ಚುಟ್ ಪುಟ್ ಯುದ್ದ: ಸೇನೆಯ ಕಾರ್ಯಾಚರಣೆ ಬಗ್ಗೆ ಲಘುವಾಗಿ ಮಾತನಾಡಿದ ಖರ್ಗೆ ವಿರುದ್ಧ ವಿಜಯೇಂದ್ರ ವಾಗ್ದಾಳಿ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಯನ್ನು ಮಲ್ಲಿಕಾರ್ಜುನ್ ಖರ್ಗೆ ಅವರು "ಚುಟ್ಟುಪುಟ್ಟ ಯುದ್ಧ" ಎಂದು ಕರೆದಿರುವುದನ್ನು ವಿಜಯೇಂದ್ರ ಟೀಕಿಸಿದ್ದಾರೆ. ಇದು ನಮ್ಮ ಸೈನಿಕರ ತ್ಯಾಗವನ್ನು ಅಪಮಾನಿಸುವುದಾಗಿದೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರು, ಮೇ 20: ಭಾರತೀಯ ಸೇನೆ (Indian Army) ನಡೆಸಿದ ಕಾರ್ಯಾಚರಣೆಯನ್ನು ಚುಚ್ಚುಪುಟ್ಟ ಯುದ್ಧ ಅಂತ ಕರೆಯುವ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆಯವರು (Mallikarjun Kharge) ನಮ್ಮ ಸಶಸ್ತ್ರ ಪಡೆಗಳ ಅಪ್ರತಿಮ ಧೈರ್ಯಕ್ಕೆ ಅಪಮಾನ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ವಾಗ್ದಾಳಿ ಮಾಡಿದ್ದಾರೆ.
ಮಂಗಳವಾರ (ಮೇ.20) ಹೊಸಪೇಟೆಯಲ್ಲಿ ನಡೆದ ಕಾಂಗ್ರೆಸ್ ಸರ್ಕಾರದ ಎರಡನೇ ವರ್ಷದ ಸಾಧನಾ ಸಮಾವೇಶದಲ್ಲಿ “ಹೆಚ್ಚು ಕಡಿಮೆ ಚುಟ್ಪುಟ್ಟ ಯುದ್ಧಗಳು ನಡೆದಿವೆ. ಅಥವಾ ಪಾಕಿಸ್ತಾನದ ವಿರುದ್ಧ ನಾವು ಘರ್ಷಣೆ ಮಾಡುತ್ತಿದ್ದೇವೆ. ಪಾಕಿಸ್ತಾನದ ಕೆಲಸ ಯಾವಾಗಲೂ ಭಾರತದ ಮೇಲೆ ಗೂಬೆ ಕೂಡಿಸುವುದು” ಎಂದು ಮಲ್ಲಿಕಾರ್ಜುನ್ ಖರ್ಗೆಯವರು ಹೇಳಿರುವ ವಿಡಿಯೋವನ್ನು ಬಿವೈ ವಿಜಯೇಂದ್ರ ಅವರು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿ, ವಾಗ್ದಾಳಿ ಮಾಡಿದ್ದಾರೆ.
“ಕಾರ್ಗಿಲ್ ಕಾರ್ಗಿಲ್ ಯುದ್ಧದ ನಂತರ ಪಾಕಿಸ್ತಾನದ ವಿರುದ್ಧ ನಡೆದ ಈ ಕಾರ್ಯಾಚರಣೆಯು ಅತ್ಯಂತ ಪ್ರಬಲ ಮತ್ತು ಅತ್ಯಂತ ಲೆಕ್ಕಾಚಾರದ ಮಿಲಿಟರಿ ಕಾರ್ಯಾಚರಣೆಯಾಗಿದೆ” ಎಂದಿದ್ದಾರೆ.
ಟ್ವಿಟರ್ ಪೋಸ್ಟ್
. @kharge ji, calling India’s bold military strike a “CHHUTPUT YUDH” is not just irresponsible, it’s deeply insulting to the unmatched courage of our armed forces. This operation marks the strongest and most calculated military response to Pakistan since the Kargil War.
Your… pic.twitter.com/UyJB9mhSPV
— Vijayendra Yediyurappa (@BYVijayendra) May 20, 2025
“ನಿಮ್ಮ ಪಕ್ಷದ ಟ್ರ್ಯಾಕ್ ರೆಕಾರ್ಡ್ ಇದಕ್ಕೆ ತದ್ವಿರುದ್ಧವಾಗಿದೆ. ನಿಮ್ಮ ಸರ್ಕಾರದ ಅವಧಿಯಲ್ಲಿ 7/11 ಮುಂಬೈ ರೈಲು ಸ್ಫೋಟ ಸೇರಿದಂತೆ ಲೆಕ್ಕವಿಲ್ಲದಷ್ಟು ದಾಳಿಗಳು ದೇಶದಲ್ಲಿ ನಡೆದಿವೆ. ಸಾಕಷ್ಟು ದಾಳಿಗಳು ನಡೆದ ನಂತರವೂ, ನಿಮ್ಮ ಯುಪಿಎ ಸರ್ಕಾರ ಶಾಂತವಾಗಿಯೇ ಇತ್ತು ಹೊರತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ದೇಶ ಇದನ್ನು ನೆನಪಿಸಿಕೊಳ್ಳುತ್ತದೆ ಎಂದು ಪೋಸ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಆಪರೇಷನ್ ಸಿಂದೂರ್ ಬಗ್ಗೆ ವಿವಾದಾತ್ಮ ಹೇಳಿಕೆ: ಶಾಸಕ ಕೊತ್ತೂರು ಮಂಜುನಾಥ್ ವಿರುದ್ಧ ದೂರು
ನಮ್ಮ ಶಸ್ತ್ರ ಪಡೆಗಳ ಯಾವುದೇ ಕ್ರಮವು ಎಂದಿಗೂ “ಚುಟ್ಟಪುಟ್ಟ ” ಅಲ್ಲ. ಪ್ರತಿಯೊಂದು ಕಾರ್ಯಾಚರಣೆಯು ರಾಷ್ಟ್ರೀಯ ಗೌರವ ಮತ್ತು ನಮ್ಮ ಹುತಾತ್ಮರ ರಕ್ತದ ಭಾರವನ್ನು ಹೊತ್ತಿದೆ. ನಮ್ಮ ಸೈನಿಕರ ತ್ಯಾಗವನ್ನು ಕಡಿಮೆ ಮಾಡಬೇಡಿ ಎಂದು ವಾಗ್ದಾಳಿ ಮಾಡಿದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:05 pm, Tue, 20 May 25








