- Kannada News Photo gallery 5 State Election 2022: Five Counter Vote Counting Begins With Tight Security; Here's the photo information
5 State Election 2022: ಬಿಗಿ ಭದ್ರತೆಯೊಂದಿಗೆ ಪಂಚ ರಾಜ್ಯಗಳ ಮತ ಎಣಿಕೆ ಕಾರ್ಯ ಆರಂಭ; ಇಲ್ಲಿದೆ ಫೋಟೋ ಮಾಹಿತಿ
UP, Punjab, Uttarakhand, Goa and Manipur Vidhan Sabha Election 2022: 2022ರ ವಿಧಾನಸಭಾ ಚುನಾವಣೆಯ ಮತ ಎಣಿಕೆ ಇಂದು ಆರಂಭವಾಗಿದೆ. ಇದಕ್ಕಾಗಿ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
Updated on:Mar 10, 2022 | 11:39 AM



ಅಂಚೆ ಮತಗಳ ಎಣಿಕೆ ಮುಗಿದ ತಕ್ಷಣ ನಾವು ಕೊನೆಯ ಸುತ್ತಿನ ಇ.ವಿ.ಎಂ ಎಣಿಕೆಯೊಂದಿಗೆ ಪ್ರಾರಂಭಿಸುತ್ತೇವೆ ಎಂದು ಲಖನೌ ಸಿಇಒ ಬಿ.ಡಿ. ರಾಮ್ ತಿವಾರಿ ಹೇಳಿದ್ದಾರೆ.

ಎಲ್ಲ 13 ಜಿಲ್ಲೆಗಳ ಮತ ಎಣಿಕೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಉತ್ತರಾಖಂಡ ಮುಖ್ಯ ಚುನಾವಣಾಧಿಕಾರಿ ಸೌಜನ್ಯ ತಿಳಿಸಿದ್ದಾರೆ. ಪ್ರತಿ ವಿಧಾನಸಭೆಗೆ 3 ಸಭಾಂಗಣಗಳಿದ್ದು, ಅದರಲ್ಲಿ 2 ಇವಿಎಂಗಳನ್ನು ಎಣಿಕೆ ಮಾಡಲಾಗುವುದು ಮತ್ತು ಒಂದರಲ್ಲಿ ಅಂಚೆ ಮತ ಎಣಿಕೆ ಇರುತ್ತದೆ.

ಅದೇ ಸಮಯದಲ್ಲಿ, ಉತ್ತರಾಖಂಡದ ಎಲ್ಲಾ 13 ಜಿಲ್ಲೆಗಳಲ್ಲಿ 3-ಲೇಯರ್ ಭದ್ರತೆ ಮತ್ತು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಮತ ಎಣಿಕೆ ಕೇಂದ್ರಕ್ಕೆ ಮೊಬೈಲ್ ಫೋನ್‌ಗಳನ್ನು ಅನುಮತಿಸಲಾಗುವುದಿಲ್ಲ.

ಹರಿದ್ವಾರ ಡಿ.ಎಂ. ವಿನಯ್ ಶಂಕರ್ ಪಾಂಡೆ ಮಾತನಾಡಿ, ಜಿಲ್ಲೆಯಲ್ಲಿ 11 ವಿಧಾನಸಭಾ ಸ್ಥಾನಗಳಿವೆ. ಮತ ಎಣಿಕೆಗೆ ಮೂರು ಹಂತದ ಭದ್ರತಾ ವ್ಯವಸ್ಥೆ ಇರಲಿದೆ. ಜಿಲ್ಲೆಯಲ್ಲಿ ಸೆಕ್ಷನ್ 144 ಜಾರಿಯಲ್ಲಿರುತ್ತದೆ ಮತ್ತು ಮೆರವಣಿಗೆಗೆ ಅವಕಾಶ ನೀಡಲಾಗುವುದಿಲ್ಲ ಎಂದು ಹೇಳಿದ್ದಾರೆ.
Published On - 11:12 am, Thu, 10 March 22









