ಮೊಲ ಅಥವಾ ಬಾತುಕೋಳಿ; ಈ ಚಿತ್ರದಲ್ಲಿ ಮೊದಲು ಕಂಡಿದ್ದೇನು? ಇದು ಹೇಳುತ್ತೆ ನಿಮ್ಮ ವ್ಯಕ್ತಿತ್ವ
ಪರ್ಸನಾಲಿಟಿ ಟೆಸ್ಟ್‌ಗಳಿಗೆ ಸಂಬಂಧಿಸಿದ ಆಪ್ಟಿಕಲ್ ಇಲ್ಯುಷನ್ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಈ ಫೋಟೋಗಳು ಕಣ್ಣುಗಳಿಗೆ ಸವಾಲು ನೀಡುವುದರ ಜೊತೆಗೆ ಆ ಚಿತ್ರದಲ್ಲಿ ನಿಮಗೆ ಏನು ಕಾಣಿಸಿತು ಎಂಬ ಆಧಾರದಲ್ಲಿ ನಿಮ್ಮ ವ್ಯಕ್ತಿತ್ವವನ್ನು ಸಹ ತಿಳಿಯಬಹುದಾಗಿದೆ. ಇದೀಗ ಅಂತಹದ್ದೊಂದು ಫೋಟೋ ಹರಿದಾಡುತ್ತಿದ್ದು, ಮೊಲ ಅಥವಾ ಬಾತುಕೋಳಿ, ಆ ಚಿತ್ರದಲ್ಲಿ ಮೊದಲು ನಿಮಗೆ ಕಂಡಿದ್ದೇನು ಎಂಬ ಆಧಾರದ ಮೇಲೆ ನೀವು ದಯಾಗುಣವನ್ನು ಹೊಂದಿರುವವರೇ ಅಥವಾ ಲೆಕ್ಕಾಚಾರದ ಜೀವನ ನಡೆಸುವವರೇ ಎಂಬುದನ್ನು ತಿಳಿಯಿರಿ.

ನಮ್ಮ ಮಾತು, ಇನ್ನೊಬ್ಬರ ಜೊತೆ ಹೇಗೆ ನಡೆದುಕೊಳ್ಳುತ್ತೇವೆ ಎಂಬ ಆಧಾರದ ಮೇಲೆ ಇತರರರು ನಮ್ಮ ವ್ಯಕ್ತಿತ್ವವನ್ನು (Personality) ಅಳೆಯುತ್ತಾರೆ. ಇದಲ್ಲದೆ ಕಣ್ಣಿನ ಬಣ್ಣ (eye color), ಮೂಗು (nose), ಪಾದದ ಆಕಾರ ಸೇರಿದಂತೆ ದೇಹಾಕಾರದ ಮೂಲಕವೂ ವ್ಯಕ್ತಿತ್ವವನ್ನು ಪರೀಕ್ಷಿಸಬಹುದು. ಇಂತಹ ವ್ಯಕ್ತಿತ್ವ ಪರೀಕ್ಷೆಯ ಸಾಕಷ್ಟು ವಿಷಯಗಳು ಸೋಷಿಯಲ್ ಮೀಡಿಯಾದಲ್ಲಿ (Social Media) ಕಾಣ ಸಿಗುತ್ತಿರುತ್ತದೆ. ಅಷ್ಟೇ ಅಲ್ಲದೆ ಆಪ್ಟಿಕಲ್ ಇಲ್ಯೂಷನ್ (Optical Illusion) ಚಿತ್ರಗಳ ಮೂಲಕವೂ ನಮ್ಮ ನಿಗೂಢ ವ್ಯಕ್ತಿತ್ವವನ್ನು (personality) ಪರೀಕ್ಷಿಸಬಹುದು. ಇದೀಗ ಅಂತಹದ್ದೊಂದು ಫೋಟೋ ಹರಿದಾಡುತ್ತಿದ್ದು, ಈ ಚಿತ್ರದಲ್ಲಿ ಬಾತುಕೋಳಿ (duck) ಅಥವಾ ಮೊಲ (rabbit) ನಿಮಗೆ ಮೊದಲು ಏನು ಕಾಣಿಸಿತು ಎಂಬ ಆಧಾರದ ಮೇಲೆ ನೀವು ಲೆಕ್ಕಾಚಾರದ ಜೀವನವನ್ನು ನಡೆಸುವವರೇ ಎಂಬುದನ್ನು ತಿಳಿಯಿರಿ.
