ತನ್ನ ಅಸ್ತಿತ್ವಕ್ಕೆ ಭಾರತವೇ ದೊಡ್ಡ ಬೆದರಿಕೆ ಎಂದುಕೊಂಡಿದೆ ಪಾಕಿಸ್ತಾನ: ಅಮೆರಿಕ ಗುಪ್ತಚರ ವರದಿ
ಪಾಕಿಸ್ತಾನವು ಭಾರತವನ್ನು ಅಸ್ತಿತ್ವದ ಬೆದರಿಕೆ ಎಂದು ನೋಡುತ್ತದೆ ಎಂದು ಅಮೆರಿಕ ಗುಪ್ತಚರ ವರದಿಯಲ್ಲಿ ಉಲ್ಲೇಖಿಸಲಾಗಿದೆ.2025 ರಲ್ಲಿ ಜಾಗತಿಕ ಬೆದರಿಕೆಗಳ ಕುರಿತು ಈ ಗುಪ್ತಚರ ವರದಿಯನ್ನು ಯುಎಸ್ ಡಿಫೆನ್ಸ್ ಇಂಟೆಲಿಜೆನ್ಸ್ ಏಜೆನ್ಸಿ (ಡಿಐಎ) ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ (ಕಾಂಗ್ರೆಸ್) ಗೆ ನೀಡಿದೆ. ಈ ವರದಿಯು ಮೇ 11 ರವರೆಗಿನ ಘಟನೆಗಳನ್ನು ಉಲ್ಲೇಖಿಸಿದೆ. ಇದಕ್ಕೆ ಒಂದು ದಿನದ ಮೊದಲು, ಭಾರತ ಮತ್ತು ಪಾಕಿಸ್ತಾನದ ನಡುವಿನ ನಾಲ್ಕು ದಿನಗಳ ಕಾಲ ನಡೆದ ಮಿಲಿಟರಿ ಸಂಘರ್ಷವನ್ನು ನಿಲ್ಲಿಸಲಾಯಿತು.

ವಾಷಿಂಗ್ಟನ್, ಮೇ 26: ತನ್ನ ಅಸ್ತಿತ್ವಕ್ಕೆ ಭಾರತವೇ ದೊಡ್ಡ ಬೆದರಿಕೆ ಎಂದು ಪಾಕಿಸ್ತಾನ(Pakistan) ನಂಬಿರುವುದಾಗಿ ಅಮೆರಿಕ ಗುಪ್ತಚರ ವರದಿ ಹೇಳಿದೆ. ಪಹಲ್ಗಾಮ್ ದಾಳಿ ಮತ್ತು ಆಪರೇಷನ್ ಸಿಂಧೂರ್(Operation Sindoor) ನಂತರ, ಪಾಕಿಸ್ತಾನವು ಭಾರತದಿಂದ ಅಸ್ತಿತ್ವದ ಬೆದರಿಕೆಯನ್ನು ಎದುರಿಸುತ್ತಿದೆ ಎಂದು ಅಮೆರಿಕದ ಗುಪ್ತಚರ ವರದಿ ಬಹಿರಂಗಪಡಿಸಿದೆ. ಇಂತಹ ಪರಿಸ್ಥಿತಿಯಲ್ಲಿ, ಪಾಕಿಸ್ತಾನ ತನ್ನ ಪರಮಾಣು ಶಸ್ತ್ರಾಸ್ತ್ರಗಳ ಸಂಗ್ರಹವನ್ನು ಹೆಚ್ಚಿಸುತ್ತಿದೆ. ಏಕೆಂದರೆ ಯುದ್ಧದಲ್ಲಿ ಭಾರತದ ವಿರುದ್ಧ ಹೋರಾಡುವುದು ಪಾಕಿಸ್ತಾನಕ್ಕೆ ಅಷ್ಟು ಸುಲಭವಲ್ಲ.
2025 ರಲ್ಲಿ ಜಾಗತಿಕ ಬೆದರಿಕೆಗಳ ಕುರಿತು ಈ ಗುಪ್ತಚರ ವರದಿಯನ್ನು ಯುಎಸ್ ಡಿಫೆನ್ಸ್ ಇಂಟೆಲಿಜೆನ್ಸ್ ಏಜೆನ್ಸಿ (ಡಿಐಎ) ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ (ಕಾಂಗ್ರೆಸ್) ಗೆ ನೀಡಿದೆ. ಈ ವರದಿಯು ಮೇ 11 ರವರೆಗಿನ ಘಟನೆಗಳನ್ನು ಉಲ್ಲೇಖಿಸಿದೆ. ಇದಕ್ಕೆ ಒಂದು ದಿನದ ಮೊದಲು, ಭಾರತ ಮತ್ತು ಪಾಕಿಸ್ತಾನದ ನಡುವಿನ ನಾಲ್ಕು ದಿನಗಳ ಕಾಲ ನಡೆದ ಮಿಲಿಟರಿ ಸಂಘರ್ಷವನ್ನು ನಿಲ್ಲಿಸಲಾಯಿತು.
