AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಾಂಧಿನಗರದಲ್ಲಿ ಪ್ರಧಾನಿ ಮೋದಿ ರೋಡ್ ಶೋ; ಜನರಿಂದ ಹೂವಿನ ಮಳೆ

ಗಾಂಧಿನಗರದಲ್ಲಿ ಪ್ರಧಾನಿ ಮೋದಿ ರೋಡ್ ಶೋ; ಜನರಿಂದ ಹೂವಿನ ಮಳೆ

ಸುಷ್ಮಾ ಚಕ್ರೆ
|

Updated on: May 27, 2025 | 3:23 PM

Share

ಗುಜರಾತ್ ಭೇಟಿಯ ಎರಡನೇ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಗುಜರಾತ್ ನಗರಾಭಿವೃದ್ಧಿ ಇತಿಹಾಸದ 20 ವರ್ಷಗಳ ಆಚರಣೆಯಲ್ಲಿ ಭಾಗವಹಿಸಲಿದ್ದಾರೆ ಮತ್ತು ಗಾಂಧಿನಗರದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಆಪರೇಷನ್ ಸಿಂಧೂರ್ ಗಾಗಿ ಪ್ರಧಾನಿ ಮೋದಿಯನ್ನು ಹೊಗಳುವ ಪೋಸ್ಟರ್‌ಗಳು ರೋಡ್ ಶೋ ಸ್ಥಳದ ಸುತ್ತಲೂ ಇದ್ದರೂ, ಗಾಂಧಿನಗರದಲ್ಲಿ ಅವರ ಸ್ವಾಗತಕ್ಕೂ ಮುನ್ನ ಗರ್ಭ ಕಲಾವಿದರು ಅವರಿಗಾಗಿ ಜಾನಪದ ಹಾಡನ್ನು ಸಿದ್ಧಪಡಿಸಿದ್ದರು.

ಗಾಂಧಿನಗರ, ಮೇ 27: ತಮ್ಮ ತವರು ರಾಜ್ಯಕ್ಕೆ ಎರಡು ದಿನಗಳ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ (PM Narendra Modi) ಇಂದು ಗುಜರಾತ್‌ನ (Gujarat) ಗಾಂಧಿನಗರದಲ್ಲಿ ರೋಡ್ ಶೋ ನಡೆಸಿದರು. ಪ್ರಧಾನಿ ಮೋದಿ ನಗರದಲ್ಲಿ ರೋಡ್ ಶೋ ನಡೆಸುವಾಗ ಜನರು ಹೂವಿನ ದಳಗಳ ಮಳೆ ಸುರಿಸಿದ್ದಾರೆ. ಕೇಂದ್ರ ಸಚಿವ ಸಿ.ಆರ್ ಪಾಟೀಲ್ ಮತ್ತು ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕೂಡ ಈ ವೇಳೆ ಹಾಜರಿದ್ದರು. ಗಾಂಧಿನಗರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ಸಮಯದಲ್ಲಿ ಸ್ವಾಗತಿಸಲು ವಿವಿಧ ಸಾಂಪ್ರದಾಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