ಫಾರಿನ್ ಕಂಟ್ರಿ ಯಾಕೆ? ಹನಿಮೂನ್ ಹೋಗಲು ನಮ್ಮ ಕರ್ನಾಟಕದ ಈ ತಾಣಗಳು ಬೆಸ್ಟ್
ಮದುವೆಯಾದ ಬಳಿಕ ನವಜೋಡಿಗಳು ಹನಿಮೂನ್ ಹೋಗಲು ಫಾರಿನ್ ಕಂಟ್ರಿಗಳಿಗೆ ಹೋಗಲು ಬಯಸುತ್ತಾರೆ. ಇನ್ನೂ ಕೆಲವರು ಕಡಿಮೆ ಖರ್ಚಿನಲ್ಲಿ ಬೆಸ್ಟ್ ಹನಿಮೂನ್ ಸ್ಪಾಟ್‌ಗಳಿಗೆ ಹೋಗಲು ಬಯಸುತ್ತಾರೆ. ಹೀಗೆ ಸಂಗಾತಿಯೊಂದಿಗೆ ಸುಂದರ ಕ್ಷಣವನ್ನು ಕಳೆಯಲು ವಿದೇಶ ಹಾಗೂ ಹೊರ ರಾಜ್ಯಗಳಿಗೆ ಹನಿಮೂನ್ ಟ್ರಿಪ್ ಹೋಗುವ ಹಾಗೆ ಕರ್ನಾಟಕದ ಈ ಕೆಲವೊಂದು ಸ್ಥಳಗಳಿಗೆ ಪ್ರವಾಸ ಹೋಗಿ, ಹನಿಮೂನ್ ಅನ್ನು ಮೆಮೊರೆಬಲ್ ಆಗಿರಿಸಿ.

ಸಂಗಾತಿಯೊಂದಿಗೆ (other half) ಒಂದಷ್ಟು ಸಮಯ (time) ಏಕಾಂತವಾಗಿ ಕಳೆಯಬೇಕೆಂದು ನವ ದಂಪತಿಗಳು ( newly married couple) ಹನಿಮೂನ್ (honeymoon) ಹೋಗಲು ಬಯಸುತ್ತಾರೆ. ಹೆಚ್ಚಿನವರು ರೊಮ್ಯಾಂಟಿಕ್ ತಾಣಗಳಿಗೆ (romantic spot) ಹೋಗಬೇಕೆಂದು ಫ್ಲೈಟ್ ಹತ್ತಿ ವಿದೇಶಗಳಿಗೆ (foreign) ಹಾರುತ್ತಾರೆ. ಕೆಲವರು ಊಟಿ (Ooty), ಕೇರಳ (Kerala) ಅಂತೆಲ್ಲಾ ಬೇರೆ ರಾಜ್ಯಗಳಿಗೆ ಹನಿಮೂನ್ ಹೋಗ್ತಾರೆ. ಹೊರ ದೇಶ, ಹೊರ ರಾಜ್ಯಗಳಲ್ಲಿರುವಂತೆ ನಮ್ಮ ಕರ್ನಾಟಕದಲ್ಲಿಯೂ (Karnataka) ಹಲವಾರು ಹನಿಮೂನ್ ಸ್ಪಾಟ್‌ಗಳು, ಗಿರಿಧಾಮಗಳು, ನದಿ-ಸರೋವರಗಳು, ಉದ್ಯಾನವನಗಳು, ಅಭಯಾರಣ್ಯಗಳು ಸೇರಿದಂತೆ ಒಳ್ಳೊಳ್ಳೆ ಪ್ರವಾಸಿ ತಾಣಗಳಿವೆ. ಈ ರೊಮ್ಯಾಂಟಿಕ್ ತಾಣಗಳಿಗೆ ಹನಿಮೂನ್ ಹೋಗುವ ಮೂಲಕ ಸಂಗಾತಿಯೊಂದಿದೆ ಅತ್ಯುತ್ತಮ ಸಮಯವನ್ನು ಕಳೆಯಬಹುದು.
