AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಂಗ್ಲಾದೇಶದಲ್ಲೂ 2 ಚಿಕನ್ ನೆಕ್ ಕಾರಿಡಾರ್ ಇದೆ; ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮ ಎಚ್ಚರಿಕೆ

ಬಾಂಗ್ಲಾದೇಶ ಕೂಡ ತನ್ನದೇ ಆದ ಎರಡು ಚಿಕನ್ ನೆಕ್​ಗಳನ್ನು ಹೊಂದಿದೆ ಎಂದಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ಭಾರತದ ದುರ್ಬಲತೆಗಳನ್ನು ಪ್ರಶ್ನಿಸಿದ್ದಕ್ಕಾಗಿ ಬಾಂಗ್ಲಾದೇಶ ಸರ್ಕಾರವನ್ನು ಎಚ್ಚರಿಸಿದ್ದಾರೆ. ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್‌ ಮಾಡಿರುವ ಸಿಎಂ ಹಿಮಂತ ಬಿಸ್ವ ಶರ್ಮ, "ಚಿಕನ್ ನೆಕ್ ಕಾರಿಡಾರ್" ಕುರಿತು ಭಾರತಕ್ಕೆ ದಿನವೂ ಬೆದರಿಕೆ ಹಾಕುವವರು ಈ ಸಂಗತಿಗಳನ್ನು ಸಹ ಗಮನಿಸಬೇಕು. ಬಾಂಗ್ಲಾದೇಶವು ತನ್ನದೇ ಆದ ಎರಡು 'ಚಿಕನ್ ನೆಕ್'​ಗಳನ್ನು ಹೊಂದಿದೆ ಎಂದಿದ್ದಾರೆ.

ಬಾಂಗ್ಲಾದೇಶದಲ್ಲೂ 2 ಚಿಕನ್ ನೆಕ್ ಕಾರಿಡಾರ್ ಇದೆ; ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮ ಎಚ್ಚರಿಕೆ
Assam Cm
ಸುಷ್ಮಾ ಚಕ್ರೆ
|

Updated on: May 26, 2025 | 4:48 PM

Share

ನವದೆಹಲಿ, ಮೇ 26: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma)  ಭಾನುವಾರ ಬಾಂಗ್ಲಾದೇಶವು “ತನ್ನದೇ ಆದ 2 ಚಿಕನ್ ನೆಕ್​ಗಳನ್ನು ಹೊಂದಿದೆ” ಎಂದು ಎಚ್ಚರಿಸಿದ್ದಾರೆ. ಬಾಂಗ್ಲಾದೇಶದ 2 ಚಿಕನ್ ನೆಕ್ ಕಾರಿಡಾರ್ ನಕ್ಷೆಗಳನ್ನು ಹಂಚಿಕೊಂಡಿರುವ ಸಿಎಂ ಹಿಮಂತ ಬಿಸ್ವ ಶರ್ಮ ಈ 2 ಕಾರಿಡಾರ್ ಬಗ್​ಗೆ ಬಾಂಗ್ಲಾದೇಶ (Bangladesh) ಮೊದಲು ಯೋಚಿಸುವುದು ಉತ್ತಮ ಎಂದಿದ್ದಾರೆ. “ಬಾಂಗ್ಲಾದೇಶದ ಈ 2 ಚಿಕನ್ ನೆಕ್‌ಗಳು” ಭಾರತದ ಈಶಾನ್ಯ ಪ್ರದೇಶವನ್ನು ದೇಶದ ಉಳಿದ ಭಾಗಗಳಿಗೆ ಸಂಪರ್ಕಿಸುವ “ಚಿಕನ್ ನೆಕ್” ಕಾರಿಡಾರ್‌ಗಿಂತ ಹೆಚ್ಚು ದುರ್ಬಲವಾಗಿವೆ ಎಂದು ಹೇಳಿದ್ದಾರೆ. 2025ರ ಮಾರ್ಚ್ ತಿಂಗಳಲ್ಲಿ ಚೀನಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಭಾರತದ ಈಶಾನ್ಯ ರಾಜ್ಯಗಳಿಗೆ ಬಾಂಗ್ಲಾದೇಶವೇ “ಸಾಗರದ ಏಕೈಕ ರಕ್ಷಕ” ಎಂದು ಯೂನಸ್ ಹೇಳಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು.

