AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶರಾವತಿ ನದಿ ತೀರದ ‘ರಾಣಿ ವೀಳ್ಯದೆಲೆ’ಗೆ ಪಾಕಿಸ್ತಾನವೇ ದೊಡ್ಡ ಮಾರುಕಟ್ಟೆ! ಆದರೂ ರಫ್ತು ನಿರಾಕರಿಸಿದ ರೈತರು

ಪಾಕಿಸ್ತಾನದ ಜೊತೆ ವ್ಯಾಪಾರ ಹಾಗೂ ನೀರು ಹಂಚಿಕೆಯನ್ನು ಭಾರತ ಸ್ಥಗಿತ ಗೊಳಿಸಿರುವ ಬೆನ್ನಲ್ಲೇ, ಹೊನ್ನಾವರದಿಂದ ರಫ್ತಾಗುತ್ತಿದ್ದ ವಿಳ್ಯದೆಲೆಯನ್ನು ಯಾವುದೇ ಕಾರಣಕ್ಕೂ ಪಾಕಿಸ್ತಾನ ಸೇರಿದಂತೆ ಮುಸ್ಲಿಂ ರಾಷ್ಟ್ರಕ್ಕೆ ಕಳುಹಿಸುವುದಿಲ್ಲ ಎಂದು ರೈತರು ವಾಗ್ದಾನ ಮಾಡಿದ್ದಾರೆ. ಒಂದು ವೇಳೆ ಅನ್ಯ ಮಾರ್ಗಗಳ ಮೂಲಕ ಪಾಕಿಸ್ತಾನಕ್ಕೆ ರಫ್ತು ಮಾಡುವುದು ಗೊತ್ತಾದರೆ, ನಾವು ಎಲೆ ಬೆಳೆಯುವುದನ್ನೇ ನಿಲ್ಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಶರಾವತಿ ನದಿ ತೀರದ ‘ರಾಣಿ ವೀಳ್ಯದೆಲೆ’ಗೆ ಪಾಕಿಸ್ತಾನವೇ ದೊಡ್ಡ ಮಾರುಕಟ್ಟೆ! ಆದರೂ ರಫ್ತು ನಿರಾಕರಿಸಿದ ರೈತರು
ಶರಾವತಿ ನದಿ ತೀರದ ‘ರಾಣಿ ವೀಳ್ಯದೆಲೆ’
ಸೂರಜ್​, ಮಹಾವೀರ್​ ಉತ್ತರೆ
| Updated By: Ganapathi Sharma|

Updated on:May 16, 2025 | 12:10 PM

Share

ಕಾರವಾರ, ಮೇ 16: ಪಾಕಿಸ್ತಾನ ಬೆಂಬಲಿತ ಉಗ್ರರಿಂದ ಪಹಲ್ಗಾಮ್​​ನಲ್ಲಿ ನರಮೇಧವೇ ನಡೆದುಹೋಯಿತು. ಕೇಂದ್ರ ಸರ್ಕಾರ ಆಪರೇಷನ್ ಸಿಂದೂರ್ ಮೂಲಕ ತಕ್ಕ ತಿರುಗೇಟನ್ನೇನೋ ಕೊಟ್ಟಿದೆ. ಜೊತೆಗೆ ಪಾಕಿಸ್ತಾನದ ಜತೆ ವಾಣಿಜ್ಯ ವ್ಯವಹಾರ ಸಹ ಬಂದ್ ಮಾಡಿದೆ. ಇದೀಗ ಉತ್ತರ ಕನ್ನಡ (Uttara Kannada) ಜಿಲ್ಲೆಯ ರೈತರು ಸಹ ವೀಳ್ಯದೆಲೆಯನ್ನು (Betel leafs) ಪಾಕಿಸ್ತಾನಕ್ಕೆ ರಫ್ತು ಮಾಡಲು ಸಮ್ಮತಿಸುವುದಿಲ್ಲ ಎಂದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಶರಾವತಿ ನದಿ ಪಾತ್ರ ಭಾಗದ ರೈತರು ಬೆಳೆದ ವೀಳ್ಯದೆಲೆಯನ್ನು, ಈ ಮೊದಲು ದೆಹಲಿ ವರ್ತಕರು ಖರೀದಿಸಿ ಪಾಕಿಸ್ತಾನಕ್ಕೆ ರಫ್ತು ಮಾಡುತ್ತಿದ್ದರು. ಇದು ಹಲವು ತಲೆಮಾರಿನಿಂದಲೂ ನಡೆದುಕೊಂಡು ಬಂದಿದೆ. ಕೇಂದ್ರ ಸರ್ಕಾರ ಭಾರತದ ವಸ್ತುಗಳು ಪಾಕಿಸ್ತಾನಕ್ಕೆ ಹೋಗದಂತೆ ನಿರ್ಬಂಧ ವಿಧಿಸಿದ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಬಹು ಬೇಡಿಕೆ ಇರುವ ಹೊನ್ನಾವರ ವೀಳ್ಯೆದೆಲೆಗೂ ಅದರ ಬಿಸಿ ತಾಗಿದೆ.

