Mann Ki Baat: ಪ್ರತಿಯೊಬ್ಬ ನಾಗರಿಕನೂ ಒಂದು ಬಾರಿಯಾದರೂ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ಕೊಡಬೇಕು: ಪ್ರಧಾನಿ ಮೋದಿ

Mann Ki Baat: ಪ್ರತಿಯೊಬ್ಬ ನಾಗರಿಕನೂ ಒಂದು ಬಾರಿಯಾದರೂ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ಕೊಡಬೇಕು: ಪ್ರಧಾನಿ ಮೋದಿ
ಪ್ರಧಾನಿ ಮೋದಿ

ಭ್ರಷ್ಟಾಚಾರವೆಂಬುದು ಒಂದು ದೇಶವನ್ನು ಟೊಳ್ಳಾಗಿಸುವ ಹುಳು ಇದ್ದಂತೆ. ನಾವು ಸಾಧ್ಯವಾದಷ್ಟು ಬೇಗ ಅದನ್ನು ತೊಡೆದು ಹಾಕಬೇಕು ಎಂದು ಇಂದಿನ ಮನ್​ ಕೀ ಬಾತ್​ನಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.

TV9kannada Web Team

| Edited By: Lakshmi Hegde

Jan 30, 2022 | 12:53 PM

ದೆಹಲಿ: ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi)ಯವರು ಈ ವರ್ಷದ ಮೊದಲ ಮನ್​ ಕೀ ಬಾತ್ (Mann Ki Baat)​ ಮೂಲಕ ದೇಶವನ್ನುದ್ದೇಶಿಸಿ ಮಾತನಾಡಿದರು. ಇಂದು ಮಹಾತ್ಮ ಗಾಂಧಿ ಪುಣ್ಯತಿಥಿ (ಹುತಾತ್ಮರ ದಿನ) ಹಿನ್ನೆಲೆಯಲ್ಲಿ, ಕಾರ್ಯಕ್ರಮಕ್ಕೂ ಪೂರ್ವ ಗಾಂಧಿಯನ್ನು ಸ್ಮರಿಸಿ, ಗೌರವ ಸಲ್ಲಿಸಿದರು.   ಹಾಗೇ, ಪ್ರತಿ ನಾಗರಿಕನೂ ಒಂದಲ್ಲ ಒಂದು ಬಾರಿಯಾದರೂ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ (National War Memorial)ಭೇಟಿ ನೀಡುವಂತೆ ಒತ್ತಾಯಿಸಿದರು. ಅಲ್ಲದೆ, ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡುವುದರಿಂದ ನಿಮ್ಮಲ್ಲಿ ವಿಶೇಷ ಶಕ್ತಿ ಮತ್ತು ಸ್ಫೂರ್ತಿ ಮೂಡುತ್ತದೆ ಎಂದು ಹೇಳಿದರು. 

ಭಾರತೀಯ ಸಶಸ್ತ್ರ ಪಡೆಗಳಲ್ಲಿರುವ ಕೆಲವು ಯೋಧರಿಂದ ನನಗೆ ಪತ್ರ ಬಂದಿದೆ. ಅದರಲ್ಲಿ ಅವರು ಅಮರ್ ಜವಾನ್​ ಜ್ಯೋತಿಯ ಮಹತ್ವವನ್ನು ವಿವರಿಸಿ ಬರೆದಿದ್ದಾರೆ. ದೇಶಕ್ಕಾಗಿ ಹುತಾತ್ಮರಾದ ತ್ಯಾಗ ಮತ್ತು ಅವರ ಕುಟುಂಬದ ಬಗ್ಗೆ ಈ ಪತ್ರದ ಮೂಲಕ ಇನ್ನಷ್ಟು ತಿಳಿಯುವಂತಾಯಿತು. ಅಷ್ಟೇ ಅಲ್ಲ, ಅಮರ್​ ಜವಾನ್​ ಜ್ಯೋತಿಯನ್ನು ಇಂಡಿಯಾ ಗೇಟ್​​ನ ರಾಷ್ಟ್ರೀಯ ಯುದ್ಧ ಸ್ಮಾರಕದ ಜ್ಯೋತಿಯಲ್ಲಿ ವಿಲೀನ ಮಾಡುವಾಗ ಅದೆಷ್ಟೋ ಹಿರಿಯ ಸೇನಾ ನಾಯಕರು ಭಾವುಕರಾದರು..ಇದು ಹುತಾತ್ಮ ಯೋಧರಿಗೆ ನೀಡುತ್ತಿರುವ ನಿಜವಾದ ಗೌರವ ಎಂಬ ಭಾವ ಹೊರಹಾಕಿದರು ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ, ಭಾರತಕ್ಕೆ ಸ್ವಾತಂತ್ರ್ಯ ಬಂದು 75ವರ್ಷಗಳಾದ ಹಿನ್ನೆಲೆಯಲ್ಲಿ ಆಚರಿಸಲಾಗುತ್ತಿರುವ ಆಜಾದಿ ಕಾ ಅಮೃತ್​ ಮಹೋತ್ಸವದ ನಿಮಿತ್ತ ಒಂದು ಕೋಟಿಗೂ ಅಧಿಕ ಮಕ್ಕಳು ನನಗೆ ಅಂಚೆ ಪತ್ರ ಬರೆದಿದ್ದಾರೆ. ಭಾರತ ತನ್ನ ಸ್ವಾತಂತ್ರ್ಯ ಹೋರಾಟಗಾರರನ್ನು, ತನಗಾಗಿ ಹೋರಾಡಿದ ವೀರರನ್ನು ಹೇಗೆಲ್ಲ ಸ್ಮರಿಸಬಹುದು ಎಂಬುದನ್ನು ಪತ್ರದ ಮೂಲಕ ವಿವರಿಸಿದ್ದಾರೆ. ನಮ್ಮ ದೇಶದಲ್ಲಿರುವ ಮಕ್ಕಳಷ್ಟೇ ಅಲ್ಲ, ವಿದೇಶದಲ್ಲಿ ನೆಲೆಸಿರುವ ಭಾರತೀಯರೂ ಕೂಡ ಪತ್ರ ಬರೆದಿದ್ದು ತುಂಬ ಸಂತೋಷ ತಂದಿದೆ. ಅನೇಕ ಪತ್ರಗಳನ್ನು ನಾನು ಓದಿದ್ದೇನೆ ಎಂದು ಹೇಳಿದರು.