ಪಹಲ್ಗಾಮ್ ದಾಳಿ ಬಳಿಕ ಆಪರೇಷನ್ ಸಿಂಧೂರ್ ಪ್ರಾರಂಭಿಸಿದ ಭಾರತ ಏಪ್ರಿಲ್ 22ರಂದು ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರು ನಡೆಸಿದ ದಾಳಿ ಬಳಿಕ ಭಾರತವು ಆಪರೇಷನ್ ಸಿಂಧೂರ್ ನಡೆಸಿ 9 ಉಗ್ರ ನೆಲೆಗಳನ್ನು ನಾಶಪಡಿಸಿದ್ದವು. ಇದಾದ ಬಳಿಕ ದಾಳಿ ಪ್ರತಿದಾಳಿ ನಡೆಯುತ್ತಲೇ ಇತ್ತು. ಬಳಿಕ ಎರಡೂ ದೇಶಗಳು ಒಪ್ಪಂದಕ್ಕೆ ಬಂದು ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದರು. ಆದರೆ ಈ ಕದನ ವಿರಾಮದ ಶ್ರೇಯಸ್ಸನ್ನು ಅಮೆರಿಕ ಪಡೆಯಲು ಪ್ರಯತ್ನಿಸಿತ್ತು.
ಮತ್ತಷ್ಟು ಓದಿ: ಪಾಕ್ ಸರ್ಕಾರದೊಂದಿಗೆ ಮಾತನಾಡುವುದು ನಿಷ್ಪ್ರಯೋಜಕ, ಸೇನೆಯೊಂದಿಗೆ ಮಾತನಾಡ್ತೀನಿ ಎಂದ ಇಮ್ರಾನ್ ಖಾನ್
ಆಪರೇಷನ್ ಸಿಂಧೂರ್ ನಂತರ, ಭಾರತದ ಪ್ರಧಾನಿ ನರೇಂದ್ರ ಮೋದಿ ಮಾತನಾಡಿ, ಪರಮಾಣು ಶಸ್ತ್ರಾಸ್ತ್ರಗಳೊಂದಿಗೆ ಬೆದರಿಕೆ ಹಾಕುವುದನ್ನು ಸಹಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು. ಯುಎಸ್ ಗುಪ್ತಚರ ವರದಿಯ ಪ್ರಕಾರ, ಭಾರತವು ಚೀನಾವನ್ನು ತನ್ನ ಪ್ರಮುಖ ಶತ್ರುವೆಂದು ಪರಿಗಣಿಸುತ್ತದೆ ಮತ್ತು ಪಾಕಿಸ್ತಾನವನ್ನು ಭದ್ರತಾ ದೃಷ್ಟಿಕೋನದಿಂದ ಕೇವಲ ಒಂದು ಬೆದರಿಕೆ ಎಂದು ಪರಿಗಣಿಸುತ್ತದೆ. ವರದಿಯು ಪಹಲ್ಗಾಮ್ ದಾಳಿ ಮತ್ತು ಭಾರತ-ಪಾಕಿಸ್ತಾನ ಮಿಲಿಟರಿ ಘರ್ಷಣೆಯನ್ನು (ಮೇ 6-10) ಸಹ ಉಲ್ಲೇಖಿಸಿದೆ.
ಪಾಕಿಸ್ತಾನವು ವಿದೇಶಗಳಿಂದ ವಿನಾಶದ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದೆ ಎಂದು ವರದಿ ಹೇಳಿದೆ. ಪಾಕಿಸ್ತಾನ ತನ್ನ ಮಿಲಿಟರಿ ಅಗತ್ಯಗಳನ್ನು ಪೂರೈಸಲು ಮತ್ತು ತನ್ನ ಆರ್ಥಿಕತೆಯನ್ನು ಮತ್ತೆ ಹಳಿಗೆ ತರಲು ಚೀನಾವನ್ನು ಅವಲಂಬಿಸಿದೆ ಎಂದು ವರದಿ ಹೇಳುತ್ತದೆ.
