ಗೋವಾದ ಗ್ರೇಸ್ ಮೆಜೆಸ್ಟಿಕ್ ಹೋಟೆಲ್ನಲ್ಲಿ 40 ಕಾಂಗ್ರೆಸ್ ಅಭ್ಯರ್ಥಿಗಳು; ಕುದರೆ ವ್ಯಾಪಾರ ತಡೆಯಲು ಟೈಟ್ ಸೆಕ್ಯುರಿಟಿ
ಹೋಟೆಲ್ ಸುತ್ತ ಬಾಡಿಗಾರ್ಡ್ಗಳಿಂದ ಕಾವಲು ಕಾಯಲಾಗುತ್ತಿದೆ. ಹೋಟೆಲ್ ಒಳಗೆ ಅನ್ಯರಿಗೆ ಪ್ರವೇಶ ನಿಷಿದ್ಧ ಹೇರಲಾಗಿದೆ. ಗೋವಾ ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಟೈಟ್ ಸೆಕ್ಯುರಿಟಿ ನೀಡಲಾಗಿದೆ. ಕುದರೆ ವ್ಯಾಪಾರ ತಡೆಯಲು ಕಾಂಗ್ರೆಸ್ನಿಂದ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ.
ಪಣಜಿ: ಪಂಚರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದೆ. ಯಾವ ರಾಜ್ಯದಲ್ಲಿ ಯಾರು ಅಧಿಕಾರ ವಹಿಸುತ್ತಾರೆ ಎಂಬ ಬಗ್ಗೆ ಜನರಲ್ಲಿ ಬಹಳ ಕುತೂಹಲ ಮೂಡಿದೆ. ಉತ್ತರ ಪ್ರದೇಶ, ಉತ್ತರಾಖಂಡ್, ಪಂಜಾಬ್, ಗೋವಾ ಹಾಗೂ ಮಣಿಪುರದಲ್ಲಿ ರಾಜಕೀಯ ಕಣ ರಂಗೇರಿದೆ. ಈ ಮಧ್ಯೆ, ರಾಜಕೀಯ ಪಕ್ಷಗಳು ತಮ್ಮ ಪಕ್ಷವನ್ನು ಅಧಿಕಾರಕ್ಕೆ ತರಲು ವಿವಿಧ ಕಸರತ್ತು ನಡೆಸುತ್ತಿದ್ದಾರೆ. ಇತ್ತ ಗೋವಾದಲ್ಲಿ ಕಾಂಗ್ರೆಸ್ ಪಕ್ಷ ತನ್ನ ಶಾಸಕರನ್ನು ರಕ್ಷಿಸಲು ಪ್ರಯತ್ನ ನಡೆಸಿದೆ. ಗೋವಾ ವಿಧಾನಸಭಾ ಚುನಾವಣೆ ಹಿನ್ನೆಲೆ ಮಡಗಾಂವ್ನ ಹೋಟೆಲ್ ಗ್ರೇಸ್ ಮೆಜೆಸ್ಟಿಕ್ನಲ್ಲಿ 40 ಕಾಂಗ್ರೆಸ್ ಅಭ್ಯರ್ಥಿಗಳು ತಂಗಿದ್ದಾರೆ. ಕಾಂಗ್ರೆಸ್ ಪಾರ್ಟಿ ಇಡೀ ಹೋಟೆಲ್ ತನ್ನ ಸುಪರ್ದಿಗೆ ತೆಗೆದುಕೊಂಡಿದೆ.
ಹೋಟೆಲ್ ಸುತ್ತ ಬಾಡಿಗಾರ್ಡ್ಗಳಿಂದ ಕಾವಲು ಕಾಯಲಾಗುತ್ತಿದೆ. ಹೋಟೆಲ್ ಒಳಗೆ ಅನ್ಯರಿಗೆ ಪ್ರವೇಶ ನಿಷಿದ್ಧ ಹೇರಲಾಗಿದೆ. ಗೋವಾ ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಟೈಟ್ ಸೆಕ್ಯುರಿಟಿ ನೀಡಲಾಗಿದೆ. ಕುದರೆ ವ್ಯಾಪಾರ ತಡೆಯಲು ಕಾಂಗ್ರೆಸ್ನಿಂದ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ. ಗೋವಾದಲ್ಲಿ ಒಟ್ಟು 40 ಕ್ಷೇತ್ರಗಳಿದ್ದು ಅಧಿಕಾರ ವಹಿಸಲು ಮ್ಯಾಜಿಕ್ ನಂಬರ್ 21 ಆಗಿದೆ. ಈಗಿನ ಟ್ರೆಂಡ್ ಪ್ರಕಾರ (ಬೆಳಗ್ಗೆ 9 ಗಂಟೆ) 20 ಕ್ಷೇತ್ರಗಳಲ್ಸಿ ಕೈ ಮುನ್ನಡೆ ಸಾಧಿಸಿದೆ. ಗೋವಾದಲ್ಲಿ ಅಧಿಕಾರ ಹಿಡಿಯಲು ಕಾಂಗ್ರೆಸ್ ಸಿದ್ಧತೆ ನಡೆಸುತ್ತಿದೆ.
