ಕೋಲಾರ ಡಿಸಿ ಕಚೇರಿಯ ಚುನಾವಣಾ ವಿಭಾಗ ಸಿಬ್ಬಂದಿ ಮೇಲೆ ರೇಗಿದ ಕಾಂಗ್ರೆಸ್ ಶಾಸಕ ಎಸ್ಎನ್ ನಾರಾಯಣಸ್ವಾಮಿ
ಕಚೇರಿಯಲ್ಲಿದ್ದ ಕೆಲ ಅಧಿಕಾರಿಗಳ ಮೇಲೂ ಶಾಸಕ ನಾರಾಯಣಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು. ಸಿಬ್ಬಂದಿಯನ್ನು ಕೈಗೊಂಬೆ ಮಾಡಿಕೊಂಡು ನಿಮ್ಮ ಮನಸ್ಸಿಗೆ ಬಂದಂತೆ ಅವರನ್ನು ಆಡಿಸುತ್ತೀರಿ ಎಂದು ಶಾಸಕ ಗರಂ ಆದರೆಂದು ವರದಿಯಾಗಿದೆ. ಶಾಸಕನನ್ನು ಕಚೇರಿಯ ಸಿಬ್ಬಂದಿ ಉದ್ದೇಶಪೂರ್ವಕವಾಗಿ ಕಾಯುವಂತೆ ಮಾಡಿತೋ ಅಥವಾ ತಾಂತ್ರಿಕ ದೋಷಗಳಿಂದ ತಡವಾಯಿತೋ ಗೊತ್ತಾಗಿಲ್ಲ.
ಕೋಲಾರ, ಜೂನ್ 9: ಜಿಲ್ಲೆಯ ಬಂಗಾರುಪೇಟೆಯ ಕಾಂಗ್ರೆಸ್ ಶಾಸಕ ಎಸ್ಎನ್ ನಾರಾಯಣಸ್ವಾಮಿ ಇಂದು ಕೋಲಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಚುನಾವಣಾ ಬ್ರ್ಯಾಂಚ್ನಲ್ಲಿ (election section) ಕೂಗಾಡಿದ ಘಟನೆ ನಡೆಯಿತು. ಕೋಲಾರ ಹಾಲು ಒಕ್ಕೂಟ ಆಡಳಿತ ಮಂಡಳಿಯ ಚುನಾವಣಾ ಪ್ರಕ್ರಿಯೆ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಶಾಸಕ ನಾರಾಯಾಣಸ್ವಾಮಿ ಅಂತಿಮ ಮತದಾರರ ಪಟ್ಟಿಯ ಪ್ರತಿಯನ್ನು ಪಡೆಯಲು ಚುನಾವಣಾ ಶಾಖೆಗೆ ಬಂದಿದ್ದರು. ಅದರೆ ಪಟ್ಟಿಯ ಪ್ರತಿ ನೀಡಲು ತಡಮಾಡಿದ್ದಕ್ಕೆ ಕೋಪಗೊಂಡ ನಾರಾಯಣಸ್ವಾಮಿ ಅಲ್ಲಿದ್ದ ಸಿಬ್ಬಂದಿಯ ಮೇಲೆ ರೇಗಿದರು.
ಇದನ್ನೂ ಓದಿ: ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿಗೆ ಸಚಿವ ಸ್ಥಾನ ನೀಡುವಂತೆ ರಕ್ತದಲ್ಲಿ ಪತ್ರ ಬರೆದ ಅಭಿಮಾನಿ
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