Yogi Adityanath Profile: ಅಜಯ್ ಸಿಂಗ್ ಬಿಷ್ತ್​​ನಿಂದ ಯೋಗಿ ಆದಿತ್ಯನಾಥ್ ವರೆಗೆ; ಪ್ರಭಾವಿ ನಾಯಕನ ಜೀವನ ಚಿತ್ರಣ ಇಲ್ಲಿದೆ

Yogi Adityanath Profile: ಯೋಗಿ ಆದಿತ್ಯನಾಥ್ ಮತ್ತೊಮ್ಮೆ ಸಿಎಂ ಆಗುವುದು ಖಚಿತವಾಗಿದೆ. ಉತ್ತರ ಪ್ರದೇಶದ ಬಿಜೆಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ರಾಜಕೀಯಕ್ಕೆ ಪ್ರವೇಶ ಕೊಡುವ ಮೊದಲು ಹೇಗಿದ್ದರು? ಏನು ಮಾಡುತ್ತಿದ್ದರು? ಅವರ ಪೂರ್ವಾಶ್ರಮದ ಹೆಸರೇನು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Yogi Adityanath Profile: ಅಜಯ್ ಸಿಂಗ್ ಬಿಷ್ತ್​​ನಿಂದ ಯೋಗಿ ಆದಿತ್ಯನಾಥ್ ವರೆಗೆ; ಪ್ರಭಾವಿ ನಾಯಕನ ಜೀವನ ಚಿತ್ರಣ ಇಲ್ಲಿದೆ
ಸಿಎಂ ಯೋಗಿ ಆದಿತ್ಯನಾಥ್​
Follow us
|

Updated on:Mar 10, 2022 | 12:42 PM

Yogi Adityanath | ಯೋಗಿ ಆದಿತ್ಯನಾಥ್. ಭಾರತದ ಮುಂದಿನ ಪ್ರಧಾನಿ ಎಂದೇ ಬಿಂಬಿತವಾದ ಈ ಹೆಸರು ಯಾವತ್ತೂ ಮೋದಿ (Narendra Modi) ಜೊತೆಗೆ ತಳುಕು ಹಾಕಿಕೊಂಡಿರುತ್ತದೆ. ಮೋದಿ- ಯೋಗಿ ಎಂಬುದು ಭಾರತೀಯ ಜನತಾ ಪಾರ್ಟಿ (BJP) ಮತ್ತು ಹಿಂದೂ ಸಮಾಜದ (Hindu Community) ನಾಯಕರ, ಅಭಿಮಾನಿಗಳ ಅಚ್ಚುಮೆಚ್ಚಿನ ಹೆಸರು. ಉತ್ತರ ಪ್ರದೇಶದ ಮುಖ್ಯಮಂತ್ರಿ (Uttar Pradesh CM) ಆಗಿರುವ ಯೋಗಿ ಆದಿತ್ಯನಾಥ್ ಈ ಬಾರಿಯ ಚುನಾವಣೆಯಲ್ಲಿ ಕೂಡ ಗೆಲುವು ಸಾಧಿಸಿ ಮತ್ತೊಮ್ಮೆ ಸಿಎಂ ಗದ್ದುಗೆಗೆ ಏರುತ್ತಿದ್ದಾರೆ. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ 2022 (UP Assembly Election 2022) ರಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಸಾಧಿಸಿ ಮುನ್ನಡೆಯುತ್ತಿದೆ. ಆ ಮೂಲಕ, ಯೋಗಿ ಆದಿತ್ಯನಾಥ್ ಮತ್ತೊಮ್ಮೆ ಸಿಎಂ ಆಗುವುದು ಖಚಿತವಾಗಿದೆ. ಉತ್ತರ ಪ್ರದೇಶದ ಬಿಜೆಪಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ರಾಜಕೀಯಕ್ಕೆ ಪ್ರವೇಶ ಕೊಡುವ ಮೊದಲು ಹೇಗಿದ್ದರು? ಏನು ಮಾಡುತ್ತಿದ್ದರು? ಅವರ ಪೂರ್ವಾಶ್ರಮದ ಹೆಸರೇನು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಯೋಗಿ ಆದಿತ್ಯನಾಥ್ ಅವರು ಉತ್ತಮ ವಾಗ್ಮಿ ಮತ್ತು ತಮ್ಮ ಭಾಷಣದಿಂದ ಯಾರನ್ನಾದರೂ ಆಕರ್ಷಿಸುವ ಸಾಮರ್ಥ್ಯ ಹೊಂದಿದ್ದಾರೆ. ಆದಿತ್ಯನಾಥ್ 5 ಜೂನ್ 1972 ರಂದು ಉತ್ತರಾಖಂಡ್‌ನ ಪೌರಿ ಗರ್ವಾಲ್ ಜಿಲ್ಲೆಯ ಯಮಕೇಶ್ವರ ತೆಹಸಿಲ್‌ನ ಪಂಚೂರ್ ಗ್ರಾಮದಲ್ಲಿ ಜನಿಸಿದರು. ಆ ಸಮಯದಲ್ಲಿ ಆ ಭಾಗವು ಉತ್ತರ ಪ್ರದೇಶದ ಅಡಿಯಲ್ಲಿಯೇ ಇತ್ತು. ಯೋಗಿ ಆದಿತ್ಯನಾಥ್ ಗರ್ವಾಲಿ ರಜಪೂತ ಸಮುದಾಯದವರು. ಅವರ ತಂದೆಯ ಹೆಸರು ಆನಂದ್ ಸಿಂಗ್ ಬಿಷ್ತ್ ಮತ್ತು ತಾಯಿಯ ಹೆಸರು ಸಾವಿತ್ರಿ ದೇವಿ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿಜವಾದ ಹೆಸರು ಅಜಯ್ ಸಿಂಗ್ ಬಿಷ್ತ್.