ಫೋಟೋ ನೋಡಿ ವ್ಯಕ್ತಿತ್ವ ಪರೀಕ್ಷಿಸಿ:
ಈ ಆಪ್ಟಿಕಲ್ ಇಲ್ಯೂಷನ್ ಫೋಟೋವನ್ನು ಸೂಕ್ಷವಾಗಿ ಗಮನಿಸಿ. ಇದರಲ್ಲಿ ಕೆಲವರಿಗೆ ಮೊದಲು ಬಾತುಕೋಳಿ ಕಾಣಿಸಬಹುದು. ಇನ್ನೂ ಕೆಲವರಿಗೆ ಮೊಲ ಕಾಣಿಸಬಹುದು. ಮೊದಲು ನಿಮಗೇನು ಕಾಣಿಸಿತು ಎಂಬ ಆಧಾರದ ಮೇಲೆ ನೀವು ಮಾನವೀಯ ಗುಣವುಳ್ಳವರೇ ಅಥವಾ ಲೆಕ್ಕಾಚಾರದ ಜೀವನವನ್ನು ನಡೆಸುವವರೇ ಎಂಬುದನ್ನು ತಿಳಿಯಿರಿ.
ನೀವು ಫೋಟೋದಲ್ಲಿ ಮೊದಲು ಬಾತುಕೋಳಿಯನ್ನು ನೋಡಿದರೆ:
ಈ ಫೋಟೋದಲ್ಲಿ ನೀವು ಮೊದಲು ಬಾತುಕೋಳಿಯನ್ನು ನೋಡಿದರೆ, ನೀವು ಮಾನವೀಯ ಗುಣವನ್ನು ಹೊಂದಿರುವ ವ್ಯಕ್ತಿಯೆಂದು ಅರ್ಥ. ಅಂದರೆ ನಿಮಗೆ ದಯೆ ಮತ್ತು ಸಹಾನುಭೂತಿ ಹೆಚ್ಚಾಗಿರುತ್ತದೆ. ನೀವು ಸಾಮಾನ್ಯವಾಗಿ ತುಂಬಾ ಅರ್ಥಮಾಡಿಕೊಳ್ಳುವ ಮತ್ತು ಎಲ್ಲರನ್ನೂ ಕ್ಷಮಿಸುವ ವ್ಯಕ್ತಿಯಾಗಿರುತ್ತೀರಿ. ಆದರೆ ಯಾರಾದರೂ ಅತಿರೇಕವಾಗಿ ವರ್ತಿಸಿದಾಗ ನೀವು ಕೋಪಗೊಳ್ಳುತ್ತೀರಿ. ಅಷ್ಟೇ ಅಲ್ಲದೆ ನೀವು ಸಂದಿಗ್ಧ ಪರಿಸ್ಥಿತಿಯಲ್ಲಿ ಬೇರೆಯವರ ಮಾತಿಗಿಂತ ನಿಮ್ಮ ಮನಸ್ಸಿನ ಮಾತನ್ನು ನೀವು ಕೇಳುವವರಾಗಿರುತ್ತೀರಿ.
ಇದನ್ನೂ ಓದಿ: ಮೆಡಿಮಿಕ್ಸ್ ಸೋಪ್ ಹೆಣ್ಣುಮಕ್ಕಳಿಗಲ್ಲ! ಮತ್ಯಾರಿಗೆ
ನೀವು ಮೊದಲು ಮೊಲವನ್ನು ನೋಡಿದರೆ:
ಈ ಫೋಟೋದಲ್ಲಿ ನೀವು ಮೊದಲು ಮೊಲವನ್ನು ನೋಡಿದರೆ, ನೀವು ಲೆಕ್ಕಾಚಾರದ ಜೀವನವನ್ನು ನಡೆಸುವವರಾಗಿರುತ್ತೀರಿ. ನೀವು ಭಾವನೆಗಳಿಗೆ ಆಕರ್ಷಿತರಾಗುವ ಬದಲು ಸತ್ಯದ ಆಧಾರದ ಮೇಲೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ. ಅಂದರೆ ನೀವು ತಾರ್ಕಿಕ ವ್ಯಕ್ತಿಗಳಾಗಿರುತ್ತೀರಿ. ಜೊತೆಗೆ ನಿಮಗೆ ಯಾವುದಾದರೂ ಕೆಲಸದ ಬಗ್ಗೆ ಉತ್ಸಾಹವಿಲ್ಲದಿದ್ದರೆ, ಅಂತಹ ಕೆಲಸ ಮಾಡುವುದು ನಿಮಗೆ ತುಂಬಾ ಕಷ್ಟ. ಅಲ್ಲದೆ ನೀವು ನಿಮ್ಮ ಭಾವನೆಗಳನ್ನು ಮರೆಮಾಡುವುದರಲ್ಲಿ ತುಂಬಾ ನಿಪುಣರಾಗಿರುವುದರಿಂದ, ಮಾನಸಿಕವಾಗಿ ಕುಗಿದ್ದರೂ ನೀವು ಎಲ್ಲರೆದುರಲ್ಲಿ ಸಂಪೂರ್ಣವಾಗಿ ಸಾಮಾನ್ಯರಂತೆ ವರ್ತಿಸುತ್ತೀರಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