ಮಾರ್ಚ್ 16ರಂದು ಎಎಪಿಯ ಭಗವಂತ್ ಮಾನ್ ಪಂಜಾಬ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ
ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಮಾನ್, ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವಿನ ನಂತರ ಮೊದಲ ಬಾರಿಗೆ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರನ್ನು ಶುಕ್ರವಾರ ಭೇಟಿಯಾದರು.
ಚಂಡೀಗಢ: ಪಂಜಾಬ್‌ನ (Punjab) ನಿಯೋಜಿತ ಮುಖ್ಯಮಂತ್ರಿ ಭಗವಂತ್ ಮಾನ್ (Bhagwant Mann) ಅವರು ಮಾರ್ಚ್ 16 ರಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕಾಮಿಡಿಯನ್ ಆಗಿದ್ದು ನಂತರ ರಾಜಕಾರಣಿ ಆದ 48 ವರ್ಷದ ಮಾನ್ ತಮ್ಮ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ರಾಜಭವನದಲ್ಲಿ ನಡೆಸಲಾಗುವುದಿಲ್ಲ. ಅದರ ಬದಲು ನವಾನ್‌ಶಹರ್ ಜಿಲ್ಲೆಯ ಖಟ್ಕರ್‌ಕಲನ್, ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಪೂರ್ವಜರ ಗ್ರಾಮದಲ್ಲಿ ನಡೆಸಲಾಗುವುದು ಎಂದು ಹೇಳಿದ್ದರು. ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಮಾನ್, ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವಿನ ನಂತರ ಮೊದಲ ಬಾರಿಗೆ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ (Arvind Kejriwal) ಅವರನ್ನು ಶುಕ್ರವಾರ ಭೇಟಿಯಾದರು. ಮಾರ್ಚ್ 13 ರಂದು ಅಮೃತಸರದಲ್ಲಿ ಇವರಿಬ್ಬರ ರೋಡ್ ಶೋ ನಿಗದಿಯಾಗಿದೆ. ಅವರು ತಮ್ಮ ಪ್ರಮಾಣವಚನ ಸಮಾರಂಭಕ್ಕೆ ಕೇಜ್ರಿವಾಲ್ ಅವರನ್ನು ಆಹ್ವಾನಿಸಿದ್ದಾರೆ. ಎಎಪಿಯ ಏಕೈಕ ಸಂಸದರಾದ ಮಾನ್ ಅವರು ತಮ್ಮ ಸಂಗ್ರೂರ್ ಸಂಸದೀಯ ಕ್ಷೇತ್ರದ ವಿಧಾನಸಭಾ ಕ್ಷೇತ್ರವಾದ ಧುರಿಯಿಂದ ರಾಜ್ಯ ಚುನಾವಣೆಯಲ್ಲಿ ಸ್ಪರ್ಧಿಸಿ ಕಾಂಗ್ರೆಸ್‌ನಿಂದ ದಲ್ವಿರ್ ಸಿಂಗ್ ಗೋಲ್ಡಿ ವಿರುದ್ಧ 58,000 ಕ್ಕೂ ಹೆಚ್ಚು ಅಂತರದಿಂದ ಗೆದ್ದರು.
The news you all were waiting for!
Punjab di Aan, Baan aur Shaan ? Sardar @BhagwantMann to take oath as the Chief Minister on 16 March 2022 pic.twitter.com/nQp5Owv1Zr
— AAP (@AamAadmiParty) March 11, 2022
ವಿಧಾನಸಭೆ ಸ್ಥಾನಕ್ಕಾಗಿ ಇದು ಅವರ ಮೂರನೇ ಹೋರಾಟವಾಗಿತ್ತು. ಅವರು 2017 ರ ವಿಧಾನಸಭಾ ಚುನಾವಣೆಯಲ್ಲಿ ಅಕಾಲಿ ದಳದ ಸುಖಬೀರ್ ಸಿಂಗ್ ಬಾದಲ್ ವಿರುದ್ಧ ಜಲಾಲಾಬಾದ್ ಸ್ಥಾನಕ್ಕೆ ಸ್ಪರ್ಧಿಸಿ ವಿಫಲರಾದರು.
2011 ರಲ್ಲಿ ಅವರು ಮನ್‌ಪ್ರೀತ್ ಸಿಂಗ್ ಬಾದಲ್ ನೇತೃತ್ವದ ಪೀಪಲ್ಸ್ ಪಾರ್ಟಿ ಆಫ್ ಪಂಜಾಬ್ ಅಭ್ಯರ್ಥಿಯಾಗಿ ಸಂಗ್ರೂರ್‌ನ ಲೆಹ್ರಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಹಿರಿಯ ಕಾಂಗ್ರೆಸ್ ನಾಯಕಿ ರಾಜಿಂದರ್ ಕೌರ್ ಭಟ್ಟಾಲ್ ವಿರುದ್ಧ ಸೋತರು. ಈ ಬಾರಿಯ ಶಾಸಕಾಂಗ ಸಭೆಗೆ ಪಾದಾರ್ಪಣೆ ಮಾಡುವ ಮೊದಲು, ರಾಜ್ಯದಲ್ಲಿ ಎಎಪಿಯ ಅತ್ಯಂತ ಪರಿಚಿತ ಮುಖವಾದ ಮಾನ್, ಸಂಗ್ರೂರ್‌ನಿಂದ ಎರಡು ಬಾರಿ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
Moment of the day ❤️
When Punjab’s CM-elect @BhagwantMann met AAP’s National Convenor @ArvindKejriwal pic.twitter.com/63u3YXTWbN
— AAP (@AamAadmiParty) March 11, 2022
ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಗುರುವಾರ ಅದ್ಭುತ ಗೆಲುವು ಸಾಧಿಸಿತ್ತು. ಕಾಂಗ್ರೆಸ್ ತನ್ನ ಅರ್ಧದಷ್ಟು ಮತಗಳ ಪಾಲನ್ನು ಕಳೆದುಕೊಂಡು ಎರಡನೇ ಸ್ಥಾನಕ್ಕೆ ತಳ್ಳಲ್ಪಟ್ಟಿತು. ಎಎಪಿ ವಿರುದ್ಧ ಸ್ಪರ್ಧಿಸಿದ್ದ ಎಲ್ಲ ರಾಜಕೀಯ ಪ್ರಮುಖರು ಸೋತಿದ್ದಾರೆ.
ಒಟ್ಟು 117 ಸ್ಥಾನಗಳಲ್ಲಿ ಎಎಪಿ 92 ಮತ್ತು ಕಾಂಗ್ರೆಸ್ 18 ಸ್ಥಾನಗಳನ್ನು ಗೆದ್ದಿದೆ. ಅಕಾಲಿದಳ 3 ಮತ್ತು ಬಿಜೆಪಿ 2 ಗಳಿಸಿತು.
ಇದನ್ನೂ ಓದಿ: Bhagwant Mann: ಪಂಜಾಬ್ ಮುಖ್ಯಮಂತ್ರಿ ಗದ್ದುಗೆ ಕಾಮಿಡಿಯನ್ ಪಾಲಿಗೆ; ಮುಂದಿನ ಸಿಎಂ ಭಗವಂತ್ ಮಾನ್ ರಾಜಕೀಯ ಜರ್ನಿ ಹೀಗಿತ್ತು