆ ಗಗನಕ್ಕೆ (SpaceX Crew Dragon C213) ಹಾರಲಿದೆ. ಸ್ಪೇಸ್​​ಎಕ್ಸ್​ಗೆ ಸೇರಿದ ಫಾಲ್ಕಂ 9 ರಾಕೆಟ್ (Falcom 9) ಈ ಗಗನನೌಕೆಯನ್ನು ಆಗಸಕ್ಕೆ ಹೊತ್ತಯ್ಯಲಿದೆ. ಆ್ಯಕ್ಸಿಯಮ್ ಮಿಷನ್-4 28 ಗಂಟೆ ಕಾಲ ಆಗಸದಲ್ಲಿ ಪ್ರಯಾಣಿಸಿ ಜೂನ್ 11, ಬುಧವಾರ ರಾತ್ರಿ 10 ಗಂಟೆಗೆ (ಭಾರತೀಯ ಕಾಲಮಾನ) ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS- International Space Station) ತಲುಪಲಿದೆ. ಈ ಗಗನನೌಕೆಯಲ್ಲಿ ಶುಭಾಂಶು ಶುಕ್ಲ ಹಾಗೂ ಇತರ ಮೂವರು ವ್ಯಕ್ತಿಗಳು ಇರಲಿದ್ದಾರೆ.

ಇಸ್ರೋ ಛೇರ್ಮನ್ ವಿ ನಾರಾಯಣನ್ ಅವರು ಆ್ಯಕ್ಸಿಯಮ್ ಸ್ಪೇಸ್ ಸಂಸ್ಥೆಗೆ ಹೋಗಿ ಎಲ್ಲಾ ವ್ಯವಸ್ಥೆಯನ್ನೂ ಪರಿಶೀಲಿಸಿ ಬಂದಿದ್ದಾರೆ. ನಾಲ್ಕು ಮಂದಿ ಇರುವ ಈ ಗಗನಯಾನ ತಂಡದ ಎಲ್ಲಾ ಸದಸ್ಯರು ಅಗತ್ಯ ತರಬೇತಿ ಪಡೆದು ಮುಗಿಸಿ, ಮೇ 25ರಿಂದ ಕ್ವಾರಂಟೈನ್​​ನಲ್ಲಿದ್ದಾರೆ. ಐಎಸ್​​ಎಸ್ ತಲುಪಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಜೊತೆ ಶುಕ್ಲಾ ಮತ್ತಿತರರು ಸಂವಾದ ನಡೆಸುವ ಕಾರ್ಯಕ್ರಮವೂ ಇರಲಿದೆ. ಈ ಸ್ಪೇಸ್ ಪ್ರಯಾಣ ಹಲವಾರು ರೀತಿಯಲ್ಲಿ ಭಾರತಕ್ಕೆ ಬಹಳ ಮಹತ್ವದ್ದಾಗಿದೆ.

ರಾಕೇಶ್ ಶರ್ಮಾ, ಸುನೀತಾ ವಿಲಿಯಮ್ಸ್, ಕಲ್ಪನಾ ಚಾವ್ಲಾಗಿಂತ ಶುಭಾಂಶು ಅವರದ್ದು ಹೇಗೆ ವಿಭಿನ್ನ?

ರಾಕೇಶ್ ಶರ್ಮಾ 1984ರಲ್ಲಿ ರಷ್ಯಾದ ಸೋಯುಜ್ ಟಿ-11 ಮಿಷನ್ (Soviet Soyuz T-11 mission)​ ಮೂಲಕ ಸ್ಯಾಲ್ಯುಟ್ 7 ಸ್ಪೇಸ್ ಸ್ಟೇಷನ್​ನಲ್ಲಿ (Salyut 7 space station) 8 ದಿನ ಇದ್ದರು. ಅದು ಭಾರತಕ್ಕೆ ಹೊಸ ಇತಿಹಾಸ ಪುಟ ತೆರೆಯಲ್ಪಟ್ಟ ಅವಿಸ್ಮರಣೀಯ ಘಟನೆ. ಬಾಹ್ಯಾಕಾಶಕ್ಕೆ ಏರಿದ ಮೊದಲ ವ್ಯಕ್ತಿ ಎನಿಸಿದ್ದರು ರಾಕೇಶ್. ಆ ಸ್ಪೇಸ್​​ಶಿಪ್​​ನಲ್ಲಿ ರಾಕೇಶ್ ಶರ್ಮಾ (Rakesh Sharma) ಪೇಲೋಡ್ ಸ್ಪೆಷಲಿಸ್ಟ್ ಆಗಿ ಕಾರ್ಯನಿರ್ವಹಿಸಿದ್ದರು.