ಗೋವಾ ವಿಧಾನಸಭೆ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಮತ್ತು ಬಿಜೆಪಿ ಸಮನಾಂತರದಲ್ಲಿ ಮುನ್ನಡೆ ಸಾಧಿಸಿದೆ. ಮತ್ತೆ ಗೋವಾದಲ್ಲಿ ಅತಂತ್ರ ಸ್ಥಿತಿ ನಿರ್ಮಾಣ ಸಾಧ್ಯತೆ ಕಂಡುಬಂದಿದೆ. ಈ ಹಿನ್ನೆಲೆ ಮಧ್ಯಾಹ್ನ 3 ಗಂಟೆಗೆ ರಾಜ್ಯಪಾಲರ ಭೇಟಿಗೆ ಕಾಂಗ್ರೆಸ್ ಅವಕಾಶ ಕೋರಿದೆ. ಕೈ ಪಾಳಯದಿಂದ ಈ ಬಾರಿ ಜಾಣ ನಡೆ ಇಡಲಾಗುತ್ತಿದೆ. ಇನ್ನು ಪೂರ್ಣ ಪ್ರಮಾಣದ ಫಲಿತಾಂಶ ಬಂದಿಲ್ಲ. ಅದಕ್ಕೂ ಮುಂಚೆ ರಾಜ್ಯಪಾಲರ ಭೇಟಿಗೆ ಕಾಂಗ್ರೆಸ್ ನಾಯಕರು ಸಜ್ಜಾಗಿದ್ದಾರೆ. ಅಧಿಕಾರಕ್ಕಾಗಿ ಮೊದಲೇ ಮುಖ್ಯಮಂತ್ರಿ ಖರ್ಚಿಗೆ ಕರ್ಚೀಫ್ ಹಾಕಿದ್ದಾರೆ.
ಗೋವಾ ಕಾಂಗ್ರೆಸ್ ಅಭ್ಯರ್ಥಿಗಳ ರಕ್ಷಣೆಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾರ್ಚ್ 8ರಂದು ಗೋವಾಗೆ ತೆರಳಲಿದ್ದಾರೆ ಎಂದು ಮಾಹಿತಿ ಲಭಿಸಿತ್ತು. ಎಐಸಿಸಿ ಸೂಚನೆ ಮೇರೆಗೆ ಡಿ.ಕೆ. ಶಿವಕುಮಾರ್ ಗೋವಾಗೆ ತೆರಳಲಿದ್ದಾರೆ. ಕಳೆದ ಬಾರಿಯಂತೆ ಈ ಬಾರಿ ಶಾಸಕರು ಕೈತಪ್ಪದಂತೆ ಎಚ್ಚರಿಕೆ ವಹಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿತ್ತು. ಗೋವಾದಲ್ಲಿ ನೂತನ ಶಾಸಕರ ರಕ್ಷಣೆ ಜವಾಬ್ದಾರಿ ಡಿ.ಕೆ. ಶಿವಕುಮಾರ್ಗೆ ವಹಿಸಲಾಗಿದೆ. ಗೆಲ್ಲಬಹುದಾದ ಅಭ್ಯರ್ಥಿಗಳನ್ನು ಗುರುತಿಸಿ ಪ್ರತ್ಯೇಕ ಸ್ಥಳಕ್ಕೆ ಇರಿಸುವಂತೆ ನೋಡಿಕೊಳ್ಳಲಾಗಿದೆ. ಗೆಲ್ಲಬಹುದಾದ ಅಭ್ಯರ್ಥಿಗಳನ್ನು ಗುರುತು ಮಾಡಿ ಪ್ರತ್ಯೇಕ ಸ್ಥಳದಲ್ಲಿ ಇರಿಸಲಾಗಿದೆ ಎಂದು ಹೇಳಲಾಗಿತ್ತು.
ಇದನ್ನೂ ಓದಿ: ಗೋವಾದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ರೆಸಾರ್ಟ್ ವಾಸದ ಬೆನ್ನಲ್ಲೇ ತಮ್ಮ ಅಭ್ಯರ್ಥಿಗಳಿಗೆ ಕಾವಲಾಗಿ ನಿಂತ ಎಎಪಿ
ಇದನ್ನೂ ಓದಿ: Goa Assembly Election: ಗೋವಾದಲ್ಲಿ ಅಧಿಕಾರಕ್ಕೇರಲು ಟಿಎಂಸಿ, ಆಮ್ ಆದ್ಮಿ ಜೊತೆ ಮೈತ್ರಿಗೆ ಕಾಂಗ್ರೆಸ್ ಸಿದ್ಧತೆ
Published On - 9:35 am, Thu, 10 March 22