ಅಕ್ರಮವಾಗಿ ಪಾಕಿಸ್ತಾನಕ್ಕೆ ರವಾನೆಯಾಗುತ್ತಿದ್ದ ಉತ್ತರ ಕನ್ನಡ ವೀಳ್ಯದೆಲೆ

ಇಷ್ಟೆಲ್ಲ ಆದರೂ ಹೊನ್ನಾವರದಿಂದ ದೆಹಲಿಗೆ ಸರಬರಾಜಾಗುವ ವೀಳ್ಯದೆಲೆ ಅನ್ಯ ಮಾರ್ಗದಿಂದ ಪಾಕಿಸ್ತಾನಕ್ಕೆ ತೆರಳುತಿತ್ತು. ಪ್ರತಿ ದಿನ ಹೊನ್ನಾವರದಿಂದ 11 ಕ್ಕೂ ಹೆಚ್ಚು ಟನ್ ವೀಳ್ಯದೆಲೆ ದೆಹಲಿ ತಲುಪಿ ನಂತರ ಇತರೆ ಮಾರ್ಗಗಳ ಮೂಲಕ ಪಾಕಿಸ್ತಾನ ತಲುಪುತ್ತಿತ್ತು. ಆದರೆ, ಇದೀಗ ಈ ವಿಷಯ ಮನಗಂಡ ಹೊನ್ನಾವರದ ರೈತರು ದೆಹಲಿಯ ವರ್ತಕರಿಗೆ ವೀಳ್ಯದೆಲೆ ಕಳುಹಿಸುವುದನ್ನೇ ನಿರ್ಬಂಧಿಸಿದ್ದಾರೆ. ಇದರಿಂದ ಪಾಕಿಸ್ತಾನಕ್ಕೆ ಹೋಗುತಿದ್ದ ವಿಳ್ಯದೆಲೆ ಇದೀಗ ದೇಶದ ಮಾರುಕಟ್ಟೆಯಲ್ಲಿ ಬಿಕರಿ ಆಗುತ್ತಿದೆ.

ವೀಳ್ಯದೆಲೆ ಮಾರಾಟ: ಹೊನ್ನಾವರದ ರೈತರು ಹೇಳುವುದೇನು?

ದರ ಕುಸಿದರೂ ಪರವಾಗಿಲ್ಲ. ನಷ್ಟವನ್ನು ತಡೆದುಕೊಳ್ಳುತ್ತೇವೆ. ಆದರೆ, ಪಾಕಿಸ್ತಾನಕ್ಕೆ ಕಳುಹಿಸಿಕೊಡಲು ಸುತರಾಂ ಒಪ್ಪಲಾರೆವು. ವೀಳ್ಯದೆಲೆಯನ್ನು ಪಾಕಿಸ್ತಾನಕ್ಕೆ ಕಳುಹಿಸುವುದಕ್ಕೆ ಶಾಶ್ವತವಾಗಿ ನಿರ್ಬಂಧ ವಿಧಿಸಿದ್ದೇವೆ ಎಂದು ಜಿಲ್ಲೆಯ ರೈತರ ಪರವಾಗಿ ಸತೀಶ್ ಭಟ್ ಎಂಬವರು ಹೇಳಿದ್ದಾರೆ.

ಇದನ್ನೂ ಓದಿ
Image
ಅಂಗಾಂಗ ದಾನದಲ್ಲಿ ಧಾರವಾಡಕ್ಕೆ ದೇಶದಲ್ಲೇ 2ನೇ, ರಾಜ್ಯದಲ್ಲಿ ಮೊದಲ ಸ್ಥಾನ!
Image
ಕಾನೂನು ಮಾಪನ ನಿರೀಕ್ಷಕರ ಬಳಿ 4 ಕೋಟಿ ರೂ. ಆಸ್ತಿ, 9 ಎಕರೆ ಜಮೀನು!
Image
ಇ-ಕಾಮರ್ಸ್‌ ತಾಣಗಳಲ್ಲಿ ಪಾಕ್‌ ಸರಕು ಮಾರಿದರೆ ಹುಷಾರ್‌: ಜೋಶಿ ಎಚ್ಚರಿಕೆ
Image
ಬೆಂಗಳೂರು ಸೇರಿ ಕರ್ನಾಟಕದ ವಿವಿಧೆಡೆ ಮಳೆ ಅಬ್ಬರ: ಸಾಲು ಅವಾಂತರ

ಶರಾವತಿ ನದಿ ತೀರದ ‘ರಾಣಿ ವೀಳ್ಯದೆಲೆ’ಗೆ ಪಾಕಿಸ್ತಾನವೇ ದೊಡ್ಡ ಮಾರುಕಟ್ಟೆ!