ಇದನ್ನೂ ಓದಿ
Image
ಚೀನಾಗೆ ಉರಿಸಲು ತೈವಾನ್​​ಗೆ ಡಿ4 ನೀಡುತ್ತಾ ಭಾರತ?
Image
ಆಯುಷ್ಮಾನ್ ಕಾರ್ಡ್ ಜೊತೆಗೆ ABHA ಇದ್ದರೆ ಏನು ಉಪಯೋಗ?
Image
ಎಲ್ಲಾ ಕ್ಷೇತ್ರಗಳಲ್ಲೂ ಭಾರತ ಬದಲಾಗಿದೆ: ಹೀನಾ ಖಾನ್
Image
ಕಳ್ಳ ಅನ್ನೋಕೆ ನಾನೇನು ಕದ್ದಿದ್ದೀನಿ: ವಿಜಯ್ ಮಲ್ಯ ಪ್ರಶ್ನೆ

ಇದನ್ನೂ ಓದಿ: ಗಮನಿಸಿ, ಆಯುಷ್ಮಾನ್ ಕಾರ್ಡ್ ಜೊತೆಗೆ ABHA ಕೂಡ ಇದ್ದರೆ ಪ್ರಯೋಜನ ಹೆಚ್ಚು; ಅದು ಹೇಗೆ, ಇಲ್ಲಿದೆ ಮಾಹಿತಿ

ಇನ್ನು, ಕಲ್ಪನಾ ಚಾವ್ಲಾ (Kalpana Chawla) ಅವರು ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಮೊದಲ ಭಾರತೀಯ ಮಹಿಳೆ ಎನಿಸಿದ್ದರು. 2003ರಲ್ಲಿ ಅವರು ನಾಸಾದ ಸ್ಪೇಸ್​​ಶಿಪ್​​ನಲ್ಲಿ ಹೋಗಿದ್ದರು. ಐಎಸ್​​ಎಸ್​​​ನಲ್ಲಿ ಉಳಿದಿರಲಿಲ್ಲ. ಆದರೆ, ಮರಳುವಾಗ ದುರ್ಮರಣವಪ್ಪಿದ್ದರು.

ಇನ್ನು, ಸುನೀತಾ ವಿಲಿಯಮ್ಸ್ ಅವರು ಎರಡು ಬಾರಿ ಐಎಸ್​​ಎಸ್​​ಗೆ ಹೋಗಿದ್ದಾರೆ. ಇವರು ಪೂರ್ಣಪ್ರಮಾಣದ ಗಗನಯಾತ್ರಿಯಾಗಿ ಹೋಗಿದ್ದಾರೆ. ಭಾರತ ಮೂಲದವರಾದರೂ ಅಮೆರಿಕವನ್ನು ಪ್ರತಿನಿಧಿಸಿ ಇವರು ಬಾಹ್ಯಾಕಾಶ ನಿಲ್ದಾಣಕ್ಕೆ ಹೋಗಿ ಬಂದಿದ್ದಾರೆ.

ಶುಭಾಂಶು ಶುಕ್ಲಾ ಬಾಹ್ಯಾಕಾಶ ಪ್ರಯಾಣ ಹೇಗೆ ಭಿನ್ನ?

ಶುಭಾಂಶು ಶುಕ್ಲಾ ಅವರು ಕಮರ್ಷಿಯಲ್ ಸ್ಪೇಸ್​​ಫ್ಲೈಟ್​​ನಲ್ಲಿ ಪ್ರಯಾಣಿಸುವ ಮೊದಲ ಭಾರತೀಯ ವ್ಯಕ್ತಿ. ಐಎಎಸ್​​ಗೆ ಹೋಗುವ ಮೊದಲ ಭಾರತೀಯ ಪ್ರಜೆ. ಸ್ಪೇಸ್​ಫ್ಲೈಟ್​​ನ ಪೈಲಟ್ ಆದ ಮೊದಲ ಭಾರತೀಯ ವ್ಯಕ್ತಿ ಎನ್ನುವ ಗರಿಮೆಯೂ ಅವರಿಗಿದೆ.

