AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೋಟೆಕಾರು ಬ್ಯಾಂಕ್ ದರೋಡೆ: ಪ್ರಮುಖ ಸೂತ್ರಧಾರ ಭಾಸ್ಕರ್ ಬೆಳ್ಚಪಾಡನ ಹಿನ್ನೆಲೆಯೇ ರೋಚಕ!

ಉಳ್ಳಾಲದ ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದ ಪ್ರಮುಖ ಸೂತ್ರಧಾರರಾದ 69 ವರ್ಷದ ಭಾಸ್ಕರ್ ಬೆಳ್ಚಪಾಡ ಮತ್ತು ನಜೀರ್​ನನ್ನು ಪೊಲೀಸರು ಬಂಧಿಸಿದ್ದಾರೆ. ಭಾಸ್ಕರ್ ಅನೇಕ ವಿಫಲ ದರೋಡೆ ಯತ್ನಗಳನ್ನು ಮಾಡಿದ್ದ ಎಂಬುದು ಬಹಿರಂಗವಾಗಿದೆ. ಕೋಟೆಕಾರು ದರೋಡೆಯನ್ನು ಸ್ಥಳೀಯ ನಜೀರ್ ಜೊತೆ ಯೋಜಿಸಿದ್ದ ಭಾಸ್ಕರ್, ಮುಂಬೈನಲ್ಲಿ ಹಲವು ವರ್ಷಗಳಿಂದ ಅಪರಾಧ ಜೀವನ ನಡೆಸುತ್ತಿದ್ದ. ಈತ ಮಾಡಿದ್ದ ಹಲವು ವಿಫಲ ದರೋಡೆ ಯತ್ನಗಳ ರೋಚಕ ಸಂಗತಿ ಇಲ್ಲಿದೆ.

ಕೋಟೆಕಾರು ಬ್ಯಾಂಕ್ ದರೋಡೆ: ಪ್ರಮುಖ ಸೂತ್ರಧಾರ ಭಾಸ್ಕರ್ ಬೆಳ್ಚಪಾಡನ ಹಿನ್ನೆಲೆಯೇ ರೋಚಕ!
ಕೋಟೆಕಾರು ಬ್ಯಾಂಕ್ ದರೋಡೆಯ ಮಾಸ್ಟರ್​​ಮೈಂಡ್​ಗಳಾದ ನಜೀರ್ ಹಾಗೂ ಭಾಸ್ಕರ್
ಅಶೋಕ್​ ಪೂಜಾರಿ, ಮಂಗಳೂರು
| Updated By: Ganapathi Sharma|

Updated on:Feb 28, 2025 | 8:27 AM

Share

ಮಂಗಳೂರು, ಫೆಬ್ರವರಿ 28: ಉಳ್ಳಾಲದ ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದ ಪ್ರಮುಖ ಸೂತ್ರಧಾರರಾದ 69 ವರ್ಷದ ಮುದುಕ ಭಾಸ್ಕರ್ ಬೆಳ್ಚಪಾಡ ಹಾಗು ನಜೀರ್ ಎಂಬಾತನನ್ನು ಪೊಲೀಸರು ಕೊನೆಗೂ ಬಂಧಿಸಿದ್ದಾರೆ. ಇದರಿಂದಾಗಿ ಪ್ರಕರಣ ಸಂಬಂಧ ಮತ್ತಷ್ಟು ರೋಚಕ ಸಂಗತಿಗಳು ಬಯಲಾಗಿವೆ. 69 ವರ್ಷದ ಮುದುಕ ಭಾಸ್ಕರ್ ಬೆಳ್ಚಪಾಡ ಅಪರಾಧ ಹಿನ್ನೆಲೆ ಹೊಂದಿದ್ದು, ಈ ಹಿಂದೆ ಅನೇಕ ಪ್ರಕರಣಗಳಲ್ಲಿ ಶಾಮೀಲಾಗಿದ್ದ. ಆದರೆ, ಹೆಚ್ಚಿನವು ವಿಫಲ ಯತ್ನಗಳಾಗಿದ್ದವು ಎಂಬುದು ಇದೀಗ ತಿಳಿದುಬಂದಿದೆ.