ಬಾಂಗ್ಲಾದೇಶ ಕೂಡ 2 ಕಿರಿದಾದ ಭೂಪ್ರದೇಶಗಳನ್ನು ಹೊಂದಿದೆ. ಅವು ಭಾರತದ ಸಿಲಿಗುರಿ ಕಾರಿಡಾರ್​​ಗಿಂತ ಹೆಚ್ಚು ದುರ್ಬಲವಾಗಿವೆ. ನಮ್ಮ ದೇಶದ ಕಾರಿಡಾರ್ ಬಗ್ಗೆ ಮಾತನಾಡುವವರು ಇದನ್ನು ಮರೆಯಬಾರದು ಎಂದು ಅಸ್ಸಾಂ ಸಿಎಂ ಬಾಂಗ್ಲಾದೇಶ ಸರ್ಕಾರದ ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ಅವರಿಗೆ ಚಾಟಿ ಬೀಸಿದ್ದಾರೆ.

ಇದನ್ನೂ ಓದಿ
Image
ನಮ್ಮ ಹೆಣ್ಣುಮಕ್ಕಳ ಕುಂಕುಮ ಅಳಿಸಿದವರನ್ನು ಹೊಸಕಿ ಹಾಕಿದ್ದೇವೆ: ಮೋದಿ
Image
ತನ್ನ ಅಸ್ತಿತ್ವಕ್ಕೆ ಭಾರತವೇ ದೊಡ್ಡ ಬೆದರಿಕೆ ಎಂದುಕೊಂಡಿದೆ ಪಾಕಿಸ್ತಾನ
Image
ಯೂನಸ್ ಬಾಂಗ್ಲಾದೇಶವನ್ನು ಅಮೆರಿಕಕ್ಕೆ ಮಾರುತ್ತಿದ್ದಾರೆ: ಶೇಖ್ ಹಸೀನಾ
Image
ಪಾಕ್​ ಸರ್ಕಾರದೊಂದಿಗೆ ಮಾತನಾಡುವುದು ನಿಷ್ಪ್ರಯೋಜಕ: ಇಮ್ರಾನ್ ಖಾನ್

ಇದನ್ನೂ ಓದಿ: ಯೂನಸ್ ಬಾಂಗ್ಲಾದೇಶವನ್ನು ಅಮೆರಿಕಕ್ಕೆ ಮಾರುತ್ತಿದ್ದಾರೆ: ಶೇಖ್ ಹಸೀನಾ

ಈಶಾನ್ಯ ರಾಜ್ಯಗಳಾದ ಅಸ್ಸಾಂ, ಅರುಣಾಚಲ ಪ್ರದೇಶ, ಮಣಿಪುರ, ಮೇಘಾಲಯ, ನಾಗಾಲ್ಯಾಂಡ್, ಮಿಜೋರಾಂ, ತ್ರಿಪುರ ಮತ್ತು ಸಿಕ್ಕಿಂಗಳು ಒಟ್ಟಾಗಿ ಬಾಂಗ್ಲಾದೇಶದೊಂದಿಗೆ 1,596 ಕಿ.ಮೀ ಅಂತಾರಾಷ್ಟ್ರೀಯ ಗಡಿಯನ್ನು, ಚೀನಾದೊಂದಿಗೆ 1,395 ಕಿ.ಮೀ ಗಡಿಯನ್ನು, ಮ್ಯಾನ್ಮಾರ್‌ನೊಂದಿಗೆ 1,640 ಕಿ.ಮೀ ಗಡಿಯನ್ನು, ಭೂತಾನ್‌ನೊಂದಿಗೆ 455 ಕಿ.ಮೀ ಗಡಿಯನ್ನು ಮತ್ತು ನೇಪಾಳದೊಂದಿಗೆ 97 ಕಿ.ಮೀ ಗಡಿಯನ್ನು ಹೊಂದಿವೆ. ಈ ರಾಜ್ಯಗಳು “ಚಿಕನ್ ನೆಕ್” ಕಾರಿಡಾರ್ ಎಂದು ಕರೆಯಲ್ಪಡುವ 22 ಕಿಮೀ ಭೂಪ್ರದೇಶದ ಮೂಲಕ ಭಾರತದ ಉಳಿದ ಭಾಗಗಳೊಂದಿಗೆ ಮಾತ್ರ ಸಂಪರ್ಕ ಹೊಂದಿವೆ.

