Assembly Polls 2022: ಮಾ.7ರವರೆಗೂ ಚುನಾವಣೋತ್ತರ ಸಮೀಕ್ಷೆಗಳಿಗೆ ನಿರ್ಬಂಧ, ಉಲ್ಲಂಘಿಸಿದರೆ ಜೈಲು: ಚುನಾವಣಾ ಆಯೋಗದ ಆದೇಶ

ಚುನಾವಣಾ ಆಯೋಗದ ನಿರ್ಬಂಧ ಉಲ್ಲಂಘಿಸಿ ಯಾರಾದರೂ ಎಕ್ಸಿಟ್​ ಪೋಲ್​ ಪ್ರಕಟಿಸಿದರೆ ಅಂಥವರಿಗೆ 2 ವರ್ಷಗಳ ಅವಧಿವರೆಗೆ ಜೈಲು ಶಿಕ್ಷೆ ನೀಡಬಹದು, ದಂಡ ವಿಧಿಸಬಹುದು ಎಂದು ಚುನಾವಣಾ ಆಯೋಗ ಹೊರಡಿಸಿದ ಅಧಿಸೂಚನೆಯಲ್ಲಿ ಉಲ್ಲೇಖವಿದೆ.

Assembly Polls 2022: ಮಾ.7ರವರೆಗೂ ಚುನಾವಣೋತ್ತರ ಸಮೀಕ್ಷೆಗಳಿಗೆ ನಿರ್ಬಂಧ, ಉಲ್ಲಂಘಿಸಿದರೆ ಜೈಲು: ಚುನಾವಣಾ ಆಯೋಗದ ಆದೇಶ
ಚುನಾವಣಾ ಆಯೋಗ
Follow us
TV9 Web
| Updated By: Lakshmi Hegde

Updated on:Jan 30, 2022 | 8:40 AM

ದೆಹಲಿ: ಗೋವಾ, ಉತ್ತರಪ್ರದೇಶ, ಉತ್ತರಾಖಂಡ್​, ಪಂಜಾಬ್​, ಗೋವಾ, ಮಣಿಪುರ ರಾಜ್ಯಗಳ ವಿಧಾನಸಭಾ ಚುನಾವಣೆ (Assembly Election 2022) ಸಮೀಪಿಸುತ್ತಿರುವ ಬೆನ್ನಲ್ಲೇ ಚುನಾವಣಾ ಆಯೋಗ (Election Commission)ಮಹತ್ವದ ಆದೇಶ ಹೊರಡಿಸಿದೆ. ಮಾರ್ಚ್​ 7ರವರೆಗೆ ಯಾರೂ ಸಹ ಚುನಾವಣೋತ್ತರ ಸಮೀಕ್ಷೆಗಳನ್ನು ಪ್ರಕಟಿಸುವಂತಿಲ್ಲ ಎಂದು ಭಾನುವಾರ ಅಧಿಕೃತ ಪ್ರಕಟಣೆ ಹೊರಡಿಸಿದೆ. ಯಾವುದೇ ವ್ಯಕ್ತಿ ಚುನಾವಣೋತ್ತರ ಸಮೀಕ್ಷೆ ನಡೆಸಬಾರದು, ಎಕ್ಸಿಟ್​ ಪೋಲ್​ ಫಲಿತಾಂಶವನ್ನು ಮುದ್ರಣ ಮಾಡಬಾರದು ಅಥವಾ ಇನ್ಯಾವುದೇ ರೀತಿಯಲ್ಲೂ ಪ್ರಕಟಿಸಬಾರದು, ಪ್ರಚಾರ ಮಾಡಬಾರದು ಎಂದು ಚುನಾವಣಾ ಆಯೋಗ ಆದೇಶ ಹೊರಡಿಸಿದೆ. 