ಇಂದು ಮಹಾತ್ಮ ಗಾಂಧಿಯವರ 74ನೇ ಪುಣ್ಯತಿಥಿ.  ಗಾಂಧಿಯವರ ಮಾರ್ಗದರ್ಶನ, ಬೋಧನೆಗಳನ್ನು ನೆನಪಿಸಿಕೊಂಡು, ಅನುಸರಿಸಬೇಕು.  ಕೆಲವೇ ದಿನಗಳ ಹಿಂದೆ ಭಾರತದ 73ನೇ ಗಣರಾಜ್ಯೋತ್ಸವ ದಿನವನ್ನು ಆಚರಿಸಲಾಯಿತು. ಅಂದು ರಾಜಪಥದಲ್ಲಿ ಪ್ರದರ್ಶನಗೊಂಡ ಭಾರತದ ಶೌರ್ಯ, ಸಾಮರ್ಥ್ಯಗಳ ಝಲಕ್​​ಗಳು ಪ್ರತಿ ಭಾರತೀಯನಲ್ಲೂ ಹೆಮ್ಮೆ, ಗೌರವ, ಉತ್ಸಾಹ ತುಂಬಿದವು. ಇನ್ನು ಮುಂದೆ ಜನವರಿ 23ರಿಂದಲೇ ಭಾರತದ ಗಣರಾಜ್ಯೋತ್ಸವ ಕಾರ್ಯಕ್ರಮಗಳು ಪ್ರಾರಂಭವಾಗಲಿದೆ. ಜ.23 ನೇತಾಜಿ ಸುಭಾಷ್​ ಚಂದ್ರ ಬೋಸ್​​ರ ಜನ್ಮದಿನ ಇರುವುದರಿಂದ, ಅದನ್ನೂ ಸೇರಿಸಿ ಆಚರಣೆ ಮಾಡಲಾಗುವುದು ಎಂದು ಇಂದಿನ ಮನ್​ ಕೀ ಬಾತ್​​ನಲ್ಲಿ ಹೇಳಿದರು.

ಪದ್ಮ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ ಇಂದಿನ ಮನ್​ ಕೀ ಬಾತ್​​ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ಪದ್ಮ ಪ್ರಶಸ್ತಿ ಪುರಸ್ಕೃತರಿಗೆ ಅಭಿನಂದನೆ ಸಲ್ಲಿಸಿದರು. ಇನ್ನು ಅನೇಕ ಹಿರಿಯರು ಕೂಡ ನನಗೆ ಅಮರ್​ ಜವಾನ್​ ಜ್ಯೋತಿ (ಈಗ ರಾಷ್ಟ್ರೀಯ ಯುದ್ಧ ಸ್ಮಾರಕ ಜ್ಯೋತಿಯಲ್ಲಿ ವಿಲೀನಗೊಂಡಿದೆ)ಯ ಬಗ್ಗೆ ಪತ್ರ ಬರೆದಿದ್ದಾರೆ. ಆಜಾದಿ ಕಾ ಅಮೃತ್ ಮಹೋತ್ಸವ ಆಚರಣೆ ಹಿನ್ನೆಲೆಯಲ್ಲಿ ಈಗಾಗಲೇ ಪದ್ಮ ಪುರಸ್ಕಾರ, ಪ್ರಧಾನಮಂತ್ರಿ ಬಾಲ ಪುರಸ್ಕಾರ ಸೇರಿ ವಿವಿಧ ರಾಷ್ಟ್ರೀಯ ಪ್ರಶಸ್ತಿಗಳನ್ನು ಘೋಷಿಸಲಾಗಿದೆ. ಪ್ರಶಸ್ತಿ ಪುರಸ್ಕೃತರ ಜೀವನ ಉಳಿದವರಿಗೂ ಮಾದರಿಯಾಗಬೇಕು. ಪ್ರಶಸ್ತಿಗಳನ್ನು ಪಡೆದವರ ಬಗ್ಗೆ ಹೆಚ್ಚೆಚ್ಚು ತಿಳಿದುಕೊಳ್ಳಿ, ಸಾಮಾನ್ಯ ಮನುಷ್ಯರು ಅದೆಷ್ಟು ದೊಡ್ಡ ಸಾಧನೆ ಮಾಡಬಹುದು ಎಂಬುದಕ್ಕೆ ಅವರೆಲ್ಲ ಉದಾಹರಣೆ ಎಂದು ಹೇಳಿದರು. ಹಾಗೇ, ಪ್ರಶಸ್ತಿಗೆ ಭಾಜನರಾದವರಿಗೆ ಅಭಿನಂದನೆ ಸಲ್ಲಿಸಿದರು.

