ಹನಿಮೂನ್‌ಗೆಂದು ತೆರಳಿದ್ದ ದಂಪತಿ ಶಿಲ್ಲಾಂಗ್ನಲ್ಲಿ ನಾಪತ್ತೆ, ಸ್ಕೂಟರ್ ಪತ್ತೆ
ಮೇ 11ರಂದು ವಿವಾಹವಾಗಿದ್ದ ರಾಜಾ ಹಾಗೂ ಸೋನಮ್ ರಘುವಂಶಿ ದಂಪತಿ, ಹನಿಮೂನ್‌ಗೆ ಶಿಲ್ಲಾಂಗ್‌ಗೆ ತೆರಳಿದ್ದು ನಂತರ ನಾಪತ್ತೆಯಾಗಿದ್ದಾರೆ. ಅವರ ಸ್ಕೂಟರ್ ಓಸ್ರಾ ಹಿಲ್ಸ್ ಬಳಿ ಪತ್ತೆಯಾದರೂ, ದಂಪತಿ ಕಾಣೆಯಾಗಿರುವುದರಿಂದ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಇಂದೋರ್ ಮೂಲದ ದಂಪತಿ ರಾಜಾ ಮತ್ತು ಸೋನಮ್ ರಘುವಂಶಿ ಶಿಲ್ಲಾಂಗ್ ಪ್ರವಾಸದಲ್ಲಿದ್ದ ವೇಳೆ ನಾಪತ್ತೆಯಾಗಿದ್ದು, ಈ ಕುರಿತು ಕುಟುಂಬ ಹಾಗೂ ಸ್ಥಳೀಯರು ತೀವ್ರ ಆತಂಕದಲ್ಲಿದ್ದಾರೆ. ಅವರ ಕೊನೆಯ ಲೊಕೇಷನ್ ಓಸ್ರಾ ಹಿಲ್ಸ್ ಬಳಿ ಕಂಡುಬಂದಿದೆ.

ಶಿಲ್ಲಾಂಗ್, ಮೇ 28: ಹನಿಮೂನ್(Honeymoon)ಗೆಂದು ಇಂದೋರ್(Indore)ನಿಂದ ಮೇಘಾಲಯದ ಶಿಲ್ಲಾಂಗ್‌ಗೆ ತೆರಳಿದ್ದ ದಂಪತಿ ನಾಪತ್ತೆಯಾಗಿದ್ದಾರೆ. ಕಾಡಿನ ಸಮೀಪ ಸ್ಕೂಟರ್ ಪತ್ತೆಯಾಗಿದೆ. ಈ ಘಟನೆಯು ಕುಟುಂಬ ಹಾಗೂ ಸ್ಥಳೀಯರಲ್ಲಿ ಆತಂಕ ಹುಟ್ಟುಹಾಕಿದೆ. ರಾಜಾ ರಘುವಂಶಿ ಎಂಬುವವರು ತಮ್ಮ ಪತ್ನಿ ಸೋನಮ್ ರಘುವಂಶಿ ಜತೆ ಶಿಲ್ಲಾಂಗ್ ತೆರಳಿದ್ದರು. ಮೇ 11ರಂದು ಅವರು ಸಪ್ತಪದಿ ತುಳಿದಿದ್ದರು.
ಓಸ್ರಾ ಹಿಲ್ಸ್ ಬಳಿ ಅವರ ಕೊನೆಯ ಲೊಕೇಷನ್ ತೋರಿಸುತ್ತಿದೆ. ಅವರು ಮೇ 20ರಂದು ಹನಿಮೂನ್‌ಗೆ ಹೊರಟಿದ್ದರು. ಅವರ ಕುಟುಂಬದವರು ನೀಡಿರುವ ಮಾಹಿತಿ ಪ್ರಕಾರ, ಮೊದಲನೆಯದಾಗಿ ಅವರು ಗುವಾಹಟಿ ಮೂಲಕ ಬೆಂಗಳೂರು ಹೋಗಿದ್ದರು. 23ರಂದು ಶಿಲ್ಲಾಂಗ್‌ಗೆ ಬಂದಿದ್ದರು. ಶಿಲ್ಲಾಂಗ್ನಲ್ಲಿ ಮಾ ಕಾಮಾಖ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.
ದಂಪತಿ ಓಸ್ರಾ ಬೆಟ್ಟಕ್ಕೆ ಹೋಗುವ ಮೊದಲು ಸ್ಥಳೀಯ ಏಜೆನ್ಸಿಯಿಂದ ಸ್ಕೂಟರ್ ಅನ್ನು ಬಾಡಿಗೆಗೆ ಪಡೆದಿದ್ದರು. ರಾಜಾ ಅವರನ್ನು ಸಂಪರ್ಕಿಸಲು ಸಾಧ್ಯವಾಗದ ನಂತರ, ಅವರ ಅಣ್ಣ ಸಚಿನ್ ರಘುವಂಶಿ ಮೊದಲು ನೆಟ್‌ವರ್ಕ್ ಸಮಸ್ಯೆ ಇರುತ್ತದೆ ಎಂದು ಊಹಿಸಿದ್ದರು. ಆದರೆ ನಂತರ, ಮೇ 24 ರಿಂದ ಅವರ ಎರಡೂ ಮೊಬೈಲ್‌ಗಳು ಸ್ವಿಚ್ ಆಫ್ ಆದಾಗ ಅವರು ಚಿಂತಿತರಾದರು.
