AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಡ್ರೋನ್ ನಾಶಕ ಡಿ4 ಸಿಸ್ಟಂ ಖರೀದಿಗೆ ತೈವಾನ್ ಆಸಕ್ತಿ; ಚೀನಾದ ಆ ಕಡೆ ಮಗ್ಗುಲಿನಲ್ಲಿ ಭಾರತದ ಬಲ?

Taiwan wants India's indigenous D4 drone destroyer: ಆಪರೇಷನ್ ಸಿಂದೂರ್ ವೇಳೆ ಟರ್ಕಿ ಮೂಲದ ನೂರಾರು ಡ್ರೋನ್​​ಗಳನ್ನು ನಾಶ ಮಾಡಿದ್ದ ಭಾರತದ ಡಿ4 ಆ್ಯಂಟಿ-ಡ್ರೋನ್ ಸಿಸ್ಟಂ ಖರೀದಿಸಲು ತೈವಾನ್ ಆಸಕ್ತಿ ತೋರಿದೆ. ಡಿಆರ್​​ಡಿಒ ಅಭಿವೃದ್ಧಿಪಡಿಸಿ, ಬಿಇಎಲ್ ಮತ್ತು ಝೆನ್ ತಯಾರಿಸುವ ಡಿ4 ಸಿಸ್ಟಂಗಳು ಡ್ರೋನ್​​ಗಳನ್ನು ಗುರುತಿಸಿ ನಾಶ ಮಾಡಬಲ್ಲುವು. ಪಾಕಿಸ್ತಾನಕ್ಕೆ ಸಹಾಯ ಮಾಡುವ ಚೀನಾಗೆ ಎದುರಾಗಿ ತೈವಾನ್​​​ಗೆ ಸಹಾಯ ಮಾಡಲು ಭಾರತಕ್ಕೆ ಇದು ಸರಿಯಾದ ಸಮಯ ಎನ್ನಲಾಗಿದೆ.

ಭಾರತದ ಡ್ರೋನ್ ನಾಶಕ ಡಿ4 ಸಿಸ್ಟಂ ಖರೀದಿಗೆ ತೈವಾನ್ ಆಸಕ್ತಿ; ಚೀನಾದ ಆ ಕಡೆ ಮಗ್ಗುಲಿನಲ್ಲಿ ಭಾರತದ ಬಲ?
ಡಿ4 ಆ್ಯಂಟಿ ಡ್ರೋನ್ ಸಿಸ್ಟಂ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 08, 2025 | 5:58 PM

Share

ನವದೆಹಲಿ, ಜೂನ್ 8: ಆಪರೇಷನ್ ಸಿಂದೂರ್​​ನಲ್ಲಿ (Operation Sindoor) ಭಾರತದ ಅಭೇದ್ಯ ರಕ್ಷಣಾ ಕೋಟೆಯ ಭಾಗವಾಗಿದ್ದ ಡಿ4 ಸಿಸ್ಟಂಗಳನ್ನು ಖರೀದಿಸಲು ತೈವಾನ್ (Taiwan) ಆಸಕ್ತಿ ತೋರಿದೆ. ಅಷ್ಟು ಮಾತ್ರವಲ್ಲ, ಖರೀದಿಗಾಗಿ ಅಧಿಕೃತವಾಗಿ ಮನವಿಯನ್ನೂ ಮಾಡಿದೆ ಎಂದು ಇಂಡಿಯನ್ ಡಿಫೆನ್ಸ್ ರಿಸರ್ಚ್ ವಿಂಗ್ ವೆಬ್​​ಸೈಟ್​​ನಲ್ಲಿ ವರದಿಯಾಗಿದೆ. ಡಿಆರ್​​ಡಿಒ ಅಭಿವೃದ್ಧಿಪಡಿಸಿದ ಮತ್ತು ಬಿಇಎಲ್ ಹಾಗೂ ಝೆನ್ ಟೆಕ್ನಾಲಜೀಸ್ ಸಂಸ್ಥೆಗಳು ತಯಾರಿಸುತ್ತಿರುವ ಡಿ4 ಸಿಸ್ಟಂಗಳು ಡ್ರೋನ್ ನಾಶಕ ಶಸ್ತ್ರಗಳೆನಿಸಿವೆ.

ಆಪರೇಷನ್ ಸಿಂದೂರ್ ವೇಳೆ, ಪಾಕಿಸ್ತಾನದಿಂದ ಪ್ರವಾಹೋಪಾದಿಯಲ್ಲಿ ಹಾರಿ ಬಂದ ಡ್ರೋನ್​​ಗಳನ್ನು ಈ ಡಿ4 ಸಿಸ್ಟಂ ಬಹಳ ಪರಿಣಾಮಕಾರಿಯಾಗಿ ತಡೆದಿತ್ತು. ಟರ್ಕಿ ದೇಶ ನಿರ್ಮಿಸಿದ ಡ್ರೋನ್ ಮತ್ತು ಲಾಯ್ಟರಿಂಗ್ ಮ್ಯುನಿಶನ್​​ಗಳನ್ನು ಆಗಸದಲ್ಲೇ ಪತ್ತೆ ಮಾಡಿ ನಾಶ ಮಾಡಿತ್ತು ಡಿ4 ವೆಪನ್ ಸಿಸ್ಟಂ.

