ಬಲವಂತದ ಧಾರ್ಮಿಕ ಮತಾಂತರದ ವಿರುದ್ಧ ಕಾನೂನು ಬೇಕು: ಅರವಿಂದ ಕೇಜ್ರಿವಾಲ್

ಬಲವಂತದ ಧಾರ್ಮಿಕ ಮತಾಂತರದ ವಿರುದ್ಧ ಕಾನೂನು ಬೇಕು: ಅರವಿಂದ ಕೇಜ್ರಿವಾಲ್
ಅರವಿಂದ ಕೇಜ್ರಿವಾಲ್

ಧರ್ಮವು ಖಾಸಗಿ ವಿಷಯ ಎಂದು ಹೇಳಿದ ಕೇಜ್ರಿವಾಲ್,  "ಧಾರ್ಮಿಕ ಮತಾಂತರದ ವಿರುದ್ಧ ಖಂಡಿತವಾಗಿಯೂ ಕಾನೂನು ರಚಿಸಬೇಕು ಆದರೆ ಈ ಮೂಲಕ ಯಾರಿಗೂ ತಪ್ಪಾಗಿ ಕಿರುಕುಳ ನೀಡಬಾರದು. ಅವರನ್ನು ಹೆದರಿಸಿ ಮತಾಂತರ ಮಾಡುವುದು ತಪ್ಪು ಎಂದಿದ್ದಾರೆ.

TV9kannada Web Team

| Edited By: Rashmi Kallakatta

Jan 30, 2022 | 2:24 PM

ಜಲಂಧರ್: ಆಮ್ ಆದ್ಮಿ ಪಕ್ಷದ (AAP) ಮುಖ್ಯಸ್ಥ ಅರವಿಂದ ಕೇಜ್ರಿವಾಲ್ (Arvind Kejriwal) ಅವರು ಧಾರ್ಮಿಕ ಮತಾಂತರದ(Religious Conversion) ವಿರುದ್ಧ ಕಾನೂನು ರಚಿಸಬೇಕು. ಆದರೆ ಯಾರಿಗೂ ತಪ್ಪಾಗಿ ಕಿರುಕುಳ ನೀಡಬಾರದು ಎಂದು ಹೇಳಿದ್ದಾರೆ. ಜಲಂಧರ್‌ನಲ್ಲಿ ಶನಿವಾರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ಧರ್ಮವು ಖಾಸಗಿ ವಿಷಯ ಎಂದು ಹೇಳಿದ ಕೇಜ್ರಿವಾಲ್,  “ಧಾರ್ಮಿಕ ಮತಾಂತರದ ವಿರುದ್ಧ ಖಂಡಿತವಾಗಿಯೂ ಕಾನೂನು ರಚಿಸಬೇಕು ಆದರೆ ಈ ಮೂಲಕ ಯಾರಿಗೂ ತಪ್ಪಾಗಿ ಕಿರುಕುಳ ನೀಡಬಾರದು. ಅವರನ್ನು ಹೆದರಿಸಿ ಮತಾಂತರ ಮಾಡುವುದು ತಪ್ಪು” ಎಂದು ಹೇಳಿದರು.  ತಮ್ಮ ಆಯ್ಕೆಯಂತೆ ಪೂಜೆ ಮಾಡುವ ಹಕ್ಕು ಪ್ರತಿಯೊಬ್ಬರಿಗೂ ಇದೆ ಎಂದು ಎಎಪಿ ರಾಷ್ಟ್ರೀಯ ಸಂಚಾಲಕ ಕೇಜ್ರಿವಾಲ್ ಹೇಳಿದ್ದಾರೆ. ಉತ್ತರ ಪ್ರದೇಶ, ಹಿಮಾಚಲ ಪ್ರದೇಶ ಮತ್ತು ಮಧ್ಯಪ್ರದೇಶ ಸೇರಿದಂತೆ ಹಲವಾರು ರಾಜ್ಯಗಳು ಬಲವಂತದ ಧಾರ್ಮಿಕ ಮತಾಂತರಗಳನ್ನು ನಿಯಂತ್ರಿಸಲು ಕಾನೂನುಗಳನ್ನು ತಂದಿವೆ. ಅಸ್ಸಾಂನಂತಹ ಹಲವಾರು ರಾಜ್ಯಗಳು ಸಹ ಇದೇ ರೀತಿಯ ಕಾನೂನುಗಳನ್ನು ಪರಿಗಣಿಸುತ್ತಿವೆ. ಎಎಪಿ ಸರ್ಕಾರವು ಅಧಿಕಾರಕ್ಕೆ ಬಂದರೆ ಮನೆ ಬಾಗಿಲಿಗೆ ತಲುಪಿಸುವ ಸೇವೆ ಮತ್ತು ಮೊಹಲ್ಲಾ ಚಿಕಿತ್ಸಾಲಯಗಳನ್ನು ಪ್ರಾರಂಭಿಸುತ್ತದೆ. “ನಾವು ಪಂಜಾಬ್‌ನಲ್ಲಿ(Punjab) 16000 ಕ್ಲಿನಿಕ್‌ಗಳನ್ನು ನಿರ್ಮಿಸುತ್ತೇವೆ ಮತ್ತು ಆಸ್ಪತ್ರೆಗಳನ್ನು ನವೀಕರಿಸುತ್ತೇವೆ” ಎಂದು ಕೇಜ್ರಿವಾಲ್ ಭರವಸೆ ನೀಡಿದರು.

