- Kannada News Photo gallery Home Remedies For Bad Breath- Follow some of these simple tips to get rid of mouth odour
ಬಾಯಿಯ ದುರ್ವಾಸೆಯನ್ನು ಹೋಗಲಾಗಡಿಲು ಈ ಸಿಂಪಲ್ ಟಿಪ್ಸ್ ಪಾಲಿಸಿ
ಬಾಯಿಯಿಂದ ಬರುವ ದುರ್ವಾಸನೆಯ ಸಮಸ್ಯೆಯಿಂದ ಹಲವರು ಆಗಾಗ್ಗೆ ಮುಜುಗರಕ್ಕೆ ಒಳಗಾಗುತ್ತಾರೆ. ದಿನಲೂ ಚೆನ್ನಾಗಿ ಬ್ರಷ್ ಮಾಡಿದರೂ ಬಾಯಿಯಿಂದ ಕೆಟ್ಟ ವಾಸನೆ ಬರುತ್ತೆ, ಇದರಿಂದ ಇತರರ ಹತ್ತಿರ ಹೋಗಿ ಮಾತನಾಡಲು ಕೂಡಾ ಸಾಧ್ಯವಾಗುವುದಿಲ್ಲ ಎಂದು ಹೇಳುತ್ತಾರೆ. ನೀವು ಕೂಡಾ ಈ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ಈ ಕೆಲವೊಂದು ಸರಳ ಟಿಪ್ಸ್‌ಗಳನ್ನು ಪಾಲಿಸುವ ಮೂಲಕ ಬಾಯಿ ದುರ್ವಾಸನೆಯಿಂದ ಮುಕ್ತಿಯನ್ನು ಪಡೆಯಿರಿ.
Updated on: Apr 15, 2025 | 5:48 PM

ಲವಂಗ ಅಗಿಯಿರಿ: ಲವಂಗವು ಒಂದು ಮಸಾಲೆ ಪದಾರ್ಥವಾಗಿದ್ದು, ಇದನ್ನು ಅಡುಗೆ ಮಾತ್ರವಲ್ಲದೆ ಮನೆಮದ್ದುಗಳಲ್ಲೂ ಬಳಸಲಾಗುತ್ತದೆ. ಬ್ಯಾಕ್ಟೀರಿಯಾ ವಿರೋದಿ ಗುಣಗಳನ್ನು ಹೊಂದಿರುವ ಲವಂಗವನ್ನು ಜಗಿಯುವ ಮೂಲಕ ಬಾಯಿ ದುರ್ವಾಸನೆಯ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ಸೋಂಪು ಜಗಿಯಿರಿ: ಸೋಂಪು ಕೂಡಾ ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸಲು ಸಹಾಯಕವಾಗಿದೆ. ಪ್ರತಿದಿನ ನೀವು ಊಟದ ಬಳಿಕ ಸ್ವಲ್ಪ ಸೋಂಪು ಕಾಳುಗಳನ್ನು ಜಗಿಯುವುದರಿಂದ ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸುವುದರ ಜೊತೆಗೆ ಹೊಟ್ಟೆ ಸಂಬಂಧಿ ಸಮಸ್ಯೆಗಳಿಂದ ದೂರವಿರಬಹುದು.

ಪುದೀನಾ:ಬಾಯಿಯ ದುರ್ವಾಸನೆಯನ್ನು ತೊಡೆದುಹಾಕಲು, ನೀವು ಪುದೀನಾ ಎಲೆಗಳನ್ನು ಸಹ ಅಗಿಯಬಹುದು. ಇದು ಬಾಯಿಯ ದುರ್ವಾಸನೆಯನ್ನು ಕಡಿಮೆ ಮಾಡುತ್ತದೆ ಮತ್ತು ನಿಮಗೆ ತಾಜಾತನದ ಅನುಭವವನ್ನು ನೀಡುತ್ತದೆ.

ಏಲಕ್ಕಿ: ಬಾಯಿಯಿಂದ ಬರುವ ದುರ್ವಾಸನೆಯನ್ನು ತೊಡೆದು ಹಾಕಲು ಏಲಕ್ಕಿಯನ್ನು ಸಹ ಜಗಿಯಬಹುದು. ನೀವು ಊಟದ ನಂತರ ಸೋಂಪು ಕಾಳುಗಳನ್ನು ತಿನ್ನುವಂತೆ ಏಲಕ್ಕಿಯನ್ನು ಸಹ ಜಗಿಯಬಹುದು. ಇದೊಂದು ನೈಸರ್ಗಿಕ ಮೌತ್ ಫ್ರೆಶ್ನರ್ ಅಂತಾನೇ ಹೇಳಬಹುದು.

ಇದಲ್ಲದೆ ಒಂದು ಲೋಟ ನೀರಿಗೆ ಶುಂಠಿ ರಸ ಬೆರೆಸಿ ಬೆಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ಹೀಗೆ ಮೂರು ಬಾರಿ ಬಾಯಿ ಮುಕ್ಕಳಿಸುವುದರಿಂದ ಬಾಯಿ ದುರ್ವಾಸನೆ ನಿವಾರಣೆಯಾಗುತ್ತದೆ. ಅದೇ ರೀತಿ, ನಿಂಬೆ ರಸವನ್ನು ಸಹ ಬಳಸಿ ಬಾಯಿ ಮುಕ್ಕಳಿಸುವುದರಿಂದಲೂ ಬಾಯಿಯ ದುರ್ವಾಸನೆಯನ್ನು ತೊಡೆದು ಹಾಕಬಹುದು.



















