AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೋವಾದಲ್ಲಿ ಎನ್‌ಸಿಪಿ-ಶಿವಸೇನಾ ಜತೆ ಮೈತ್ರಿಯಿಲ್ಲದಿದ್ದರೂ ಸ್ನೇಹಿತರಾಗಿ ಉಳಿಯುತ್ತೇವೆ: ಕಾಂಗ್ರೆಸ್

ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಚಿದಂಬರಂ ಅವರು, ಪಕ್ಷವು ಚುನಾವಣೆಗೆ ಮೊದಲು ಅಥವಾ ನಂತರ ಮುಖ್ಯಮಂತ್ರಿ ಹೆಸರನ್ನು ಘೋಷಿಸುತ್ತದೆಯೇ ಎಂಬುದನ್ನು ಎಲ್ಲಾ ಅಭ್ಯರ್ಥಿಗಳೊಂದಿಗೆ ಸಮಾಲೋಚಿಸಿದ ನಂತರ ನಿರ್ಧರಿಸಲಾಗುವುದು ಎಂದು ಹೇಳಿದ್ದಾರೆ.

ಗೋವಾದಲ್ಲಿ ಎನ್‌ಸಿಪಿ-ಶಿವಸೇನಾ ಜತೆ ಮೈತ್ರಿಯಿಲ್ಲದಿದ್ದರೂ ಸ್ನೇಹಿತರಾಗಿ ಉಳಿಯುತ್ತೇವೆ: ಕಾಂಗ್ರೆಸ್
ಪಿ ಚಿದಂಬರಂ
TV9 Web
| Edited By: |

Updated on:Jan 30, 2022 | 6:36 PM

Share

ದೆಹಲಿ: ಗೋವಾ ವಿಧಾನಸಭೆ ಚುನಾವಣೆಗೆ (Goa Assembly polls) ತಮ್ಮ ಪಕ್ಷವು ಎನ್‌ಸಿಪಿ-ಶಿವಸೇನಾ ನಡುವೆ ಮೈತ್ರಿ ಮಾಡಿಕೊಳ್ಳಲಾಗಲಿಲ್ಲ ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ ಚಿದಂಬರಂ (P Chidambaram) ಭಾನುವಾರ ಹೇಳಿದ್ದಾರೆ. ಆದರೆ ಅವರು “ಸ್ನೇಹಿತರಾಗಿ ಉಳಿಯುತ್ತಾರೆ” ಮತ್ತು ಚುನಾವಣೆಯ ನಂತರ ಕಾಂಗ್ರೆಸ್ ಅವರೊಂದಿಗೆ “ಒಟ್ಟಿಗೆ ಕೆಲಸ ಮಾಡಲು” ಅವಕಾಶಗಳನ್ನು ಅನ್ವೇಷಿಸಿ ಮುಂದುವರಿಯುತ್ತದೆ ಎಂದು ಚಿದಂಬರಂ ಹೇಳಿದ್ದಾರೆ. ಗೋವಾ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ನ ಹಿರಿಯ ಚುನಾವಣಾ ವೀಕ್ಷಕರಾಗಿರುವ ಚಿದಂಬರಂ, ಮೈತ್ರಿ ಮಾಡಿಕೊಳ್ಳದಿರುವುದಕ್ಕೆ ಕಾಂಗ್ರೆಸ್ ವಿರುದ್ಧ ಟೀಕಿಸುವ ತೃಣಮೂಲ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  ತೃಣಮೂಲದೊಂದಿಗೆ ಮಾತುಕತೆ ನಡೆಸಲು ಪಕ್ಷದ ನಾಯಕತ್ವದಿಂದ ಯಾವುದೇ ಸೂಚನೆಗಳು ಬಂದಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಹೇಳಿದರು ಮತ್ತು “ನಮ್ಮ ನಾಯಕತ್ವವು ಎಲ್ಲಾ ಸಂಗತಿಗಳು ಮತ್ತು ಸಂದರ್ಭಗಳನ್ನು ಗಣನೆಗೆ ತೆಗೆದುಕೊಂಡಿದೆ ಎಂದು ನನಗೆ ಖಾತ್ರಿಯಿದೆ” ಎಂದು ಹೇಳಿದರು. ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಚಿದಂಬರಂ ಅವರು, ಪಕ್ಷವು ಚುನಾವಣೆಗೆ ಮೊದಲು ಅಥವಾ ನಂತರ ಮುಖ್ಯಮಂತ್ರಿ ಹೆಸರನ್ನು ಘೋಷಿಸುತ್ತದೆೆಯೇ ಎಂಬುದನ್ನು ಎಲ್ಲಾ ಅಭ್ಯರ್ಥಿಗಳೊಂದಿಗೆ ಸಮಾಲೋಚಿಸಿದ ನಂತರ ನಿರ್ಧರಿಸಲಾಗುವುದು. ಪಕ್ಷವು ಅವರ ಒಮ್ಮತದ ನಿರ್ಧಾರವನ್ನು ಪರಿಗಣಿಸುತ್ತದೆ ಎಂದಿದ್ದಾರೆ. ಗೋವಾ ಚುನಾವಣೆಯಲ್ಲಿ “ಕಾಂಗ್ರೆಸ್ (ಜೊತೆಗೆ ಗೋವಾ ಫಾರ್ವರ್ಡ್ ಪಾರ್ಟಿ) ಮತ್ತು ಬಿಜೆಪಿ ನಡುವೆ ಸ್ಪರ್ಧೆ ಇದೆ ಮತ್ತು ನಾವು ಸರಳ ಬಹುಮತವನ್ನು ಗೆಲ್ಲಲು ಸಾಧ್ಯವಾಗುತ್ತದೆ” ಎಂದು ಅವರು ಹೇಳಿದರು.