ಯೋಗಿ 1993 ರಲ್ಲಿ ಗೋರಖ್‌ಪುರಕ್ಕೆ ಬಂದರು. ಇಲ್ಲಿ ಅವರು ಗೋರಖ್‌ನಾಥ್ ದೇವಸ್ಥಾನದ ಮಹಂತ್ ಇಲ್ಲೀಲನಾಥ್ ಅವರನ್ನು ಭೇಟಿಯಾದರು. ಆದಿತ್ಯನಾಥ್ ಕ್ರಮನಾಥ್ ಎಂಬವರಿಂದ ಸನ್ಯಾಸ ದೀಕ್ಷೆಯನ್ನು ಪಡೆದರು. 1994 ರಲ್ಲಿ ಸನ್ಯಾಸಿಯಾದರು. ಇದರಿಂದಾಗಿ ಅವರ ಹೆಸರನ್ನು ಅಜಯ್ ಸಿಂಗ್ ಬಿಷ್ತ್ ನಿಂದ ಯೋಗಿ ಆದಿತ್ಯನಾಥ್ ಎಂದು ಬದಲಾಯಿಸಲಾಯಿತು.

ಯೋಗಿ ಆದಿತ್ಯನಾಥ್ ಹಿಂದೂ ಯುವ ವಾಹಿನಿಯ ಸಂಸ್ಥಾಪಕರೂ ಹೌದು

ಪ್ರಸ್ತುತ ಗಮನಿಸಿದರೆ, ಸುಮಾರು ಎರಡು ದಶಕಗಳಿಂದ ಯೋಗಿ ಆದಿತ್ಯನಾಥ್ ಬಿಜೆಪಿ ಜೊತೆಗೆ ಗಟ್ಟಿಯಾಗಿ ಗುರುತಿಸಿಕೊಂಡಿದ್ದಾರೆ. 1998 ರಲ್ಲಿ, ಯೋಗಿ ಭಾರತೀಯ ಜನತಾ ಪಕ್ಷದ ಟಿಕೆಟ್‌ ಪಡೆದು ಮೊದಲ ಬಾರಿಗೆ ಗೋರಖ್‌ಪುರ ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದರು. ಅವರು ಆ ಚುನಾವಣೆಯಲ್ಲಿ ಗೆದ್ದರು ಕೂಡ. ಲೋಕಸಭೆ ಚುನಾವಣೆಯಲ್ಲಿ ಅವರು ಅತ್ಯಂತ ಕಿರಿಯ ಸಂಸದರಾಗಿದ್ದರು. ಆಗ ಅವರಿಗೆ ಕೇವಲ 26 ವರ್ಷ ವಯಸ್ಸಾಗಿತ್ತು. 1999ರ ಲೋಕಸಭೆ ಚುನಾವಣೆಯಲ್ಲಿ ಅವರು ಮತ್ತೆ ಸಂಸದರಾಗಿ ಆಯ್ಕೆಯಾದರು. ಅವರ ಹೆಸರು ಅತ್ಯಂತ ಕಿರಿಯ ಸಂಸದ ಎಂಬ ದಾಖಲೆಯನ್ನು ಹೊಂದಿದೆ.