ಇದನ್ನೂ ಓದಿ: ಮೋದಿ ನೇತೃತ್ವದಲ್ಲಿ ಬದಲಾಗಿದೆ ಭಾರತ: ಹೀನಾ ಖಾನ್, ಸುಭಾಷ್ ಘಾಯ್ ಅನಿಸಿಕೆ

ಚೀನಾಗೆ ಸಖತ್ ಕೌಂಟರ್ ಕೊಡಲು ಭಾರತಕ್ಕೆ ಅವಕಾಶ

ಇಸ್ರೇಲ್ ರೀತಿ ತೈವಾನ್ ಕೂಡ ತನ್ನ ನೆತ್ತಿಯ ಮೇಲೆ ಸದಾ ತೂಗುಗತ್ತಿ ಹೊಂದಿರುವ ದೇಶ. ತೈವಾನ್ ತನ್ನ ದೇಶದ ಅವಿಭಾಜ್ಯ ಅಂಗ ಎಂದು ಚೀನಾ ಯಾವಾಗಲೂ ಹೇಳಿಕೊಳ್ಳುತ್ತದೆ. ಚೀನಾದಿಂದ ಯಾವಾಗ ಬೇಕಾದರೂ ಅದು ಆಕ್ರಮಣ ಎದುರಿಸಬಹುದು. ಹೀಗಾಗಿ, ತೈವಾನ್ ದೇಶಕ್ಕೆ ಶಸ್ತ್ರಾಸ್ತ್ರಗಳ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ ಡಿ4 ಸಿಸ್ಟಂ ಅನ್ನು ಖರೀದಿಸಲು ತೈವಾನ್ ಮುಂದಾಗಿರುವುದರಲ್ಲಿ ಅಚ್ಚರಿ ಇಲ್ಲ.

ಡಿಆರ್​​ಡಿಒ ಅಭಿವೃದ್ಧಿಪಡಿಸಿದ ಮತ್ತು ಬಿಇಎಲ್ ತಯಾರಿಸಿರುವ ಡಿ4 ಡಿಫೆನ್ಸ್ ಸಿಸ್ಟಂ ತನ್ನ ಉಪಯುಕ್ತತೆಯನ್ನು ಆಪರೇಷನ್ ಸಿಂದೂರ್​​ನಲ್ಲಿ ತೋರಿಸಿದೆ. ಟರ್ಕಿಯಿಂದ ನೀಡಲಾಗಿದ್ದ ನೂರಾರು ಡ್ರೋನ್​​ಗಳ ಪಾಕ್ ದಾಳಿಯನ್ನು ಈ ಡಿ4 ಸಿಸ್ಟಂ ತಡೆದು ನಾಶ ಮಾಡಿತ್ತು.

ರೇಡಿಯೊ ಫ್ರೀಕ್ವೆನ್ಸಿ ಜ್ಯಾಮ್ ಮಾಡುವುದು, ಜಿಪಿಎಸ್ ಸ್ಪೂಫ್ ಮಾಡುವುದು, ಲೇಸ್ ಆಧಾರಿತವಾಗಿ ನಾಶ ಮಾಡುವುದು ಇತ್ಯಾದಿ ತಂತ್ರಜ್ಞಾನದ ಮೂಲಕ ಡಿ4 ಸಿಸ್ಟಂ ಡ್ರೋನ್​​ಗಳನ್ನು ನಾಶ ಮಾಡುತ್ತದೆ ಅಥವಾ ನಿಷ್ಕ್ರಿಯಗೊಳಿಸುತ್ತದೆ.

ಇದನ್ನೂ ಓದಿ: ಭಾರತದ ಬೆಳವಣಿಗೆಯ ವೇಗ ನೋಡಿದರೆ ಈ ವರ್ಷವೇ ಟಾಪ್-3ಗೆ ಸೇರುವಂತಿದೆ: ಬೋರ್ಜೆ ಬ್ರೆಂಡೆ

ತೈವಾನ್ ಜೊತೆ ಮಿಲಿಟರಿ ಸಂಬಂಧ ಬೆಳೆಸಿಕೊಳ್ಳಲು ಭಾರತಕ್ಕೆ ಅವಕಾಶ

ಚೀನಾದ ಆಂತರಿಕ ವಿಚಾರದಲ್ಲಿ ಮಧ್ಯಪ್ರವೇಶಿಸಿದಂತಾಗುತ್ತದೆ ಎಂಬ ಕಾರಣಕ್ಕೆ ಭಾರತವು ತೈವಾನ್ ಜೊತೆಗೆ ಮಿಲಿಟರಿ ಸಂಬಂಧ ಹೊಂದುವುದರಿಂದ ದೂರ ಇದೆ ಎಂದು ಹೇಳಲಾಗುತ್ತದೆ. ಆದರೆ, ಪಾಕಿಸ್ತಾನಕ್ಕೆ ಚೀನಾ ಬಹಳ ಮುಕ್ತವಾಗಿ ಬೆಂಬಲ ನೀಡುತ್ತಿರುವ ಹಿನ್ನೆಲೆಯಲ್ಲಿ ಭಾರತವೂ ಕೂಡ ತನ್ನ ನೀತಿಯನ್ನು ಬದಲಿಸಿಕೊಳ್ಳುವುದು ಸರಿ ಎಂದು ಹಲವು ತಜ್ಞರು ಹೇಳುತ್ತಿದ್ದಾರೆ. ಈ ನಿಟ್ಟಿನಲ್ಲಿ ತೈವಾನ್​​ಗೆ ಡಿ4 ಸಿಸ್ಟಂ ಮಾರಾಟ ಮಾಡುವುದು ಭಾರತದ ಮೊದಲ ಹೆಜ್ಜೆ ಎನಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!