ದೆಹಲಿಯಂತೆ ಪಂಜಾಬ್ ಕೂಡ ಎಲ್ಲಾ ಪ್ರಯೋಜನಗಳನ್ನು ಪಡೆಯುತ್ತದೆ ಎಂದು ದೆಹಲಿ ಮುಖ್ಯಮಂತ್ರಿ ಹೇಳಿದರು.  ಎಎಪಿ ಅಧಿಕಾರಕ್ಕೆ ಬಂದ ನಂತರ ಪಂಜಾಬ್‌ನಲ್ಲಿ ಯಾವುದೇ ಹೊಸ ತೆರಿಗೆ ವಿಧಿಸುವುದಿಲ್ಲ ಎಂದು ಅವರು ಘೋಷಿಸಿದರು.

ಪಂಜಾಬ್‌ನಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ, ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ರಾಜ್ಯದ ನಗರಗಳನ್ನು ಸುಧಾರಿಸಲು ಮತ್ತು ಸುಂದರಗೊಳಿಸಲು 10 ಅಂಶಗಳ ಕಾರ್ಯಸೂಚಿಯನ್ನು ಶನಿವಾರ ಮಂಡಿಸಿದರು.

ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಅವರ ಜತೆ ಈ ಕುರಿತು ಘೋಷಣೆ ಮಾಡಿದ ಕೇಜ್ರಿವಾಲ್, ಪ್ರಸ್ತುತ ರಾಜ್ಯದಲ್ಲಿ ಎರಡು ರೀತಿಯ ರಾಜಕೀಯ ನಡೆಯುತ್ತಿದೆ.  “ಒಂದು ಮಾಫಿಯಾವನ್ನು ಒಳಗೊಂಡ ಭ್ರಷ್ಟಾಚಾರದಿಂದ ತುಂಬಿದೆ ಮತ್ತು ಇನ್ನೊಂದು ಕಡೆ ಪಂಜಾಬ್‌ನ ಅಭಿವೃದ್ಧಿ ಮತ್ತು ಪ್ರಗತಿಯ ಅಜೆಂಡಾವನ್ನು ಜನರ ಮುಂದೆ ಪ್ರಸ್ತುತಪಡಿಸುವ ಆಮ್ ಆದ್ಮಿ ಪಕ್ಷವಿದೆ” ಎಂದು ದೆಹಲಿ ಮುಖ್ಯಮಂತ್ರಿ ಹೇಳಿದರು.

