ಉತ್ತರ ಪ್ರದೇಶದ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಯೋಗಿ ಆದಿತ್ಯನಾಥ್ಗೆ ರಾಜಕೀಯಕ್ಕೂ ಮೊದಲು ಗಣಿತದ ಬಗ್ಗೆ ಆಸಕ್ತಿ ಹೊಂದಿದ್ದರು. ಯುಪಿ ವಿಧಾನಸಭಾ ಚುನಾವಣೆ 2022 (Uttar Pradesh Assembly Election Results 2022) ಫಲಿತಾಂಶಕ್ಕಾಗಿ ದೇಶಾದ್ಯಂತ ಜನರು ಕಾಯುತ್ತಿದ್ದಾರೆ. ಗೋರಖ್‌ಪುರದ ಪ್ರಸಿದ್ಧ ಗೋರಖನಾಥ ದೇವಾಲಯದ ಮುಖ್ಯಸ್ಥ ಯೋಗಿ ಆದಿತ್ಯನಾಥ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದು, ಈ ಬಾರಿಯೂ ಯೋಗಿ ಅಧಿಕಾರ ವಹಿಸುವ ಸೂಚನೆಗಳಿವೆ ಎಂದು ಹೇಳಲಾಗಿದೆ. ಯೋಗಿ ಆದಿತ್ಯನಾಥ್ ಅವರು ಉತ್ತಮ ವಾಗ್ಮಿ ಮತ್ತು ತಮ್ಮ ಭಾಷಣದಿಂದ ಯಾರನ್ನಾದರೂ ಆಕರ್ಷಿಸುವ ಸಾಮರ್ಥ್ಯ ಹೊಂದಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಸನ್ಯಾಸ ಸ್ವೀಕರಿಸಿದ ಅವರು ಅಧ್ಯಯನದಲ್ಲಿ ಹೇಗಿದ್ದರು ಮತ್ತು ಅವರ ವಿದ್ಯಾರ್ಥಿ ಜೀವನ ಹೇಗಿತ್ತು ಎಂಬುದನ್ನು ನೋಡೋಣ. (ಫೋಟೋ ಕೃಪೆ: Instagram)