ಖತರ್ನಾಕ್ ಭಾಸ್ಕರ್ ಬೆಳ್ಚಪಾಡ ಒಬ್ಬ ನತದೃಷ್ಟ ಕಳ್ಳ. ಶ್ರೀಮಂತನಾಗುವ ಕನಸು ಹೊತ್ತು ವಿಫಲನಾದವ. ಶ್ರೀಮಂತನಾಗಬೇಕು ಎಂಬ ಕನಸು ಹೊತ್ತು ಈತ ಮಾಡಿದ ಬಹುತೇಕ ಎಲ್ಲ ದರೋಡೆಯೂ ವಿಫಲವಾಗಿದ್ದವು ಎಂಬುದು ಗೊತ್ತಾಗಿದೆ. ಕೋಟೆಕಾರು ಬ್ಯಾಂಕ್ ದರೋಡೆಯ ಕಿಂಗ್​ಪಿನ್ ಕೂಡ ಈತನೇ ಆಗಿದ್ದ.

ಭಾಸ್ಕರ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ವಿಟ್ಲ ಮೂಲದವನು. 2000 ನೇ ಇಸವಿಯಲ್ಲಿ ಊರು ಬಿಟ್ಟು ಮುಂಬೈ ಸೇರಿದ್ದ. 25 ವರ್ಷದಿಂದ ಮುಂಬೈನಲ್ಲೇ ವಾಸವಿದ್ದ. ಮೊದಲಿಗೆ ಮುಂಬೈನ ಸಣ್ಣ ಸಣ್ಣ ಹೋಟೆಲ್, ರೆಸ್ಟೋರೆಂಟ್​ಗಳಲ್ಲಿ ಕೆಲಸ ಮಾಡುತ್ತಿದ್ದ. ಆದರೆ, ಏಕಾಏಕಿ ಶ್ರೀಮಂತನಾಗಬೇಕು ಎಂಬ ಹಂಬಲದಿಂದ ಅಪರಾಧ ಜಗತ್ತಿಗೆ ಎಂಟ್ರಿಯಾಗಿದ್ದ.

ಇದನ್ನೂ ಓದಿ
Image
ಕೋಟೆಕಾರು ಬ್ಯಾಂಕ್‌ ದರೋಡೆ: ರಾಶಿ ರಾಶಿ ಚಿನ್ನ ಕಂಡು ಪೊಲೀಸರೇ ಶಾಕ್
Image
ಕೋಟೆಕಾರು ಬ್ಯಾಂಕ್ ದರೋಡೆಯಲ್ಲಿ ಶಾಮೀಲಾದ ಸ್ಥಳೀಯರಿಗೆ ರಾಜಕೀಯ ಬೆಂಬಲ: ಆರೋಪ
Image
ಮಂಗಳೂರಿನ ಕೋಟೆಕಾರ್ ಬ್ಯಾಂಕ್ ದರೋಡೆ ಆರೋಪಿಗೆ ಖಾಕಿ ಫೈರಿಂಗ್‌
Image
ಬ್ಯಾಂಕ್ ದರೋಡೆ: ತನಿಖೆ ದಿಕ್ಕು ತಪ್ಪಿಸಲು ದುಷ್ಕರ್ಮಿಗಳ ಪ್ಲಾನ್ ಹೀಗಿತ್ತು!

2011ರಲ್ಲೇ ಮೊದಲ ದರೋಡೆಗೆ ಸ್ಕೆಚ್

2011ರಲ್ಲಿ ನ್ದೆಹಲಿಯಲ್ಲಿ ಮೊದಲ ಬಾರಿ ದರೋಡೆಗೆ ಸ್ಕೆಚ್ ಹಾಕಿದ್ದ. ಆದರೆ ದರೋಡೆ ವೇಳೆಯೇ ಅರೆಸ್ಟ್ ಆಗಿ ತಿಹಾರ್ ಜೈಲು ಸೇರಿದ್ದ. ಮೂರು ವರ್ಷ ತಿಹಾರ್ ಜೈಲಲ್ಲಿ ಕಂಬಿ ಎಣಿಕೆ‌ ಮಾಡಿದ್ದ. ಈ ವೇಳೆ ಸಾಕಷ್ಟು ನಟೋರಿಯಸ್ ಕ್ರಿಮಿನಲ್​ಗಳ ಸಂಪರ್ಕವಾಗಿತ್ತು. ಜೈಲಿನಿಂದ ಹೊರ ಬಂದ ಬಳಿಕ ಮತ್ತೆ ಶ್ರೀಮಂತನಾಗುವುದಕ್ಕಾಗಿ ಮತ್ತ ದರೋಡೆಯ ಮಾರ್ಗ ಹಿಡಿದಿದ್ದ. ಗುಜರಾತ್​​ನಲ್ಲೂ ಈತ ದರೋಡೆಗೆ ಸ್ಕೆಚ್ ಹಾಕಿದ್ದ ಎನ್ನಲಾಗಿದೆ.