ಯೋಗಿ ಆದಿತ್ಯನಾಥ್ ಹಿಂದೂ ಯುವ ವಾಹಿನಿಯ ಸಂಸ್ಥಾಪಕರೂ ಹೌದು. ಹಿಂದೂ ಯುವ ವಾಹಿನಿ ಸಂಘಟನೆಯು ಹಿಂದೂ ಯುವಕರ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಷ್ಟ್ರೀಯತಾವಾದಿ ಗುಂಪು. 19 ಮಾರ್ಚ್ 2017 ರಂದು ಅವರು ಉತ್ತರ ಪ್ರದೇಶದ 21 ನೇ ಮುಖ್ಯಮಂತ್ರಿಯಾದರು.

ಯೋಗಿ ಆದಿತ್ಯನಾಥ್​ಗೆ ಗಣಿತದಲ್ಲಿ ಆಸಕ್ತಿ

ಚಿಕ್ಕ ವಯಸ್ಸಿನಲ್ಲೇ ಸನ್ಯಾಸ ಸ್ವೀಕರಿಸಿದ ಅವರು ಅಧ್ಯಯನದಲ್ಲಿ ಹೇಗಿದ್ದರು ಮತ್ತು ಅವರ ವಿದ್ಯಾರ್ಥಿ ಜೀವನ ಹೇಗಿತ್ತು ಎಂಬುದನ್ನು ನೋಡೋಣ. ಯೋಗಿ ಆದಿತ್ಯನಾಥ್ ಗಣಿತದ ಬಗ್ಗೆ ಆಸಕ್ತಿ ಹೊಂದಿದ್ದರು. ಗೋರಖ್‌ಪುರದ ಪ್ರಸಿದ್ಧ ಗೋರಖನಾಥ ದೇವಾಲಯದ ಮುಖ್ಯಸ್ಥ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದು, ಈ ಬಾರಿಯೂ ಯೋಗಿ ಅಧಿಕಾರ ವಹಿಸುತ್ತಿದ್ದಾರೆ.

ಯೋಗಿ ಆದಿತ್ಯನಾಥ್ 1977 ರಲ್ಲಿ ತೆಹ್ರಿ ಗದ್ವಾಲ್‌ನ ಗಾಜಾ ಶಾಲೆಯಿಂದ ತಮ್ಮ ಶಿಕ್ಷಣವನ್ನು ಪ್ರಾರಂಭಿಸಿದರು. 1989 ರಲ್ಲಿ, ಅವರು ಋಷಿಕೇಶದ ಭಾರತ್ ಮಂದಿರ ಇಂಟರ್ ಕಾಲೇಜ್‌ನಿಂದ 12 ನೇ ತರಗತಿಯಲ್ಲಿ ಉತ್ತೀರ್ಣರಾದರು. 1992 ರಲ್ಲಿ ಹೇಮಾವತಿ ನಂದನ್ ಬಹುಗುಣ ಗದ್ವಾಲ್ ವಿಶ್ವವಿದ್ಯಾಲಯದಿಂದ ಗಣಿತಶಾಸ್ತ್ರದಲ್ಲಿ ಬಿಎಸ್ಸಿ ಮಾಡಿದರು. ಕಾಲೇಜಿನ ಕಾಲದಿಂದಲೂ ಅವರು ತಮ್ಮ ಮಾತಿನ ಗುಣದಿಂದ ಬಹಳ ಪ್ರಸಿದ್ಧರಾಗಿದ್ದರು.

