AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೋದಿ ನೇತೃತ್ವದಲ್ಲಿ ಬದಲಾಗಿದೆ ಭಾರತ: ಹೀನಾ ಖಾನ್, ಸುಭಾಷ್ ಘಾಯ್ ಅನಿಸಿಕೆ

Hina Khan, Subhash Ghai praise Government led by Narendra Modi: ನರೇಂದ್ರ ಮೋದಿ ನೇತೃತ್ವದ ಸರ್ಕಾರ ಬಂದಾಗಿನಿಂದ ದೇಶದಲ್ಲಿ ಗಮನಾರ್ಹ ಬದಲಾವಣೆ ಆಗಿದೆ ಎಂದು ಹಲವರು ಹೇಳಿದ್ದಾರೆ. ಬಾಲಿವುಡ್ ನಟಿ ಹೀನಾ ಖಾನ್ ಮತ್ತು ನಿರ್ದೇಶಕ ಸುಭಾಷ್ ಘಾಯ್ ಈ ಅನಿಸಿಕೆಗೆ ಧ್ವನಿಗೂಡಿಸಿದ್ದಾರೆ. ಮೋದಿ ಬಂದ ಬಳಿಕ ದೇಶದಲ್ಲಿ ಅಭಿವೃದ್ಧಿ ಆಗುತ್ತಿರುವುದು ಮಾತ್ರವಲ್ಲ, ಜನರ ಯೋಚನಾಲಹರಿಯಲ್ಲೂ ಬದಲಾವಣೆ ಆಗಿದೆ ಎಂದಿದ್ದಾರೆ ಸುಭಾಷ್ ಘಾಯ್.

ಮೋದಿ ನೇತೃತ್ವದಲ್ಲಿ ಬದಲಾಗಿದೆ ಭಾರತ: ಹೀನಾ ಖಾನ್, ಸುಭಾಷ್ ಘಾಯ್ ಅನಿಸಿಕೆ
ಹೀನಾ ಖಾನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 08, 2025 | 2:35 PM

Share

ನವದೆಹಲಿ, ಜೂನ್ 8: ನರೇಂದ್ರ ಮೋದಿ (Narendra Modi) ದೇಶದ ಪ್ರಧಾನಿಯಾಗಿ 11 ವರ್ಷವಾಗಿದೆ. ಗುಜರಾತ್ ಸಿಎಂ ಆಗಿ 25 ವರ್ಷ ಆಗಿದೆ. ಕಳೆದ 25 ವರ್ಷಗಳಿಂದಲೂ ಸತತವಾಗಿ ಸಿಎಂ ಮತ್ತು ಪಿಎಂ ಗಾದಿಯಲ್ಲಿ ಕೂತಿರುವ ನರೇಂದ್ರ ಮೋದಿ ಆಡಳಿತ ವ್ಯವಸ್ಥೆಗೆ ಬಹಳ ಬದಲಾವಣೆಗಳನ್ನು ತಂದಿದ್ದಾರೆ ಎಂಬುದು ಹಲವರ ಅನಿಸಿಕೆ. ವಿವಿಧ ಕ್ಷೇತ್ರಗಳ ಪರಿಣಿತರು ಈ ಅನಿಸಿಕೆಗೆ ಸಹಮತ ವ್ಯಕ್ತಪಡಿಸಿದ್ದಾರೆ. ಹೀನಾ ಖಾನ್, ಸುಭಾಷ್ ಘಾಯ್ ಮೊದಲಾದ ನಟ ನಟಿಯರು, ನಿರ್ದೇಶಕರೂ ಕೂಡ ಇದಕ್ಕೆ ಧ್ವನಿಗೂಡಿಸಿದ್ದಾರೆ.

ನರೇಂದ್ರ ಮೋದಿ ಪ್ರಧಾನಿಯಾಗಿ ನೀಡಿದ 11 ವರ್ಷದ ನಾಯಕತ್ವದಲ್ಲಿ ದೇಶವು ಎಲ್ಲಾ ರಂಗದಲ್ಲೂ ಉತ್ತಮಗೊಂಡಿದೆ ಎಂದು ಬಾಲಿವುಡ್ ನಟಿ ಹೀನಾ ಖಾನ್ ಅಭಿಪ್ರಾಯಪಟ್ಟಿದ್ದಾರೆ. ಐಎಎನ್​​ಎಸ್ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ‘ನನಗಿರುವ ಸೀಮಿತ ಅನುಭವದಲ್ಲಿ, ಭಾರತ ಬಹಳ ಬಲಶಾಲಿಯಾಗಿದೆ ಎಂದನಿಸುತ್ತದೆ. ಮೂಲಸೌಕರ್ಯ, ತಂತ್ರಜ್ಞಾನ, ಬಾಹ್ಯಾಕಾಶ, ಆರೋಗ್ಯ, ಬಡತನ ನಿರ್ಮೂಲನೆ, ರಕ್ಷಣೆ ಮತ್ತು ಆರ್ಥಿಕತೆ ಇತ್ಯಾದಿ ಕ್ಷೇತ್ರದಲ್ಲಿ ಭಾರತ ಉತ್ತಮಗೊಂಡಿದೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: 500 ರೂ ನೋಟು ನಿಷೇಧ ಆಗುತ್ತೆ ಅನ್ನೋದು ಸುಳ್ಳು ಸುದ್ದಿ; ಪಿಐಬಿ ಫ್ಯಾಕ್ಟ್ ಚೆಕ್ ಸ್ಪಷ್ಟನೆ ಇದು