ಇದನ್ನೂ ಓದಿ: ಬಂಗಾಳದಲ್ಲಿ ಹಿಂಸಾಚಾರಕ್ಕೆ ತಿರುಗಿದ ವಕ್ಫ್ ವಿರೋಧಿ ಪ್ರತಿಭಟನೆ; ಪೊಲೀಸ್ ವಾಹನಗಳಿಗೆ ಬೆಂಕಿ

ಪಶ್ಚಿಮ ಬಂಗಾಳದ ಸಿಲಿಗುರಿಯಲ್ಲಿರುವ ಚಿಕನ್ ನೆಕ್ ಕಾರಿಡಾರ್ ಬಗ್ಗೆ ಹೇಳಿಕೆ ನೀಡಿರುವ ಮುಹಮ್ಮದ್ ಯೂನಸ್ ಬಾಂಗ್ಲಾದೇಶದ 2 ಚಿಕನ್ ನೆಕ್ ಕಾರಿಡಾರ್​ಗಳನ್ನು ಮರೆಯಬಾರದು ಎಂದು ಹಿಂತ ಬಿಸ್ವ ಶರ್ಮ ಎಚ್ಚರಿಸಿದ್ದಾರೆ. ಅವುಗಳಲ್ಲಿ ಮೊದಲನೆಯದು 80 ಕಿ.ಮೀ. ಉತ್ತರ ಭಾಗದ ಬಾಂಗ್ಲಾದೇಶ ಕಾರಿಡಾರ್. ಇದು ದಖಿನ್ ದಿನಜ್‌ಪುರದಿಂದ ನೈಋತ್ಯ ಗಾರೋ ಬೆಟ್ಟಗಳವರೆಗೆ ಇದೆ. ಇಲ್ಲಿ ಯಾವುದೇ ಅಡಚಣೆ ಉಂಟಾದರ, ಇಡೀ ರಂಗ್‌ಪುರ ವಿಭಾಗವು ಬಾಂಗ್ಲಾದೇಶದ ಉಳಿದ ಭಾಗದಿಂದ ಸಂಪೂರ್ಣವಾಗಿ ಪ್ರತ್ಯೇಕಿಸಲ್ಪಡುತ್ತದೆ. ಎರಡನೆಯದು ದಕ್ಷಿಣ ತ್ರಿಪುರದಿಂದ ಬಂಗಾಳ ಕೊಲ್ಲಿಯವರೆಗೆ 28 ​​ಕಿ.ಮೀ. ಚಿತ್ತಗಾಂಗ್ ಕಾರಿಡಾರ್. ಭಾರತದ ಚಿಕ್ ನೆಕ್‌ಗಿಂತ ಚಿಕ್ಕದಾದ ಈ ಕಾರಿಡಾರ್ ಬಾಂಗ್ಲಾದೇಶದ ಆರ್ಥಿಕ ರಾಜಧಾನಿ ಮತ್ತು ರಾಜಕೀಯ ರಾಜಧಾನಿಯ ನಡುವಿನ ಏಕೈಕ ಕೊಂಡಿಯಾಗಿದೆ. ಕೆಲವರು ಮರೆತುಬಿಡುವ ಭೌಗೋಳಿಕ ಸಂಗತಿಗಳನ್ನು ಮಾತ್ರ ನಾನು ಪ್ರಸ್ತುತಪಡಿಸುತ್ತಿದ್ದೇನೆ” ಎಂದು ಅವರ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್