ರಾಜ್ಯ ಸರ್ಕಾರ ಹಿಂದೂ ಕಾರ್ಯಕರ್ತರನ್ನು ವಿನಾಕಾರಣ ಟಾರ್ಗೆಟ್ ಮಾಡುತ್ತಿದೆ: ಬಿವೈ ವಿಜಯೇಂದ್ರ
ಒಬ್ಬ ಲೇಡಿ ಕಾನ್ಸ್ಟೇಬಲ್ ಹಿಂದೂ ಕಾರ್ಯಕರ್ತರರು ಮನೆಯಲ್ಲಿರದಿದ್ದರೆ ಅವರ ವೃದ್ಧ ತಂದೆತಾಯಿಗಳಿಗೆ ಪಿಸ್ಟಲ್ ತೋರಿಸಿ ಹೆದರಿಸುತ್ತಾಳಂತೆ. ಸಿದ್ದರಾಮಯ್ಯ ಸರ್ಕಾರ ಕೋಮು ನಿಗ್ರಹ ದಳವನ್ನು ರಚಿಸಿದ ಬಳಿಕ, ಹಿಂದೂಗಳ ಮೇಲೆ ದೌರ್ಜನ್ಯ ಹೆಚ್ಚಾಗಿದೆ, ಒಟ್ಟಿನಲ್ಲಿ ಸುಹಾಸ್ ಶೆಟ್ಟಿಯ ಕೊಲೆ ನಂತರ ಕರಾವಳಿ ಪ್ರಾಂತ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ವಿಜಯೇಂದ್ರ ಹೇಳಿದರು.
ಮಂಗಳೂರು ಜೂನ್ 9: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಇಂದು ಪಕ್ಷದ ನಿಯೋಗದೊಂದಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯನ್ನು ಭೇಟಿಯಾದ ನಂತರ ಸುದ್ದಿಗೋಷ್ಠಿ ನಡೆಸಿ ಮಾತಾಡಿದರು. ಜಿಲ್ಲೆಯ ಕಾರ್ಯಕರ್ತರೊಂದಿಗೆ (party workers) ಸಭೆ ನಡೆಸಿದ ಬಳಿಕ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಅಧಿಕಾರಿಗಳನ್ನು ಭೇಟಿಮಾಡಿದ್ದೇವೆ, ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯ ಕೊಲೆ ಬಳಿಕ ಜಿಲ್ಲೆಯಲ್ಲಿ ಪೊಲೀಸರ ದುಂಡಾವರ್ತನೆ ಜಾಸ್ತಿಯಾಗಿದೆ, ಕಾಂಗ್ರೆಸ್ ಸರ್ಕಾರವೇ ಪೊಲೀಸರ ಮೂಲಕ ಹಿಂದೂಗಳನ್ನು ಟಾರ್ಗೆಟ್ ಮಾಡುತ್ತಿದೆ ಎಂದು ಹೇಳಿದರು. ಪೊಲೀಸರು ವಿಹೆಚ್ಪಿ, ಬಜರಂಗ ದಳ, ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರ ಮನೆಗಳಿಗೆ ಅಪರಾತ್ರಿಯಲ್ಲಿ ಹೋಗಿ ಹೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ವಿಜಯೇಂದ್ರ ಹೇಳಿದರು.
ಇದನ್ನೂ ಓದಿ: ಚುಟ್ ಪುಟ್ ಯುದ್ದ: ಸೇನೆಯ ಕಾರ್ಯಾಚರಣೆ ಬಗ್ಗೆ ಲಘುವಾಗಿ ಮಾತನಾಡಿದ ಖರ್ಗೆ ವಿರುದ್ಧ ವಿಜಯೇಂದ್ರ ವಾಗ್ದಾಳಿ
ವಿಡಿಯೋ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