ಶುಭಾಂಶು ಶುಕ್ಲಾ ಯಾರು? ಅವರನ್ನು ಆಯ್ಕೆ ಮಾಡಿದ್ದು ಹೇಗೆ?

ಉತ್ತರಪ್ರದೇಶದ ಲಕ್ನೋ ಸಂಜಾತರಾದ ಶುಭಾಂಶು ಶುಕ್ಲಾ ಹುಟ್ಟಿದ್ದು 1985, ಅಕ್ಟೋಬರ್ 10ರಂದು. ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಓದಿದ ಅವರು ಇಂಡಿಯನ್ ಏರ್​ಫೋರ್ಸ್ ಪೈಲಟ್ ಆಗಿ ಸಾಕಷ್ಟು ಅನುಭವ ಪಡೆದಿದ್ಧಾರೆ. ಸುಖೋಯ್ 30, ಜಾಗ್ವರ್, ಹಾಕ್, ಡಾರ್ನಿಯರ್ ಇತ್ಯಾದಿ ಜೆಟ್ ವಿಮಾನಗಳನ್ನು 2,000 ಗಂಟೆ ಹಾರಾಟ ಮಾಡಿದ ಅನುಭವಿ.

ಇದನ್ನೂ ಓದಿ: ದೇಶಭ್ರಷ್ಟ ಅನ್ನಿ ಒಪ್ತೀನಿ, ಆದ್ರೆ ಕಳ್ಳ ಅನ್ನೋಕೆ ನಾನೇನು ಕದ್ದಿದ್ದೀನಿ? ಹೊಟ್ಟೆಯೊಳಗಿನ ಸಂಕಟವೆಲ್ಲಾ ಬಿಚ್ಚಿಟ್ಟ ವಿಜಯ್ ಮಲ್ಯ

ಭಾರತದ ಗಗನಯಾನ ಯೋಜನೆಗೆ ಸಮರ್ಥ ವ್ಯಕ್ತಿಗಳನ್ನು ಆಯ್ಕೆ ಮಾಡುವ ಸಲುವಾಗಿ ವಾಯುಪಡೆಯ ಇನ್ಸ್​​ಟಿಟ್ಯೂಟ್ ಆಫ್ ಏರೋಸ್ಪೇಸ್ ಮೆಡಿಸಿನ್ ಮತ್ತು ಇಸ್ರೋ ಜಂಟಿಯಾಗಿ ಅಭ್ಯರ್ಥಿಗಳ ಆಯ್ಕೆಗೆ ನಿಂತವು. ಗಗನಯಾತ್ರಿಗಳಾಗಲು ಅರ್ಜಿ ಹಾಕಿದ ನೂರಾರು ಮಂದಿಯಲ್ಲಿ ಶುಭಾಂಶು ಒಬ್ಬರು. ಅಂತಿಮವಾಗಿ ಗಗನಯಾನ ಯೋಜನೆಗೆ ಇವರನ್ನೂ ಸೇರಿ ನಾಲ್ವರನ್ನು ಅಂತಿಮಗೊಳಿಸಲಾಯಿತು.

ಅಮೆರಿಕದ ಆ್ಯಕ್ಸಿಯಮ್​​ನ ನಾಲ್ಕನೇ ಬಾಹ್ಯಾಕಾಶ ಪ್ರಯಾಣಕ್ಕೆ ಮುಖ್ಯ ಪೈಲಟ್ ಆಗಿ ಶುಭಾಂಶು ಶುಕ್ಲ ಅವರನ್ನು ಆಯ್ಕೆ ಮಾಡಲಾಯಿತು. ವಾಯುಪಡೆಯಲ್ಲಿ ಫೈಟರ್ ಜೆಟ್​​ಗಳನ್ನು ಚಲಾಯಿಸಿದ ಅನುಭವವು ಅವರಿಗೆ ಈ ಜವಾಬ್ದಾರಿ ಸಿಗುವಂತೆ ಮಾಡಿದೆ.

