Assembly Election Results 2022: ಪಂಚರಾಜ್ಯ ಚುನಾವಣೆಯಲ್ಲಿ ಸೋತ ಪ್ರಮುಖ ನಾಯಕರು
ಚರಣ್ಜಿತ್ ಸಿಂಗ್ ಚನ್ನಿ ಪಂಜಾಬ್‌ನ ಮೊದಲ ದಲಿತ ಸಿಎಂ. ಚಮ್ಕೌರ್ ಸಾಹಿಬ್‌ನಿಂದ ಮೂರನೇ ಬಾರಿಗೆ ಶಾಸಕರಾದ ಚನ್ನಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸರ್ಕಾರದಲ್ಲಿ ಸಚಿವರಾಗಿದ್ದರು. ಅವರು ಚಮ್ಕೌರ್ ಸಾಹಿಬ್ ಮತ್ತು ಬದೌರ್ ನಿಂದ ಸ್ಪರ್ಧಿಸಿದ್ದರು
ವಿಧಾನಸಭೆ ಚುನಾವಣೆಯಲ್ಲಿ(Assembly Election 2022) ಯಾರು ಗೆಲ್ಲುತ್ತಾರೆ ಮತ್ತು ಸೋಲುತ್ತಾರೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಈ ಬಾರಿಯೂ ಕೆಲವು ಅನಿರೀಕ್ಷಿತ ಫಲಿತಾಂಶಗಳನ್ನು ನಾವು ನೋಡಿದ್ದೇವೆ. ಐದು ರಾಜ್ಯಗಳಾದ ಪಂಜಾಬ್, ಉತ್ತರಾಖಂಡ, ಉತ್ತರ ಪ್ರದೇಶ, ಗೋವಾ ಮತ್ತು ಮಣಿಪುರದಲ್ಲಿ ಪ್ರಮುಖ ನಾಯಕರು ಸೋಲನುಭವಿಸಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡ ಪ್ರಮುಖ ನಾಯಕರು ಇವರು
ಅಮರಿಂದರ್ ಸಿಂಗ್ (ಕಾಂಗ್ರೆಸ್); ಸೋತ ಕ್ಷೇತ್ರ: ಪಟಿಯಾಲ (ಪಂಜಾಬ್) ಅಮರಿಂದರ್ ಸಿಂಗ್, ಪಂಜಾಬ್‌ನ ಮಾಜಿ ಮುಖ್ಯಮಂತ್ರಿ. ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು 2022 ರ ಅಸೆಂಬ್ಲಿ ಚುನಾವಣೆಯಲ್ಲಿ ಎಎಪಿ ಅಭ್ಯರ್ಥಿ ಅಜಿತ್ ಪಾಲ್ ಸಿಂಗ್ ಕೊಹ್ಲಿ ವಿರುದ್ಧ ಸೋತರು. ಸಿಂಗ್ ಅವರು 2002 ರಿಂದ 2007 ರವರೆಗೆ ಮತ್ತು ನಂತರ ಮಾರ್ಚ್ 2017 ರಿಂದ 2019 ರವರೆಗೆ ಪಂಜಾಬ್ ಸಿಎಂ ಆಗಿ ಸೇವೆ ಸಲ್ಲಿಸಿದ್ದರು.
ಜನಾದೇಶವನ್ನು ಒಪ್ಪಿಕೊಂಡ ಸಿಂಗ್ “ಜನರ ತೀರ್ಪನ್ನು ನಾನು ಎಲ್ಲಾ ನಮ್ರತೆಯಿಂದ ಸ್ವೀಕರಿಸುತ್ತೇನೆ. ಪ್ರಜಾಪ್ರಭುತ್ವಕ್ಕೆ ಜಯ ಸಿಕ್ಕಿದೆ. ಪಂಜಾಬಿಗಳು ಪಂಥೀಯ ಮತ್ತು ಜಾತಿ ರೇಖೆಗಳನ್ನು ಮೀರಿ ಮತ ಚಲಾಯಿಸುವ ಮೂಲಕ ಪಂಜಾಬಿಯತ್‌ನ ನಿಜವಾದ ಮನೋಭಾವವನ್ನು ತೋರಿಸಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
I accept the verdict of the people with all humility. Democracy has triumphed. Punjabis have shown true spirit of Punjabiyat by rising and voting above sectarian and caste lines. Congratulations to @AAPPunjab and @BhagwantMann.
— Capt.Amarinder Singh (@capt_amarinder) March 10, 2022
ಹರೀಶ್ ರಾವತ್ (ಕಾಂಗ್ರೆಸ್); ಸೋತ ಕ್ಷೇತ್ರ: ಲಾಲ್ಕುವಾನ್ (ಉತ್ತರಾಖಂಡ) ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ್ ರಾವತ್ ಅವರು ಬಿಜೆಪಿಯ ಡಾ. ಮೋಹನ್ ಸಿಂಗ್ ಬಿಶ್ತ್ ವಿರುದ್ಧ ಸೋತಿದ್ದಾರೆ. ರಾವತ್ ಅವರು 2014 ರಲ್ಲಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ಮೊದಲು ಯುಪಿಎ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿದ್ದರು.