ಇದನ್ನೂ ಓದಿ: Yogi Adityanath Education: ಗಣಿತದಲ್ಲಿ ಆಸಕ್ತಿ ಹೊಂದಿದ್ದ ಯೋಗಿ ಆದಿತ್ಯನಾಥ್; ಹಲವು ಕುತೂಹಲಕಾರಿ ಮಾಹಿತಿಗಳು ಇಲ್ಲಿದೆ

ಇದನ್ನೂ ಓದಿ: 5 State Election Results 2022 Live: ಉತ್ತರ ಪ್ರದೇಶ, ಉತ್ತರಾಖಂಡದಲ್ಲಿ ಮತ್ತೆ ಬಿಜೆಪಿ, ಗೋವಾ, ಮಣಿಪುರದಲ್ಲಿಯೂ ಬಿಜೆಪಿ ಮುನ್ನಡೆ, ಆಪ್​ಗೆ ಒಲಿದ ಪಂಜಾಬ್

Published On - 12:36 pm, Thu, 10 March 22

ಬಲಗೈಯಲ್ಲಿ 6 ಬೆರಳುಗಳಿದ್ದರೆ ಏನು ಅರ್ಥ? ವಿಡಿಯೋ ನೋಡಿ
ಬಲಗೈಯಲ್ಲಿ 6 ಬೆರಳುಗಳಿದ್ದರೆ ಏನು ಅರ್ಥ? ವಿಡಿಯೋ ನೋಡಿ
Nithya Bhavishya: ಈ ರಾಶಿಯವರಿಂದು ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ
Nithya Bhavishya: ಈ ರಾಶಿಯವರಿಂದು ಹಣವನ್ನು ಕೊಟ್ಟು ಕಳೆದುಕೊಳ್ಳುವಿರಿ
Weekly Horoscope: ಸೆಪ್ಟೆಂಬರ್​​ 9 ರಿಂದ 15ರ ವಾರ ಭವಿಷ್ಯ ತಿಳಿಯಿರಿ
Weekly Horoscope: ಸೆಪ್ಟೆಂಬರ್​​ 9 ರಿಂದ 15ರ ವಾರ ಭವಿಷ್ಯ ತಿಳಿಯಿರಿ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ದರ್ಶನ್ ಇರುವ ಜೈಲಲ್ಲಿ ಗಣೇಶೋತ್ಸವ, ದರ್ಶನ್​ಗೆ ಸಿಗಲಿಲ್ಲ ವಿನಾಯಕನ ದರ್ಶನ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಹುಬ್ಬಳ್ಳಿ ಈದ್ಗಾ ಗಣಪನಿಗೆ ಗಂಗಾ ಆರತಿ ಮಾದರಿಯಲ್ಲಿ ಆರತಿ; ವಿಡಿಯೋ ನೋಡಿ
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
ಚಿಕ್ಕೋಡಿಯಲ್ಲಿ ಎರಡು ಗಣಪತಿ ಮಂಡಳಿ ಯುವಕರ ನಡುವೆ ಗಲಾಟೆ; ವಿಡಿಯೋ ವೈರಲ್​
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
‘ಆರ್​​ಸಿಬಿ ಕ್ಯಾಪ್ಟನ್ ಕೆಎಲ್ ರಾಹುಲ್’: ಚಿನ್ನಸ್ವಾಮಿಯಲ್ಲಿ ಮೊಳಗಿದ ಘೋಷಣೆ
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಒಂದೇ ಓವರ್​ನಲ್ಲಿ 5 ಬೌಂಡರಿ ಚಚ್ಚಿದ ಸರ್ಫರಾಜ್
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಮಸೀದಿ ಆವರಣದಲ್ಲಿ ಗಣೇಶ ಪ್ರತಿಷ್ಠಾಪನೆ: ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶಹಬ್ಬ
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್
ಸ್ಫೋಟಕ ಅರ್ಧಶತಕ ಸಿಡಿಸಿ ಹಳೆ ಲಯಕ್ಕೆ ಮರಳಿದ ಪಂತ್