ನಾವು ಚುನಾವಣೆಯಲ್ಲಿ ಸೋತಿದ್ದೇವೆ, ಧೈರ್ಯಗುಂದಿಲ್ಲ: ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ್ ಮೌರ್ಯ

ನಾವು ಚುನಾವಣೆಯಲ್ಲಿ ಸೋತಿದ್ದೇವೆ, ಧೈರ್ಯಗುಂದಿಲ್ಲ: ಸಮಾಜವಾದಿ ಪಕ್ಷದ ನಾಯಕ ಸ್ವಾಮಿ ಪ್ರಸಾದ್ ಮೌರ್ಯ
ಸ್ವಾಮಿ ಪ್ರಸಾದ್ ಮೌರ್ಯ

Swami Prasad Maurya ನಾನು ಜನರ ಆದೇಶವನ್ನು ಗೌರವಿಸುತ್ತೇನೆ, ನಾನು ಎಲ್ಲಾ ವಿಜೇತ ಅಭ್ಯರ್ಥಿಗಳನ್ನು ಅಭಿನಂದಿಸುತ್ತೇನೆ. ಕೆಲವರು ಸೋಲುತ್ತಾರೆ, ಕೆಲವರ ಚುನಾವಣೆಯಲ್ಲಿ ಗೆಲ್ಲುತ್ತಾರೆ. ಇವು ಪ್ರಜಾಪ್ರಭುತ್ವದ 2 ಅಂಶಗಳು. ಆದ್ದರಿಂದ, ನಾವು ಗೆಲುವನ್ನು ಸ್ವೀಕರಿಸಿದಂತೆಯೇ ನಾವು ಸೋಲನ್ನು ಸ್ವೀಕರಿಸುತ್ತೇವೆ.

TV9kannada Web Team

| Edited By: Rashmi Kallakatta

Mar 10, 2022 | 10:07 PM

ಲಖನೌ: ಯೋಗಿ ಆದಿತ್ಯನಾಥ (Yogi Adityanth) ಸರ್ಕಾರದಲ್ಲಿ ಸಚಿವರಾಗಿದ್ದ ಸಮಾಜವಾದಿ ಪಕ್ಷದ ಅಭ್ಯರ್ಥಿ ಸ್ವಾಮಿ ಪ್ರಸಾದ್ ಮೌರ್ಯ (Swami Prasad Maurya) ಅವರು ವಿಧಾನಸಭೆ ಚುನಾವಣೆಗೆ ವಾರಗಳ ಮೊದಲು ಬಿಜೆಪಿಗೆ(BJP) ರಾಜೀನಾಮೆ ನೀಡಿದ್ದರು. ಚುನಾವಣಾ ಫಲಿತಾಂಶದ ನಂತರ ಪ್ರತಿಕ್ರಿಯಿಸಿದ ಅವರು ಚುನಾವಣೆಯಲ್ಲಿ ಸೋತಿದ್ದೇವೆ ಆದರೆ ಧೈರ್ಯಗುಂದಿಲ್ಲ ಎಂದು ಹೇಳಿದ್ದಾರೆ. ಜನರ ಆದೇಶವನ್ನು ಗೌರವಿಸುತ್ತೇನೆ ಮತ್ತು ಸೋಲನ್ನು ಒಪ್ಪಿಕೊಂಡಿದ್ದೇನೆ ಎಂದು ಮೌರ್ಯ ಹೇಳಿದ್ದಾರೆ.  “ನಾನು ಜನರ ಆದೇಶವನ್ನು ಗೌರವಿಸುತ್ತೇನೆ, ನಾನು ಎಲ್ಲಾ ವಿಜೇತ ಅಭ್ಯರ್ಥಿಗಳನ್ನು ಅಭಿನಂದಿಸುತ್ತೇನೆ. ಕೆಲವರು ಸೋಲುತ್ತಾರೆ, ಕೆಲವರ ಚುನಾವಣೆಯಲ್ಲಿ ಗೆಲ್ಲುತ್ತಾರೆ. ಇವು ಪ್ರಜಾಪ್ರಭುತ್ವದ 2 ಅಂಶಗಳು. ಆದ್ದರಿಂದ, ನಾವು ಗೆಲುವನ್ನು ಸ್ವೀಕರಿಸಿದಂತೆಯೇ ನಾವು ಸೋಲನ್ನು ಸ್ವೀಕರಿಸುತ್ತೇವೆ. ನಾವು ಚುನಾವಣೆಯಲ್ಲಿ ಸೋತಿದ್ದೇವೆ, ಧೈರ್ಯವನ್ನಲ್ಲ” ಎಂದು ಮೌರ್ಯ ಹೇಳಿದರು. ಮೌರ್ಯ ಅವರು ಫೆಬ್ರವರಿಯಲ್ಲಿ ಸಮಾಜವಾದಿ ಪಕ್ಷಕ್ಕೆ ಸೇರಲು ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿ ತೊರೆದಿದ್ದರು.  ಈ ಬಾರಿ ಚುನಾವಣೆ ಸ್ಪರ್ಧಿಸಿದ ಮೌರ್ಯ  ಸೋಲು ಅನುಭವಿಸಿದ್ದಾರೆ.ಮೌರ್ಯ ಇತರ ಹಿಂದುಳಿದ ವರ್ಗಗಳು ಅಥವಾ OBC, ನಾಯಕ ಮತ್ತು ಐದು ಬಾರಿ ಶಾಸಕರಾಗಿದ್ದಾರೆ. 2016 ರಲ್ಲಿ ಬಿಜೆಪಿಗೆ ಸೇರಿದ ನಂತರ, ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷವನ್ನು ಎದುರಿಸಲು ಒಬಿಸಿ ಮತದಾರರಲ್ಲಿ ನಿರ್ಣಾಯಕ ವಿಭಾಗವನ್ನು ಸೆಳೆಯುವ ಬಿಜೆಪಿಯ ಯೋಜನೆಗಳಿಗೆ ಅವರು ಕೇಂದ್ರವಾಗಿದ್ದರು.