ಸಕಾರಾತ್ಮಕ ಬೆಳವಣಿಗೆ ದೇಶದಲ್ಲಿ ಕೊರೊನಾ​ ವಿರುದ್ಧ ಹೋರಾಟದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಸದ್ಯ ದೇಶದಲ್ಲಿ ಒಮಿಕ್ರಾನ್​ನಿಂದಾಗಿ ಕೊರೊನಾ ಮೂರಲೇ ಅಲೆ ಉಂಟಾಗಿದ್ದು, ಸೋಂಕಿನ ಪ್ರಸರಣ ಅತ್ಯಂತ ವೇಗವಾಗಿ ಆಗಿತ್ತು. ಆದರೆ ಭಾರತವೂ ಕೂಡ ಅಷ್ಟೇ ಆಕ್ರಮಣಕಾರಿಯಾಗಿ ಹೋರಾಟ ನಡೆಸಿದೆ. ಈಗಾಗಲೇ 4.5 ಕೋಟಿ ಮಕ್ಕಳಿಗೂ ಕೊರೊನಾ ಲಸಿಕೆ ನೀಡಲಾಗಿದೆ.  ಇತ್ತೀಚೆಗೆ ಸೋಂಕಿನ ಪ್ರಮಾಣ ತಗ್ಗುತ್ತಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ. ಅದರಲ್ಲೂ ಕೂಡ ಕೊರೊನಾ ಲಸಿಕೆ ಮೇಲೆ ನಮ್ಮ ದೇಶದ ಜನರು ಇಟ್ಟ ನಂಬಿಕೆ ನಿಜಕ್ಕೂ ದೊಡ್ಡದು. 15-18 ವರ್ಷದವರಿಗೆ ಕರೊನಾ ಲಸಿಕೆ ನೀಡುವ ಮೂಲಕ ಅವರು ಯಾವುದೇ ಅಡೆತಡೆಯಿಲ್ಲದೆ ಶಿಕ್ಷಣ ಪಡೆಯಲು ಅನುಕೂಲ ಮಾಡಿಕೊಡಲಾಗಿದೆ. ಕೊರೊನಾ ಭಯವನ್ನು ಅವರಲ್ಲಿ ಕಡಿಮೆ ಮಾಡಲಾಗಿದೆ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಎಲ್ಲಿ ಕರ್ತವ್ಯ ಪ್ರಜ್ಞೆ ಇರುತ್ತದೆಯೋ, ಅಲ್ಲಿ ಭ್ರಷ್ಟಾಚಾರ ಅಸ್ತಿತ್ವದಲ್ಲಿ ಇರಲು ಸಾಧ್ಯವಿಲ್ಲ. ಭ್ರಷ್ಟಾಚಾರವೆಂಬುದು ಒಂದು ದೇಶವನ್ನು ಟೊಳ್ಳಾಗಿಸುವ ಹುಳು ಇದ್ದಂತೆ. ನಾವು ಸಾಧ್ಯವಾದಷ್ಟು ಬೇಗ ಅದನ್ನು ತೊಡೆದು ಹಾಕಬೇಕು ಎಂದು ಹೇಳಿದರು.

ಇದನ್ನೂ ಓದಿ: Literature : ಅಭಿಜ್ಞಾನ ; ‘ಬರೋ ವರ್ಷ ಈ ಹೊತ್ತಿಗೆ ಗುಡೀಗೆ ನೂರಾರು ಜನ ಬರೋ ಅಂಗೆ ಮಾಡದಿದ್ದರೆ ನಾ ಸತ್ತೆ ಅಂತ ತಿಳುಕ’

Follow us on

Most Read Stories

Click on your DTH Provider to Add TV9 Kannada