ಭಾರತದ ಶಕ್ತಿಯ ಬಗ್ಗೆ ಬಗ್ಗೆ ಅಮೆರಿಕ ಕೂಡ ಚಿಂತಿತವಾಗಿದೆ
ಅಮೆರಿಕದ ಗುಪ್ತಚರ ವರದಿಯ ಪ್ರಕಾರ, ಚೀನಾವನ್ನು ಎದುರಿಸುವ ಮೂಲಕ ಜಾಗತಿಕ ನಾಯಕತ್ವವನ್ನು ಒದಗಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮೇಕ್ ಇನ್ ಇಂಡಿಯಾ ಉಪಕ್ರಮದ ಅಡಿಯಲ್ಲಿ ದೇಶದ ಮಿಲಿಟರಿ ಶಕ್ತಿಯನ್ನು ಹೆಚ್ಚಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಯುಎಸ್ ಡಿಐಎ ಪ್ರಕಾರ, ಚೀನಾದ ಪ್ರಭಾವವನ್ನು ಕಡಿಮೆ ಮಾಡಲು ಮತ್ತು ಜಾಗತಿಕ ನಾಯಕತ್ವವನ್ನು ಪಡೆಯಲು, ಭಾರತವು ಹಿಂದೂ ಮಹಾಸಾಗರ ಪ್ರದೇಶದ ಇತರ ದೇಶಗಳೊಂದಿಗೆ ಮಿಲಿಟರಿ ವ್ಯಾಯಾಮಗಳು, ಮಿಲಿಟರಿ ತರಬೇತಿ, ಶಸ್ತ್ರಾಸ್ತ್ರ ಮಾರಾಟ ಮತ್ತು ಮಾಹಿತಿ ಹಂಚಿಕೆಯ ಮೂಲಕ ರಕ್ಷಣಾ ಪಾಲುದಾರಿಕೆಯನ್ನು ಮಾಡಿಕೊಳ್ಳುತ್ತಿದೆ.
ಭಾರತ ಮತ್ತು ಚೀನಾ ನಡುವೆ ಒಪ್ಪಂದವೇನೋ ಆಗಿದೆ, ಆದರೆ ವಿವಾದ ಮುಗಿದಿಲ್ಲ
ಭಾರತವು ಅಕ್ಟೋಬರ್ 2024 ರಲ್ಲಿ ಚೀನಾದೊಂದಿಗೆ ವಿಭಜನೆ ಒಪ್ಪಂದಕ್ಕೆ ಸಹಿ ಹಾಕಿದ್ದರೂ, ಗಡಿ ವಿವಾದ ಮುಗಿದಿಲ್ಲ ಎಂದು ವರದಿ ಹೇಳಿದೆ. ಒಪ್ಪಂದದ ಪ್ರಕಾರ, ಎರಡೂ ದೇಶಗಳು ತಮ್ಮ ಸೈನ್ಯವನ್ನು ಹಿಂದಕ್ಕೆ ಕರೆಸಿಕೊಂಡಿವೆ.
ಈ ವರದಿಯು ಭಾರತದ ಹೆಚ್ಚುತ್ತಿರುವ ಮಿಲಿಟರಿ ಶಕ್ತಿಯ ಬಗ್ಗೆಯೂ ಮಾತನಾಡುತ್ತದೆ. ಭಾರತವು ಪರಮಾಣು ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯವಿರುವ ಅಗ್ನಿ-1 ಮತ್ತು ಅಗ್ನಿ-5 ನಂತಹ ಕ್ಷಿಪಣಿಗಳನ್ನು ಪರೀಕ್ಷಿಸಿದೆ ಎಂದು ಹೇಳಲಾಗಿತ್ತು.
ರಷ್ಯಾದ ಟ್ಯಾಂಕ್‌ಗಳು ಮತ್ತು ವಿಮಾನಗಳು ಭಾರತದ ಮಿಲಿಟರಿ ಶಕ್ತಿಯ ಬೆನ್ನೆಲುಬು
ಗುಪ್ತಚರ ವರದಿಗಳ ಪ್ರಕಾರ, ಪ್ರಧಾನಿ ಮೋದಿಯವರ ನೇತೃತ್ವದಲ್ಲಿ, ಭಾರತವು ತನ್ನ ಶಸ್ತ್ರಾಸ್ತ್ರ ಅಗತ್ಯಗಳಿಗಾಗಿ ರಷ್ಯಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತಿದೆ, ಆದರೂ ರಷ್ಯಾದ ಟ್ಯಾಂಕ್‌ಗಳು ಮತ್ತು ಯುದ್ಧ ವಿಮಾನಗಳ ಬಿಡಿಭಾಗಗಳಿಗಾಗಿ ರಷ್ಯಾದ ಮೇಲಿನ ಅವಲಂಬನೆ ಮುಂದುವರೆದಿದೆ. ಏಕೆಂದರೆ ರಷ್ಯಾದಿಂದ ಖರೀದಿಸಿದ ಟ್ಯಾಂಕ್‌ಗಳು ಮತ್ತು ಯುದ್ಧ ವಿಮಾನಗಳು ಭಾರತದ ಮಿಲಿಟರಿ ಶಕ್ತಿಯ ಬೆನ್ನೆಲುಬಾಗಿದ್ದು, ಚೀನಾ ಮತ್ತು ಪಾಕಿಸ್ತಾನದಿಂದ ಬರುವ ಬೆದರಿಕೆಗಳನ್ನು ನಿಭಾಯಿಸಬಲ್ಲವು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ








