5 State Election Results 2022: 5 ರಾಜ್ಯಗಳಲ್ಲಿ ಯಾವ ಪಕ್ಷಕ್ಕೆ ಎಷ್ಟು ಕ್ಷೇತ್ರಗಳಲ್ಲಿ ಗೆಲುವು? ಇಲ್ಲಿದೆ ಪೂರ್ಣ ವರದಿ

ಗೋವಾದಲ್ಲಿ ಬಿಜೆಪಿ 20 ಕ್ಷೇತ್ರಗಳನ್ನು ಗೆದ್ದುಕೊಂಡಿದ್ದರೂ, ಸರ್ಕಾರ ರಚನೆಗೆ ಇನ್ನೊಂದು ಸೀಟ್​ ಅಗತ್ಯವಿತ್ತು. ಒಟ್ಟಾರೆ ಗೋವಾದಲ್ಲಿ 40 ಕ್ಷೇತ್ರಗಳಿದ್ದು, ಅಲ್ಲೀಗ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ

5 State Election Results 2022: 5 ರಾಜ್ಯಗಳಲ್ಲಿ ಯಾವ ಪಕ್ಷಕ್ಕೆ ಎಷ್ಟು ಕ್ಷೇತ್ರಗಳಲ್ಲಿ ಗೆಲುವು? ಇಲ್ಲಿದೆ ಪೂರ್ಣ ವರದಿ
ಉತ್ತರ ಪ್ರದೇಶದಲ್ಲಿ ಬಿಜೆಪಿ ಗೆಲುವಿಗೆ ಸಂಭ್ರಮ
Follow us
TV9 Web
| Updated By: Lakshmi Hegde

Updated on: Mar 11, 2022 | 8:16 AM

ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಉತ್ತರಾಖಂಡ್​, ಉತ್ತರಪ್ರದೇಶ, ಗೋವಾ, ಮಣಿಪುರಗಳಲ್ಲಿ ಮತ್ತೆ ಬಿಜೆಪಿ ಅಧಿಕಾರ ಹಿಡಿದಿದ್ದರೆ, ಪಂಜಾಬ್​​ನಲ್ಲಿ ಆಮ್​ ಆದ್ಮಿ ಪಕ್ಷ ಸರ್ಕಾರ ರಚಿಸಲಿದೆ. ಉತ್ತರಾಖಂಡ್​​ನಲ್ಲಿ ಹಿಂದಿನ ಸಿಎಂ ಪುಷ್ಕರ್​ ಸಿಂಗ್ ಧಮಿ ಸೋತಿರುವ ಕಾರಣ, ಬೇರೊಬ್ಬರನ್ನು ಆ ಸ್ಥಾನಕ್ಕೆ ಏರಿಸುವ ನಿರೀಕ್ಷೆಯಿದೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್​​ರೇ ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿದ್ದಾರೆ. ಗೋವಾದಲ್ಲಿ ಪ್ರಮೋದ್​ ಸಾವಂತ್, ಮಣಿಪುರದಲ್ಲಿ ಎನ್​.ಬಿರೆನ್​ ಸಿಂಗ್ ಸಿಎಂಗಳಾಗಿ ಮುಂದುವರಿಯಲಿದ್ದು, ಪಂಜಾಬ್​​ನಲ್ಲಿ ಭಗವಂತ್ ಮಾನ್​ ಮುಖ್ಯಮಂತ್ರಿ.ಈ ವಿಧಾನಸಭೆ ಚುನಾವಣೆಯಲ್ಲಿ ಯಾವ ರಾಜ್ಯದಲ್ಲಿ ಯಾವ ಪಕ್ಷ ಎಷ್ಟು ಸೀಟ್​​ಗಳಿಸಿದೆ ಇಲ್ಲಿದೆ ವಿವರ

  1. ಉತ್ತರ ಪ್ರದೇಶದ ಒಟ್ಟು 403 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಅದರ ಮೈತ್ರಿಪಕ್ಷಗಳು ಒಟ್ಟು 273 ಕ್ಷೇತ್ರಗಳನ್ನು ಬಾಚಿಕೊಂಡಿದೆ. ಅದರಲ್ಲಿ ಬಿಜೆಪಿ ಒಂದೇ ಪಕ್ಷ 255 ಕ್ಷೇತ್ರಗಳನ್ನು ಗೆದ್ದಿದೆ. ಇನ್ನು ಅಪ್ನಾದಳ್​ 12 ಮತ್ತು ನಿಶಾದ್​ ಪಾರ್ಟಿ 6 ಸೀಟ್​​ನಲ್ಲಿ ಗೆದ್ದಿದೆ. ಸಮಾಜವಾದಿ ಪಕ್ಷದ ಮೈತ್ರಿ 125 ಕ್ಷೇತ್ರಗಳನ್ನು ಗೆದ್ದಿದ್ದರೂ, ಸಮಾಜವಾದಿ ಪಕ್ಷ ಗೆಲ್ಲಲು ಸಾಧ್ಯವಾಗಿದ್ದು 111 ಕ್ಷೇತ್ರಗಳಲ್ಲಿ ಮಾತ್ರ. ಇದರ ಮೈತ್ರಿಪಕ್ಷಗಳಾದ ರಾಷ್ಟ್ರೀಯ ಲೋಕ ದಳ್​​ ಮತ್ತು ಸುಹೇಲ್​ ದೇವ್​ ಭಾರತೀಯ ಸಮಾಜ ಪಾರ್ಟಿಗಳು ಅನುಕ್ರಮವಾಗಿ 8 ಮತ್ತು 6 ಸೀಟ್​ಗಳಲ್ಲಿ ಗೆದ್ದುಕೊಂಡಿವೆ.  ಇನ್ನು ಕಾಂಗ್ರೆಸ್​ , ಸಮಾಜವಾದಿ ಪಕ್ಷಗಳು ನೆಲಕಚ್ಚಿವೆ. ಕಾಂಗ್ರೆಸ್​ 2 ಕ್ಷೇತ್ರದಲ್ಲಿ, ಬಿಎಸ್​ಪಿ 1 ಕ್ಷೇತ್ರದಲ್ಲಿ ಗೆದ್ದಿವೆ. ಲೋಕತಾಂತ್ರಿಕ ಜನತಾದಳ ಪಕ್ಷವೂ 2 ಸೀಟ್​​ನಲ್ಲಿ ಗೆಲುವು ಸಾಧಿಸಿದೆ. ಇಲ್ಲಿ ಸರ್ಕಾರ ರಚನೆಗೆ 202 ಸೀಟ್​​ ಆದರೂ ಗೆಲ್ಲಬೇಕು. ಬಿಜಪಿ ಪಕ್ಷವೇ 255 ಕ್ಷೇತ್ರ ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆದಿದೆ.
  2. ಗೋವಾದಲ್ಲಿ ಬಿಜೆಪಿ 20 ಕ್ಷೇತ್ರಗಳನ್ನು ಗೆದ್ದುಕೊಂಡಿದ್ದರೂ, ಸರ್ಕಾರ ರಚನೆಗೆ ಇನ್ನೊಂದು ಸೀಟ್​ ಅಗತ್ಯವಿತ್ತು. ಒಟ್ಟಾರೆ ಗೋವಾದಲ್ಲಿ 40 ಕ್ಷೇತ್ರಗಳಿದ್ದು, ಅಲ್ಲೀಗ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇಲ್ಲಿ ಕಾಂಗ್ರೆಸ್ 11, ಆಮ್​ ಆದ್ಮಿ ಪಾರ್ಟಿ 2, ಗೋವಾ ಫಾರ್ವರ್ಡ್​ ಪಾರ್ಟಿ 1, ಪಕ್ಷೇತರರು ಮೂರು, ಮಹಾರಾಷ್ಟ್ರವಾದಿ ಗೋಮಾಂತಕ್​ ಪಕ್ಷ 2,  ರೆವಲ್ಯೂಷನರಿ ಗೋವನ್ಸ್​ ಪಕ್ಷ 1 ಕ್ಷೇತ್ರದಲ್ಲಿ ಗೆಲುವು ಸಾಧಿಸಿದೆ.  ಪಕ್ಷೇತರರ ಬೆಂಬಲದೊಂದಿಗೆ ಸರ್ಕಾರ ರಚನೆ ಮಾಡುವುದಾಗಿ ಪ್ರಮೋದ್ ಸಾವಂತ್​ ಹೇಳಿಕೊಂಡಿದ್ದಾರೆ.
  3. ಮಣಿಪುರದಲ್ಲೂ ಬಿಜೆಪಿಯೇ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಅಲ್ಲಿನ ಒಟ್ಟು 60 ಕ್ಷೇತ್ರಗಳಲ್ಲಿ ಬಿಜೆಪಿ 31 ಸೀಟ್​ ಗೆದ್ದುಕೊಂಡಿದೆ. ಇನ್ನುಳಿದಂತೆ ಕಾಂಗ್ರೆಸ್​ 5, ಜನತಾದಳ-6, ನ್ಯಾಷನಲ್​ ಪೀಪಲ್ಸ್​ ಪಾರ್ಟಿ-7, ನಾಗಾ ಪೀಪಲ್ಸ್​ ಫ್ರಂಟ್​ 5, ಕುಕಿ ಪೀಪಲ್ಸ್ ಅಲಿಯನ್ಸ್​ 2 ಮತ್ತು ಪಕ್ಷೇತರರು 3 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ.
  4. ಉತ್ತರಾಖಂಡ್​​​ನಲ್ಲೂ ಬಿಜೆಪಿಗೆ ಸ್ಪಷ್ಟ ಗೆಲುವು. ಇಲ್ಲಿನ ಒಟ್ಟು 70 ಕ್ಷೇತ್ರಗಳ ಪೈಕಿ 47ರಲ್ಲಿ ಬಿಜೆಪಿ ಗೆದ್ದುಕೊಂಡಿದೆ. ಕಾಂಗ್ರೆಸ್​ 19, ಬಿಎಸ್​ಪಿ 2 ಮತ್ತು ಪಕ್ಷೇತರರು ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ.
  5.  ಪಂಜಾಬ್​​ನಲ್ಲಿ ಅಚ್ಚರಿಯ ಬೆಳವಣಿಗೆ, ಆಡಳಿತದಲ್ಲಿದ್ದ ಕಾಂಗ್ರೆಸ್ ನೆಲಕಚ್ಚಿದೆ. ಒಟ್ಟು 117 ವಿಧಾನಸಭಾ ಕ್ಷೇತ್ರಗಳಿರುವ ಪಂಜಾಬ್​​ನಲ್ಲಿ 92ರಲ್ಲಿ ಆಮ್​ ಆದ್ಮಿ ಪಾರ್ಟಿ ಗೆದ್ದುಕೊಂಡಿದ್ದರೆ, 18 ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್​ ಗೆದ್ದಿದೆ. ಬಿಜೆಪಿ 2, ಬಿಎಸ್​ಪಿ 1, ಶಿರೋಮಣಿ ಅಕಾಲಿ ದಳ -3 ಮತ್ತು ಪಕ್ಷೇತರರು ಒಂದು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ.

ಇದನ್ನೂ ಓದಿ: Retail Direct Guild: ಆರ್​ಬಿಐನಲ್ಲಿ ನಾವು ಕೂಡ ಖಾತೆ ತೆರೆಯಬಹುದು ಗೊತ್ತಾ..! ಇಲ್ಲಿದೆ ಮಾಹಿತಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