ಆಭರಣ ಮಳಿಗೆ, ಫೈನಾನ್ಸ್​ಗಳೇ ಟಾರ್ಗೆಟ್

ದೊಡ್ಡ ಆಭರಣ ಮಳಿಗೆ, ಫೈನಾನ್ಸ್ ಕಂಪೆನಿಗಳೇ ಭಾಸ್ಕರ್ ಟಾರ್ಗೆಟ್ ಆಗಿರುತ್ತಿದ್ದವು. ಬೇರೆ ಕುಖ್ಯಾತ ದರೋಡೆಕೊರರ ತಂಡದ ಮೂಲಕ ಈತ ದರೋಡೆ ಮಾಡಿಸುತ್ತಿದ್ದ. 2021ರಲ್ಲಿ ಮುಂಬೈ ಸಿಐಡಿ ಕ್ರೈಮ್ ಬ್ರಾಂಚ್​ನಿಂದ ಶಸಸ್ತ್ರ ಕಾಯ್ದೆಯಡಿ ಮತ್ತೆ ಬಂಧನವಾಗಿತ್ತು. ಆ ಬಳಿಕ ನೇಪಾಳಿ ಗ್ಯಾಂಗ್ ಜೊತೆ ಮಂಗಳೂರಿನ ಉಳ್ಳಾಲದಲ್ಲಿ ದರೋಡೆಗೆ ಸಂಚು ಹೂಡಿದ್ದ. ದರೋಡೆಗೆ ಯತ್ನಿಸಿದ ಸಂದರ್ಭದಲ್ಲಿ ಆ ಗ್ಯಾಂಗ್ ಜೊತೆ ಮತ್ತೆ ಭಾಸ್ಕರ್ ಅರೆಸ್ಟ್ ಆಗಿದ್ದ. ಮತ್ತೆ ಕೊಣಾಜೆಯ ಕಳ್ಳತನ ಯತ್ನದಲ್ಲೂ ಭಾಸ್ಕರ್ ಮೇಲೆ ಕೇಸ್ ದಾಖಲಾಗಿತ್ತು. ಯಾವುದೇ ದರೋಡೆ ಯತ್ನದಲ್ಲೂ ಯಶಸ್ಸು ಕಾಣದೆ ನಿರಾಸೆಗೊಂಡಿದ್ದ. ಶ್ರೀಮಂತನಾಗುವ ಆತನ ಕನಸು ಪದೆ ಪದೆ ಭಗ್ನವಾಗುತ್ತಿತ್ತು.

ಕೋಟೆಕಾರು ಬ್ಯಾಂಕ್ ದರೋಡೆಗೆ ಪ್ಲಾನ್ ಸಿದ್ಧವಾಗಿದ್ಹೇಗೆ?

ಏತನ್ಮಧ್ಯೆ, ಭಾಸ್ಕರ್​ಗೆ ಕಾಸರಗೋಡಿನ ಕರೀಂ ಎಂಬಾತನ ಜೊತೆ ಪರಿಚಯವಾಗಿದೆ. ಕರೀಂ ಮುಖಾಂತರ ಕೋಟೆಕಾರು ಸುತ್ತಮುತ್ತಲಿನ ನಿವಾಸಿ ನಜೀರ್ ಎಂಬಾತನನ್ನು ಸಂಪರ್ಕ ಮಾಡಿದ್ದಾರೆ. ಜೀವನದಲ್ಲಿ ಏನೂ ಸಿಗಲಿಲ್ಲ ಎಂದು ನಜೀರ್ ಜೊತೆ ಭಾಸ್ಕರ್ ಬೇಸರ ತೋಡಿಕೊಂಡಿದ್ದ. ಈ ವೇಳೆ ನಜೀರ್, ಕೋಟೆಕಾರು ಬ್ಯಾಂಕ್ ಡಕಾಯಿತಿ ಬಗ್ಗೆ ಪ್ಲಾನ್ ನೀಡಿದ್ದ. ಐದೂವರೆ ತಿಂಗಳ ಹಿಂದೆ ಕೋಟೆಕಾರು ಮಾಡೂರಿಗೆ ಬಂದು ಭಾಸ್ಕರ್ ದರೋಡೆಗೆ ಸ್ಕೆಚ್ ಹಾಕಿದ್ದ. ಮಾಡೂರು-ಬೀರಿಯಲ್ಲಿ ಸಿಕ್ಕಿ ಚರ್ಚೆ ಮಾಡಿ, ಬಳಿಕ ಮತ್ತೊಮ್ಮೆ ಬಂದು ಬ್ಲೂ ಪ್ರಿಂಟ್ ರೆಡಿ ಮಾಡಿಕೊಂಡಿತ್ತು ಭಾಸ್ಕರ್ ಅಂಡ್ ಟೀಂ.