ಪಂಜಾಬ್ ನಗರಗಳನ್ನು ಸುಂದರಗೊಳಿಸಲು 10 ಅಜೆಂಡಾಗಳನ್ನು ಪ್ರಸ್ತುತಪಡಿಸಿದ ಅವರು ಎಎಪಿ ಭ್ರಷ್ಟಾಚಾರ ಅಥವಾ ನಿಂದನೀಯ ಮಾತಿನ ವಿನಿಮಯದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ. “ನಾವು ದೆಹಲಿಯಲ್ಲಿ ಜನರಿಗಾಗಿ ಕೆಲಸ ಮಾಡುವ ಮೂಲಕ ನಮ್ಮ ಅರ್ಹತೆಯನ್ನು ಸಾಬೀತುಪಡಿಸಿದ್ದೇವೆ. ನಾವು ರಾಷ್ಟ್ರ ರಾಜಧಾನಿಯ ಜನರಿಗೆ ಉತ್ತಮ ಶಿಕ್ಷಣ, ವೈದ್ಯಕೀಯ ಮತ್ತು ಇತರ ಸೌಲಭ್ಯಗಳನ್ನು ಒದಗಿಸಿದ್ದೇವೆ. ಪಂಜಾಬ್‌ನ ಸಮಸ್ಯೆಗಳನ್ನು ಪರಿಹರಿಸುವ ಸಲುವಾಗಿ, ಭಗವಂತ್ ಮಾನ್ ಮತ್ತು ನಾನು ಎಲ್ಲಾ ವರ್ಗದ ಜನರನ್ನು ಭೇಟಿಯಾದೆವು. ವ್ಯಾಪಾರಿಗಳು, ಉದ್ಯಮಿಗಳು, ರೈತರು ಮತ್ತು ನೌಕರರು ಸೇರಿದಂತೆ, ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅದಕ್ಕೆ ಅನುಗುಣವಾಗಿ ನಾವು ವಿಭಿನ್ನ ಖಾತರಿಗಳನ್ನು ಘೋಷಿಸಿದ್ದೇವೆ ಎಂದು ಕೇಜ್ರಿವಾಲ್ ಹೇಳಿದರು.

“ನಮ್ಮ ಎಲ್ಲಾ ಖಾತರಿಗಳನ್ನು ಪಂಜಾಬ್‌ನ ಜನರು ಹೆಚ್ಚು ಮೆಚ್ಚಿದ್ದಾರೆ ಮತ್ತು ಬೆಂಬಲಿಸಿದ್ದಾರೆ. ಆದರೆ ನೀವು ಎಲ್ಲರಿಗೂ ಭರವಸೆ ನೀಡಿದ್ದೀರಿ, ಆದರೆ ನಗರಗಳಿಗೆ ಖಾತರಿಗಳನ್ನು ಘೋಷಿಸಲಿಲ್ಲ ಎಂದು ನಗರ ಜನರು ಹೇಳಿದರು. ಅದಕ್ಕಾಗಿಯೇ ನಾವು ಈಗ ನಗರಗಳಿಗೆ ಖಾತರಿಗಳನ್ನು ನೀಡಿದ್ದೇವೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಪಂಜಾಬ್‌ನಲ್ಲಿ ಫೆಬ್ರವರಿ 20 ರಂದು ಮತದಾನ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

ಇದನ್ನೂ ಓದಿ:UP Assembly Election: ಉತ್ತರ ಪ್ರದೇಶದ ದೇವಬಂದ್​​ನಲ್ಲಿ ಅಮಿತ್​ ಶಾ ನಡೆಸಬೇಕಿದ್ದ ಚುನಾವಣಾ ಪ್ರಚಾರ ಮೊಟಕು; ಅಂಥದ್ದೇನಾಯ್ತು?

Follow us on

Related Stories

Most Read Stories

Click on your DTH Provider to Add TV9 Kannada