ಪಂಜಾಬ್ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಚರಣ್‌ಜಿತ್ ಸಿಂಗ್ ಚನ್ನಿ
Charanjit Singh Channi ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷವು 117 ಸ್ಥಾನಗಳಲ್ಲಿ 92 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ 18 ಸ್ಥಾನಗಳಲ್ಲಿ ಗೆದ್ದು ಎರಡನೇ ಸ್ಥಾನದಲ್ಲಿತ್ತು. ಶಿರೋಮಣಿ ಅಕಾಲಿ ದಳ ಮೂರು ಸ್ಥಾನಗಳನ್ನು ಗೆದ್ದರೆ, ಬಿಜೆಪಿ ಮತ್ತು ಬಿಎಸ್‌ಪಿ ಕ್ರಮವಾಗಿ ಎರಡು ಮತ್ತು ಒಂದು ಸ್ಥಾನವನ್ನು ಗೆದ್ದಿವೆ.
ಚಂಡೀಗಢ: ಪಂಜಾಬ್ (Punjab Assembly Election)ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (AAP) ಜಯಭೇರಿ ಬಾರಿಸಿದ ನಂತದ ಶುಕ್ರವಾರ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ (Charanjit Singh Channi) ಅವರು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರಿಗೆ ರಾಜೀನಾಮೆ ಸಲ್ಲಿಸಿದರು. ಚಮ್ಕೌರ್ ಸಾಹಿಬ್ ಮತ್ತು ಭದೌರ್ ಎಂಬ ಎರಡು ಕ್ಷೇತ್ರಗಳಿಂದ ಪಂಜಾಬ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಸಿಎಂ ಚನ್ನಿ ಎರಡೂ ಸ್ಥಾನಗಳಲ್ಲಿ ಸೋಲುಂಡಿದ್ದಾರೆ. ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷವು 117 ಸ್ಥಾನಗಳಲ್ಲಿ 92 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ 18 ಸ್ಥಾನಗಳಲ್ಲಿ ಗೆದ್ದು ಎರಡನೇ ಸ್ಥಾನದಲ್ಲಿತ್ತು. ಶಿರೋಮಣಿ ಅಕಾಲಿ ದಳ ಮೂರು ಸ್ಥಾನಗಳನ್ನು ಗೆದ್ದರೆ, ಬಿಜೆಪಿ ಮತ್ತು ಬಿಎಸ್‌ಪಿ ಕ್ರಮವಾಗಿ ಎರಡು ಮತ್ತು ಒಂದು ಸ್ಥಾನವನ್ನು ಗೆದ್ದಿವೆ. ಪಕ್ಷೇತರರೊಬ್ಬರು ಗೆದ್ದಿದ್ದಾರೆ. ಆಮ್ ಆದ್ಮಿ ಪಕ್ಷ (ಎಎಪಿ) ಮತ್ತು ಅದರ ಚುನಾಯಿತ ಅಭ್ಯರ್ಥಿ ಭಗವಂತ್ ಮಾನ್ ಗೆಲುವಿಗೆ ಅಭಿನಂದನೆ ಸಲ್ಲಿಸಿದ ಚರಣ್‌ಜಿತ್ ಸಿಂಗ್ ಚನ್ನಿ “ನಾನು ಪಂಜಾಬ್ ಜನರ ತೀರ್ಪನ್ನು ವಿನಮ್ರವಾಗಿ ಸ್ವೀಕರಿಸುತ್ತೇನೆ ಮತ್ತು ಗೆಲುವಿಗಾಗಿ ಆಮ್ ಆದ್ಮಿ ಪಾರ್ಟಿ ಮತ್ತು ಅವರ ಚುನಾಯಿತ ಮುಖ್ಯಮಂತ್ರಿ ಭಗವಂತ್ ಮಾನ್ ಜೀ ಅವರನ್ನು ಅಭಿನಂದಿಸುತ್ತೇನೆ. ಅವರು ಜನರ ನಿರೀಕ್ಷೆಯನ್ನು ಈಡೇರಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.
I humbly accept the verdict of the people of Punjab and Congratulate @AamAadmiParty and their elected CM @BhagwantMann Ji for the victory. I hope they will deliver on the expections of people.
— Charanjit S Channi (@CHARANJITCHANNI) March 10, 2022
ಗುರುವಾರ ಪಂಜಾಬ್ ಚುನಾವಣಾ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಚನ್ನಿ ಶುಕ್ರವಾರ ಚಂಡೀಗಢದ ರಾಜಭವನಕ್ಕೆ ಆಗಮಿಸಿ ರಾಜೀನಾಮೆ ಸಲ್ಲಿಸಿದ್ದಾರೆ.
