AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

5 State Election Results: ಮತ ಎಣಿಕೆ ಪ್ರಾರಂಭವಾಗಿ 3 ತಾಸು: ಯಾವ ರಾಜ್ಯದಲ್ಲಿ ಯಾವ ಪಕ್ಷಕ್ಕೆ ಮುನ್ನಡೆ? ಟ್ರೆಂಡ್​ ಏನಿದೆ?- ಇಲ್ಲಿದೆ ವಿವರ

ಪಂಜಾಬ್​ ಮತ್ತು ಉತ್ತರಾಖಂಡ್​​ನಲ್ಲಿ ಭರ್ಜರಿ ಪೈಪೋಟಿ ಏರ್ಪಟ್ಟಿದೆ. ಪಂಜಾಬ್​ನಲ್ಲಿ ಕಾಂಗ್ರೆಸ್​ ಮತ್ತು ಆಮ್​ ಆದ್ಮಿ ಪಕ್ಷಗಳ ನಡುವೆ ಹಾಗೂ ಉತ್ತರಾಖಂಡ್​ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್​ ಪಕ್ಷಗಳ ನಡುವೆ ನೆಕ್​ ಟು ನೆಕ್​ ಫೈಟಿಂಗ್​ ನಡೆಯುತ್ತಿದೆ.

5 State Election Results: ಮತ ಎಣಿಕೆ ಪ್ರಾರಂಭವಾಗಿ 3 ತಾಸು: ಯಾವ ರಾಜ್ಯದಲ್ಲಿ ಯಾವ ಪಕ್ಷಕ್ಕೆ ಮುನ್ನಡೆ? ಟ್ರೆಂಡ್​ ಏನಿದೆ?- ಇಲ್ಲಿದೆ ವಿವರ
ಮತ ಎಣಿಕೆಯ ಚಿತ್ರಣ (ಪಿಟಿಐ ಚಿತ್ರ)
TV9 Web
| Edited By: |

Updated on:Mar 10, 2022 | 11:09 AM

Share

ಪಂಚ ರಾಜ್ಯಗಳ ಮತ ಎಣಿಕೆ ಪ್ರಾರಂಭವಾಗಿ ಮೂರು ತಾಸು ಕಳೆದಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಸಹಜವಾಗಿಯೇ ಮುನ್ನಡೆ ಕಾಯ್ದುಕೊಂಡಿದ್ದು, ಎರಡನೇ ಪಕ್ಷವಾಗಿ ಸಮಾಜವಾದಿ ಪಕ್ಷ ಹೆಜ್ಜೆ ಹಾಕುತ್ತಿದೆ. ಇದೇ ಮೊದಲ ಬಾರಿಗೆ ಅಖಿಲೇಶ್ ಯಾದವ್​ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ, ಭರ್ಜರಿ ರೋಡ್​ ಶೋ ನಡೆಸಿ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ, ಸಿಕ್ಕಾಪಟೆ ಭರವಸೆ ನೀಡಿದ ಹೊರತಾಗಿಯೂ ಅವರಿಗೆ ಈ ಬಾರಿ ಉತ್ತರ ಪ್ರದೇಶ ಕೈತಪ್ಪುವ ಸಾಧ್ಯತೆ ಆರಂಭಿಕ ಟ್ರೆಂಡ್​ನಲ್ಲಿಯೇ ಸ್ಪಷ್ಟವಾಗಿ ಗೋಚರಿಸುತ್ತಿದೆ. ಇನ್ನು ಕಾಂಗ್ರೆಸ್​-ಬಹುಜನ ಸಮಾಜ ಪಾರ್ಟಿಯಂತೂ ಇನ್ನೂ ತಳಮಟ್ಟದಲ್ಲೇ ಇವೆ. ಇನ್ನು ಪಂಜಾಬ್​ ಮತ್ತು ಉತ್ತರಾಖಂಡ್​​ನಲ್ಲಿ ಭರ್ಜರಿ ಪೈಪೋಟಿ ಏರ್ಪಟ್ಟಿದೆ. ಪಂಜಾಬ್​ನಲ್ಲಿ ಕಾಂಗ್ರೆಸ್​ ಮತ್ತು ಆಮ್​ ಆದ್ಮಿ ಪಕ್ಷಗಳ ನಡುವೆ ಹಾಗೂ ಉತ್ತರಾಖಂಡ್​ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್​ ಪಕ್ಷಗಳ ನಡುವೆ ನೆಕ್​ ಟು ನೆಕ್​ ಫೈಟಿಂಗ್​ ನಡೆಯುತ್ತಿದೆ. ಆದರೆ ಒಂದು ನೆನಪಿಟ್ಟುಕೊಳ್ಳಬೇಕು. ಆರಂಭಿಕ ಲೀಡ್​ಗಳು ಕೆಲ ಕಾಲ ಸ್ಥಿರವಾಗಿದ್ದರೂ ಅವರು ಎಂದಿಗೂ ಫಲಿತಾಂಶವನ್ನು ನಿರ್ಧರಿಸುವುದಿಲ್ಲ.