ಜನವರಿಯಲ್ಲಿ ಅವರ ನಿರ್ಗಮನವು ಒಬಿಸಿ ಮತದಾರರು ದೊಡ್ಡ ಪರಿಣಾಮವನ್ನು ಬೀರುತ್ತದೆ ಮತ್ತು ಬಿಜೆಪಿಯ ಅವಕಾಶಗಳನ್ನು ಘಾಸಿಗೊಳಿಸುತ್ತದೆ ಎಂಬ ಊಹಾಪೋಹಗಳಿಗೆ ಕಾರಣವಾಯಿತು. ಆದರೆ ಫಲಿತಾಂಶಗಳು ಬೇರೆಯೇ ಆಗಿತ್ತು. ಯುಪಿಯ ಫಾಜಿಲ್‌ನಗರದಲ್ಲಿ ಬಿಜೆಪಿಯ ಸುರೇಂದ್ರ ಕುಮಾರ್ ಕುಶ್ವಾಹಾ ವಿರುದ್ಧ ಮೌರ್ಯ ಸೋತಿದ್ದಾರೆ.

ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಕೂ ಪೋಸ್ಟ್‌ನಲ್ಲಿ, ಹೊಸ ಸಮಾಜವಾದಿ ಪಕ್ಷದ ನಾಯಕ ಸೋಲನ್ನು ಒಪ್ಪಿಕೊಂಡಿದ್ದಾರೆ.

“ಗೆದ್ದಿರುವ ಎಲ್ಲಾ ಅಭ್ಯರ್ಥಿಗಳಿಗೆ ಅಭಿನಂದನೆಗಳು. ನಾನು ಜನಾದೇಶವನ್ನು ಗೌರವಿಸುತ್ತೇನೆ. ನಾನು ಚುನಾವಣೆಯಲ್ಲಿ ಸೋತಿದ್ದೇನೆ, ಆದರೆ ಧೈರ್ಯವನ್ನಲ್ಲ. ಹೋರಾಟ ಮುಂದುವರಿಯುತ್ತದೆ” ಎಂದು ಮೌರ್ಯ ಕೂನಲ್ಲಿ ಪೋಸ್ಟ್ ಮಾಡಿದ್ದಾರೆ

ಸಮಾಜವಾದಿ ಪಕ್ಷದ ಉತ್ಸಾಹಭರಿತ ಪ್ರದರ್ಶನವು ಉತ್ತರದ ಪ್ರಮುಖ ರಾಜ್ಯದಲ್ಲಿ ಕೇಸರಿ ಪಕ್ಷದ ಬಲವನ್ನು ತಗ್ಗಿಸಲು ಸಾಧ್ಯವಾಗದ ಕಾರಣ ಬಿಜೆಪಿ ಉತ್ತರ ಪ್ರದೇಶದಲ್ಲಿ ಅಧಿಕಾರಕ್ಕೇರಲು ಸಜ್ಜಾಗಿದೆ. ಬಿಜೆಪಿ ಸುಮಾರು 254 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ, ಆದರೆ ಅಖಿಲೇಶ್ ಯಾದವ್ ಅವರ ಪಕ್ಷವು ಒಟ್ಟು 112 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದೆ.

ಬಿಜೆಪಿಯ ಮೈತ್ರಿ ಪಕ್ಷಗಳಾದ ಅಪ್ನಾ ದಳ (ಸೋನಿಲಾಲ್) ಮತ್ತು ನಿಶಾದ್ ಪಕ್ಷವು ಕ್ರಮವಾಗಿ 11 ಮತ್ತು 7 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ. ಎಸ್‌ಪಿ 112 ಸ್ಥಾನಗಳಲ್ಲಿ ಮತ್ತು ಅದರ ಮೈತ್ರಿ ಪಾಲುದಾರರಾದ ಎಸ್‌ಬಿಎಸ್‌ಪಿ ಮತ್ತು ಆರ್‌ಎಲ್‌ಡಿ ಕ್ರಮವಾಗಿ 6 ಮತ್ತು 8 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿವೆ. ಬಿಎಸ್ಪಿ 1 ಮತ್ತು ಕಾಂಗ್ರೆಸ್ 2 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಇದನ್ನೂ ಓದಿ: Yogi Adityanath ಉತ್ತರ ಪ್ರದೇಶದಲ್ಲಿ ಮತ್ತೊಮ್ಮೆ ಯೋಗಿ ಸರ್ಕಾರ: ಜನತೆಗೆ ಧನ್ಯವಾದ ತಿಳಿಸಿದ ಆದಿತ್ಯನಾಥ

Follow us on

Related Stories

Most Read Stories

Click on your DTH Provider to Add TV9 Kannada