ಹನಿಮೂನ್ ಹೋಗಲು ಕರ್ನಾಟಕದ ಈ ರೊಮ್ಯಾಂಟಿಕ್ ಸ್ಥಳಗಳು ಬೆಸ್ಟ್:
ಕೂರ್ಗ್:
ದಿ ಸ್ಕಾಟ್‌ಲ್ಯಾಂಡ್ ಆಫ್ ಇಂಡಿಯಾ ಕರೆಯಲ್ಪಡುವ ಕೂರ್ಗ್ ಹನಿಮೂನ್ ಹೋಗಲು ಬೆಸ್ಟ್ ಪ್ಲೇಸ್ ಅಂತಾನೇ ಹೇಳಬಹುದು. ಮಧುಚಂದ್ರದ ರೊಮ್ಯಾಂಟಿಕ್ ತಾಣಗಳಲ್ಲಿ ಒಂದಾದ ಕೂರ್ಗ್ ವರ್ಷವಿಡೀ ಆಹ್ಲಾದಕರವಾದ ಹವಮಾನವನ್ನು ಹೊಂದಿರುತ್ತದೆ. ಅದರಲ್ಲೂ ಈ ಬೇಸಿಗೆಯಲ್ಲಿ ಎಲ್ಲಾ ಕಡೆ ಬಿಸಿ ಹವಮಾನ ಇದ್ರೆ ಕೂರ್ಗ್‌ನಲ್ಲಿ ಹಿತಕರವಾದ ವಾತಾವರಣವಿದೆ. ಬೇಸಿಗೆಯಲ್ಲಿ ಹನಿಮೂನ್ ಹೋಗಲು ಈ ತಾಣ ಉತ್ತಮ. ಅಲ್ಲದೆ ಇಲ್ಲಿ ಬಜೆಟ್ ಸ್ನೇಹಿ ಹೋಟೆಲ್, ಹೋಂ ಸ್ಟೇ, ರೆಸಾರ್ಟ್‌ಗಳಿವೆ. ಸಂಗಾತಿಯೊಂದಿಗೆ ಏಕಾಂತವಾಗಿ ಸಮಯ ಕಳೆಯಲು ಕೂರ್ಗ್‌ಗೆ ಪ್ರವಾಸ ಹೋಗಿ.
ಗೋಕರ್ಣ:
ನೀವು ಬೀಚ್‌ಗಳನ್ನು ತುಂಬಾ ಇಷ್ಟಪಡುವವರಾಗಿದ್ದರೆ ಗೋಕರ್ಣಕ್ಕೆ ಹನಿಮೂನ್ ಹೋಗಬಹುದು. ಹಲವಾರು ಪ್ರಶಾಂತ ಕಡಲತೀರಗಳಿಂದ ತುಂಬಿದ ಈ ಸ್ಥಳ ಮಧುಚಂದ್ರಕ್ಕೆ ಹೋಗಲು ಬೆಸ್ಟ್ ತಾಣ ಅಂತಾನೇ ಹೇಳಬಹುದು. ಇಲ್ಲಿನ ಪ್ರಶಾಂತವಾದ ಕಡಲ ತೀರದ ಬಳಿ ಕ್ಯಾಂಡಲ್ ಲೈಟ್ ಡಿನ್ನರ್ ಅರೇಂಜ್ ಮಾಡುವ ಮೂಲಕ ಸಂಗಾತಿಯೊಂದಿಗೆ ರೊಮ್ಯಾಂಟಿಕ್ ಕ್ಷಣವನ್ನು ಕಳೆಯಬಹುದು. ಇಲ್ಲಿ ನೀವು ಓಂ ಬೀಚ್, ಕೂಡ್ಲೆ ಬೀಚ್‌ಗಳಿಗೆ ಹೋಗಬಹುದು. ಜೊತೆಗೆ ಇಲ್ಲಿನ ಮಹಾಬಲೇಶ್ವರ ದೇವಸ್ಥಾನಕ್ಕೂ ಭೇಟಿ ನೀಡಬಹುದು.
ಚಿಕ್ಕಮಗಳೂರು:
ಚಿಕ್ಕಮಗಳೂರು ತನ್ನ ಪ್ರಕೃತಿ ಸೌಂದರ್ಯ ಮತ್ತು ಟ್ರೆಕ್ಕಿಂಗ್‌ನಂತಹ ಸಾಹಸ ಚಟುವಟಿಕೆಗಳಿಗೆ ಹೆಸರುವಾಸಿಯಾದ ತಾಣವಾಗಿದೆ. ಇದು ಕೂಡಾ ಸಂಗಾತಿಯೊಂದಿಗೆ ಹನಿಮೂನ್ ಹೋಗಲು ಬೆಸ್ಟ್ ತಾಣ ಅಂತಾನೇ ಹೇಳಬಹುದು. ಹಚ್ಚ ಹಸಿರಿನ ಕಾಫಿ, ಟೀ ತೋಟಗಳ ಸೌಂದರ್ಯ ಮನಸ್ಸಿಗೆ ಮುದವನ್ನು ನೀಡುತ್ತವೆ. ಮುಳ್ಳಯ್ಯನಗಿರಿ ಶಿಖರ, ಕಾಫಿ ತೋಟಗಳು, ಹೆಬ್ಬೆ ಫಾಲ್ಸ್ ಇತ್ಯಾದಿ ಸ್ಥಳಗಳಿಗೆ ಹೋಗಿ ಸಂಗಾತಿಯೊಂದಿಗೆ ಅತ್ಯುತ್ತಮ ಸಮಯವನ್ನು ಕಳೆಯಬಹುದು.
