ಆರಾಮಾಗಿ ಕೂತು ರೊಟ್ಟಿ ತಿನ್ನಿ, ಇಲ್ಲದಿದ್ದರೆ ನಮ್ಮ ಗುಂಡೇಟು ತಿನ್ನಿ; ಪಾಕಿಸ್ತಾನಕ್ಕೆ ಮೋದಿ ಖಡಕ್ ಎಚ್ಚರಿಕೆ
ಪ್ರಧಾನಿ ನರೇಂದ್ರ ಮೋದಿ ಇಂದು ಪಾಕಿಸ್ತಾನದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಭಯೋತ್ಪಾದನೆಯನ್ನು ಪಾಕಿಸ್ತಾನ ರಾಷ್ಟ್ರದ ಒಂದು ಸಾಧನವಾಗಿ ಪರಿಗಣಿಸುತ್ತಿದೆ ಎಂದು ಆರೋಪಿಸಿದ್ದಾರೆ. ಭಾರತ ಪ್ರವಾಸೋದ್ಯಮದಲ್ಲಿ ನಂಬಿಕೆ ಇಡುತ್ತದೆ. ಪ್ರವಾಸೋದ್ಯಮ ಜನರನ್ನು ಒಟ್ಟುಗೂಡಿಸುತ್ತದೆ. ಪಾಕಿಸ್ತಾನದಂತಹ ದೇಶವು ಭಯೋತ್ಪಾದನೆಯನ್ನು ಪ್ರವಾಸೋದ್ಯಮ ಎಂದು ಭಾವಿಸುತ್ತದೆ ಎಂದು ಮೋದಿ ಹೇಳಿದ್ದಾರೆ.
ಕಚ್, ಮೇ 26: ಇಂದು ಗುಜರಾತ್‌ನ ಭುಜ್ ಜಿಲ್ಲೆಯಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಪಾಕಿಸ್ತಾನಕ್ಕೆ ಕಠಿಣ ಸಂದೇಶ ರವಾನಿಸಿದ್ದಾರೆ. ಭಯೋತ್ಪಾದನೆಯ ನಿರಂತರ ಬೆದರಿಕೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ರಾಷ್ಟ್ರೀಯ ಭದ್ರತೆಯ ಬಗ್ಗೆ ಭಾರತದ ಅಚಲ ನಿಲುವನ್ನು ಒತ್ತಿ ಹೇಳಿದರು. “ಸುಖ್ ಚೈನ್ ಕಿ ಜಿಂದಗಿ ಜಿಯೋ, ರೋಟಿ ಖಾವೋ, ವರ್ನಾ ಮೇರಿ ಗೋಲಿ ತೋ ಹೈ” (ಶಾಂತಿಯುತವಾಗಿ ಜೀವನ ನಡೆಸಿ, ಆರಾಮಾಗಿ ಕುಳಿತು ರೊಟ್ಟಿ ತಿನ್ನಿರಿ, ಇಲ್ಲದಿದ್ದರೆ ನನ್ನ ಗುಂಡೇಟು ತಿನ್ನಲು ಸಿದ್ಧರಾಗಿ) ಎಂದು ಮೋದಿ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಈ ಕಟು ಎಚ್ಚರಿಕೆಯು ಆಕ್ರಮಣ ಮತ್ತು ಭಯೋತ್ಪಾದನೆಯ ಯಾವುದೇ ಕೃತ್ಯಗಳಿಗೆ ದೃಢವಾಗಿ ಪ್ರತಿಕ್ರಿಯಿಸುವ ಭಾರತದ ಬದ್ಧತೆಯನ್ನು ಒತ್ತಿಹೇಳುತ್ತದೆ.
ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಆಪರೇಷನ್ ಸಿಂಧೂರ್ ಅನ್ನು ಉಲ್ಲೇಖಿಸಿದ ಮೋದಿ, ಭಯೋತ್ಪಾದನೆಯ ಬಗ್ಗೆ ಭಾರತದ ಶೂನ್ಯ-ಸಹಿಷ್ಣುತೆ ನೀತಿಯನ್ನು ಪಾಕಿಸ್ತಾನಕ್ಕೆ ನೆನಪಿಸಿದರು. “ಪಾಕಿಸ್ತಾನ ಭಯೋತ್ಪಾದನೆಯ ವಿರುದ್ಧ ಕ್ರಮ ಕೈಗೊಳ್ಳುತ್ತದೆ ಎಂಬ ನಿರೀಕ್ಷೆಯಲ್ಲಿ ನಾವು 15 ದಿನ ಕಾದೆವು. ಆದರೆ ಪಾಕ್ ಯಾವುದೇ ಕ್ರಮ ಕೈಗೊಳ್ಳದಿದ್ದಾಗ ನಾವು ನಮ್ಮ ಸಶಸ್ತ್ರ ಪಡೆಗಳಿಗೆ ಮುಕ್ತ ಹಸ್ತ ನೀಡಿದೆ. ಭಾರತವನ್ನು ರಕ್ತಸಿಕ್ತಗೊಳಿಸುವವರಿಗೆ ನಾವು ಅದೇ ಭಾಷೆಯಲ್ಲಿ ಪ್ರತಿಕ್ರಿಯಿಸಿದ್ದೇವೆ. ಪಾಕಿಸ್ತಾನದೊಳಗೆ ನುಗ್ಗಿ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದ್ದೇವೆ. ನಮ್ಮ ಮೇಲೆ ಕಣ್ಣು ಹಾಕುವವರನ್ನು, ಭಾರತೀಯರ ರಕ್ತ ಚೆಲ್ಲುವವರನ್ನು ನಾವು ಬಿಡುವ ಮಾತೇ ಇಲ್ಲ” ಎಂದು ಅವರು ಹೇಳಿದ್ದಾರೆ.
ऑपरेशन सिंदूर में हमारी पराक्रमी सेना के सटीक प्रहार से कैसे कुछ ही घंटों में पाकिस्तान घुटने टेकने पर मजबूर हो गया, ये हर देशवासी को जरूर जानना चाहिए… pic.twitter.com/6ND7mlUTMu
— Narendra Modi (@narendramodi) May 26, 2025
ಇದನ್ನೂ ಓದಿ: ಮೋದಿಯನ್ನು ಎದುರಿಸುವುದು ಇಷ್ಟು ಕಷ್ಟವೆಂದು ಉಗ್ರರು ಕನಸಿನಲ್ಲಿಯೂ ಊಹಿಸಿರುವುದಿಲ್ಲ: ಮೋದಿ
ಪಾಕಿಸ್ತಾನದ ಯುವಕರು ತಮ್ಮ ದೇಶವನ್ನು ಭಯೋತ್ಪಾದನೆಯ ಹಿಡಿತದಿಂದ ಮುಕ್ತಗೊಳಿಸಲು ಮುಂದೆ ಬರಬೇಕು. ಪಹಲ್ಗಾಮ್ ದಾಳಿಗೆ ಆಪರೇಷನ್ ಸಿಂಧೂರ್ ನೇರ ಪ್ರತಿಕ್ರಿಯೆಯಾಗಿದೆ. ನಮ್ಮನ್ನು ಪ್ರಚೋದಿಸಿದರೆ ಭಾರತ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ಮಾಡಲು ಹಿಂಜರಿಯುವುದಿಲ್ಲ. “ಭಾರತ ಪ್ರವಾಸೋದ್ಯಮದಲ್ಲಿ ನಂಬಿಕೆ ಇಡುತ್ತದೆ. ಪ್ರವಾಸೋದ್ಯಮ ಜನರನ್ನು ಒಟ್ಟುಗೂಡಿಸುತ್ತದೆ ಎಂದು ನಂಬುತ್ತದೆ. ಆದರೆ ಪಾಕಿಸ್ತಾನದಂತಹ ದೇಶವು ಭಯೋತ್ಪಾದನೆಯನ್ನೇ ಪ್ರವಾಸೋದ್ಯಮ ಎಂದು ಭಾವಿಸುತ್ತದೆ. ಇದು ಜಗತ್ತಿಗೆ ದೊಡ್ಡ ಆತಂಕವಾಗಿದೆ” ಎಂದು ಪ್ರಧಾನಿ ಮೋದಿ ಆತಂಕ ಹೊರಹಾಕಿದ್ದಾರೆ.
