AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Narendra Modi: ನಾನಿನ್ನೂ ಅಂಥದ್ದೇನೂ ಮಾಡಿಲ್ಲ,ಇಷ್ಟಕ್ಕೆ ಭಯ ಪಟ್ರೆ ಹೇಗೆ? : ನರೇಂದ್ರ ಮೋದಿ

1947ರಲ್ಲಿ ಭಾರತ ವಿಭಜನೆಯಾದಾಗ ಸರಪಳಿಗಳನ್ನು ಕತ್ತರಿಸುವ ಬದಲು ತೋಳುಗಳನ್ನು ಕತ್ತರಿಸಲಾಯಿತು, ದೇಶವನ್ನು ಮೂರು ಭಾಗಗಳಾಗಿ ವಿಂಗಡಿಸಲಾಯಿತು. ಅದೇ ರಾತ್ರಿ ಕಾಶ್ಮೀರದ ಮಣ್ಣಿನಲ್ಲಿ ಮೊದಲ ಭಯೋತ್ಪಾದಕ ದಾಳಿ ನಡೆಯಿತು ಎಂದು ಪ್ರಧಾನಿ ಮೋದಿ ಹೇಳಿದರು. 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಪಡಿಸಲು ಮತ್ತು ಆರ್ಥಿಕತೆಯನ್ನು ತಕ್ಷಣವೇ ನಾಲ್ಕನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಕೊಂಡೊಯ್ಯಲು, ನಾವು ಇನ್ನು ಮುಂದೆ ಯಾವುದೇ ವಿದೇಶಿ ವಸ್ತುಗಳನ್ನು ಬಳಸಬೇಕಿಲ್ಲ ಎಂದರು.

Narendra Modi: ನಾನಿನ್ನೂ ಅಂಥದ್ದೇನೂ ಮಾಡಿಲ್ಲ,ಇಷ್ಟಕ್ಕೆ ಭಯ ಪಟ್ರೆ ಹೇಗೆ? : ನರೇಂದ್ರ ಮೋದಿ
ನರೇಂದ್ರ ಮೋದಿ Image Credit source: PTI
ನಯನಾ ರಾಜೀವ್
|

Updated on:May 27, 2025 | 2:14 PM

Share

ಗಾಂಧಿನಗರ, ಮೇ 27: ‘‘ನಾನಿನ್ನು ಅಂಥದ್ದೇನೂ ಮಾಡೇ ಇಲ್ಲ, ಇಷ್ಟಕ್ಕೆ ಭಯ ಪಟ್ಟರೆ ಹೇಗೆ’’ ಎಂದು ಪ್ರಧಾನಿ ನರೇಂದ್ರ ಮೋದಿ(Narrendra Modi)  ಹೇಳಿದ್ದಾರೆ. ಗುಜರಾತ್​ನ ಗಾಂಧಿನಗರದಲ್ಲಿ ಇಂದು ಮಾತನಾಡಿರುವ ಅವರು, ನಾನು ಪಾಕಿಸ್ತಾನಕ್ಕೆ ಹೋಗುವ ನೀರು ನಿಲ್ಲಿಸಿ ಅದರಿಂದ ಕಸ ತೆಗೆದು ಅಣೆಕಟ್ಟನ್ನು ಸ್ವಚ್ಛಗೊಳಿಸಲು ಪ್ರಯತ್ನಿಸುತ್ತಿದ್ದೇನೆ, ಆದರೆ ಇಷ್ಟಕ್ಕೆ ಪಾಕಿಸ್ತಾನ ಬೆವರುತ್ತಿದೆ ಎಂದು ಹೇಳಿದರು.

1947ರಲ್ಲಿ ಭಾರತ ವಿಭಜನೆಯಾದಾಗ ಸರಪಳಿಗಳನ್ನು ಕತ್ತರಿಸುವ ಬದಲು ತೋಳುಗಳನ್ನು ಕತ್ತರಿಸಲಾಯಿತು, ದೇಶವನ್ನು ವಿಂಗಡಿಸಲಾಯಿತು. ಅದೇ ರಾತ್ರಿ ಕಾಶ್ಮೀರದ ಮಣ್ಣಿನಲ್ಲಿ ಮೊದಲ ಭಯೋತ್ಪಾದಕ ದಾಳಿ ನಡೆಯಿತು ಎಂದರು.

ಇದನ್ನೂ ಓದಿ
Image
ನಮ್ಮ ಹೆಣ್ಣುಮಕ್ಕಳ ಕುಂಕುಮ ಅಳಿಸಿದವರನ್ನು ಹೊಸಕಿ ಹಾಕಿದ್ದೇವೆ: ಮೋದಿ
Image
ತನ್ನ ಅಸ್ತಿತ್ವಕ್ಕೆ ಭಾರತವೇ ದೊಡ್ಡ ಬೆದರಿಕೆ ಎಂದುಕೊಂಡಿದೆ ಪಾಕಿಸ್ತಾನ
Image
ಯೂನಸ್ ಬಾಂಗ್ಲಾದೇಶವನ್ನು ಅಮೆರಿಕಕ್ಕೆ ಮಾರುತ್ತಿದ್ದಾರೆ: ಶೇಖ್ ಹಸೀನಾ
Image
ಪಾಕ್​ ಸರ್ಕಾರದೊಂದಿಗೆ ಮಾತನಾಡುವುದು ನಿಷ್ಪ್ರಯೋಜಕ: ಇಮ್ರಾನ್ ಖಾನ್

2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಪಡಿಸಲು ಮತ್ತು ಆರ್ಥಿಕತೆಯನ್ನು ತಕ್ಷಣವೇ ನಾಲ್ಕನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಕೊಂಡೊಯ್ಯಲು, ನಾವು ಇನ್ನು ಮುಂದೆ ಯಾವುದೇ ವಿದೇಶಿ ವಸ್ತುಗಳನ್ನು ಬಳಸಬೇಕಿಲ್ಲ ಎಂದರು.