Rani Betel Leafs Honnavar

ಹೊನ್ನಾವರದ ಶರಾವತಿ ನದಿ ತೀರ ಭಾಗದಲ್ಲಿ ಬೆಳೆಯುವ ವೀಳ್ಯದೆಲೆ ದೇಶದಲ್ಲಿ ಅಲ್ಲದೇ ವಿದೇಶದಲ್ಲೂ ಹೆಸರು ಗಳಿಸಿದೆ. ‘ರಾಣಿ ವೀಳ್ಯದೆಲೆ’ ಎಂದೇ ಪ್ರಸಿದ್ಧಿ ಪಡೆದಿರುವ ಇಲ್ಲಿನ ವೀಳ್ಯದೆಲೆ ಹೆಚ್ಚು ಬಾಳಿಕೆ ಬರುತ್ತದೆ. ಜತೆಗೆ, ವಿಶೇಷ ಖಾರ ಮತ್ತು ಸ್ವಾದ ಹೊಂದಿದೆ. ಈ ವೀಳ್ಯೆದೆಲೆಗೆ ಪಾಕಿಸ್ತಾನವೇ ದೊಡ್ಡ ಮಾರುಕಟ್ಟೆಯಾಗಿದೆ. ಮೊದಲು ಮುಂಬೈ ಮೂಲಕ ಪಾಕಿಸ್ತಾನಕ್ಕೆ ಈ ವೀಳ್ಯದೆಲೆ ರಫ್ತಾಗುತಿತ್ತು. ನಂತರ ದೆಹಲಿ ಮಾರುಕಟ್ಟೆ ಮೂಲಕ ಪಾಕಿಸ್ತಾನಕ್ಕೆ ರಫ್ತಾಗುತಿತ್ತು. ಐತಿಹಾಸಿಕ ರಫ್ತು ವಹಿವಾಟು ಹೊಂದಿದ್ದ ಈ ವೀಳ್ಯದೆಲೆ ಪಾಕಿಸ್ತಾನಿಯರ ಅಚ್ಚುಮೆಚ್ಚು ಕೂಡ ಆಗಿತ್ತು.

ಪ್ರತಿ ಎಕರೆ ವೀಳ್ಯದೆಲೆಗೆ 3 ಲಕ್ಷ ರೂ. ಲಾಭ!

ವೀಳ್ಯದೆಲೆ ಬೆಳೆಗೆ ಪ್ರತಿ ಎಕರೆಗೆ ಮೂರು ಲಕ್ಷ ರೂಪಾಯಿಯಂತೆ ಲಾಭವನ್ನು ಇಲ್ಲಿನ ರೈತರು ಗಳಿಸುತಿದ್ದರು. ಇದೀಗ ರೈತರ ಈ ನಿರ್ಧಾರದಿಂದ ಒಂದು ಎಲೆ ಮೂರು ರೂಪಾಯಿಯಿಂದ ಮೂವತ್ತು ಪೈಸೆಗೆ ಇಳಿಮುಖವಾಗಿದೆ. ಇದೀಗ ಕೋಲ್ಕತ್ತ, ಉತ್ತರ ಪ್ರದೇಶಕ್ಕೆ ಮಾತ್ರ ಈ ಎಲೆ ಸೀಮಿತವಾಗಿದೆ. ಹೀಗಿದ್ದರೂ ಹೊನ್ನಾವರದ ರೈತರು ಮಾತ್ರ, ನಮಗೆ ನಷ್ಟವಾದರೂ ತೊಂದರೆ ಇಲ್ಲ. ಲಾಭಕೊಸ್ಕರ ವೀಳ್ಯದೆಲೆ ಕೊಟ್ಟು ಬಾಂಬ್ ಹಾಕಿಸಿಕೊಳ್ಳುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

ಇದನ್ನೂ ಓದಿ: ಇ-ಕಾಮರ್ಸ್‌ ತಾಣಗಳಲ್ಲಿ ಪಾಕ್‌ ಸರಕು ಮಾರಿದರೆ ಹುಷಾರ್‌: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಎಚ್ಚರಿಕೆ

ಪಾಕಿಸ್ತಾನಕ್ಕೆ ವೀಳ್ಯದೆಲೆ ರಫ್ತು ಮಾಡುವ ದಲ್ಲಾಳಿಗಳಿಗೆ ನಿರ್ಬಂಧ

ಹೊನ್ನಾವರದ ರೈತರು ಇದೀಗ, ಪಾಕಿಸ್ತಾನಕ್ಕೆ ವೀಳ್ಯದೆಲೆ ರಪ್ತು ಮಾಡುವ ದಲ್ಲಾಳಿಗಳಿಗೆ ಶಾಶ್ವತ ನಿರ್ಬಂಧ ಹೇರುವ ಜೊತೆಗೆ ವ್ಯವಹಾರವನ್ನು ನಿಲ್ಲಿಸಿದ್ದಾರೆ. ಇದೀಗ ನಮ್ಮ ರಾಜ್ಯ ಸೇರಿದಂತೆ ಕೆಲವು ರಾಜ್ಯಕ್ಕೆ ಮಾತ್ರ ಈ ವೀಳ್ಯದೆಲೆ ಸರಬರಾಜು ಮಾಡುತ್ತಿದ್ದಾರೆ.

ಕರ್ನಾಟಕದ ಇನ್ನಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:13 am, Fri, 16 May 25