ಪ್ರಧಾನಿಯಿಂದ ಮೊದಲ ಬಾರಿ ನೇರ ಸಮೀಕ್ಷೆ; ನಮೋ ಆ್ಯಪ್ ಸರ್ವೆಯಲ್ಲಿ ಭಾಗವಹಿಸಲು ಜನರಿಗೆ ಮನವಿ
ಕಳೆದ 11 ವರ್ಷಗಳಲ್ಲಿ ಭಾರತದ ಬೆಳವಣಿಗೆಯ ಪ್ರಯಾಣದ ಕುರಿತು ನಮೋ ಅಪ್ಲಿಕೇಶನ್‌ನಲ್ಲಿ ಸಮೀಕ್ಷೆಯನ್ನು ನಡೆಸಲಾಗುತ್ತಿದೆ. ಕೇಂದ್ರ ಸರ್ಕಾರದಿಂದ ನೇರವಾಗಿ ನಡೆಯುತ್ತಿರುವ ಮೊದಲ ಸಮೀಕ್ಷೆ ಇದಾಗಿದ್ದು, ಇದರಲ್ಲಿ ಭಾಗವಹಿಸುವಂತೆ ಪ್ರಧಾನಿ ಮೋದಿ ನಾಗರಿಕರನ್ನು ಕೋರಿದ್ದಾರೆ. 'ಜನ ಮನ ಸಮೀಕ್ಷೆ' ಎಂದು ಕರೆಯಲ್ಪಡುವ ನಮೋ ಅಪ್ಲಿಕೇಶನ್‌ನಲ್ಲಿ ಆಡಳಿತದ ಕುರಿತು ಪ್ರತಿಕ್ರಿಯೆ ನೀಡಲು ಜನರು ತಮ್ಮ ರಾಜ್ಯ, ಕ್ಷೇತ್ರವನ್ನು ಹೆಸರಿಸಲು ಮತ್ತು ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ಕೇಳಲಾಗುತ್ತದೆ.

ನವದೆಹಲಿ, ಜೂನ್ 9: ನರೇಂದ್ರ ಮೋದಿ (PM Narendra Modi) ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ಕಳೆದ 11 ವರ್ಷಗಳಲ್ಲಿ ಭಾರತದ ಬೆಳವಣಿಗೆಯ ಪ್ರಯಾಣದ ಕುರಿತು ನಮೋ ಅಪ್ಲಿಕೇಶನ್‌ನಲ್ಲಿ (NaMo App) ಸಮೀಕ್ಷೆಯಲ್ಲಿ ಭಾಗವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಎಲ್ಲರನ್ನೂ ಒತ್ತಾಯಿಸಿದ್ದಾರೆ. ಕಳೆದ 11 ವರ್ಷಗಳಲ್ಲಿ ಭಾರತದ ಬೆಳವಣಿಗೆಯ ಪ್ರಯಾಣದ ಕುರಿತು ಜನ ಮನ ಸಮೀಕ್ಷೆಯಲ್ಲಿ (Jan Man Survey) ಜನರು ಭಾಗವಹಿಸಬಹುದಾದ ಪೋರ್ಟಲ್‌ನ ಲಿಂಕ್ ಅನ್ನು ಸಹ ಮೋದಿ ಹಂಚಿಕೊಂಡಿದ್ದಾರೆ.
“ನಿಮ್ಮ ಅಭಿಪ್ರಾಯಗಳು ಅತ್ಯಂತ ಮುಖ್ಯ! ನಮೋ ಅಪ್ಲಿಕೇಶನ್‌ನಲ್ಲಿ ಈ ಸಮೀಕ್ಷೆಯಲ್ಲಿ ಭಾಗವಹಿಸಿ ಮತ್ತು ಕಳೆದ 11 ವರ್ಷಗಳಲ್ಲಿ ಭಾರತದ ಬೆಳವಣಿಗೆಯ ಪ್ರಯಾಣವನ್ನು ನೀವು ಹೇಗೆ ನೋಡುತ್ತೀರಿ ಎಂದು ನಮಗೆ ತಿಳಿಸಿ” ಎಂದು ಪ್ರಧಾನಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ರಸಪ್ರಶ್ನೆಗಳು, ಸಮೀಕ್ಷೆಗಳು ಮತ್ತು ಮಾಹಿತಿ ನೀಡುವ, ತೊಡಗಿಸಿಕೊಳ್ಳುವ ಮತ್ತು ಪ್ರೇರೇಪಿಸುವ ಇತರ ಸ್ವರೂಪಗಳನ್ನು ಒಳಗೊಂಡಂತೆ ಸರ್ಕಾರದ ಸಾಧನೆಗಳನ್ನು ಸಂವಾದಾತ್ಮಕ ರೀತಿಯಲ್ಲಿ ಪ್ರಸ್ತುತಪಡಿಸುವ ನಮೋ ಅಪ್ಲಿಕೇಶನ್ ಮೂಲಕ ಈ ಸಮೀಕ್ಷೆಯನ್ನು ನಡೆಸಲಾಗುತ್ತಿದೆ. ಇದರಲ್ಲಿ ಭಾಗವಹಿಸಲು ಮೋದಿ ನಾಗರಿಕರನ್ನು ಪ್ರೋತ್ಸಾಹಿಸಿದರು.