ಮತ್ತಷ್ಟು ಓದಿ: ಆರಾಮಾಗಿ ಕೂತು ರೊಟ್ಟಿ ತಿನ್ನಿ, ಇಲ್ಲದಿದ್ದರೆ ನಮ್ಮ ಗುಂಡೇಟು ತಿನ್ನಿ; ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ

ವಿದೇಶಿ ವಸ್ತುಗಳಿಂದ ಎಷ್ಟೇ ಲಾಭ ಗಳಿಸಿದರೂ, ಯಾವುದೇ ವಿದೇಶಿ ಉತ್ಪನ್ನವನ್ನು ಮಾರಾಟ ಮಾಡುವುದಿಲ್ಲ ಎಂದು ಪ್ರತಿ ಹಳ್ಳಿಯ ವ್ಯಾಪಾರಿಗಳಿಂದ ಪ್ರಮಾಣ ಮಾಡಿಸಿಕೊಳ್ಳಬೇಕು. ರಾಜ್ಯದ ಕಲ್ಯಾಣಕ್ಕಾಗಿ ನಾವು ದೀರ್ಘಾವಧಿಯ ದೃಷ್ಟಿಕೋನದೊಂದಿಗೆ ಕೆಲಸ ಮಾಡಿದರೆ, ಉತ್ತಮ ಫಲಿತಾಂಶಗಳು ಬರುತ್ತವೆ ಎಂದು ಪ್ರಧಾನಿ ಹೇಳಿದರು.

ಭಾರತದ ‘ವಸುಧೈವ ಕುಟುಂಬಕಂ’ ಎಂಬ ಮನೋಭಾವವನ್ನು ಒತ್ತಿ ಹೇಳಿದ ಮೋದಿ, ನಮ್ಮ ನೆರೆಹೊರೆಯವರ ಶಾಂತಿ ಮತ್ತು ಸಂತೋಷವನ್ನು ನಾವು ಬಯಸುತ್ತೇವೆ ಎಂದು ಹೇಳಿದರು. ಭಾರತವು ಸಾವಿರಾರು ವರ್ಷಗಳಿಂದ ಶಾಂತಿ ಮತ್ತು ವಿಶ್ವ ಕಲ್ಯಾಣದ ಬಗ್ಗೆ ಮಾತನಾಡುತ್ತಿದೆ.

ಆದರೆ ದೇಶದ ಶಕ್ತಿಗೆ ಸವಾಲು ಎದುರಾದಾಗ, ಈ ವೀರರ ಭೂಮಿಗೆ ಹೇಗೆ ಪ್ರತಿಕ್ರಿಯಿಸಬೇಕೆಂದು ತಿಳಿದಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನದಿಗಳ ಶುದ್ಧೀಕರಣವನ್ನು ನಿಷೇಧಿಸುವ 1960 ರ ಸಿಂಧೂ ಜಲ ಒಪ್ಪಂದವನ್ನು ಅವರು ಉಲ್ಲೇಖಿಸಿದರು. ಇದರಿಂದಾಗಿ, ಈ ನದಿಗಳನ್ನು 60 ವರ್ಷಗಳಲ್ಲಿ ಸ್ವಚ್ಛಗೊಳಿಸಲಾಗಿಲ್ಲ ಮತ್ತು ದೇಶವಾಸಿಗಳಿಗೆ ನ್ಯಾಯಯುತವಾಗಿ ಸಿಗಬೇಕಾದ ನೀರು ಸಿಗಲಿಲ್ಲ.

ಆಪರೇಷನ್ ಸಿಂಧೂರ್​ ಕುರಿತು ಮಾತನಾಡಿರುವ ಮೋದಿ, 22 ನಿಮಿಷಗಳಲ್ಲಿ ಉಗ್ರರ 9 ಅಡಗುತಾಣಗಳನ್ನು ನಾಶಪಡಿಸಲಾಯಿತು. ಎಲ್ಲವೂ ಕ್ಯಾಮರಾ ಮುಂದೆಯೇ ನಡೆದಿದೆ. ಹೀಗಾಗಿ ಯಾರೂ ಕೂಡ ಪುರಾವೆ ಎಲ್ಲಿದೆ ಎಂದು ಪ್ರಶ್ನೆ ಮಾಡುವಂತಿಲ್ಲ ಎಂದರು.

1960 ರಲ್ಲಿ ಸಹಿ ಹಾಕಲಾದ ಸಿಂಧೂ ಜಲ ಒಪ್ಪಂದದ ವಿವರಗಳನ್ನು ನೀವು ನೋಡಿದರೆ, ನೀವು ಆಘಾತಕ್ಕೊಳಗಾಗುತ್ತೀರಿ, ಜಮ್ಮು ಮತ್ತು ಕಾಶ್ಮೀರದಲ್ಲಿ ನಿರ್ಮಿಸಲಾದ ಅಣೆಕಟ್ಟುಗಳನ್ನು ಸ್ವಚ್ಛಗೊಳಿಸದಿರಲು ಸಹ ನಿರ್ಧರಿಸಲಾಯಿತು. 60 ವರ್ಷಗಳಿಂದ ಅಣೆಕಟ್ಟಿನ ಗೇಟುಗಳನ್ನು ತೆರೆಯಲಾಗಿಲ್ಲ ಎಂದು ಮೋದಿ ಮಾಹಿತಿ ನೀಡಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 2:14 pm, Tue, 27 May 25

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