ಉಪಚುನಾವಣೆಯಲ್ಲಿನ ಸೋಲಿನಿಂದಾಗಿಯೇ ಇಂಧನ ಬೆಲೆ ಕಡಿಮೆ ಮಾಡಿದ್ದು: ಕಾಂಗ್ರೆಸ್ ನಾಯಕ ಪಿ ಚಿದಂಬರಂ
ಈ ಬಗ್ಗೆ ಸರಣಿ ಟ್ವೀಟ್ ಮಾಡಿದ ಚಿದಂಬರಂ, "30 ಅಸೆಂಬ್ಲಿ ಮತ್ತು 3 ಲೋಕಸಭಾ ಉಪಚುನಾವಣೆಗಳ ಫಲಿತಾಂಶವು ಉಪ ಉತ್ಪನ್ನವನ್ನು ತಯಾರಿಸಿದೆ. ಕೇಂದ್ರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದೆ".
ದೆಹಲಿ: ವಾರಗಳ ನಿರಂತರ ಏರಿಕೆಯ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಕಡಿತಗೊಳಿಸುವ ಸರ್ಕಾರದ ನಿರ್ಧಾರವು ಮೂರು ಲೋಕಸಭೆ ಮತ್ತು 30 ವಿಧಾನಸಭಾ ಸ್ಥಾನಗಳಿಗೆ ಕಳೆದ ವಾರ ನಡೆದ ಉಪಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿಯ ಸೋಲು ಹಿನ್ನೆಲೆಯಲ್ಲಿ ಮಾಡಲಾಗಿದೆ ಎಂದು ಕಾಂಗ್ರೆಸ್ ಸಂಸದ ಪಿ ಚಿದಂಬರಂ ವ್ಯಂಗ್ಯವಾಡಿದ್ದಾರೆ. ಚಿದಂಬರಂ ಇಂಧನ ಬೆಲೆ ಕಡಿತವನ್ನು “ಉಪ-ಚುನಾವಣೆಗಳ ಉಪ ಉತ್ಪನ್ನ” ಎಂದು ಕರೆದ ಚಿದಂಬರಂ ಗಗನಕ್ಕೇರುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಹೆಚ್ಚಿನ ತೆರಿಗೆಗಳ ಪರಿಣಾಮವಾಗಿದೆ ಮತ್ತು ಹೆಚ್ಚಿನತೆರಿಗೆಗಳು ” ಕೇಂದ್ರ ಸರ್ಕಾರದ ದುರಾಸೆಯ ಪರಿಣಾಮವಾಗಿದೆ” ಎಂದು ಹೇಳಿದರು.
ಈ ಬಗ್ಗೆ ಸರಣಿ ಟ್ವೀಟ್ ಮಾಡಿದ ಚಿದಂಬರಂ, “30 ಅಸೆಂಬ್ಲಿ ಮತ್ತು 3 ಲೋಕಸಭಾ ಉಪಚುನಾವಣೆಗಳ ಫಲಿತಾಂಶವು ಉಪ ಉತ್ಪನ್ನವನ್ನು ತಯಾರಿಸಿದೆ. ಕೇಂದ್ರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದೆ”. “ಹೆಚ್ಚಿನ ತೆರಿಗೆಗಳಿಂದಾಗಿ ಇಂಧನ ಬೆಲೆಗಳು ಹೆಚ್ಚಾಗಿರುವುದು ನಮ್ಮ ವಾದದ ದೃಢೀಕರಣವಾಗಿದೆ ಮತ್ತು ಕೇಂದ್ರ ಸರ್ಕಾರದ ದುರಾಸೆಯಿಂದಾಗಿ ಹೆಚ್ಚಿನ ಇಂಧನ ತೆರಿಗೆ ವಿಧಿಸಲಾಗುತ್ತಿದೆ ಎಂಬುದು ನಮ್ಮ ವಾದ ” ಎಂದು ಅವರು ಹೇಳಿದರು.
The results of the 30 Assembly and 3 LS by-elections have produced a by-product
The centre has cut excise duties on petrol and diesel!
— P. Chidambaram (@PChidambaram_IN) November 4, 2021
Here is another interesting analysis of the results of the by-elections
In states where the Congress won, it did so with a significantly higher vote share:
– In HP, the Congress vs BJP was 48.9% to 28%
– In Maharashtra, it was 57% to 35%
– In Rajasthan, it was 37.51% to 18.8%
— P. Chidambaram (@PChidambaram_IN) November 3, 2021
ಮಾಜಿ ಕೇಂದ್ರ ಸಚಿವರು ಪಕ್ಷ ಮುನ್ನಡೆಯುವುದಕ್ಕೆ ಸಾಕ್ಷಿಯಾಗಿ (ಕಾಂಗ್ರೆಸ್ ಗೆದ್ದ ಸ್ಥಾನಗಳಿಗೆ) ಮತ್ತು ಕಡಿಮೆ ಅಂತರ (ಅದು ಸೋತ) ಹೆಚ್ಚಿನ ಮತ ಹಂಚಿಕೆಯ ಶೇಕಡಾವಾರುಗಳನ್ನು ತೋರಿಸಿದರು.
ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ (NDA I ನಲ್ಲಿ ಪೆಟ್ರೋಲಿಯಂ ಸಚಿವರಾಗಿದ್ದರು) ಚಿದಂಬರಂ ಟ್ವೀಟ್ ಗೆ ಪ್ರತಿಕ್ರಿಯಿಸಿದ್ದು ಮೋದಿ ಸರ್ಕಾರವು “ಜನರ ಸಂತೋಷದಲ್ಲಿ ಮತ್ತು ದುಃಖದಲ್ಲಿ ಜನರೊಂದಿಗೆ ಇರುತ್ತದೆ” ಎಂದು ಹೇಳಿದರು.
If the accusation is being sensitive to people’s demand and sharing their sorrow, we happily accept it as the #ModiGovt stands for being with the people in their happiness as well as in grief. https://t.co/6AjBOtWqFR
— Dharmendra Pradhan (@dpradhanbjp) November 4, 2021
ಮಂಗಳವಾರ ಬಿಜೆಪಿ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ವಿರುದ್ಧ ಪರಾಭವಗೊಂಡಿದೆ. ಇಲ್ಲಿ ಒಂದು ಲೋಕಸಭೆ ಮತ್ತು ಮೂರು ಅಸೆಂಬ್ಲಿ ಸ್ಥಾನಗಳನ್ನು ಬಿಜೆಪಿ ಕಳೆದುಕೊಂಡಿದೆ. ಬಂಗಾಳದಲ್ಲಿ ಆಡಳಿತಾರೂಢ ತೃಣಮೂಲದಿಂದ ಬಿಜೆಪಿ ಪರಾಭವಗೊಂಡಿದ್ದು ನಾಲ್ಕು ಅಸೆಂಬ್ಲಿ ಸ್ಥಾನಗಳ್ನು ಕಳೆದುಕೊಂಡಿದೆ. ಕರ್ನಾಟಕ ಮತ್ತು ಹರಿಯಾಣದಲ್ಲೂ ಬಿಜಿಪಿ ಸೋತಿದೆ.
ಕಳೆದ ರಾತ್ರಿ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕ್ರಮವಾಗಿ ₹ 5 ಮತ್ತು ₹ 10 ರಷ್ಟು ಕಡಿಮೆ ಮಾಡುವುದಾಗಿ ಹೇಳಿತು, ಇದು ರೈತರಿಗೆ “ಉತ್ತೇಜನ” ನೀಡುತ್ತದೆ ಎಂದು ಘೋಷಿಸಿತು. ಈ ಕ್ರಮವನ್ನು ಕೇಂದ್ರ ಸಚಿವರು ಮತ್ತು ಬಿಜೆಪಿ ಮುಖ್ಯಮಂತ್ರಿಗಳು ಶ್ಲಾಘಿಸಿದ್ದಾರೆ, ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ “ಧನ್ಯವಾದಗಳು” ಎಂದು ಟ್ವೀಟ್ ಮಾಡಿದ್ದಾರೆ. ಇದರ ಜೊತೆಗೆ ಬಿಜೆಪಿ ಆಡಳಿತವಿರುವ 10 ರಾಜ್ಯಗಳು ಹೆಚ್ಚುವರಿ ಕಡಿತವನ್ನು ಘೋಷಿಸಿವೆ. ಇವುಗಳಲ್ಲಿ ಮುಂದಿನ ವರ್ಷ ಮತದಾನ ನಡೆಯಲಿರುವ ಗೋವಾ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಗುಜರಾತ್ ರಾಜ್ಯಗಳಿವೆ.
ನಿರಂತರ ತೆರಿಗೆ ಹೆಚ್ಚಳದಿಂದಾಗಿ ಹಲವಾರು ನಗರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್‌ಗೆ ₹ 100 ಕ್ಕಿಂತ ಹೆಚ್ಚಿದೆ ಮತ್ತು ಕೆಲವು ನಗರಗಳಲ್ಲಿ ಲೀಟರ್‌ಗೆ ₹ 110 ಕ್ಕಿಂತ ಹೆಚ್ಚು ಆಗಿತ್ತು. ಉದಾಹರಣೆಗೆ, ಪೆಟ್ರೋಲ್ ಬೆಲೆಯು ಕಳೆದ ಎರಡು ವರ್ಷಗಳಲ್ಲಿ ಲೀಟರ್‌ಗೆ ₹ 34 ಹೆಚ್ಚಾಗಿದೆ (ಕಳೆದ ವರ್ಷದಲ್ಲಿ ಮಾತ್ರ ಲೀಟರ್‌ಗೆ ರೂ 26) ಸರ್ಕಾರದ “ದೀಪಾವಳಿ ಉಡುಗೊರೆ” ಕಡಿತವು ಹಲವಾರು ಪ್ರಮುಖ ರಾಜ್ಯಗಳಲ್ಲಿ ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು ಬಂದಿದೆ.
ಇದನ್ನೂ ಓದಿ: ಉಪಚುನಾವಣೆ ಫಲಿತಾಂಶದ ಪರಿಣಾಮವಾಗಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡಿದ್ದಾರೆ: ಡಿಕೆ ಶಿವಕುಮಾರ್