‘ನಮ್ಮ ಜೀವಿತಾವಧಿಯಲ್ಲೇ ಭಾರತ ಅಭಿವೃದ್ಧಿ ಹೊಂದಿದ ದೇಶವಾಗಬಲ್ಲುದು ಎಂದನಿಸುತ್ತಿದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಈ ಭಾವನೆಯನ್ನು ಮತ್ತು ಕನಸನ್ನು ಹುಟ್ಟುಹಾಕಿದ್ದೇ ನಮ್ಮ ಪ್ರಧಾನಿಗಳು. ಈಗ ಆಗುತ್ತಿರುವ ಅಭಿವೃದ್ಧಿ ಮತ್ತು ಸುಧಾರಣೆಗಳನ್ನು ನೋಡಿದರೆ ನಿಜಕ್ಕೂ ಈ ಕನಸು ಬಹಳ ಬೇಗ ನನಸಾಗಬಹುದು ಎಂದನಿಸುತ್ತಿದೆ’ ಎಂದು 37 ವರ್ಷದ ನಟಿ ಹೀನಾ ಖಾನ್ ತಿಳಿಸಿದ್ದಾರೆ.

ಜನರ ಯೋಚನಾ ಕ್ರಮವನ್ನೇ ಬದಲಿಸಿದ್ದಾರೆ ಮೋದಿ: ನಿರ್ದೇಶಕ ಸುಭಾಷ್ ಘಾಯ್

ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಅಭಿವೃದ್ಧಿಪಥದಲ್ಲಿ ತಂದಿರುವುದು ಮಾತ್ರವಲ್ಲ, ಜನರ ಯೋಚನಾ ಕ್ರಮದಲ್ಲೂ ಬದಲಾವಣೆ ತರುತ್ತಿದ್ದಾರೆ ಎಂದು ಬಾಲಿವುಡ್ ನಿರ್ದೇಶಕ ಸುಭಾಷ್ ಘಾಯ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ದೇಶಭ್ರಷ್ಟ ಅನ್ನಿ ಒಪ್ತೀನಿ, ಆದ್ರೆ ಕಳ್ಳ ಅನ್ನೋಕೆ ನಾನೇನು ಕದ್ದಿದ್ದೀನಿ? ಹೊಟ್ಟೆಯೊಳಗಿನ ಸಂಕಟವೆಲ್ಲಾ ಬಿಚ್ಚಿಟ್ಟ ವಿಜಯ್ ಮಲ್ಯ

‘ನಾನು ಹನ್ನೊಂದು ವರ್ಷದ ಹಿಂದೆ ಕಾಂಚಿ ಸಿನಿಮಾ ಮಾಡಿದೆ. ಚಿತ್ರದ ಕ್ಲೈಮಾಕ್ಸ್​​ಗೆ ಒಂದು ಹಾಡು ರಚಿಸಿದೆವು. ಸಾರೆ ಜಹಾಂ ಸೆ ಅಚ್ಛಾ, ವೋ ಹಿಂದೂಸ್ತಾನ್ ಕಹಾಂ ಹೈ ಎನ್ನುವ ಹಾಡು ಅದು. ಒಂದು ಕಾಲದಲ್ಲಿ ಎಲ್ಲರಿಗಿಂತ ಶ್ರೇಷ್ಠವಾಗಿದ್ದ ಆ ದೇಶ ಎಲ್ಲಿ ಹೋಯಿತು ಎಂದು ಪ್ರಶ್ನಿಸುವ ಹಾಡದು. ನಿರಾಸೆಯ ಕಾಲದಲ್ಲಿ ರಚಿಸಿದ್ದ ಹಾಡು. ಆಗ ನರೇಂದ್ರ ಮೋದಿ ನೇತೃತ್ವದ ಹೊಸ ಸರ್ಕಾರ ಬಂತು. ಅವರಿಗೆ ದೇಶದ ಅಭಿವೃದ್ಧಿ ಮಾತ್ರವಲ್ಲ, ಜನರ ಚಿಂತನೆಯಲ್ಲೂ ಬದಲಾವಣೆ ತರುವ ಉದ್ದೇಶ ಇರುವುದು ನರೇಂದ್ರ ಮೋದಿ ಅವರ ಮಾತಿನಿಂದ ಅರ್ಥ ಮಾಡಿಕೊಳ್ಳಬಬಹುದಿತ್ತು. ಅದು ನನಗೆ ಇಷ್ಟವಾಯಿತು. ಸರಿ, ಕಾದು ನೋಡೇ ಬಿಡೋಣ ಎಂದುಕೊಂಡೆ’ ಎಂದು ಸುಭಾಷ್ ಘಾಯ್ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