ಕೋಟೆಕಾರ್ ಬ್ಯಾಂಕ್​​ನಲ್ಲಿ ಯಾವಾಗಲೂ 20 ಕೆಜಿಗಿಂತ ಹೆಚ್ಚು ಚಿನ್ನವಿರುತ್ತದೆ ಎಂದು ನಜೀರ್ ಮಾಹಿತಿ ನೀಡಿದ್ದ. ಮಹಿಳಾ ಸಿಬ್ಬಂದಿ ಹೆಚ್ಚಿನ ಪ್ರಮಾಣದಲ್ಲಿ ಇರುತ್ತಾರೆ. ಕೆಸಿ ರೋಡ್​ನಲ್ಲಿ ಶುಕ್ರವಾರ ಪ್ರಾರ್ಥನೆ ಸಮಯದಲ್ಲಿ ಯಾರು ಇರುವುದಿಲ್ಲ ಎಂದು ನಜೀರ್ ಮಾಹಿತಿ ನೀಡಿದ್ದ. ಯಾರಿಗೆ ದರೋಡೆಯ ಸುಪಾರಿ ನೀಡೋದು ಎಂದು ಚಿಂತಿಸಿದ ವೇಳೆ ಮುರುಗನ್ ಡಿ ಹೆಸರು ಮುನ್ನಲೆಗೆ ಬಂದಿತ್ತು. ನಂತರ ಭಾಸ್ಕರ್ ಹಾಗು ನಜೀರ್ ಜತೆಯಾಗಿ ಮುರುಗನ್ ಡಿ ಸಂಪರ್ಕಿಸಿದ್ದರು. ಆತನಿಗೆ ದರೋಡೆಯ ಜವಾಬ್ದಾರಿ‌ ವಹಿಸಲಾಗಿತ್ತು. ತನ್ನ ನಿಜವಾದ ಹೆಸರು ಮರೆಮಾಚಿ ಶಶಿ ತೆವರ್ ಎಂದು ಭಾಸ್ಕರ್ ಮಾತುಕತೆ ನಡೆಸಿದ್ದ.

ಇದನ್ನೂ ಓದಿ: ಉಳ್ಳಾಲ ಕೋಟೆಕಾರು ಬ್ಯಾಂಕ್ ದರೋಡೆ: ತನಿಖೆಯ ದಿಕ್ಕು ತಪ್ಪಿಸಲು ದುಷ್ಕರ್ಮಿಗಳ ಖತರ್ನಾಕ್ ಪ್ಲಾನ್ ಹೀಗಿತ್ತು!

ಪ್ರಕರಣ ಸಂಬಂಧ ಈಗಾಗಲೇ ಪ್ರಮುಖ ಇಬ್ಬರು ಸೂತ್ರಧಾರರು ಸೇರಿ 6 ಜನರ ಬಂಧನವಾಗಿದೆ. ಇನ್ನಿಬ್ಬರ ಬಂಧನಕ್ಕೆ ಕಾರ್ಯಾಚರಣೆ ನಡೆಯುತ್ತಿದೆ. ಭಾಸ್ಕರ್ ಯಾವಾಗಲೂ ದರೋಡೆಗೆ ಒಂದೇ ತಂಡವನ್ನು ಬಳಸಿಕೊಳ್ಳುತ್ತಿರಲಿಲ್ಲ ಎಂಬುದೂ ತನಿಖೆಯಿಂದ ಗೊತ್ತಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:23 am, Fri, 28 February 25