I have given my resignation to the Governor. He told me and the cabinet to continue until the new Government is sworn in. I accept the people’s mandate: Outgoing Punjab CM Charanjit Singh Channi in Chandigarh#PunjabElections2022 pic.twitter.com/mZ4UHPEAzm
— ANI (@ANI) March 11, 2022
ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ್ದೇನೆ. ಹೊಸ ಸರ್ಕಾರ ಪ್ರಮಾಣ ವಚನ ಸ್ವೀಕರಿಸುವವರೆಗೂ ನನಗೆ ಸಂಪುಟದಲ್ಲಿ ಮುಂದುವರೆಯಲು ಅವರು ಹೇಳಿದರು. ನಾನು ಜನರ ಆದೇಶವನ್ನು ಸ್ವೀಕರಿಸುತ್ತೇನೆ ಎಂದು ಚಂಡೀಗಢದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಚನ್ನಿ ಹೇಳಿದ್ದಾರೆ.
ಚನ್ನಿ 2017 ರವರೆಗೆ ಸತತ ಮೂರು ಅವಧಿಗೆ ಪ್ರತಿನಿಧಿಸಿರುವ ಚಮ್ಕೌರ್ ಸಾಹಿಬ್ ಕ್ಷೇತ್ರದಲ್ಲಿ, ಚನ್ನಿ ಅವರು ಆಮ್ ಆದ್ಮಿ ಪಕ್ಷದ (ಎಎಪಿ) ಡಾ ಚರಣ್ ಜಿತ್ ಸಿಂಗ್ ಚನ್ನಿ ಅವರಿಂದ ಸುಮಾರು 6,000 ಮತಗಳಿಂದ ಸೋಲಿಸಲ್ಪಟ್ಟರು.
ಭಾರತದ ಚುನಾವಣಾ ಆಯೋಗದ ಇತ್ತೀಚಿನ ಅಂಕಿಅಂಶಗಳ ಪ್ರಕಾರ ಎಎಪಿಯ ಡಾ ಚನ್ನಿ ಅವರು ಸಿಎಂ ಚನ್ನಿ ಅವರ 53,395 ಮತಗಳ ವಿರುದ್ಧ 58,999 ಮತಗಳನ್ನು ಪಡೆದರು.
ಭದೌರ್‌ನಲ್ಲಿ ಆಮ್ ಆದ್ಮಿ ಪಕ್ಷದ ಲಾಭ್ ಸಿಂಗ್ ಉಗೋಕೆ 57,000 ಮತಗಳನ್ನು ಪಡೆದರೆ, ಚನ್ನಿ 23,000 ಮತಗಳನ್ನು ಪಡೆದರು.
ಪಂಜಾಬ್ ಚುನಾವಣೆ 2022 ರಲ್ಲಿ, ಆಮ್ ಆದ್ಮಿ ಪಕ್ಷ (ಎಎಪಿ) 92 ಸ್ಥಾನಗಳನ್ನು ಗೆಲ್ಲುವ ಮೂಲಕ ನೇರ ಬಹುಮತ ಗಳಿಸಿದೆ. ಆಡಳಿತಾರೂಢ ಕಾಂಗ್ರೆಸ್ ಕೇವಲ 18 ವಿಧಾನಸಭಾ ಸ್ಥಾನಗಳನ್ನು ಮತ್ತು ಶಿರೋಮಣಿ ಅಕಾಲಿದಳದ 4 ಸ್ಥಾನಗಳನ್ನು ಮಾತ್ರ ಗೆದ್ದಿದೆ.
1962 ರಿಂದ ಯಾವುದೇ ಪಕ್ಷವು ಪಂಜಾಬ್‌ನಲ್ಲಿ 90 ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದಿಲ್ಲ, ಹೀಗಾಗಿ, ಇದು ಆಮ್ ಆದ್ಮಿ ಪಕ್ಷಕ್ಕೆ ಐತಿಹಾಸಿಕ ವಿಜಯವಾಗಿದೆ.
ಇದನ್ನೂ ಓದಿ: ಪಂಜಾಬ್‌ನಲ್ಲಿ ಆಪ್ ಜಯಭೇರಿ ಬಾರಿಸುತ್ತಿದ್ದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಭಗವಂತ್ ಮಾನ್ರ ಹಳೇ ಕಾಮಿಡಿ ವಿಡಿಯೊ
Published On - 1:15 pm, Fri, 11 March 22