#लालकुआं विधानसभा क्षेत्र से मेरी चुनावी पराजय की औपचारिक घोषणा ही बाकी है। मैं लालकुआं क्षेत्र के लोगों से जिनमें बिंदुखत्ता, बरेली रोड के सभी क्षेत्र सम्मिलित हैं, क्षमा चाहता हूं कि मैं उनका विश्वास अर्जित नहीं कर पाया और जो चुनावी वादे उनसे मैंने किये, 1/2 pic.twitter.com/Ohz0eKff4G
— Harish Rawat (@harishrawatcmuk) March 10, 2022
ನವಜೋತ್ ಸಿಂಗ್ ಸಿಧು (ಕಾಂಗ್ರೆಸ್); ಸೋತ ಕ್ಷೇತ್ರ: ಅಮೃತಸರ ಪೂರ್ವ ಪಂಜಾಬ್‌ನಲ್ಲಿ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರು ಎಎಪಿಯ ಜೀವನ್ ಜ್ಯೋತ್ ಕೌರ್ ವಿರುದ್ಧ ಸೋತಿದ್ದಾರೆ. ಪಿಪಿಸಿಸಿ ಮುಖ್ಯಸ್ಥರಾಗಿ ನಾಮನಿರ್ದೇಶನಗೊಳ್ಳುವ ಮೊದಲು, ಅವರು ರಾಜ್ಯ ಸರ್ಕಾರದಲ್ಲಿ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಸಚಿವರಾಗಿದ್ದರು. ವಿನಮ್ರತೆಯಿಂದ ಜನಾದೇಶವನ್ನು ಸ್ವೀಕರಿಸುತ್ತೇನೆ ಎಂದು ಸಿಧು ಹೇಳಿದ್ದಾರೆ.
The voice of the people is the voice of God …. Humbly accept the mandate of the people of Punjab …. Congratulations to Aap !!!
— Navjot Singh Sidhu (@sherryontopp) March 10, 2022
ಸುಖಬೀರ್ ಸಿಂಗ್ ಬಾದಲ್ (ಶಿರೋಮಣಿ ಅಕಾಲಿದಳ) ; ಸೋತ ಕ್ಷೇತ್ರ: ಜಲಾಲಾಬಾದ್ (ಪಂಜಾಬ್) ಎಸ್‌ಎಡಿ ಅಭ್ಯರ್ಥಿ ಎಎಪಿಯ ಜಗದೀಪ್ ಕಾಂಬೋಜ್ ವಿರುದ್ಧ ಸೋತಿದ್ದಾರೆ. ಅವರು 2009 ರಿಂದ 2017 ರವರೆಗೆ ಪಂಜಾಬ್‌ನ ಉಪ ಮುಖ್ಯಮಂತ್ರಿಯಾಗಿದ್ದರು. ಸೋಲನ್ನು ಒಪ್ಪಿಕೊಂಡ ಬಾದಲ್ “ನಾವು ಪೂರ್ಣ ಹೃದಯದಿಂದ ಮತ್ತು ಸಂಪೂರ್ಣ ನಮ್ರತೆಯಿಂದ ಪಂಜಾಬಿಗಳು ನೀಡಿದ ಆದೇಶವನ್ನು ಸ್ವೀಕರಿಸುತ್ತೇವೆ. ನಮ್ಮ ಮೇಲೆ ನಂಬಿಕೆ ಇಟ್ಟ ಲಕ್ಷಾಂತರ ಪಂಜಾಬಿಗಳಿಗೆ ಮತ್ತು ಅವರ ನಿಸ್ವಾರ್ಥ ಶ್ರಮಕ್ಕಾಗಿ SAD-BSP ಕಾರ್ಯಕರ್ತರಿಗೆ ನಾನು ಕೃತಜ್ಞನಾಗಿದ್ದೇನೆ. ಅವರು ನಮಗೆ ವಹಿಸಿದ ಪಾತ್ರದಲ್ಲಿ ನಾವು ನಮ್ರತೆಯಿಂದ ಅವರ ಸೇವೆಯನ್ನು ಮುಂದುವರಿಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.
We whole-heartedly & with total humility accept the mandate given by Punjabis. I am grateful to lakhs of Punjabis who placed their trust in us & to to SAD-BSP workers for their selfless toil. We will continue to serve them with humility in the role they have assigned to us. 1/2
— Sukhbir Singh Badal (@officeofssbadal) March 10, 2022
ಚರಣ್ಜಿತ್ ಸಿಂಗ್ ಚನ್ನಿ (ಕಾಂಗ್ರೆಸ್) ಸೋತ ಕ್ಷೇತ್ರಗಳು : ಚಮ್ಕೌರ್ ಸಾಹಿಬ್, ಭದೌರ್ (ಪಂಜಾಬ್) ಚರಣ್ಜಿತ್ ಸಿಂಗ್ ಚನ್ನಿ ಪಂಜಾಬ್‌ನ ಮೊದಲ ದಲಿತ ಸಿಎಂ. ಚಮ್ಕೌರ್ ಸಾಹಿಬ್‌ನಿಂದ ಮೂರನೇ ಬಾರಿಗೆ ಶಾಸಕರಾದ ಚನ್ನಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸರ್ಕಾರದಲ್ಲಿ ಸಚಿವರಾಗಿದ್ದರು. ಅವರು ಚಮ್ಕೌರ್ ಸಾಹಿಬ್ ಮತ್ತು ಬದೌರ್ ನಿಂದ ಸ್ಪರ್ಧಿಸಿದ್ದರು. ಚನ್ನಿ ಅವರು ವ್ಯವಹಾರ ಆಡಳಿತ, ರಾಜ್ಯಶಾಸ್ತ್ರ ಮತ್ತು ಕಾನೂನಿನಲ್ಲಿ ಪದವಿಗಳನ್ನು ಹೊಂದಿದ್ದಾರೆ.
ಇದನ್ನೂ ಓದಿ: ನಾವು ಚುನಾವಣೆಯಲ್ಲಿ ಸೋತಿದ್ದೇವೆ, ಧೈರ್ಯಗುಂದಿಲ್ಲ: ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ್ ಮೌರ್ಯ