ऑपरेशन सिंदूर में सेना के शौर्य और पराक्रम ने भुज के मेरे परिवारजनों को गर्व से भर दिया है। रोड शो में दिखा उनका जोश एक नई ऊर्जा भर गया है। pic.twitter.com/ks6oiKZ9b5
— Narendra Modi (@narendramodi) May 26, 2025
ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಇತ್ತೀಚೆಗೆ ನಡೆದ ಮಿಲಿಟರಿ ದಾಳಿಯನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, ಆಪರೇಷನ್ ಸಿಂದೂರ್ ಭಾರತದ ನೀತಿಯನ್ನು ಸ್ಪಷ್ಟಪಡಿಸಿದೆ. ನಮ್ಮನ್ನು ರಕ್ತಸಿಕ್ತಗೊಳಿಸುವವರು ಇದೇ ರೀತಿಯ ಪ್ರತಿಕ್ರಿಯೆಯನ್ನು ನೋಡುತ್ತಾರೆ. ಅವರಿಗೆ ಪಾಠ ಕಲಿಸದೆ ಬಿಡುವುದಿಲ್ಲ. ಆಪರೇಷನ್ ಸಿಂಧೂರ್ ಮಾನವೀಯತೆಯನ್ನು ಉಳಿಸುವ ಮತ್ತು ಭಯೋತ್ಪಾದನೆಯನ್ನು ಕೊನೆಗೊಳಿಸುವ ಒಂದು ಧ್ಯೇಯವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಇದನ್ನೂ ಓದಿ: ಆಪರೇಷನ್ ಸಿಂಧೂರದ ಬಳಿಕ ಗುಜರಾತಿಗೆ ಮೋದಿ ಮೊದಲ ಭೇಟಿ; ವಿಶೇಷ ಕ್ಷಣಗಳ ಹೈಲೈಟ್ಸ್ ಇಲ್ಲಿದೆ
ಏಪ್ರಿಲ್ 22ರ ದಾಳಿಗೆ ಪ್ರತಿಕ್ರಿಯೆಯಾಗಿ ನಾವು 22 ನಿಮಿಷಗಳಲ್ಲಿ ಭಯೋತ್ಪಾದಕರ 9 ದೊಡ್ಡ ಅಡಗುತಾಣಗಳನ್ನು ನಾಶಪಡಿಸಿದ್ದೇವೆ. ಸಿಂಧೂರವು ಬಂದೂಕಿನ ಪುಡಿಯಾಗಿ ಬದಲಾದಾಗ ಏನಾಗುತ್ತದೆ ಎಂಬುದನ್ನು ವಿಶ್ವದ ಮತ್ತು ದೇಶದ ಶತ್ರುಗಳು ನೋಡಿದ್ದಾರೆ. ನನ್ನ ರಕ್ತನಾಳಗಳಲ್ಲಿ ರಕ್ತವಲ್ಲ, ಸಿಂಧೂರ ಕುದಿಯುತ್ತಿದೆ. ಪಾಕಿಸ್ತಾನದ ಯುವಕರು ತಮ್ಮ ದೇಶದಲ್ಲಿ ಭಯೋತ್ಪಾದನೆಯನ್ನು ಕೊನೆಗೊಳಿಸಲು ಮುಂದೆ ಬರಬೇಕು. ನಮ್ಮ ನೀತಿಯು ಭಯೋತ್ಪಾದನೆಯ ಬಗ್ಗೆ ಶೂನ್ಯ ಸಹಿಷ್ಣುತೆ. ನೀವು ನಮ್ಮ ಜನರನ್ನು ರಕ್ತಸಿಕ್ತಗೊಳಿಸಿದರೆ ನಾವು ಸಮಾನ ಬಲದಿಂದ ಪ್ರತಿಕ್ರಿಯಿಸುತ್ತೇವೆ. ಭಯೋತ್ಪಾದನೆ ಭಾರತಕ್ಕೆ ಮಾತ್ರವಲ್ಲದೆ ಇಡೀ ಜಗತ್ತಿಗೆ ಬೆದರಿಕೆಯಾಗಿದೆ ಎಂದು ಪಾಕಿಸ್ತಾನ ಅರಿತುಕೊಳ್ಳಬೇಕು ಎಂದು ಮೋದಿ ಪುನರುಚ್ಚರಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