ಇದನ್ನೂ ಓದಿ: ಮೊಲ ಅಥವಾ ಬಾತುಕೋಳಿ; ಈ ಚಿತ್ರದಲ್ಲಿ ಮೊದಲು ಕಂಡಿದ್ದೇನು? ಇದು ಹೇಳುತ್ತೆ ನಿಮ್ಮ ವ್ಯಕ್ತಿತ್ವ
ದಾಂಡೇಲಿ:
ಕರ್ನಾಟಕದಲ್ಲಿರುವ ಮತ್ತೊಂದು ಪರಿಪೂರ್ಣ ಹನಿಮೂನ್ ತಾಣವೆಂದರೆ ದಾಂಡೇಲಿ. ಇಲ್ಲಿನ ವನ್ಯಜೀವ ಅಭಯಾರಣ್ಯಗಳಲ್ಲಿ ಸಫಾರಿ, ಚಾರಣ ಮತ್ತು ಪ್ರಕೃತಿ ನಡಿಗೆ, ಜಲ ಕ್ರೀಡೆ ಇತ್ಯಾದಿಗಳನ್ನು ಇಲ್ಲಿ ಎಂಜಾಯ್ ಮಾಡಬಹುದು. ಅಲ್ಲದೆ ಇಲ್ಲಿ ಜಂಗಲ್ ರೆಸಾರ್ಟ್‌ಗಳು, ಬಜೆಟ್‌ಸ್ನೇಹಿ ರೆಸಾರ್ಟ್, ಲಾಡ್ಜ್‌ಗಳಿವೆ.
ಹಂಪಿ:
ನೀವು ಐತಿಹಾಸಿಕ ಸ್ಥಳಗಳನ್ನು ಇಷ್ಟಪಡುವವರಾಗಿದ್ದರೆ ನಿಮಗೆ ಹನಿಮೂನ್ ಹೋಗಲು ಹಂಪಿ ಪರಿಪೂರ್ಣ ತಾಣವಾಗಿದೆ. ಇಲ್ಲಿನ ಪ್ರಾಚೀನ ನಗರದ ಅವಶೇಷಗಳು ಅದರ ಗತಕಾಲದ ವೈಭವಕ್ಕೆ ಸಾಕ್ಷಿಯಾಗಿ ನಿಂತಿವೆ. ಇಲ್ಲಿನ ಸುಂದರವಾದ ಭೂ ದೃಶ್ಯ, ಆಕರ್ಷಕ ತಾಣಗಳು ಮಧುಚಂದ್ರಕ್ಕೆ ಹೋಗಲು ಬೆಸ್ಟ್ ಆಗಿದೆ. ಇಲ್ಲಿನ ವಿರೂಪಾಕ್ಷ ದೇವಸ್ಥಾನಕ್ಕೆ ಹೋಗಬಹುದು, ಹಂಪಿ ನಗರದ ಅವಶೇಷಗಳ ಮೂಲಕ ಚಾರಣ ಮಾಡಿ ಮಾತಂಗನ ಬೆಟ್ಟದಲ್ಲಿ ಸೂರ್ಯಾಸ್ತದ ಸುಂದರ ದೃಶ್ಯವನ್ನು ಸವಿಯಬಹುದು.
ಕಬಿನಿ:
ನೀವು ವನ್ಯಜೀವಿ ಮತ್ತು ಪ್ರಕೃತಿ ಪ್ರಿಯರಾಗಿದ್ದರೆ, ಕಬಿನಿ ನಿಮಗೆ ಸೂಕ್ತವಾದ ಮಧುಚಂದ್ರದ ತಾಣವಾಗಿದೆ. ಕಬಿನಿ ವನ್ಯಜೀವಿ ಅಭಯಾರಣ್ಯ ಸಫಾರಿಯಲ್ಲಿ ನೀವು ಆನೆಗಳು, ಹುಲಿಗಳು, ಚಿರತೆಗಳು ವಿವಿಧ ಪ್ರಾಣಿಗಳು ಮತ್ತು ವಿವಿಧ ಪಕ್ಷಿಗಳನ್ನು ವೀಕ್ಷಿಸಬಹುದು. ಕಬಿನಿಯ ನೈಸರ್ಗಿಕ ಪ್ರಕೃತಿ ಸೌಂದರ್ಯದ ನಡುವೆ ಅನೇಕ ಐಷಾರಾಮಿ ರೆಸಾರ್ಟ್‌ಗಳಿದ್ದು, ಇಲ್ಲಿ ನಿಮ್ಮ ಸಂಗಾತಿಯೊಂದಿದೆ ಸುಂದರವಾದ, ಸ್ಮರಣೀಯವಾದ ಕ್ಷಣವನ್ನು ಕಳೆಯಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