ಇದನ್ನೂ ಓದಿ: Nari Shakti: ಭಾರತದಲ್ಲಿ 11 ವರ್ಷಗಳ ಮಹಿಳಾ ಸಬಲೀಕರಣ, ಪ್ರಧಾನಿ ಮೋದಿ ನೇತೃತ್ವದಲ್ಲಾದ ಬದಲಾವಣೆಗಳಿವು
ನಮೋ ಅಪ್ಲಿಕೇಶನ್ ಮತ್ತು ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ವೀಡಿಯೊಗಳು, ಇನ್ಫೋಗ್ರಾಫಿಕ್ಸ್ ಮತ್ತು ಲೇಖನಗಳಂತಹ ವಿವಿಧ ಆಕರ್ಷಕ ಸ್ವರೂಪಗಳ ಮೂಲಕ ಭಾರತದ ವಿಕಾಸ ಯಾತ್ರೆಯನ್ನು ಅನ್ವೇಷಿಸಲು ಪ್ರಧಾನಿ ಜನರನ್ನು ಆಹ್ವಾನಿಸಿದರು.
ಆರ್ಥಿಕ ಬೆಳವಣಿಗೆಯಿಂದ ಸಾಮಾಜಿಕ ಉನ್ನತಿಯವರೆಗೆ, ಕೇಂದ್ರ ಸರ್ಕಾರವು ಜನ-ಕೇಂದ್ರಿತ, ಅಂತರ್ಗತ ಮತ್ತು ಸರ್ವತೋಮುಖ ಪ್ರಗತಿಗೆ ಆದ್ಯತೆ ನೀಡಿದೆ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು.
Your views matter the most! Take part in this survey on the NaMo App and let us know how you view India’s growth journey over the last 11 years. #11YearsOfSeva https://t.co/HSPUQwa4g1
— Narendra Modi (@narendramodi) June 9, 2025
ಯಾವ ರೀತಿಯ ಪ್ರಶ್ನೆಗಳಿವೆ?:
ನರೇಂದ್ರ ಮೋದಿ ಆಪ್‌ನಲ್ಲಿ, ‘ಜನ ಮನ ಸಮೀಕ್ಷೆ’ ಎಂದು ಕರೆಯಲ್ಪಡುವ ಈ ಕಾರ್ಯಕ್ರಮದಲ್ಲಿ, ಜನರು ತಮ್ಮ ರಾಜ್ಯ ಮತ್ತು ಕ್ಷೇತ್ರವನ್ನು ಹೆಸರಿಸಲು ಮತ್ತು ಆಡಳಿತದ ಕುರಿತು ಪ್ರತಿಕ್ರಿಯೆ ನೀಡಲು ಕೆಲವು ಪ್ರಶ್ನೆಗಳಿಗೆ ಉತ್ತರಿಸಲು ಕೇಳಲಾಗುತ್ತದೆ. ಇದರಲ್ಲಿ ಯಾವೆಲ್ಲ ರೀತಿಯ ಪ್ರಶ್ನೆಗಳಿವೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.
ಆಪರೇಷನ್ ಸಿಂಧೂರ್ ಮೇಲೆ ಕೇಂದ್ರೀಕರಿಸಿದ ಮೊದಲ ಪ್ರಶ್ನೆಯು ಕಳೆದ ದಶಕದಲ್ಲಿ ಭಯೋತ್ಪಾದನಾ ನಿಗ್ರಹಕ್ಕೆ ಭಾರತದ ಪ್ರತಿಕ್ರಿಯೆಯ ಬಗ್ಗೆ ಇದೆ. ಎರಡನೆಯ ಪ್ರಶ್ನೆಯೂ ಸಹ ಭದ್ರತೆಗೆ ಸಂಬಂಧಿಸಿದೆ. ರಾಷ್ಟ್ರೀಯ ಭದ್ರತಾ ಬೆದರಿಕೆಗಳ ವಿರುದ್ಧ ಸರ್ಕಾರದ ಕ್ರಮಗಳನ್ನು ಪರಿಗಣಿಸಿ ನಾಗರಿಕರಾಗಿ ನೀವು ಎಷ್ಟು ಸುರಕ್ಷಿತ ಎಂದು ನೀವು ಭಾವಿಸುತ್ತೀರಿ? ಎಂದು ಕೇಳಲಾಗಿದೆ.
ಇದನ್ನೂ ಓದಿ: 11 ವರ್ಷಗಳಲ್ಲಿ ಭಾರತದ ಜನರ ಬದುಕನ್ನು ಮೋದಿ ನೇತೃತ್ವದ ಸರ್ಕಾರ ಹೇಗೆ ಬದಲಿಸಿದೆ?
