AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹನಿಮೂನ್​ಗೆ ಹೋದವ ಹೆಣವಾದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​, ಕೊಲೆ ಹಿಂದೆ ಪತ್ನಿ ಕೈವಾಡ, ಮೂವರ ಬಂಧನ

ಹನಿಮೂನ್​​ಗೆ ಹೋದವ ಹೆಣವಾದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​ ಸಿಕ್ಕಿದೆ. ರಾಜಾ ರಘುವಂಶಿ ಕೊಲೆ ಪ್ರಕರಣದಲ್ಲಿರುವ ಸಸ್ಪೆನ್ಸ್​ ಬಗೆಹರಿದಿದೆ. ಈ ಪ್ರಕರಣದಲ್ಲಿ ಮೇಘಾಲಯ ಪೊಲೀಸರು ಅವರ ಪತ್ನಿ ಸೋನಮ್ ರಘುವಂಶಿ ಅವರನ್ನು ಬಂಧಿಸಿದ್ದಾರೆ.ಈ ಮಾಹಿತಿಯನ್ನು ನೀಡಿದ ಮೇಘಾಲಯ ಪೊಲೀಸ್ ಡಿಜಿಪಿ, ಇಂದೋರ್ ನಿವಾಸಿ ರಾಜಾ ರಘುವಂಶಿ ಅವರ ಕೊಲೆ ಪ್ರಕರಣದಲ್ಲಿ ಅವರ ಪತ್ನಿ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಮೇಘಾಲಯಕ್ಕೆ ಹನಿಮೂನ್​ಗೆಂದು ತೆರಳಿದ್ದ ಸಮಯದಲ್ಲಿ ಇಂದೋರ್​ನ ರಾಜಾ ರಘುವಂಶಿ ನಾಪತ್ತೆಯಾಗಿದ್ದರು.

ಹನಿಮೂನ್​ಗೆ ಹೋದವ ಹೆಣವಾದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​, ಕೊಲೆ ಹಿಂದೆ ಪತ್ನಿ ಕೈವಾಡ, ಮೂವರ ಬಂಧನ
ಸೋನಮ್, ರಾಜಾ
ನಯನಾ ರಾಜೀವ್
|

Updated on: Jun 09, 2025 | 8:40 AM

Share

ಲಕ್ನೋ, ಜೂನ್ 09:  ಮೇಘಾಲಯಕ್ಕೆ ಹನಿಮೂನ್​ಗೆಂದು ತೆರಳಿ ದಂಪತಿ ನಾಪತ್ತೆಯಾಗಿದ್ದ ಪ್ರಕರಣದಲ್ಲಿ ಹೊಸ ತಿರುವು ಸಿಕ್ಕಿದೆ. ಒಂದೆಡೆ ರಾಜಾ ರಘುವಂಶಿ ಕೊಲೆಯಾಗಿದೆ. ಮತ್ತೊಂದೆಡೆ ಹಲವು ದಿನಗಳಿಂದ ನಾಪತ್ತೆಯಾಗಿದ್ದ ಸೋನಮ್ ರಘುವಂಶಿ ಉತ್ತರ ಪ್ರದೇಶದ ಘಾಜಿಪುರ ಜಿಲ್ಲೆಯಲ್ಲಿ ಪತ್ತೆಯಾಗಿದ್ದಾರೆ. ಕಳೆದ 17 ದಿನಗಳಿಂದ ಪೊಲೀಸರು ಮೇಘಾಲಯದಲ್ಲಿ ಸೋನಮ್‌ಗಾಗಿ ಹುಡುಕಾಟ ನಡೆಸುತ್ತಿದ್ದರು.

ಸೋನಮ್ ನಿನ್ನೆ ರಾತ್ರಿ ತನ್ನ ಕುಟುಂಬಕ್ಕೆ ಕರೆ ಮಾಡಿ ತಾನು ಯುಪಿಯ ಘಾಜಿಪುರ ಜಿಲ್ಲೆಯಲ್ಲಿದ್ದೇನೆ ಎಂದು ತಿಳಿಸಿದ್ದಾಳೆ. ಸೋನಮ್ ತನ್ನ ಸಹೋದರ ಗೋವಿಂದ್ ರಘುವಂಶಿಗೆ ಪೊಲೀಸರ ಫೋನ್‌ನಿಂದ ಕರೆ ಮಾಡಿದ್ದಾಳೆ.

