AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

5 State Election 2022: ಬಿಗಿ ಭದ್ರತೆಯೊಂದಿಗೆ ಪಂಚ ರಾಜ್ಯಗಳ ಮತ ಎಣಿಕೆ ಕಾರ್ಯ ಆರಂಭ; ಇಲ್ಲಿದೆ ಫೋಟೋ ಮಾಹಿತಿ

UP, Punjab, Uttarakhand, Goa and Manipur Vidhan Sabha Election 2022: 2022ರ ವಿಧಾನಸಭಾ ಚುನಾವಣೆಯ ಮತ ಎಣಿಕೆ ಇಂದು ಆರಂಭವಾಗಿದೆ. ಇದಕ್ಕಾಗಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.

ಗಂಗಾಧರ​ ಬ. ಸಾಬೋಜಿ
|

Updated on:Mar 10, 2022 | 11:39 AM

Share
ಉತ್ತರ ಪ್ರದೇಶ, ಪಂಜಾಬ್ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಮುಗಿದಿದೆ. ಈ ರಾಜ್ಯಗಳಲ್ಲಿ ಗುರುವಾರ ಅಂದರೆ ಮಾರ್ಚ್ 10 ರಂದು ಮತ ಎಣಿಕೆ ಆರಂಭವಾಗಿದೆ. ಮತ ಎಣಿಕೆಯ ಸುತ್ತಲೂ ಪೊಲೀಸ್ ಕಾವಲು ನಿಯೋಜಿಸಲಾಗಿದ್ದು, ಹಲವೆಡೆ ಸೆಕ್ಷನ್ 144 ಜಾರಿಗೊಳಿಸಲಾಗಿದೆ. (ಪಿಟಿಐ)

1 / 6
ಲಕ್ನೋದ ಹೆಚ್ಚುವರಿ ಸಿಇಒ ಬಿ.ಡಿ. ರಾಮ್ ತಿವಾರಿ ಸ್ಟ್ರಾಂಗ್‌ರೂಮ್ ಹೊರಗೆ ಸಿಎಪಿಎಫ್ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ. ಅಂಚೆ ಮತಗಳು ಮತ್ತು ಇವಿಎಂ ಮತಗಳ ಎಣಿಕೆಯು ಇಂದು ಬೆಳಿಗ್ಗೆ 8 ಮತ್ತು 8:30 ಕ್ಕೆ ಪ್ರಾರಂಭವಾಗುತ್ತದೆ.

2 / 6
5 State Election 2022: ಬಿಗಿ ಭದ್ರತೆಯೊಂದಿಗೆ ಪಂಚ ರಾಜ್ಯಗಳ ಮತ ಎಣಿಕೆ ಕಾರ್ಯ ಆರಂಭ; ಇಲ್ಲಿದೆ ಫೋಟೋ ಮಾಹಿತಿ

ಅಂಚೆ ಮತಗಳ ಎಣಿಕೆ ಮುಗಿದ ತಕ್ಷಣ ನಾವು ಕೊನೆಯ ಸುತ್ತಿನ ಇ.ವಿ.ಎಂ ಎಣಿಕೆಯೊಂದಿಗೆ ಪ್ರಾರಂಭಿಸುತ್ತೇವೆ ಎಂದು ಲಖನೌ ಸಿಇಒ ಬಿ.ಡಿ. ರಾಮ್ ತಿವಾರಿ ಹೇಳಿದ್ದಾರೆ.

3 / 6
5 State Election 2022: ಬಿಗಿ ಭದ್ರತೆಯೊಂದಿಗೆ ಪಂಚ ರಾಜ್ಯಗಳ ಮತ ಎಣಿಕೆ ಕಾರ್ಯ ಆರಂಭ; ಇಲ್ಲಿದೆ ಫೋಟೋ ಮಾಹಿತಿ

ಎಲ್ಲ 13 ಜಿಲ್ಲೆಗಳ ಮತ ಎಣಿಕೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಉತ್ತರಾಖಂಡ ಮುಖ್ಯ ಚುನಾವಣಾಧಿಕಾರಿ ಸೌಜನ್ಯ ತಿಳಿಸಿದ್ದಾರೆ. ಪ್ರತಿ ವಿಧಾನಸಭೆಗೆ 3 ಸಭಾಂಗಣಗಳಿದ್ದು, ಅದರಲ್ಲಿ 2 ಇವಿಎಂಗಳನ್ನು ಎಣಿಕೆ ಮಾಡಲಾಗುವುದು ಮತ್ತು ಒಂದರಲ್ಲಿ ಅಂಚೆ ಮತ ಎಣಿಕೆ ಇರುತ್ತದೆ.

4 / 6
5 State Election 2022: ಬಿಗಿ ಭದ್ರತೆಯೊಂದಿಗೆ ಪಂಚ ರಾಜ್ಯಗಳ ಮತ ಎಣಿಕೆ ಕಾರ್ಯ ಆರಂಭ; ಇಲ್ಲಿದೆ ಫೋಟೋ ಮಾಹಿತಿ

ಅದೇ ಸಮಯದಲ್ಲಿ, ಉತ್ತರಾಖಂಡದ ಎಲ್ಲಾ 13 ಜಿಲ್ಲೆಗಳಲ್ಲಿ 3-ಲೇಯರ್ ಭದ್ರತೆ ಮತ್ತು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮತ ಎಣಿಕೆ ಕೇಂದ್ರಕ್ಕೆ ಮೊಬೈಲ್ ಫೋನ್‌ಗಳನ್ನು ಅನುಮತಿಸಲಾಗುವುದಿಲ್ಲ.

5 / 6
5 State Election 2022: ಬಿಗಿ ಭದ್ರತೆಯೊಂದಿಗೆ ಪಂಚ ರಾಜ್ಯಗಳ ಮತ ಎಣಿಕೆ ಕಾರ್ಯ ಆರಂಭ; ಇಲ್ಲಿದೆ ಫೋಟೋ ಮಾಹಿತಿ

ಹರಿದ್ವಾರ ಡಿ.ಎಂ. ವಿನಯ್ ಶಂಕರ್ ಪಾಂಡೆ ಮಾತನಾಡಿ, ಜಿಲ್ಲೆಯಲ್ಲಿ 11 ವಿಧಾನಸಭಾ ಸ್ಥಾನಗಳಿವೆ. ಮತ ಎಣಿಕೆಗೆ ಮೂರು ಹಂತದ ಭದ್ರತಾ ವ್ಯವಸ್ಥೆ ಇರಲಿದೆ. ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿಯಲ್ಲಿರುತ್ತದೆ ಮತ್ತು ಮೆರವಣಿಗೆಗೆ ಅವಕಾಶ ನೀಡಲಾಗುವುದಿಲ್ಲ ಎಂದು ಹೇಳಿದ್ದಾರೆ.

6 / 6

Published On - 11:12 am, Thu, 10 March 22