ಇತರ ವಿರೋಧ ಪಕ್ಷಗಳೊಂದಿಗೆ ವಿಶೇಷವಾಗಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಮತ್ತು ಶಿವಸೇನೆಯೊಂದಿಗೆ ಏಕೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್‌ಗೆ ಸಾಧ್ಯವಾಗುತ್ತಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಚಿದಂಬರಂ, ಮಹಾರಾಷ್ಟ್ರದಲ್ಲಿ ಎನ್‌ಸಿಪಿ ಮತ್ತು ಶಿವಸೇನೆ ಕಾಂಗ್ರೆಸ್‌ನ ಮಿತ್ರಪಕ್ಷಗಳಾಗಿವೆ ಮತ್ತು ಗೋವಾದಲ್ಲಿಯೂ ಮಿತ್ರಪಕ್ಷಗಳಾಗಿರಲು ಬಯಸುತ್ತೇವೆ. “ನಾವು ಪ್ರಯತ್ನಿಸಿದ್ದೇವೆ. ಅವರು ಕೆಲವು ಪ್ರಸ್ತಾಪಗಳನ್ನು ಮಾಡಿದರು. ನಾವು ಕೆಲವು ಪ್ರಸ್ತಾಪಗಳನ್ನು ಮಾಡಿದ್ದೇವೆ. ದುರದೃಷ್ಟವಶಾತ್, ಯಾವುದೂ ಪರಸ್ಪರ ಹೊಂದಿಕೆಯಾಗಿಲ್ಲ. ಎರಡೂ ಕಡೆಯವರು ಒತ್ತಾಯಗಳನ್ನು ಹೊಂದಿದ್ದರು ಮತ್ತು ನಮ್ಮ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ ಜತೆಯಾಗಲಿಲ್ಲ ಎಂದು ನಾನು ಒಪ್ಪಿಕೊಳ್ಳುತ್ತೇನೆ ಎಂದು ಚಿದಂಬರಂ ಹೇಳಿದರು.

