Kannada News
Elections Results 2022 LIVE
Goa (GA) Vidhan Sabha Election Result 2022
BJP | Sanquelim
INC | Margao
IND | Panaji
BJP | Panaji
BJP | Valpoi
IND | Mandrem
INC | Calangute
BJP | Mandrem
ಸಾವಂತ್ ಅವರು ಸತತ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಗೋವಾದ ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಬಗ್ಗೆ ಕೇಳಿಬರುತ್ತಿದ್ದ ಸಾಕಷ್ಟು ಊಹಾಪೋಹಗಳಿಗೆ ಬಿಜೆಪಿ ತೆರೆ ಎಳೆದಿದೆ.
ಗೋವಾದಲ್ಲಿ ಬಿಜೆಪಿ ಪರ ಪ್ರಚಾರದ ಸಹ ಉಸ್ತುವಾರಿಯನ್ನಾಗಿ ಜಿ. ಕಿಶನ್ ರೆಡ್ಡಿಯವರನ್ನು ಪಕ್ಷದ ವರಿಷ್ಠರು ನೇಮಕ ಮಾಡಿದ್ದರು. ಆಗಿನಿಂದಲೇ ಕಾರ್ಯಪ್ರವೃತ್ತರಾದ ಕಿಶನ್ ರೆಡ್ಡಿ, ಅಲ್ಲಿ ಬಿಜೆಪಿ ಗೆಲುವಿಗಾಗಿ ಅವಿರತ ಕೆಲಸವನ್ನೂ ಮಾಡಿದ್ದರು.
ಗೋವಾದಲ್ಲಿ ಬಿಜೆಪಿ 20 ಕ್ಷೇತ್ರಗಳನ್ನು ಗೆದ್ದುಕೊಂಡಿದ್ದರೂ, ಸರ್ಕಾರ ರಚನೆಗೆ ಇನ್ನೊಂದು ಸೀಟ್ ಅಗತ್ಯವಿತ್ತು. ಒಟ್ಟಾರೆ ಗೋವಾದಲ್ಲಿ 40 ಕ್ಷೇತ್ರಗಳಿದ್ದು, ಅಲ್ಲೀಗ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ
ಚರಣ್ಜಿತ್ ಸಿಂಗ್ ಚನ್ನಿ ಪಂಜಾಬ್ನ ಮೊದಲ ದಲಿತ ಸಿಎಂ. ಚಮ್ಕೌರ್ ಸಾಹಿಬ್ನಿಂದ ಮೂರನೇ ಬಾರಿಗೆ ಶಾಸಕರಾದ ಚನ್ನಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸರ್ಕಾರದಲ್ಲಿ ಸಚಿವರಾಗಿದ್ದರು. ಅವರು ಚಮ್ಕೌರ್ ಸಾಹಿಬ್ ಮತ್ತು ಬದೌರ್ ನಿಂದ ಸ್ಪರ್ಧಿಸಿದ್ದರು
ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಸಂಕ್ವೆಲಿಮ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಅಲ್ಲಿ ಕಾಂಗ್ರೆಸ್ ಅಭ್ಯರ್ಥಿ ಧರ್ಮೇಶ್ ಸಗ್ಲಾನಿ ವಿರುದ್ಧ ಸುಮಾರು 600 ಮತಗಳ ಅಂತರದಿಂದ ಗೆದ್ದಿದ್ದಾರೆ.
ಪಂಜಾಬ್ ಮತ್ತು ಉತ್ತರಾಖಂಡ್ನಲ್ಲಿ ಭರ್ಜರಿ ಪೈಪೋಟಿ ಏರ್ಪಟ್ಟಿದೆ. ಪಂಜಾಬ್ನಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷಗಳ ನಡುವೆ ಹಾಗೂ ಉತ್ತರಾಖಂಡ್ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ನೆಕ್ ಟು ನೆಕ್ ಫೈಟಿಂಗ್ ನಡೆಯುತ್ತಿದೆ.
ಹೋಟೆಲ್ ಸುತ್ತ ಬಾಡಿಗಾರ್ಡ್ಗಳಿಂದ ಕಾವಲು ಕಾಯಲಾಗುತ್ತಿದೆ. ಹೋಟೆಲ್ ಒಳಗೆ ಅನ್ಯರಿಗೆ ಪ್ರವೇಶ ನಿಷಿದ್ಧ ಹೇರಲಾಗಿದೆ. ಗೋವಾ ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಟೈಟ್ ಸೆಕ್ಯುರಿಟಿ ನೀಡಲಾಗಿದೆ. ಕುದರೆ ವ್ಯಾಪಾರ ತಡೆಯಲು ಕಾಂಗ್ರೆಸ್ನಿಂದ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ.
ರಾಜ್ಯದ ಒಟ್ಟು 1200 ಮತ ಎಣಿಕಾ ಕೇಂದ್ರಗಳಿಂದ 50 ಸಾವಿರಕ್ಕೂ ಅಧಿಕ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಉತ್ತರ ಪ್ರದೇಶವೊಂದರಲ್ಲೇ 750 ಕೇಂದ್ರಗಳು ಮತ್ತು ಪಂಜಾಬ್ನಲ್ಲಿ 200 ಮತ ಎಣಿಕಾ ಕೇಂದ್ರಗಳಿವೆ.
5 State Assembly Election Results 2022 Counting and Updates: ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯನ್ನು ದೇಶದ ಮಿನಿ ಮಹಾಚುನಾವಣೆ ಎಂದೇ ಪರಿಗಣಿಸುವುದು ವಾಡಿಕೆ. ಇಡೀ ದೇಶದ ಗಮನ ಸೆಳೆದಿರುವ ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರ ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶದ ತಾಜಾ ಮಾಹಿತಿ, ವಿಶ್ಲೇಷಣೆ ಇಲ್ಲಿದೆ.