ಉತ್ತರ ಪ್ರದೇಶದಲ್ಲಿ ಬಿಜೆಪಿ ಮುನ್ನಡೆ:  ಉತ್ತರಪ್ರದೇಶದಲ್ಲಿ ಬಿಜೆಪಿ ಆರಂಭಿಕ ಹಂತದಲ್ಲಿ ಮುನ್ನಡೆ ಕಾಯ್ತುಕೊಂಡಿದೆ. ಈ ಬಾರಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದೇ ಆದರೆ ದಾಖಲೆ ಸೃಷ್ಟಿಯಾಗುತ್ತದೆ. ಯಾಕೆಂದರೆ ಉತ್ತರ ಪ್ರದೇಶದಲ್ಲಿ ಇದುವರೆಗೆ ಯಾವುದೇ ಪಕ್ಷ ಸತತವಾಗಿ ಎರಡನೇ ಅವಧಿಗೆ ಸರ್ಕಾರ ರಚನೆ ಮಾಡಿದ್ದೇ ಇಲ್ಲ. ಈಗೊಮ್ಮೆ ಬಿಜೆಪಿ ಪಕ್ಷ ಸರ್ಕಾರ ರಚನೆ ಮಾಡಿದರೆ, ಉತ್ತರ ಪ್ರದೇಶದಲ್ಲಿ ಸತತ ಎರಡನೇ ಬಾರಿಗೆ ಸರ್ಕಾರ ರಚಿಸಿದ ಮೊದಲ ಪಕ್ಷವೆಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಚುನಾವಣೋತ್ತರ ಸಮೀಕ್ಷೆಗಳೂ ಸಹ ಉತ್ತರ ಪ್ರದೇಶದಲ್ಲಿ ಎರಡನೇ ಬಾರಿಗೆ ಯೋಗಿ ಆದಿತ್ಯನಾಥ್ ಸರ್ಕಾರ ಆಡಳಿತ ಚುಕ್ಕಾಣಿ ಹಿಡಿಯಲಿದೆ ಎಂಬುದನ್ನು ಹೇಳಿವೆ. ಇಲ್ಲಿ ಬಿಜೆಪಿ 220-300 ಸೀಟುಗಳನ್ನು ಗೆದ್ದು, ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿವೆ.

ಉತ್ತರಾಖಂಡ್​​, ಗೋವಾದಲ್ಲಿ ಫೈಟ್​:  ಇಲ್ಲಿ ಕಾಂಗ್ರೆಸ್​ ಮತ್ತು ಬಿಜೆಪಿ ನಡುವೆ ಬಿಗಿ ಫೈಟ್​ ನಡೆಯಲಿದೆ. ಈ ಬಾರಿ ಕಾಂಗ್ರೆಸ್​ ಸರ್ಕಾರ ರಚನೆಯಾಗಬಹುದು ಎಂದು ಸಮೀಕ್ಷೆಗಳು ಹೇಳಿದ್ದರೂ, ಆರಂಭಿಕ ಹಂತದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. 2017ರಲ್ಲಿ ಉತ್ತರಾಖಂಡ್​​ನ 70 ಕ್ಷೇತ್ರಗಳಲ್ಲಿ ಬಿಜೆಪಿ 57 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. ಆದರೆ ಈ ಬಾರಿ ಬಿಜೆಪಿ 36-46 ಕ್ಷೇತ್ರಗಳನ್ನಷ್ಟೇ ಗೆಲ್ಲಬಹುದು ಎಂಬುದು ಸಮೀಕ್ಷಾ ಫಲಿತಾಂಶ.  ಗೋವಾದಲ್ಲೂ ಹಾಗೇ ಆಗಿದೆ ಇಲ್ಲಿ ತಾವೇ ಮತ್ತೆ ಸರ್ಕಾರ ರಚನೆ ಮಾಡುವುದಾಗಿ ಪ್ರತಿಪಾದಿಸಿದೆ. ಆದರೆ ಕಾಂಗ್ರೆಸ್ ಇಲ್ಲಿ ಫೈಟ್​ ಕೊಡುತ್ತಿದೆ. ಆಪ್​, ಟಿಎಂಸಿ, ಎಂಜಿಪಿಗಳಿಂದ ಮತ ಒಡೆಯುವ ಸಾಧ್ಯತೆ ಇದೆ.