ಹಲವಾರು ಪ್ರಯತ್ನಗಳ ನಂತರವೂ ಸಂಪರ್ಕ ಸಾಧ್ಯವಾಗದಿದ್ದಾಗ, ಸೋನಂ ಅವರ ಸಹೋದರ ಗೋವಿಂದ್ ಮತ್ತು ರಾಜಾ ಅವರ ಸಹೋದರ ವಿಪಿನ್ ತುರ್ತು ವಿಮಾನದ ಮೂಲಕ ಶಿಲ್ಲಾಂಗ್ ತಲುಪಿದರು. ಬಾಡಿಗೆ ಏಜೆನ್ಸಿಯನ್ನು ಸಂಪರ್ಕಿಸಿ ಫೋಟೋಗಳನ್ನು ಕಳುಹಿಸಿ ಮಾಹಿತಿ ಸಂಗ್ರಹಿಸಿದ ನಂತರ, ದಂಪತಿಗಳು ಆಕ್ಟಿವಾವನ್ನು ಅವರಿಂದ ಬಾಡಿಗೆಗೆ ಪಡೆದು ಒಸಾರಾ ಬೆಟ್ಟಕ್ಕೆ ತೆರಳಿದ್ದಾರೆ ಎಂದು ಏಜೆನ್ಸಿ ದೃಢಪಡಿಸಿತು.
ಮತ್ತಷ್ಟು ಓದಿ: Viral: ಹನಿಮೂನ್‌ಗೆಂದು ಮನಾಲಿಗೆ ಹೋಗಿ ರಾತ್ರಿಯ ರೊಮ್ಯಾನ್ಸ್ ವಿಡಿಯೋ ಶೇರ್ ಮಾಡಿದ ನವಜೋಡಿ
ಈ ಪ್ರದೇಶದಲ್ಲಿ ಓರ್ಸಾ ಎಂಬ ಹೆಸರಿನ ರೆಸಾರ್ಟ್ ಕೂಡ ಇದೆ, ಕೊಲೆ ಪಾತಕಿಗಳು, ಅಪರಾಧಿಗಳು ಅಡಗಿರುವ ತಾಣ ಎಂದು ಪರಿಗಣಿಸಲಾಗುತ್ತದೆ ಮತ್ತು ಅಪರಾಧ ಚಟುವಟಿಕೆಗಳಿಗೆ ಕುಖ್ಯಾತವಾಗಿದೆ. ಹುಡುಕಾಟದ ಸಂದರ್ಭದಲ್ಲಿ ಭಾಷೆಯ ಸಮಸ್ಯೆ ಒಂದು ಅಡಚಣೆಯಾಗಿತ್ತು. ಸ್ಥಳೀಯ ಪೊಲೀಸರಿಂದ ಸಹಾಯ ಪಡೆಯುವಲ್ಲಿ ಭಾಷೆ ಅಡ್ಡಿಯಾಗಿದೆ ಎಂದು ರಾಜಾ ಅವರ ಸಹೋದರ ಸಚಿನ್ ರಘುವಂಶಿ ಹೇಳಿದ್ದಾರೆ. ಇದಾದ ನಂತರ, ಇಂದೋರ್ ಪೊಲೀಸ್ ಆಯುಕ್ತ ಸಂತೋಷ್ ಸಿಂಗ್ ಅವರನ್ನು ಸಂಪರ್ಕಿಸಲಾಯಿತು.
ಅವರು ಪ್ರಕರಣದ ಗಂಭೀರತೆಯನ್ನು ನೋಡಿ, ತನಿಖೆಗಾಗಿ ಅಪರಾಧ ವಿಭಾಗದ ಡಿಸಿಪಿ ರಾಜೇಶ್ ಕುಮಾರ್ ತ್ರಿಪಾಠಿ ಅವರನ್ನು ನಿಯೋಜಿಸಿದ್ದಾರೆ. ಅವರು ಶಿಲ್ಲಾಂಗ್ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಆ ಪ್ರದೇಶದಲ್ಲಿ ಈ ಹಿಂದೆಯೂ ದಂಪತಿ ಕಾಣೆಯಾಗಿದ್ದರು. ಪೊಲೀಸರು ಕೂಡ ಈ ಪ್ರದೇಶಕ್ಕೆ ಹೋಗಲು ಹಿಂಜರಿಯುತ್ತಾರೆ. ಪ್ರಸ್ತುತ, ಪೊಲೀಸರು ಮತ್ತು ಕುಟುಂಬದವರು ಇಬ್ಬರನ್ನೂ ಹುಡುಕುವಲ್ಲಿ ನಿರತರಾಗಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:07 pm, Wed, 28 May 25