ಇದಕ್ಕೆ ಮುನ್ನ ಶುಭಾಂಶು ಶುಕ್ಲ ಅವರು ರಷ್ಯಾ, ಯೂರೋಪ್, ಅಮೆರಿಕದ ನಾಸಾ ಇತ್ಯಾದಿ ಹಲವೆಡೆ ಗಗನಯಾತ್ರೆಗೆ ಸಂಬಂಧಿಸಿದ ಎಲ್ಲಾ ರೀತಿಯ ತರಬೇತಿ ಮತ್ತು ನೈಪುಣ್ಯ ಪಡೆದು ಬಂದಿದ್ದಾರೆ.

ಬಾಹ್ಯಾಕಾಶದಲ್ಲಿ ಎಷ್ಟು ದಿನ ಇರಲಿದ್ದಾರೆ, ಏನು ಮಾಡಲಿದ್ದಾರೆ ಶುಭಾಂಶು?

ಇಲಾನ್ ಮಸ್ಕ್ ಅವರ ಸ್ಪೇಸ್​​ಎಕ್ಸ್ ಕಂಪನಿಯ ಫಾಲ್ಕನ್ 9 ರಾಕೆಟ್ ಮೂಲಕ ಕ್ರ್ಯೂ ಡ್ರಾಗಾನ್ ಸಿ213 ಎನ್ನುವ ಗಗನನೌಕೆ ಹತ್ತಿ ನಾಲ್ವರು ವ್ಯಕ್ತಿಗಳು ಐಎಸ್​​ಎಸ್​​ಗೆ ಹೋಗಲಿದ್ದಾರೆ. ಇದು ಖಾಸಗಿ ಕಂಪನಿಯಾದ ಏಕ್ಸಿಯಾಮ್ ಆಯೋಜಿಸಿರುವ ಪ್ರಯಾಣ. ಆ ಕಂಪನಿಗೆ ಇದು ನಾಲ್ಕನೇ ಮಿಷನ್. 2022, 2023 ಮತ್ತು 2024ರಲ್ಲೂ ಇದೇ ಮಿಷನ್ ಕೈಗೊಂಡು ಯಶಸ್ವಿಯಾಗಿದೆ.

ನಾಲ್ಕನೇ ಮಿಷನ್​​ನಲ್ಲಿ ಶುಭಾಂಶು ಶುಕ್ಲ ಮುಖ್ಯ ಪೈಲಟ್ ಆಗಿರುತ್ತಾರೆ. ಪೆಗ್ಗಿ ವಿಟ್ಸನ್ ಅವರು ಕಮಾಂಡರ್ ಆಗಿರುತ್ತಾರೆ. ಹಂಗೆರಿ ಟಿಬೋರ್ ಕಾಪು ಮತ್ತು ಪೋಲ್ಯಾಂಡ್​​ನ ಸ್ಲಾವೋಜ್ ಉಜ್ನಾನ್​ಸ್ಕಿ ವಿಸ್ನಿಯೆವಸ್ಕಿ ಅವರಿರುತ್ತಾರೆ.

ಇದನ್ನೂ ಓದಿ: ಭಾರತದ ಡ್ರೋನ್ ನಾಶಕ ಡಿ4 ಸಿಸ್ಟಂ ಖರೀದಿಗೆ ತೈವಾನ್ ಆಸಕ್ತಿ; ಚೀನಾದ ಆ ಕಡೆ ಮಗ್ಗುಲಿನಲ್ಲಿ ಭಾರತದ ಬಲ?

ಐಎಸ್​​ಎಸ್​​​ನಲ್ಲಿ ಏನು ಮಾಡುತ್ತದೆ ಈ ತಂಡ?

ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಈ ತಂಡ 14 ದಿನ ಇರಲೆಂದು ನಿಗದಿ ಮಾಡಲಾಗಿದೆ. ಆದರೆ, ಇನ್ನೂ ಕೆಲ ಹೆಚ್ಚುವರಿ ದಿನಗಳಿಗೂ ಇರಲಾಗುವಂತೆ ಇವರನ್ನು ಸಜ್ಜುಗೊಳಿಸಲಾಗಿದೆ. ಅಷ್ಟು ದಿನ ಇವರೆಲ್ಲರೂ ಕೂಡ ವಿವಿಧ ರೀತಿಯ ವೈಜ್ಞಾನಿಕ ಮತ್ತು ಮಾನಸಿಕ ಪ್ರಯೋಗಗಳನ್ನು ಮಾಡುತ್ತಾರೆ.

