AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Lokayukta Raid: ಕಾನೂನು ಮಾಪನ ನಿರೀಕ್ಷಕರ ಬಳಿ 4 ಕೋಟಿ ರೂ. ಆಸ್ತಿ, 9 ಎಕರೆ ಜಮೀನು!

ಕರ್ನಾಟಕ ಲೋಕಾಯುಕ್ತ ದಾಳಿ: ಲೋಕಾಯುಕ್ತ ಅಧಿಕಾರಿಗಳು ಗುರುವಾರ ಕರ್ನಾಟಕದಾದ್ಯಂತ 35 ಕಡೆ ದಾಳಿ ನಡೆಸಿ 7 ಮಂದಿ ಭ್ರಷ್ಟರ ಅಕ್ರಮ ಆಸ್ತಿ ಬಗೆದಿದ್ದಾರೆ. ಬೆಂಗಳೂರಿನ ಕಾನೂನು ಮಾಪನ ನಿರೀಕ್ಷಕರ ಬಳಿ 4 ಕೋಟಿ ರೂ. ಆಸ್ತಿ, 9 ಎಕರೆ ಜಮೀನು ಹಾಗೂ 2 ನಿವಾಸ ಇರುವುದು ಪತ್ತೆಯಾಗಿದ್ದರೆ, ಉಳಿದವರ ಬಳಿಯೂ ಅಪಾರ ಪ್ರಮಾಣದ ಹಣ ಆಸ್ತಿ ಪತ್ತೆಯಾಗಿದೆ.

Lokayukta Raid: ಕಾನೂನು ಮಾಪನ ನಿರೀಕ್ಷಕರ ಬಳಿ 4 ಕೋಟಿ ರೂ. ಆಸ್ತಿ, 9 ಎಕರೆ ಜಮೀನು!
ಲೋಕಾಯಯಕ್ತ ದಾಳಿ ವೇಳೆ ದೊರೆತ ಚಿನ್ನ ಹಾಗೂ ಬೆಳ್ಳಿಯ ಭರಣಗಳು
Ganapathi Sharma
|

Updated on: May 16, 2025 | 7:04 AM

Share

ಬೆಂಗಳೂರು, ಮೇ 16: ಭ್ರಷ್ಟಾಚಾರ ಮತ್ತು ಆದಾಯಕ್ಕಿಂತ ಹೆಚ್ಚಿನ ಹಣ ಸಂಪಾದನೆ ಮಾಡಿದವರ ವಿರುದ್ಧ ಸಮರ ಸಾರಿರುವ ಲೋಕಾಯುಕ್ತ (Lokaykta) ಪೊಲೀಸರು, ಗುರುವಾರ ರಾಜ್ಯಾದ್ಯಂತ ಭರ್ಜರಿ ಬೇಟೆಯಾಗಿದ್ದಾರೆ. ಕರ್ನಾಟಕದ 35 ಕಡೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಕಾನೂನು ಮಾಪನ ನಿರೀಕ್ಷಕರಾಗಿದ್ದವರು ಹಣದಾಸೆಗೆ ಲಂಚಕ್ಕೆ ಕೈಯೊಡ್ಡಿದ್ದು, ಲೋಕಾ ಬಲೆಗೆ ಬಿದ್ದಿದ್ದಾರೆ. ಅಧಿಕಾರಿಗಳು ಅಕ್ರಮವಾಗಿ ಕೋಟ್ಯಂತರ ರೂಪಾಯಿ ಆಸ್ತಿ, ಮನೆಗಳು, ಭೂಮಿ ಮಾಡಿಕೊಂಡಿರುವುದನ್ನು ಲೋಕಾಯುಕ್ತ ಪೊಲೀಸರು ಬಯಲಿಗೆಳೆದಿದ್ದಾರೆ.

ಬೆಂಗಳೂರಿನಲ್ಲಿ ವಾಸವಾಗಿರುವ ಕಾನೂನು ಮಾಪನ ನಿರೀಕ್ಷ ಹೆಚ್. ಆರ್. ನಟರಾಜ್ ಎಂಬವರ ಮನೆ ಮೇಲೆ ದಾಳಿ ನಡೆದಿದೆ. ನಟರಾಜ್​ಗೆ ಸೇರಿದ ಒಟ್ಟು 5 ಸ್ಥಳಗಳಲ್ಲಿ ದಾಳಿಯಾಗಿದ್ದು, ಈ ವೇಳೆ ಬರೊಬ್ಬರಿ 3,94,50,000 ರೂಪಾಯಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. 2 ನಿವೇಶನ, 2 ವಾಸದ ಮನೆ, 9 ಎಕರೆ ಕೃಷಿ ಜಮೀನು ಸೇರಿ ಸ್ಥಿರಾಸ್ತಿ ಒಟ್ಟು ಮೌಲ್ಯ 3 ಕೋಟಿ 13 ಲಕ್ಷ ರೂಪಾಯಿ ಆಗಿದೆ.