ರಾಜಾ ಮೃತದೇಹ ಜೂನ್ 2 ರಂದು ಪತ್ತೆಯಾಗಿತ್ತು ಸೋನಮ್ ತನ್ನ ಪತಿ ರಾಜಾ ಜೊತೆ ಹನಿಮೂನ್ ಆಚರಿಸಲು ಶಿಲ್ಲಾಂಗ್‌ಗೆ ಹೋಗಿದ್ದರು. ಆದರೆ ನಂತರ ಇಬ್ಬರೂ ನಾಪತ್ತೆಯಾಗಿದ್ದರು.ಕುಟುಂಬವು ಪೊಲೀಸರಿಗೆ ದೂರು ನೀಡಿದಾಗ, ದಂಪತಿಗಾಗಿ ಹುಡುಕಾಟ ಪ್ರಾರಂಭವಾಯಿತು. ಜೂನ್ 2 ರಂದು ರಾಜಾ ರಘುವಂಶಿ ಅವರ ಶವ ಪತ್ತೆಯಾಗಿತ್ತು. ಆದರೆ ಸೋನಮ್ ಬಗ್ಗೆ ಯಾವುದೇ ಸುಳಿವು ಇರಲಿಲ್ಲ.

ಇದನ್ನೂ ಓದಿ
Image
ವಿದ್ಯಾರ್ಥಿ ನಿಗೂಢ ನಾಪತ್ತೆ: ಸಿಗದ ಸುಳಿವು, ಪೊಲೀಸರಿಗೆ ಹೈಕೋರ್ಟ್ ಸೂಚನೆ
Image
ಮಂಗಳೂರು: ವಿದ್ಯಾರ್ಥಿ ದಿಗಂತ್​ ನಾಪತ್ತೆ, VHP​​ ಪ್ರತಿಭಟನೆ
Image
ಕೋಟೆಕಾರು ದರೋಡೆ: ಪ್ರಮುಖ ಸೂತ್ರಧಾರ ಭಾಸ್ಕರ್ ಬೆಳ್ಚಪಾಡನ ಹಿನ್ನೆಲೆಯೇ ರೋಚಕ
Image
ಸೈಬರ್ ವಂಚಕರ ಜತೆಗೆ ಅವರ ದುಡ್ಡಲ್ಲೇ ಪ್ರವಾಸ ಮಾಡಿದ ಮಂಗಳೂರು ಪೊಲೀಸರು!

ಒಬ್ಬ ವ್ಯಕ್ತಿಯನ್ನು ಉತ್ತರ ಪ್ರದೇಶದಿಂದ ಮತ್ತು ಇನ್ನಿಬ್ಬರು ಆರೋಪಿಗಳನ್ನು ಇಂದೋರ್‌ನಿಂದ ಬಂಧಿಸಲಾಗಿದೆ. ಸೋನಮ್ ನಂದಗಂಜ್ ಪೊಲೀಸ್ ಠಾಣೆಯಲ್ಲಿ ಶರಣಾದರು ಮತ್ತು ನಂತರ ಅವರನ್ನು ಬಂಧಿಸಲಾಯಿತು.

ಮತ್ತಷ್ಟು ಓದಿ: ಹನಿಮೂನ್​ಗೆಂದು ತೆರಳಿದ್ದ ದಂಪತಿ ಶಿಲ್ಲಾಂಗ್​ನಲ್ಲಿ ನಾಪತ್ತೆ, ಸ್ಕೂಟರ್ ಪತ್ತೆ

ನವವಿವಾಹಿತರಾದ ರಾಜಾ ರಘುವಂಶಿ ಮತ್ತು ಅವರ ಪತ್ನಿ ಸೋನಮ್, ಮೇ 23 ರಂದು ಕಾಣೆಯಾಗುವ ಮೊದಲು ಮೇಘಾಲಯದಲ್ಲಿ ತಮ್ಮ ಹನಿಮೂನ್ ಸಮಯದಲ್ಲಿ ಕೆಲವು ಪ್ರದೇಶಗಳಿಗೆ ಭೇಟಿ ನೀಡಿದ್ದರು. ಜೂನ್ 2 ರಂದು ರಾಜಾ ರಘುವಂಶಿ ಅವರ ಮೃತದೇಹ ಪತ್ತೆಯಾಗಿದ್ದರೂ, ಅವರ ಪತ್ನಿಗಾಗಿ ಹುಡುಕಾಟ ನಡೆಯುತ್ತಿತ್ತು. ಈ ಹನಿಮೂನ್ ಕೊಲೆ ಪ್ರಕರಣವನ್ನು ಭೇದಿಸಿದ್ದಕ್ಕಾಗಿ ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಪೊಲೀಸರನ್ನು ಶ್ಲಾಘಿಸಿದ್ದಾರೆ.