ಶುಭಾಂಶು ಶುಕ್ಲಾ ಅವರು ಆಹಾರ ಮತ್ತು ಪೌಷ್ಟಿಕಾಂಶ ಸಂಬಂಧಿತ ಪ್ರಯೋಗಗಳನ್ನು ಮಾಡಲಿದ್ದಾರೆ. ತೀರಾ ನಗಣ್ಯ ಗುರುತ್ವಾಕರ್ಷಣ ಶಕ್ತಿ ಇರುವ ಪರಿಸರದಲ್ಲಿ ಕಾಳುಗಳನ್ನು ಮೊಳಕೆ ಬರಿಸುವುದು ಇತ್ಯಾದಿ ಪ್ರಯೋಗಗಳು ಇದರಲ್ಲಿ ಒಳಗೊಂಡಿರುತ್ತವೆ.

ಇಸ್ರೋ ಸಂಸ್ಥೆಯಿಂದ ಏಳು ಪ್ರಯೋಗಗಳಿದ್ದರೆ, ನಾಸಾ ಜೊತೆಗೂಡಿ ಐದು ಜಂಟಿ ಪ್ರಯೋಗಗಳು ಇದರಲ್ಲಿ ನಡೆಯಲಿವೆ.

ಶುಭಾಂಶು ಶುಕ್ಲಾ ಅವರ ಆ್ಯಕ್ಸಿಯಮ್ ಪ್ರಯಾಣದಿಂದ ಭಾರತಕ್ಕೆ ಏನು ಲಾಭ?

ಶುಭಾಂಶು ಶುಕ್ಲಾ ಅವರು ಐಎಸ್​ಎಸ್​​ಗೆ ಹೋಗಿ ಬರುತ್ತಿರುವುದು ಭಾರತಕ್ಕೆ ಹಲವು ರೀತಿಯಲ್ಲಿ ಮಹತ್ವದ್ದಾಗಿದೆ. 2027ರಲ್ಲಿ ಭಾರತವು ಗಗನಯಾನ ಯೋಜನೆ ಹಮ್ಮಿಕೊಂಡಿದೆ. ಶುಭಾಂಶು ಅವರು ಈಗ ಏಕ್ಸಿಯಾಂ ಮಿಷನ್​ನಲ್ಲಿ ಪೈಲಟ್ ಆಗಿ ಅನುಭವ ಪಡೆದು ಬಂದರೆ ಭಾರತದ ಗಗನಯಾನ ಯೋಜನೆಗೆ ಒಂದು ದೊಡ್ಡ ಬಲ ಸಿಕ್ಕಂತಾಗುತ್ತದೆ. ಗಗನಯಾನದ ವೇಳೆ ಎದುರಾಗುವ ಪ್ರತ್ಯಕ್ಷ ಸಮಸ್ಯೆಗಳಿಗೆ ಸಜ್ಜಾಗಲು ಅನುಕೂಲವಾಗುತ್ತದೆ. ಅಂದಹಾಗೆ, ಆ್ಯಕ್ಸಿಯಮ್ ಜೊತೆ ಈ ಮಿಷನ್​​ಗೆ ಇಸ್ರೋ ಕೂಡ ಭಾಗಿಯಾಗಿದೆ. ಇಸ್ರೋಗೆ ಈ ಮಿಷನ್​​ನಿಂದ ಆಗುವ ಒಟ್ಟು ವೆಚ್ಚ 550 ಕೋಟಿ ರೂ. ಆದರೆ, ಇದು 2027ರ ಗಗನಯಾನ ಮಿಷನ್​​ಗೆ ಒಂದು ಉತ್ತಮ ಪೂರ್ವಭಾವಿ ಟ್ರಯಲ್ ಎನಿಸಬಹುದು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:47 pm, Mon, 9 June 25

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!