ಎಕ್ಸಿಟ್​ ಪೋಲ್​​ಗೆ ಹೇರಲಾಗಿರುವ ನಿರ್ಬಂಧ ಫೆ.10ರಿಂದ ಮುಂಜಾನೆ 7ಗಂಟೆಯಿಂದ ಜಾರಿಯಾಗಲಿದ್ದು, ಮಾರ್ಚ್ 7ರ ಸಂಜೆ 6.30ರವರೆಗೆ ಇರಲಿದೆ.  ಅಲ್ಲದೆ ಮತದಾನ ಮುಕ್ತಾಯವಾಗಿ 48 ಗಂಟೆಗಳ ಯಾವುದೇ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಅಭಿಪ್ರಾಯ ಸಮೀಕ್ಷೆ ಅಥವಾ ಇನ್ನಿತರ ಸಮೀಕ್ಷೆ ವರದಿ ಪ್ರಸಾರ ಮಾಡುವುದನ್ನು ನಿಷೇಧಿಸಲಾಗಿದೆ ಎಂದೂ ಸಹ ಚುನಾವಣಾ ಆಯೋಗ ಹೇಳಿದೆ. ಅಂದರೆ ಒಟ್ಟು 5 ರಾಜ್ಯಗಳಲ್ಲಿ, ವಿವಿಧ ದಿನಗಳಲ್ಲಿ ಮತದಾನ ನಡೆಯಲಿದೆ. ಆಯಾ ಪ್ರದೇಶದಲ್ಲಿ ನಡೆಯುವ ಮತದಾನಕ್ಕೆ ಇದು ಅನ್ವಯ ಆಗಲಿದೆ.

ಚುನಾವಣಾ ಆಯೋಗದ ನಿರ್ಬಂಧ ಉಲ್ಲಂಘಿಸಿ ಯಾರಾದರೂ ಎಕ್ಸಿಟ್​ ಪೋಲ್​ ಪ್ರಕಟಿಸಿದರೆ ಅಂಥವರಿಗೆ 2 ವರ್ಷಗಳ ಅವಧಿವರೆಗೆ ಜೈಲು ಶಿಕ್ಷೆ ನೀಡಬಹದು, ದಂಡ ವಿಧಿಸಬಹುದು ಅಥವಾ ಜೈಲು ಮತ್ತು ದಂಡ ಎರಡೂ ವಿಧಿಸಬಹುದು ಎಂದೂ ಅಧಿಸೂಚನೆಯಲ್ಲಿ ಉಲ್ಲೇಖವಿದೆ.  ಇನ್ನು ಫೆ.10ರಿಂದ ಒಟ್ಟು ಐದು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಪ್ರಾರಂಭವಾಗಲಿದೆ. ಅದರಲ್ಲಿ ಉತ್ತರಪ್ರದೇಶದಲ್ಲಿ ಏಳು ಮತ್ತು ಮಣಿಪುರದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದ್ದು, ಫೆ.10ರಂದು ಉತ್ತರಪ್ರದೇಶದ ಆಯ್ದ ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆ.27ರಂದು ಮೊದಲ ಹಂತದ ಮತದಾನ ನಡೆಯುವುದು. ಗೋವಾ, ಉತ್ತರಾಖಂಡ್​​ನಲ್ಲಿ ಫೆ.14ರಂದು ಒಂದೇ ಹಂತದಲ್ಲಿ ಮತದಾನ ಮುಗಿಯುವುದು. ಪಂಜಾಬ್​​ನಲ್ಲಿ ಫೆ.20ರಂದು ಮತದಾನ ನಡೆಯಲಿದೆ. ಎಲ್ಲ ರಾಜ್ಯಗಳ ಮತ ಎಣಿಕೆ ಮಾರ್ಚ್​ 10ಕ್ಕೆ ಇದೆ.

ಇದನ್ನೂ ಓದಿ: ಬಾವಿಗೆ ಬಿದ್ದಿದ್ದ ಮೊಬೈಲ್ ತೆಗೆಯಲು ಹೋಗಿ ಪ್ರಾಣ ಕಳೆದು ಕೊಂಡ ಯುವಕ; 65 ಅಡಿ ಆಳದ ಕಿರು ಬಾವಿಯಲ್ಲಿ ಉಸಿರುಗಟ್ಟಿ ಸಾವು

Published On - 7:57 am, Sun, 30 January 22

ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?
‘ಬಿಗ್ ಬಾಸ್​’ಗೆ ಫಿನಾಲೆ ಟಿಕೆಟ್ ಕೊಡೋಕೆ ಬಂದ ಸೆಲೆಬ್ರಿಟಿಗಳು ಯಾರು?