ಯೋಜನಾ ನಿರ್ದೇಶಕನ ಬಳಿ 3 ಕೋಟಿ ರೂ.ಗೂ ಹೆಚ್ಚು ಆಸ್ತಿ

ಹೋಸಕೋಟೆಯಲ್ಲೂ ದ್ವಿತೀಯ ದರ್ಜೆ ಸಹಾಯಕ ಅನಂತ ಕುಮಾರ್​ಗೂ ಲೋಕಾಯುಕ್ತ ಪೊಲೀಸರು ಶಾಕ್ ಕೊಟ್ಟಿದ್ದಾರೆ. ಅನಂತ ಕುಮಾರ್​​ಗೆ ಸೇರಿದ ಒಟ್ಟು 4 ಸ್ಥಳಗಳಲ್ಲಿ ಶೋಧ ಕಾರ್ಯ ನಡೆದಿದೆ. ಇತ್ತ ತುಮಕೂರು ಜಿಲ್ಲೆ ಯೋಜನೆ ನಿರ್ದೇಶಕ ರಾಜಶೇಖರ ಡಿ ಅವರಿಗೆ ಸಂಬಂಧಿಸಿದ 9 ಸ್ಥಳಗಳಲ್ಲಿ ದಾಳಿ ನಡೆದಿದ್ದು, ಒಟ್ಟು ಸ್ಥಿರಾಸ್ತಿ ಅಂದಾಜು ಮೌಲ್ಯ 3,89,50,000 ರೂ. ಎನ್ನಲಾಗಿದೆ. 12 ನಿವೇಶನ , ನಾಲ್ಕು ವಾಸದ ಮನೆಗಳು, ನಾಲ್ಕು ಎಕರೆ ಕೃಷಿ ಜಮೀನು, ನಗದು 11,66,930 ರೂ. ಪತ್ತೆಯಾಗಿದೆ.

ಇದನ್ನೂ ಓದಿ
Image
ಇ-ಕಾಮರ್ಸ್‌ ತಾಣಗಳಲ್ಲಿ ಪಾಕ್‌ ಸರಕು ಮಾರಿದರೆ ಹುಷಾರ್‌: ಜೋಶಿ ಎಚ್ಚರಿಕೆ
Image
ಮೂರು ತಿಂಗಳಾದರೂ ಬಂದಿಲ್ಲ ಗೃಹಲಕ್ಷ್ಮಿ ಹಣ: ಗದಗದಲ್ಲಿ ಸಿಡಿದೆದ್ದ ಮಹಿಳೆಯರು
Image
ಚಿನ್ನಾಭರಣ ಕದ್ದು ಬೇರೆ ಬ್ಯಾಂಕ್​ಗಳಲ್ಲಿ ಅಡವಿಟ್ಟ ಗೋಲ್ಡ್ ಲೋನ್ ಆಫೀಸರ್!
Image
ಬೆಂಗಳೂರು ಸೇರಿ ಕರ್ನಾಟಕದ ವಿವಿಧೆಡೆ ಮಳೆ ಅಬ್ಬರ: ಸಾಲು ಅವಾಂತರ

ಮಂಗಳೂರಿನಲ್ಲಿ ಸರ್ವೆ ಸೂಪರ್​ವೈಸರ್ ಆಗಿದ್ದ ಮಂಜುನಾಥ್ ಭ್ರಷ್ಟತೆಯೂ ಲೋಕಾಯುಕ್ತ ದಾಳಿಯಲ್ಲಿ ಅನಾವರಣಗೊಂಡಿದೆ. ಇನ್ನು ವಿಜಯಪುರದ ಅಂಬೇಡ್ಕರ್ ಅಭಿವೃದ್ಧಿ ನಿಯಮಿತದ ಮಾಜಿ ಜಿಲ್ಲಾ ವ್ಯವಸ್ಥಾಪಕನ ಕೂಡ ಭ್ರಷ್ಟ ಕೂಪವನ್ನು ಲೋಕಾಯುಕ್ತ ಪೊಲೀಸರು ಬಯಲಿಗೆಳೆದಿದ್ದಾರೆ. ರೇಣುಕಾ ಸತಾರ್ಲೆ ಸೇರಿದ ಒಟ್ಟು 2 ಸ್ಥಳಗಳಲ್ಲಿ ಶೋಧನ ಕಾರ್ಯ ನಡೆದಿದೆ.

ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಲೋಕಾ ಶಾಕ್​​: ಕರ್ನಾಟಕದಾದ್ಯಂತ 7 ಅಧಿಕಾರಿಗಳ ಮನೆಗಳ ಮೇಲೆ ದಾಳಿ

ಯಾದಗಿರಿ ಜಿಲ್ಲೆ ಶಹಪುರದ ತಹಶೀಲ್ದಾರ್ ಉಮಾಕಾಂತ್ ಹಳ್ಳೆ ಭ್ರಷ್ಟಾಚಾರ ಕೂಡ ಬಯಲಿಗೆ ಬಂದಿದೆ.ಉಮಾಕಾಂತ್​​ಗೆ ಸೇರಿದ ಸ್ಥಳಗಳಲ್ಲಿ ಶೋಧ ಕಾರ್ಯ ನಡೆಯಿತು. ಉಮಾಕಾಂತ್ ಒಟ್ಟು ಆಸ್ತಿ ಮೌಲ್ಯ 1,98,53,000 ರೂ. ಆಗಿದೆ. 2 ನಿವೇಶನ, 2 ಮನೆ ಸೇರಿ ಒಟ್ಟು ಸ್ಥಿರ ಆಸ್ತಿಯ ಅಂದಾಜು ಮೌಲ್ಯ 91,18,680 ರೂ. ಆಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