“ಆದಾಗ್ಯೂ, ನಾವು ಸ್ನೇಹಿತರಾಗಿದ್ದೇವೆ ಮತ್ತು ಸ್ನೇಹಿತರಾಗಿಯೇ ಇರುತ್ತೇವೆ. ಚುನಾವಣೆಯ ನಂತರ, ನಾವು ಎನ್‌ಸಿಪಿ ಮತ್ತು ಶಿವಸೇನೆಯೊಂದಿಗೆ ಒಟ್ಟಾಗಿ ಕೆಲಸ ಮಾಡುವ ಅವಕಾಶಗಳನ್ನು ಅನ್ವೇಷಿಸುವುದನ್ನು ಮುಂದುವರಿಸುತ್ತೇವೆ” ಎಂದು ಅವರು ಹೇಳಿದರು.

ಮಹಾರಾಷ್ಟ್ರದಲ್ಲಿ 2019 ರ ಅಸೆಂಬ್ಲಿ ಚುನಾವಣೆಯ ನಂತರ, ಅಲ್ಲಿಯವರೆಗೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದ ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್‌ನೊಂದಿಗೆ ಕೈಜೋಡಿಸಿ ಸರ್ಕಾರವನ್ನು ರಚಿಸಲು ಮಹಾ ವಿಕಾಸ್ ಅಘಾಡಿ (ಎಂವಿಎ) ಎಂಬ ಮೈತ್ರಿಕೂಟ ರಚಿಸಿತು. ಶಿವಸೇನೆ ಮತ್ತು ಎನ್‌ಸಿಪಿ ಈ ತಿಂಗಳ ಆರಂಭದಲ್ಲಿ ಗೋವಾ ಚುನಾವಣೆಯಲ್ಲಿ ಒಟ್ಟಾಗಿ ಸ್ಪರ್ಧಿಸುವುದಾಗಿ ಘೋಷಿಸಿದ್ದವು.

ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳದಿರುವ ಬಗ್ಗೆ ತೃಣಮೂಲದ ವಾಗ್ದಾಳಿಗಳ ಬಗ್ಗೆ ಕೇಳಿದ ಪ್ರಶ್ನೆಗೆ, ಚಿದಂಬರಂ ಅವರು ಟಿಎಂಸಿಯ ಸ್ಥಾನವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು. “ಅವರು ಕೆಲವು ತಿಂಗಳ ಹಿಂದೆ ಗೋವಾವನ್ನು ಪ್ರವೇಶಿಸಿದರು ಮತ್ತು ನನ್ನ ಗೌರವಾನ್ವಿತ ಸ್ನೇಹಿತೆ ಮಮತಾ ಜೀ ಅವರು ತೃಣಮೂಲ ಮೈತ್ರಿ ಮಾಡಿಕೊಂಡಿದ್ದಾರೆ ಮತ್ತು ಬೇರೆ ಯಾವುದೇ ಪಕ್ಷಗಳು ತಮ್ಮ ಮೈತ್ರಿಕೂಟಕ್ಕೆ ಸೇರಲು ಸ್ವಾಗತ ಎಂದು ಗೋವಾದಲ್ಲಿ ಘೋಷಿಸಿದರು. ತೃಣಮೂಲದ ಪ್ರಧಾನ ಕಾರ್ಯದರ್ಶಿ ಪಕ್ಷವು ಎಲ್ಲಾ 40 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ಘೋಷಿಸಿದರು. ನಂತರ, ಅವರು ಕಾಂಗ್ರೆಸ್ ಶಾಸಕರಾದ ಲುಜಿನ್ಹೋ ಫಲೈರೊ ಅವರನ್ನು ಪಕ್ಷಕ್ಕೆ ಸೆಳೆದರು ಎಂದು ಚಿದಂಬರಂ ಹೇಳಿದರು.

ಇದನ್ನೂ ಓದಿ:ಬಲವಂತದ ಧಾರ್ಮಿಕ ಮತಾಂತರದ ವಿರುದ್ಧ ಕಾನೂನು ಬೇಕು: ಅರವಿಂದ ಕೇಜ್ರಿವಾಲ್

Published On - 6:34 pm, Sun, 30 January 22

‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