ಪಂಜಾಬ್​​ನಲ್ಲಿ ಆಪ್​ ! : ಇದು ಅಚ್ಚರಿಯ ಬೆಳವಣಿಗೆ. ಸದ್ಯ ಪಂಜಾಬ್​​ಲ್ಲಿ ಆಪ್​ ಮತ್ತು ಕಾಂಗ್ರೆಸ್​ ನಡುವೆ ನೆಟ್​ ಟು ನೆಕ್​ ಫೈಟ್ ಇದೆ. ಪಂಜಾಬ್​ ಕಾಂಗ್ರೆಸ್​ನಲ್ಲಿ ಆಂತರಿಕ ಕಲಹವಿದೆ. ಅಲ್ಲಿ ಪಕ್ಷದ ಮುಖ್ಯಸ್ಥ ನವಜೋತ್​ ಸಿಂಗ್​ ಸಿಧು ಕಾರಣದಿಂದ ಹಿಂದಿನ ಮುಖ್ಯಮಂತ್ರಿ ಅಮರಿಂದರ್ ಸಿಂಗ್​ ರಾಜೀನಾಮೆ ಕೊಟ್ಟು, ಬಳಿಕ ಚರಣಜಿತ್​ ಸಿಂಗ್ ಛನ್ನಿ ಆ ಹುದ್ದೆಗೆ ಏರಿದ್ದರು. ಅದಾದ ಮೇಲೆ ಕೂಡ ಸಿಧು ಗೊಣಗಾಟ ಮುಂದುವರಿದಿತ್ತು. ಸದ್ಯ ಎಲ್ಲವೂ ಸರಿ ಇರುವಂತೆ ಬಿಂಬಿಸಿದ್ದರೂ ಕೂಡ ಆಗಾಗ ಅಸಮಾಧಾನದ ಹೊಗೆ ಏಳುತ್ತಲೇ ಇದೆ. ಮುಂದಿನ ಅವಧಿಗೂ ಚರಣಜಿತ್​ ಸಿಂಗ್ ಛನ್ನಿಯವರನ್ನೇ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿದೆ.  ಅಲ್ಲಿ ಈ ಬಾರಿ ಆಪ್​ ಅಧಿಕಾರಕ್ಕೆ ಬರುತ್ತದೆ ಎಂಬುದು ಸಮೀಕ್ಷೆಗಳ ಅಂಬೋಣ. ಆಪ್ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ಕೂಡ ಜಿಲೇಬಿ, ಸಿಹಿಯನ್ನು ಸಿದ್ಧವಾಗಿಟ್ಟುಕೊಂಡಿದ್ದಾರೆ.

ಮಣಿಪುರದಲ್ಲೂ ಬಿಜೆಪಿ ಮುನ್ನಡೆ:  ದೂರದ ರಾಜ್ಯ ಮಣಿಪುರದಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಸ್ಪಷ್ಟಪಡಿಸಿವೆ. ಅದರಂತೆ ಬೆಳಗ್ಗೆಯಿಂದ ಶುರುವಾದ ಮತ ಎಣಿಕೆಯ ಪ್ರಾರಂಭಿಕ ಹಂತದಲ್ಲಿ ಬಿಜೆಪಿ ಸುಮಾರು 23 ಕ್ಷೇತ್ರಗಳಲ್ಲಿ ಮುನ್ನಡೆ ಹೊಂದಿದ್ದರೆ, ಕಾಂಗ್ರೆಸ್ ಸುಮಾರು 11 ಕ್ಷೇತ್ರಗಳಲ್ಲಿ ಮುಂದಿದೆ.

ಇದನ್ನೂ ಓದಿ: 5 State Election Results 2022 Live: ಉತ್ತರ ಪ್ರದೇಶದಲ್ಲಿ ನಿಚ್ಚಳ ಬಹುಮತದತ್ತ ಬಿಜೆಪಿ, ನೂರರ ಸನಿಹಕ್ಕೆ ಎಸ್​ಪಿ

Published On - 11:08 am, Thu, 10 March 22