ಮೇ 11ರಂದು ವೈವಾಹಿಕ ಜೀವಕ್ಕೆ ಕಾಲಿಟ್ಟಿದ್ದ ರಾಜಾ ರಘುವಂಶಿ(29) ಮತ್ತು ಸೋನಮ್‌ ರಘುವಂಶಿ(25), ಮೇ 20ರಂದು ಹನಿಮೂನ್‌ ಪಯಣ ಆರಂಭಿಸುತ್ತಾರೆ. ಮೇ 21ರಂದು ಮೇಘಾಲಯದ ರಾಜಧಾನಿ ಶಿಲ್ಲಾಂಗ್‌ನ ಬಾಲಾಜಿ ಅತಿಥಿ ಗೃಹದಲ್ಲಿ ಉಳಿದುಕೊಂಡಿದ್ದಾರೆ.ಮೇ 22ರ ಬೆಳಿಗ್ಗೆ ದ್ವಿಚಕ್ರ ವಾಹನವೊಂದನ್ನು ಬಾಡಿಗೆ ಪಡೆದ ದಂಪತಿ, ಅತಿಥಿ ಗೃಹದಿಂದ ಜನಪ್ರಿಯ ಪ್ರವಾಸಿ ತಾಣ ಸೊಹ್ರಾಕ್ಕೆ(ಚಿರಾಪುಂಜಿ) ತೆರಳುತ್ತಾರೆ.

ಈ ವೇಳೆ ಅವರು ಎರಡು ಲಗೇಜ್‌ ಬ್ಯಾಗ್‌ ಅನ್ನು ತಮ್ಮೊಂದಿಗೆ ತೆಗೆದುಕೊಂಡಿದ್ದರು. ಮೇ 25 ರೊಳಗೆ ಹಿಂತಿರುಗುವುದಾಗಿ ಅತಿಥಿ ಗೃಹದ ವ್ಯವಸ್ಥಾಪಕರಿಗೆ ತಿಳಿಸಿದ್ದ ಅವರು ಕೊಠಡಿ ಬೇಕಾದಲ್ಲಿ ಕರೆ ಮಾಡುವುದಾಗಿಯೂ ಹೇಳಿದ್ದರು.

ಮೇ 23: ಮೌಲಾಖಿಯಾತ್ ಗ್ರಾಮ ತಲುಪಿದ ದಂಪತಿ, ನೊಂಗ್ರಿಯಾಟ್‌ನ ಶಿಪಾರಾ ಹೋಂಸ್ಟೇಯಲ್ಲಿ ತಂಗುತ್ತಾರೆ. ಆ ವೇಳೆ ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಿರುತ್ತಾರೆ.ಚಕ್ರ ವಾಹನವೊಂದು ಶಿಲ್ಲಾಂಗ್‌ನಿಂದ ಸೊಹ್ರಾಗೆ ಹೋಗುವ ರಸ್ತೆಯ ಕೆಫೆಯೊಂದರ ಬಳಿ ಪತ್ತೆಯಾಗಿದ್ದು, ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ವೀ ಸಾವ್ಡಾಂಗ್ ಜಲಪಾತದ ಕೆಳಗಿನ ಕಮರಿಯಲ್ಲಿ ಶವವಿರುವುದನ್ನು ಡ್ರೋನ್‌ ಪತ್ತೆ ಮಾಡುತ್ತದೆ. ಅದು ರಾಜ ರಘುವಂಶಿ ಮೃತದೇಹವೆಂದು ಕುಟುಂಬದವರು ಗುರುತಿಸುತ್ತಾರೆ. ಸೋನಮ್‌ಗಾಗಿ ಹುಟುಕಾಟ ಮುಂದುವರೆದಿತ್ತು. ಕೊಲೆಗೆ ಕಾರಣ ಏನೆಂದು ಇನ್ನಷ್ಟೇ ತಿಳಿದುಬರಬೇಕಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!