ಭಾರತದ ಧ್ವನಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೊದಲಿಗಿಂತ ಹೆಚ್ಚು ಕೇಳಲಾಗುತ್ತಿದೆಯೇ ಮತ್ತು ಗೌರವಿಸಲಾಗುತ್ತಿದೆಯೇ ಎಂದು ನಮೋ ಆಪ್ ಕೇಳಿದೆ. ವಿಕಾಸ ಅಥವಾ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಿದ ಸಮೀಕ್ಷೆಯು, 2014ರಿಂದ ಈ ಕೆಳಗಿನ ಯಾವ ಬೆಳವಣಿಗೆಗಳನ್ನು ನೀವು ಭಾರತಕ್ಕೆ ಹೆಚ್ಚು ಮಹತ್ವದ್ದಾಗಿ ಪರಿಗಣಿಸುತ್ತೀರಿ? ಎಂದು ಇನ್ನೊಂದು ಪ್ರಶ್ನೆ ಕೇಳಲಾಗಿದೆ.
ಕಳೆದ 12 ತಿಂಗಳುಗಳಲ್ಲಿ ಯಾವ ಡಿಜಿಟಲ್ ಇಂಡಿಯಾ ಉತ್ಪನ್ನಗಳು ಅಥವಾ ಸೇವೆಗಳನ್ನು ಹೆಚ್ಚು ಬಳಸಲಾಗಿದೆ ಎಂಬುದನ್ನು ತಿಳಿಯಲು ಸಮೀಕ್ಷೆಯು ಕೇಳಿದೆ. ಇದರಲ್ಲಿ ಡಿಜಿಲಾಕರ್, ಉಮಾಂಗ್, ಆರೋಗ್ಯ ಸೇತು, BHIM UPI, ಇ-ಆಸ್ಪತ್ರೆ @ NIC, ABHA ID, DBT, ಡಿಜಿ ಯಾತ್ರಾ ಮುಂತಾದ 10 ಆಯ್ಕೆಗಳನ್ನು ನೀಡಲಾಗಿದೆ.
ಅದೇ ರೀತಿ, ಈ ಅಪ್ಲಿಕೇಶನ್ ಮಹಿಳೆಯರಿಗೆ ಕೂಡ ಪ್ರಶ್ನೆಗಳನ್ನು ಹೊಂದಿದೆ. ಮಹಿಳಾ ನೇತೃತ್ವದ ಅಭಿವೃದ್ಧಿಯ ದೃಷ್ಟಿಕೋನದಿಂದ ಮಹಿಳೆಯರು ಕಂಡ ಅತ್ಯಂತ ಮಹತ್ವದ ಸುಧಾರಣೆಗಳು ಯಾವುವು? ಯುವಕರ ಬಗ್ಗೆ, ಸಮೀಕ್ಷೆಯು ಸ್ಕಿಲ್ ಇಂಡಿಯಾ, ಸ್ಟಾರ್ಟ್-ಅಪ್ ಇಂಡಿಯಾ ಮತ್ತು ಶಿಕ್ಷಣದಲ್ಲಿನ ಸುಧಾರಣೆಗಳಂತಹ ಸರ್ಕಾರಿ ಉಪಕ್ರಮಗಳು ಯುವಜನರಿಗೆ ಅವಕಾಶಗಳನ್ನು ವಿಸ್ತರಿಸಿದೆಯೇ ಎಂಬ ಬಗ್ಗೆ ಪ್ರಶ್ನಿಸಲಾಗಿದೆ.
‘ಮೇಕ್ ಇನ್ ಇಂಡಿಯಾ’ ಉಪಕ್ರಮವು ಉತ್ಪಾದನಾ ವಲಯದ ಮೇಲೆ ಹೇಗೆ ಪ್ರಭಾವ ಬೀರಿದೆ? ಎಂದು ಕೂಡ ಪ್ರಶ್ನಿಸಲಾಗಿದೆ. GST, ರಾಷ್ಟ್ರೀಯ ಶಿಕ್ಷಣ ನೀತಿ, ಆರ್ಥಿಕ ಸೇರ್ಪಡೆ, ಭವಿಷ್ಯಕ್ಕೆ ಸಿದ್ಧವಾದ ಮೂಲಸೌಕರ್ಯ, ಸ್ವಾವಲಂಬಿ ಉತ್ಪಾದನೆ, ಡಿಜಿಟಲೀಕರಣ ಮತ್ತು ಆಡಳಿತದಲ್ಲಿ ಪಾರದರ್ಶಕತೆ ಮತ್ತು ರಾಷ್ಟ್ರೀಯ ಏಕತೆಯನ್ನು ಬಲಪಡಿಸುವುದು ಇವುಗಳಲ್ಲಿ ಯಾವುದು ನಿಜವಾಗಿಯೂ ಆಡಳಿತಕ್ಕೆ ಪರಿವರ್ತನೆ ತಂದಿದೆ ಎಂದು NaMo ಅಪ್ಲಿಕೇಶನ್ ಕೇಳಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